AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka News Updates: ಅನಾರೋಗ್ಯದ ಹಿನ್ನೆಲೆ ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಆಸ್ಪತ್ರೆಗೆ ದಾಖಲು

Today News Updates: ರಾಜ್ಯದಲ್ಲಿ ಬಸ್ ಟಿಕೆಟ್ ದರ ಏರಿಕೆಗೆ ಸಾರಿಗೆ ನಿಗಮಗಳು ಸಜ್ಜಾಗಿದ್ದು, ಶೀಘ್ರವೇ ಪರಿಷ್ಕೃತ ದರ ಜಾರಿಯಾಗಲಿದೆ. ಇನ್ನೊಂದೆಡೆ ಕಬ್ಬಿಗೆ ಸೂಕ್ತ ಬೆಲೆ ಆಗ್ರಹಿಸಿ ಬೆಳೆಗಾರರ ಹೋರಾಟ ತೀವ್ರಗೊಂಡಿದ್ದು ಸಿಎಂ ಸಭೆ ನಡೆಯಲಿದೆ. ಇದರ ನಡುವೆ ರಾಜ್ಯದ 4 ಜಿಲ್ಲೆಗಳಿಗೆ ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆ ಸಿಕ್ಕಿದೆ.

Karnataka News Updates: ಅನಾರೋಗ್ಯದ ಹಿನ್ನೆಲೆ ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಆಸ್ಪತ್ರೆಗೆ ದಾಖಲು
ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಆಸ್ಪತ್ರೆಗೆ ದಾಖಲು
ಭಾವನಾ ಹೆಗಡೆ
| Edited By: |

Updated on:Nov 04, 2026 | 10:52 PM

Share

Breaking News Today Updates in Kannada: ರಾಜ್ಯದ ಜನತೆಗೆ ಹಾಲಿನ ಬೆಲೆ ಏರಿಕೆಯ ಬೆನ್ನಲ್ಲೇ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಕೆಎಸ್ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ಬಸ್ ಟಿಕೆಟ್ ದರ ಪರಿಷ್ಕರಣೆ ಕುರಿತು ಸಾರಿಗೆ ಸಚಿವ ಭೈರತಿ ಸುರೇಶ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ದರ ಏರಿಕೆ ಘೋಷಣೆಯಾಗುವ ಸಾಧ್ಯತೆಯಿದೆ. ಅತುಲ್ ತಿವಾರಿ ಸಮಿತಿಯ ವರದಿ ಆಧರಿಸಿ ಪರಿಷ್ಕೃತ ದರ ಜಾರಿಯಾಗಲಿದೆ. ಮತ್ತೊಂದೆಡೆ, ಬೆಳಗಾವಿಯಲ್ಲಿ ಟನ್ ಕಬ್ಬಿಗೆ 5,500 ರೂಪಾಯಿ ಬೆಲೆ ನಿಗದಿಗೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ತೀವ್ರಗೊಂಡಿದೆ. ಸಚಿವ ಸತೀಶ್ ಜಾರಕಿಹೊಳಿ ನಡೆಸಿದ ಸಭೆ ವಿಫಲವಾಗಿದ್ದು, ಇಂದು ಸಿಎಂ ಡಿ.ಕೆ ಶಿವಕುಮಾರ್ ಜೊತೆ ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ. ಇದೇ ವೇಳೆ, ಹವಾಮಾನ ಇಲಾಖೆಯು ರಾಜ್ಯದ ದಕ್ಷಿಣ ಒಳನಾಡಿನ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

LIVE TV

LIVE NEWS & UPDATES

The liveblog has ended.
  • 04 Nov 2026 10:51 PM (IST)

    ಪರಿಷತ್​​ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧ FIR

    ಕಾಂಗ್ರೆಸ್‌ನ್ನು ತುಂಡುತುಂಡಿ ಮಾಡಿ ಸಮುದ್ರಕ್ಕೆ ಎಸೆಯಿರಿ ಎಂಬ ಪರಿಷತ್​​ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆ ವಿರುದ್ದ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಂಗ್ರೆಸ್ ಮುಖಂಡ ಬೆಳಗಾನಹಳ್ಳಿ ಮುನಿವೆಂಕಟಪ್ಪ ನೀಡಿದ ದೂರಿನ ಆಧಾರದ ಮೇಲೆ 351, 352, 353(1)ಎ ಅಡಿಯಲ್ಲಿ ಕೇಸ್​​ ದಾಖಲಿಸಲಾಗಿದೆ. ನ್ಯಾಯಾಲಯದ ಅನುಮತಿ ಪಡೆದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಠಾಣೆಗೆ ಕರೆದು ವಿಚಾರಣೆ ನಡೆಸುವಂತೆ ಕೋರ್ಟ್ ಸೂಚನೆ ನೀಡಿದೆ.

