ಆಹಾರ, ಔಷಧ ಆಯ್ತು ಈಗ ಪ್ಲಾಸ್ಟಿಕ್‌ಗೆ ರಿಸೈಕ್ಲಿಂಗ್ ಪ್ರಮಾಣ ಪತ್ರವೂ ನಕಲಿ! 4 ಅಧಿಕಾರಿಗಳ ವಿರುದ್ಧ KSPCB ತನಿಖೆ

ಆಹಾರ ಮತ್ತು ಔಷಧ ಕಲಬೆರಕೆ ಆಯ್ತು, ಈಗ ಪ್ಲಾಸ್ಟಿಕ್ ರಿಸೈಕ್ಲಿಂಗ್ ಹೆಸರಿನಲ್ಲೂ ನಕಲಿ ಪ್ರಮಾಣಪತ್ರ ಸೃಷ್ಟಿಸುವ ಬೃಹತ್ ದಂಧೆ ಬಯಲಾಗಿದೆ. ಪ್ಲಾಸ್ಟಿಕ್ ಮರುಬಳಕೆ ಮಾಡದೆಯೇ ಇಪಿಆರ್ ಸರ್ಟಿಫಿಕೇಟ್ ನೀಡಿದ ಆರೋಪದ ಮೇಲೆ ಕೆಎಸ್‌ಪಿಸಿಬಿ ನಾಲ್ವರು ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿದೆ.

ಆಹಾರ, ಔಷಧ ಆಯ್ತು ಈಗ ಪ್ಲಾಸ್ಟಿಕ್‌ಗೆ ರಿಸೈಕ್ಲಿಂಗ್ ಪ್ರಮಾಣ ಪತ್ರವೂ ನಕಲಿ! 4 ಅಧಿಕಾರಿಗಳ ವಿರುದ್ಧ KSPCB ತನಿಖೆ
ಸಾಂದರ್ಭಿಕ ಚಿತ್ರ

Updated on: Aug 22, 2026 | 8:21 AM

ಬೆಂಗಳೂರು, ಆಗಸ್ಟ್ 22: ಆಹಾರ ಪದಾರ್ಥಗಳಲ್ಲಿ ಕಲಬೆರಕೆ, ನಕಲಿ ಔಷಧಗಳ ಜಾಲದ ಸುದ್ದಿಗಳ ನಡುವೆಯೇ ಈಗ ರಾಜ್ಯದಲ್ಲಿ ಮತ್ತೊಂದು ದಂಧೆ ಬೆಳಕಿಗೆ ಬಂದಿದೆ. ಪ್ಲಾಸ್ಟಿಕ್ ತ್ಯಾಜ್ಯ ಮರುಬಳಕೆ (Recycling) ಮಾಡದಿದ್ದರೂ, ಜವಾಬ್ದಾರಿಯುತವಾಗಿ ರಿಸೈಕ್ಲಿಂಗ್ ಮಾಡಲಾಗಿದೆ ಎಂದು ಸುಳ್ಳು ಪ್ರಮಾಣ ಪತ್ರ ನೀಡುವ ನಕಲಿ ಜಾಲವೊಂದು ಸೃಷ್ಟಿಯಾಗಿದೆ. ಈ ಅಕ್ರಮಕ್ಕೆ ಸಾಥ್ ನೀಡಿದ ಆರೋಪದ ಮೇಲೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ತನ್ನ ನಾಲ್ವರು ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿದೆ.

ರಿಸೈಕ್ಲಿಂಗ್ ಮಾಡದೇ ಕೋಟಿ ಕೋಟಿ ವಂಚನೆ!

ಕೇಂದ್ರ ಸರ್ಕಾರದ ವಿಸ್ತೃತ ಉತ್ಪಾದಕ ಜವಾಬ್ದಾರಿ (EPR) ನಿಯಮಾವಳಿಗಳ ಪ್ರಕಾರ, ಪ್ಲಾಸ್ಟಿಕ್ ಉತ್ಪಾದಿಸುವ ಸಂಸ್ಥೆಗಳು ತಾವು ಮಾರುಕಟ್ಟೆಗೆ ಬಿಡುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಮಾಡುವುದು ಕಡ್ಡಾಯ. ಆದರೆ, ರಾಜ್ಯದ ಕೆಲ ರಿಸೈಕ್ಲಿಂಗ್ ಘಟಕಗಳು ಯಾವುದೇ ಪ್ಲಾಸ್ಟಿಕ್ ಸಂಸ್ಕರಿಸದೆ,’ಮರುಬಳಕೆ ಮಾಡಲಾಗಿದೆ’ ಎಂದು ನಕಲಿ ಪ್ರಮಾಣ ಪತ್ರಗಳನ್ನು ಸೃಷ್ಟಿಸಿ ಕಂಪನಿಗಳಿಗೆ ಮಾರಾಟ ಮಾಡುತ್ತಿದ್ದವು. ಈ ಬೃಹತ್ ದಂಧೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿ, ಪರಿಶೀಲನೆ ನಡೆಸದೇ ನಕಲಿ ಪ್ರಮಾಣ ಪತ್ರಗಳಿಗೆ ಅನುಮೋದನೆ ನೀಡಿದ ಆರೋಪ KSPCB ಅಧಿಕಾರಿಗಳ ಮೇಲಿದೆ.

ಅಧಿಕಾರಿಗಳಿಗೆ ಸಂಕಷ್ಟ, ತನಿಖೆ ಚುರುಕು

ಪರಿಸರ ಇಲಾಖೆ ಹಾಗೂ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಆಡಿಟ್ ವೇಳೆ ಈ ಅಕ್ರಮ ಪತ್ತೆಯಾಗಿದೆ. ಲೋಪ ಎಸಗಿದ ನಾಲ್ವರು ಹಿರಿಯ ಅಧಿಕಾರಿಗಳಿಗೆ KSPCB ನೋಟಿಸ್ ನೀಡಿದ್ದು, ಶಿಸ್ತುಕ್ರಮಕ್ಕೆ ಮುಂದಾಗಿದೆ.

ಇದನ್ನೂ ಓದಿ ನಕಲಿ ಔಷಧ ಜಾಲಕ್ಕೆ ಕಡಿವಾಣ ಹಾಕಲು ಮಹತ್ವದ ಕ್ರಮ: ಸುಳಿವು ನೀಡಿದವರಿಗೆ ₹50 ಸಾವಿರದವರೆಗೆ ಬಹುಮಾನ!

ನಿಯಮಗಳ ಪ್ರಕಾರ ಕಾರ್ಯನಿರ್ವಹಿಸದ ಹಾಗೂ ನಕಲಿ ದಾಖಲೆ ಸೃಷ್ಟಿಸಿದ ರಿಸೈಕ್ಲಿಂಗ್ ಘಟಕಗಳ ನೋಂದಣಿ ರದ್ದುಗೊಳಿಸಲು ಮತ್ತು ಭಾರಿ ದಂಡ ವಿಧಿಸಲು ನಿರ್ಧರಿಸಲಾಗಿದೆ. ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಈ ನಕಲಿ ಸರ್ಟಿಫಿಕೇಟ್ ಜಾಲವು ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us