
ಬೆಂಗಳೂರು, ನ.4: ಹಾಲಿನ ದರ ಹೆಚ್ಚಳ ಬೆನ್ನಲ್ಲೇ ರಾಜ್ಯದಲ್ಲಿ ಬಸ್ ಪ್ರಯಾಣ ದರ ಹೆಚ್ಚಳವನ್ನು ಮಾಡಲಾಗಿದೆ. ಟಿಕೆಟ್ ದರ ಪರಿಷ್ಕರಣೆ ಮಾಡುವ ಕುರಿತು ನಿರ್ಧಾರ ತೆಗೆದುಕೊಳ್ಳಲು ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಿಗೆ (KSRTC, BMTC, NWKRTC, KKRTC) ಅವಕಾಶ ಕಲ್ಪಿಸಿಕೊಡಲಾಗಿತ್ತು. ಇದೀಗ ಇಂದು ಮಧ್ಯಾಹ್ನ ರಾತ್ರಿಯಿಂದಲ್ಲೇ ಬೆಲೆ ಏರಿಕೆ ಆಗಲಿದೆ. ಕೆಎಸ್ಆರ್ಟಿಸಿಯಲ್ಲಿ 9 ರೂ. ಟಿಕೆಟ್ ದರ ಏರಿಕೆ ಆಗಲಿದೆ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ಮಹತ್ವದ ಹೇಳಿಕೆ ನೀಡಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ 10 ವರ್ಷಗಳ ಸುದೀರ್ಘ ಅವಧಿಯಲ್ಲಿ ರಾಜ್ಯದಲ್ಲಿ ಕೇವಲ ಒಂದು ಬಾರಿಯಷ್ಟೇ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ ಹಾಗೂ 2025ರಲ್ಲಿಯೂ ಪ್ರಯಾಣ ದರ ಏರಿಕೆ ಮಾಡಲಾಗಿತ್ತು ಎಂದು ಪ್ರಸ್ತಾಪಿಸಿದ್ದಾರೆ.
ದಕ್ಷಿಣ ಭಾರತದಲ್ಲೇ ಅತ್ಯಂತ ಬೃಹತ್ ಸಾರಿಗೆ ಜಾಲವನ್ನು ಕರ್ನಾಟಕ ಹೊಂದಿದೆ ಎಂದು ತಿಳಿಸಿದ ಸಚಿವರು, ಇಲಾಖೆಯ ಕಾರ್ಯಾಚರಣೆಯ ಪ್ರಮುಖ ಅಂಕಿಅಂಶಗಳನ್ನು ತೆರೆದಿಟ್ಟಿದ್ದಾರೆ. ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಲ್ಲಿ ಒಟ್ಟು 26,125 ಬಸ್‌ಗಳು ರಸ್ತೆಗೆ ಇಳಿಯುತ್ತಿದ್ದು, ಇದು ದಕ್ಷಿಣ ಭಾರತದಲ್ಲೇ ಅತ್ಯಂತ ದೊಡ್ಡ ಸಂಖ್ಯೆಯಾಗಿದೆ. ಸಾರಿಗೆ ಸಂಸ್ಥೆಗಳಲ್ಲಿ ಬರೋಬ್ಬರಿ 1,03,646 ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರತಿದಿನ 24,179 ಮಾರ್ಗಗಳಲ್ಲಿ ಬಸ್‌ಗಳು ಸಂಚರಿಸುತ್ತಿದ್ದು, ದಿನಂಪ್ರತಿ ಬರೋಬ್ಬರಿ 1.24 ಕೋಟಿ ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸಲಾಗುತ್ತಿದೆ.
‘ಶಕ್ತಿ’ ಯೋಜನೆಯಿಂದಾಗಿ ಸಾರಿಗೆ ನಿಗಮಗಳು ನಷ್ಟಕ್ಕೆ ಸಿಲುಕಿವೆ ಎಂಬ ವಿರೋಧ ಪಕ್ಷಗಳ ಆಪಾದನೆಯನ್ನು ಸಾರಿಗೆ ಸಚಿವರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ವಿಪಕ್ಷಗಳು ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣ ಕಲ್ಪಿಸಿದ್ದರಿಂದ ನಿಗಮಗಳಿಗೆ ನಷ್ಟವಾಗುತ್ತಿದೆ ಎಂದು ಅಪಪ್ರಚಾರ ಮಾಡುತ್ತಿವೆ. ಆದರೆ ಸತ್ಯ ಏನೆಂದರೆ, ನಿಗಮಗಳು ಯಾವುದೇ ಯೋಜನೆಯನ್ನು ಸ್ವಂತ ವೆಚ್ಚದಲ್ಲಿ ಉಚಿತವಾಗಿ ನೀಡುತ್ತಿಲ್ಲ. ಮಹಿಳೆಯರು ಬಸ್‌ನಲ್ಲಿ ಪ್ರಯಾಣಿಸುವ ಪೂರ್ಣಮಟ್ಟದ ಮೊತ್ತವನ್ನು ರಾಜ್ಯ ಸರ್ಕಾರವೇ ಕಾಲಕಾಲಕ್ಕೆ ನಿಗಮಗಳಿಗೆ ನೇರವಾಗಿ ಭರಿಸಿ ಹಣ ಬಿಡುಗಡೆ ಮಾಡುತ್ತಿದೆ,” ಎಂದು ಸಚಿವ ಭೈರತಿ ಸುರೇಶ್ ಸ್ಪಷ್ಟಪಡಿಸಿದರು.