  • 04 Nov 2026 10:15 PM (IST)

    ಆರ್ಯನ್ ಹೋಮ್‌ಟೆಕ್​​ ಪ್ರೈವೇಟ್ ಲಿಮಿಟೆಡ್ ಮೇಲೆ ಇಡಿ ದಾಳಿ

    ರಿಯಲ್ ಎಸ್ಟೇಟ್ ಹೂಡಿಕೆದಾರರಿಗೆ 90 ಕೋಟಿ ರೂ. ವಂಚನೆ ಕೇಸ್ ಸಂಬಂಧ ಆರ್ಯನ್ ಹೋಮ್‌ಟೆಕ್​​ ಪ್ರೈವೇಟ್ ಲಿಮಿಟೆಡ್​​ & ನಿರ್ದೇಶಕರ ಮೇಲೆ ಇಡಿ ದಾಳಿ ನಡೆಸಿದೆ. ಭರತ್ ರೆಡ್ಡಿ ಮತ್ತು ರಶ್ಮಿ ಭರತ್ ರೆಡ್ಡಿಗೆ ಸಂಬಂಧಿಸಿದ ಮೂರು ಸ್ಥಳಗಳಲ್ಲಿ ಶೋಧ ನಡೆದಿದ್ದು, ಪರಿಶೀಲನೆ ವೇಳೆ ಕೆಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಭೂ ಮಾಲೀಕರು, ಮನೆ ಖರೀದಿದಾರರು ಮತ್ತು ಹಣಕಾಸು ಸಂಸ್ಥೆಗಳಿಗೆ ವಂಚನೆ ಸಂಬಂಧ ಆರ್ಯನ್ ಹೋಮೆಟೆಕ್ ಪ್ರೈವೇಟ್ ಲಿಮಿಟೆಡ್​​ ಮೇಲೆ ಕೇಸ್ ದಾಖಲಾಗಿತ್ತು.

  • 04 Nov 2026 10:07 PM (IST)

    ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಆಸ್ಪತ್ರೆಗೆ ದಾಖಲು

    ಅನಾರೋಗ್ಯದ ಹಿನ್ನೆಲೆ ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಎಕ್ಸ್​ ಖಾತೆಯಲ್ಲಿ ಶರದ್ ಪುತ್ರಿ ಸುಪ್ರಿಯಾ ಸುಳೆ ಪೋಸ್ಟ್​ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಫೋನ್ ಕರೆ ಮಾಡಿ ಪ್ರಧಾನಿ ಮೋದಿ ಶರದ್ ಪವಾರ್ ಆರೋಗ್ಯ ವಿಚಾರಿಸಿದ್ದಾರೆ.

  • 04 Nov 2026 10:03 PM (IST)

    ಸರ್ಕಾರಿ ಬಸ್ ಪಲ್ಟಿಯಾಗಿ 10 ಪ್ರಯಾಣಿಕರಿಗೆ ಗಾಯ

    ಸರ್ಕಾರಿ ಬಸ್ ಪಲ್ಟಿಯಾಗಿ 10 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಬಾಗಲಕೋಟೆ ‌ತಾಲೂಕಿನ ಶಿರೂರು ಗ್ರಾಮದ ಬಳಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದ್ದು, ಬಾಗಲಕೋಟೆಯಿಂದ ಹುನಗುಂದ ಮಾರ್ಗವಾಗಿ ಬಸ್​​ ತೆರಳುತ್ತಿತ್ತು ಎನ್ನಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬಾಗಲಕೋಟೆ ‌ಗ್ರಾಮೀಣ ಪೊಲೀಸರು ಭೇಟಿನೀಡಿದ್ದಾರೆ.

  • 04 Nov 2026 09:34 PM (IST)

    ಪ್ರತಿ ಟನ್ ಕಬ್ಬಿಗೆ ₹3600 ದರ ನೀಡುವುದಾಗಿ ಘೋಷಣೆ

    ಪ್ರತಿ ಟನ್ ಕಬ್ಬಿಗೆ ₹3600 ದರ ನೀಡುವುದಾಗಿ ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಘೋಷಿಸಿದ್ದಾರೆ. ರೈತರ ಒತ್ತಡಕ್ಕೆ ಮಣಿದು ₹100 ಹೆಚ್ಚಿಗೆ ನೀಡಲು ಕಾರ್ಖಾನೆಗಳ ಮಾಲೀಕರು ಒಪ್ಪಿಗೆ ಸೂಚಿಸಿದ್ದು, ಈ ಬಗ್ಗೆ ರೈತ ಮುಖಂಡರ ಜೊತೆಗಿನ ಸಭೆ ಬಳಿಕ ಸಚಿವ ಸತೀಶ್ ಮಾಹಿತಿ ನೀಡಿದ್ದಾರೆ. ಸಕ್ಕರೆ ಕಾರ್ಖಾನೆಗಳ ಮಾಲೀಕರ ಜೊತೆಗೆ ಸಭೆ ಮಾಡಿದ್ದು, ಅವರು ಇದಕ್ಕೆ ಒಪ್ಪಿದ್ದಾರೆ. ರೈತ ಮುಖಂಡರು ₹3600 ದರಕ್ಕೆ ಒಪ್ಪಿಕೊಳ್ಳಬೇಕು. ನಾಳೆಯಿಂದ ಕಾರ್ಖಾನೆ ಆರಂಭಿಸಲು ಎಲ್ಲರೂ ಸಹಕರಿಸಬೇಕು. ಚೂನಪ್ಪ ಪೂಜಾರಿ, ಶಶಿಕಾಂತ ನೇತೃತ್ವದಲ್ಲಿ ಪ್ರತಿಭಟನೆ, ಜೈಲ್​ಭರೋ ಚಳವಳಿ ಕೈಬಿಡಬೇಕು. ಕಾರ್ಖಾನೆ ಆರಂಭವಾದ ಬಳಿಕ ಸರ್ಕಾರದ ಬಳಿ ಪ್ರತ್ಯೇಕ ಬೇಡಿಕೆ ಇಡಲಿ. ಎಂಎಸ್​​​ಪಿ ಹೆಚ್ಚಳವಾದ್ರೆ ಅದರ ಲಾಭ ರೈತರಿಗೆ ಕೊಡಲಾಗುವುದು. ರೈತರಿಗೆ ತೊಂದರೆ ಆಗಬಾರದು ಅಂದ್ರೆ ಕಾರ್ಖಾನೆ ಆರಂಭಿಸಬೇಕು. ರೈತರ ಹೋರಾಟ ಕಾರ್ಖಾನೆ ವಿರುದ್ಧ ಅಲ್ಲ. ಎಸ್ಎಪಿ ಜಾರಿಗೆ ಆಗ್ರಹಿಸಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದವರು ತಿಳಿಸಿದ್ದಾರೆ.

  • 04 Nov 2026 09:16 PM (IST)

    ಗೃಹಲಕ್ಷ್ಮಿಯರಿಗೆ ಗುಡ್​​ನ್ಯೂಸ್​​ ಕೊಟ್ಟ ಸರ್ಕಾರ

    ದೀಪಾವಳಿಗೆ ಗೃಹಲಕ್ಷ್ಮಿಯರಿಗೆ ರಾಜ್ಯ ಸರ್ಕಾರ ಶುಭಸುದ್ದಿ ನೀಡಿದ್ದು, ಯೋಜನೆಯ 3 ಕಂತುಗಳ 7405.86 ಕೋಟಿ ರೂ. ಹಣ ಬಿಡುಗಡೆ ಮಾಡಿದೆ. 34, 35 ಮತ್ತು 36ನೇ ಕಂತುಗಳ ಹಣ ರಿಲೀಸ್​​ ಆಗಿದ್ದು, ಇದುವರೆಗೂ 33 ಕಂತಿನ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿತ್ತು.

  • 04 Nov 2026 09:03 PM (IST)

    ಬೆಳಗಾವಿ ಡಿಸಿ ಕಚೇರಿಯಲ್ಲಿ ಹೈವೋಲ್ಟೇಜ್​​ ಸಭೆ

    ಕಬ್ಬಿನ ದರ ನಿಗದಿಗಾಗಿ ಮತ್ತೊಂದು ಪ್ರಯತ್ನ ಆರಂಭವಾಗಿದ್ದು, ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ರೈತರು ಮತ್ತು ಅಧಿಕಾರಿಗಳ ಜೊತೆಗೆ ಸಭೆ ನಡೆದಿದೆ. ನಿನ್ನೆ ನಡೆದ ಮೂರು ಸಭೆ ವಿಫಲ ಹಿನ್ನೆಲೆ ಮತ್ತೆ ಮೀಟಿಂಗ್​​ ನಡೆಸಲಾಗ್ತಿದೆ. ಸಚಿವರ ಜೊತೆಗೆ ಬೆಳಗಾವಿಯ ಪ್ರಭಾರಿ ಡಿಸಿ ಸಿಇಒ ರಾಹುಲ್ ಶಿಂಧೆ ಮತ್ತು ಕಮಿಷನರ್ ಪ್ರಕಾಶ್ ನಿಕ್ಕಂ ಸೇರಿ ಹಲವರು ಉಪಸ್ಥಿತರಿದ್ದಾರೆ.