ಒಂದು ಲೀಟರ್ಗೆ 10.47 ಜಾಸ್ತಿ ಆಗಿದೆ. ಈಗಿರುವ ಪರಿಸ್ಥಿತಿ ಪ್ರಕಾರ 80% ದುಡ್ಡು ಡೀಸೆಲ್ ಹಾಗೂ ಸಿಬ್ಬಂದಿಗಳಿಗೇ ವೆಚ್ಚ ಆಗಿದೆ. 1,111.88 ಕೋಟಿ ಡಿಸೇಲ್ ಬಾಕಿ ಕೊಡೋದು ಇದೆ. ವರ್ಷಕ್ಕೆ 5,694 ಕೋಟಿ ಡಿಸೇಲ್ ಗೆ ನಮ್ಮ ಖರ್ಚು ಮಾಡಿದೆ. ಡಿಸೇಲ್ ಬೆಲೆ ಏರಿಕೆಯಿಂದ ಪ್ರತಿ ವರ್ಷ ನಿಗಮಗಳಿಗೆ 500 ಕೋಟಿ ಹೊರೆ ಆಗಿದೆ. 2024ರಲ್ಲಿ ನಾವು ನೌಕರರ ಸಂಬಳ ಜಾಸ್ತಿ ಮಾಡಿದ್ದೇವೆ. 7,719 ಕೋಟಿ ಹೊಣೆಗಾರಿಕೆ ವೆಚ್ಚ ಇದೆ 2,192 ಕೋಟಿ ಸಾಲ ಇದೆ . ಶಕ್ತಿ ಯೋಜನೆಯಿಂದ 5 ಸಾವಿರ ಕೋಟಿ ಬರಬೇಕಿದೆ, ಅದನ್ನು ಹಂತ ಹಂತವಾಗಿ ಕೊಡ್ತೀನಿ ಅಂತ ಸರ್ಕಾರ ಹೇಳಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೆಎಸ್ಆರ್ಟಿಸಿ ಬಸ್‌ನಲ್ಲಿ ಗರಿಷ್ಠ 9 ರೂ. ಪ್ರಯಾಣ ದರ ಏರಿಕೆ
ಮೆಜೆಸ್ಟಿಕ್ ಟು ನೆಲಮಂಗಲ:
ಈ ಹಿಂದೆ ಮೆಜೆಸ್ಟಿಕ್‌ನಿಂದ ನೆಲಮಂಗಲಕ್ಕೆ ₹35 ಇದ್ದ ಬಸ್ ಪ್ರಯಾಣ ದರವು ಇದೀಗ ಬರೋಬ್ಬರಿ ₹44 ಕ್ಕೆ ಏರಿಕೆಯಾಗಿದೆ (ನೇರ ₹9 ಹೆಚ್ಚಳ).
ಮೆಜೆಸ್ಟಿಕ್ ಟು ಹೊಸಕೋಟೆ:
ಇದೇ ರೀತಿ ಮೆಜೆಸ್ಟಿಕ್‌ನಿಂದ ಹೊಸಕೋಟೆಗೆ ಪ್ರಯಾಣಿಸುವ ದರವೂ ಕೂಡ ₹35 ರಿಂದ ₹44 ಕ್ಕೆ ಹೆಚ್ಚಳಗೊಂಡಿದೆ.
ದರ ಏರಿಕೆಯ ವಿಧಾನವನ್ನು ವಿವರಿಸಿದ ಸಚಿವರು, “ನಾವು ಯಾವುದೇ ಒಟ್ಟಾರೆ ಶೇಕಡಾವಾರು ಆಧಾರದಲ್ಲಿ ದರ ಹೆಚ್ಚಳ ಮಾಡಿಲ್ಲ. ಬಸ್ ಸಂಚರಿಸುವ ಕಿಲೋಮೀಟರ್ ಹಾಗೂ ನಿಗದಿತ ಹಂತಗಳ (Stage) ಲೆಕ್ಕಾಚಾರದಲ್ಲಿ ಮಾತ್ರ ದರ ಪರಿಷ್ಕರಣೆ ಮಾಡಿದ್ದೇವೆ. ಇದರಿಂದಾಗಿ ಕಡಿಮೆ ದೂರ ಪ್ರಯಾಣಿಸುವವರಿಗೆ ಕನಿಷ್ಠ ಹಾಗೂ ದೂರದ ಉಪನಗರಗಳಿಗೆ ಸಂಚರಿಸುವವರಿಗೆ ಗರಿಷ್ಠ ₹9 ರವರೆಗೆ ದರ ಏರಿಕೆಯಾಗಿದೆ,” ಎಂದು ತಿಳಿಸಿದರು. ಈ ನೂತನ ಪರಿಷ್ಕೃತ ಬಸ್ ಪ್ರಯಾಣ ದರಗಳು ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿವೆ.
| ಸ್ಥಳ (Destination) | ಹಳೆಯ ದರ (Old Fare) | ಹೊಸ ದರ (New Fare) | ವ್ಯತ್ಯಾಸ (Difference) |
| ನೆಲಮಂಗಲ | ₹35 | ₹44 | +₹9 |
| ಹೊಸಕೋಟೆ | ₹35 | ₹44 | +₹9 |
| ದೊಡ್ಡಬಳ್ಳಾಪುರ | ₹38 | ₹47 | +₹9 |
| ಆನೇಕಲ್ | ₹38 | ₹47 | +₹9 |
| ಮಾಗಡಿ | ₹46 | ₹57 | +₹11 |
| ಮಾಲೂರು | ₹46 | ₹57 | +₹11 |
| ಸ್ಥಳ (Destination) | ಹಳೆಯ ದರ (Old Fare) | ಹೊಸ ದರ (New Fare) | ವ್ಯತ್ಯಾಸ (Difference) |
| ಕೋಲಾರ | ₹81 | ₹100 | +₹19 |
| ತುಮಕೂರು | ₹81 | ₹100 | +₹19 |
| ಮಂಡ್ಯ | ₹110 | ₹136 | +₹26 |
| ಮೈಸೂರು | ₹160 | ₹197 | +₹37 |
| ಹಾಸನ | ₹219 | ₹270 | +₹51 |
| ಚಿಕ್ಕಮಗಳೂರು | ₹295 | ₹363 | +₹68 |
| ಮಾರ್ಗ (Route) | ಹಳೆಯ ದರ (Old Fare) | ಪರಿಷ್ಕೃತ ನೂತನ ದರ (New Fare) | ಹೆಚ್ಚಳ (Hike) |
| ಬೆಂಗಳೂರು – ನೆಲಮಂಗಲ | ₹35 | ₹44 | +₹9 |
| ಬೆಂಗಳೂರು – ಹೊಸಕೋಟೆ | ₹35 | ₹44 | +₹9 |
| ಬೆಂಗಳೂರು – ದೊಡ್ಡಬಳ್ಳಾಪುರ | ₹38 | ₹47 | +₹9 |
| ಬೆಂಗಳೂರು – ಆನೇಕಲ್ | ₹38 | ₹47 | +₹9 |
| ಬೆಂಗಳೂರು – ಮಾಗಡಿ | ₹46 | ₹57 | +₹11 |
| ಬೆಂಗಳೂರು – ಮಾಲೂರು | ₹46 | ₹57 | +₹11 |
ಬೆಂಗಳೂರಿನಿಂದ ವಿವಿಧ ನಗರಗಳಿಗೆ ‘ವೇಗದೂತ’ ಬಸ್‌ಗಳ ಪರಿಷ್ಕೃತ ದರ ಪಟ್ಟಿ:
| ಗಮ್ಯಸ್ಥಾನ (Destination) | ಹಳೆಯ ದರ (Old Fare) | ಪರಿಷ್ಕೃತ ನೂತನ ದರ (New Fare) | ಒಟ್ಟು ಹೆಚ್ಚಳ (Difference) |
| ಬೆಂಗಳೂರು – ಕೋಲಾರ | ₹81 | ₹100 | +₹19 |
| ಬೆಂಗಳೂರು – ತುಮಕೂರು | ₹81 | ₹100 | +₹19 |
| ಬೆಂಗಳೂರು – ಮಂಡ್ಯ | ₹110 | ₹136 | +₹26 |
| ಬೆಂಗಳೂರು – ಮೈಸೂರು | ₹160 | ₹197 | +₹37 |
| ಬೆಂಗಳೂರು – ಹಾಸನ | ₹219 | ₹270 | +₹51 |
| ಬೆಂಗಳೂರು – ಚಿಕ್ಕಮಗಳೂರು | ₹295 | ₹363 | +₹68 |
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:18 pm, Wed, 4 November 26