  • 04 Nov 2026 08:22 PM (IST)

    ಬಿಎಂಟಿಸಿಯಿಂದ ಬಸ್​​ ಪಾಸ್​​ ದರವೂ ಹೆಚ್ಚಳ

    ರಾಜ್ಯದ ಸರ್ಕಾರಿ ಸಾರಿಗೆ ಬಸ್​​ಗಳ ಟಿಕೆಟ್​​ ದರ ಹೆಚ್ಚಳ ಬೆನ್ನಲ್ಲೇ ಬಿಎಂಟಿಸಿ ನಿಗಮ ಬಸ್ ಪಾಸ್ ದರವನ್ನೂ ಹೆಚ್ಚಿಸಿದೆ. 80 ರೂಪಾಯಿ ಇದ್ದ ಸಾಮಾನ್ಯ ಬಸ್​ಗಳ ದಿನದ ಪಾಸ್​​ ದರ 100ಕ್ಕೇರಿಕೆಯಾಗಿದೆ. ಸಾಮಾನ್ಯ ಬಸ್​ಗಳ ವಿಸ್ತಾರ ದಿನದ ಪಾಸ್ 150 ರೂ. ಆಗಿದ್ದರೆ, ವೇಗದೂತ ವಿಸ್ತಾರ ಬಸ್​​ಗಳ ದಿನದ ಪಾಸ್​​ ದರ 200ಕ್ಕೆನ ಹೆಚ್ಚಳವಾಗಿದೆ.

  • 04 Nov 2026 08:01 PM (IST)

    ಹಾಸನಾಂಬೆ ದರ್ಶನಕ್ಕೆ ತಾತ್ಕಾಲಿಕ ಬ್ರೇಕ್​​

    ನೈವೇದ್ಯ, ಅಲಂಕಾರ ಬದಲಾವಣೆ ಹಿನ್ನೆಲೆ ಇಂದು ರಾತ್ರಿ 12ರಿಂದ ನಾಳೆ ಬೆಳಗ್ಗೆ 6ರವರೆಗೆ ಹಾಸನಾಂಬೆಯ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಹೀಗಾಗಿ ಭಕ್ತರು ರಾತ್ರಿಯಿಡಿ ಸಾಲಿನಲ್ಲಿ ನಿಂತು ಕಾಯದಂತೆ ಹಾಸನಾಂಬೆ ದೇವಾಲಯ ಆಡಳಿತ ಮಂಡಳಿ ಮನವಿ ಮಾಡಿದೆ.

  • 04 Nov 2026 07:21 PM (IST)

    ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿರುದ್ಧ ದೂರು

    ಛಲವಾದಿ ನಾರಾಯಣಸ್ವಾಮಿ ಸರ್ಕಾರಿ ನಿವಾಸದ ಬಳಿ ಗಲಾಟೆ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮನೆ ಬಳಿ ಪೋಸ್ಟರ್ ಮತ್ತು ರಂಗಕರ್ಮಿ ಅಡ್ಡಂಡ ಕಾರ್ಯಪ್ಪಗೆ ಮಸಿ ಬಳಿದ ಆರೋಪ ಸಂಬಂಧ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮನೋಹರ್ ವಿರುದ್ಧ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಬಿಜೆಪಿ ದೂರು ಸಲ್ಲಿಕೆ ಮಾಡಿದೆ. ಮನೋಹರ್ ಹಾಗೂ ಸಹಚರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.

  • 04 Nov 2026 06:58 PM (IST)

    ಟೆಕ್ಕಿಗೆ 2.5 ಕೋಟಿ ರೂ. ವಂಚಿಸಿದ್ದ ಆರೋಪಿ ಅರೆಸ್ಟ್​​

    ಕಡಿಮೆ ಬೆಲೆಗೆ ವಸ್ತುಗಳನ್ನು ಕೊಡಿಸೋದಾಗಿ ಹೇಳಿ ಟೆಕ್ಕಿಗೆ ವಂಚನೆ ನಡೆಸಿದ್ದ ಪೂಜಾ ಭಾಗವತಿ ಎಂಬವರನ್ನು ಬೆಂಗಳೂರಿನ ಆವಲಹಳ್ಳಿ ಪೊಲೀಸರು ಬಂಧಿಸಿದ್ದಾರೆ. ‘ನಮ್ಮ ಅಪಾರ್ಟ್​ಮೆಂಟ್ ಅಡ್ಡ’ ಎಂಬ ಆ್ಯಪ್ ಮೂಲಕ ಟೆಕ್ಕಿ ಮಂಜುನಾಥ್​​ಗೆ ಪರಿಚಯವಾಗಿದ್ದ ಆರೋಪಿ ಪೂಜಾ, ಗೃಹೋಪಯೋಗಿ ವಸ್ತು ಕೊಡಿಸೋದಾಗಿ ಎರಡೂವರೆ ಕೋಟಿ ರೂಪಾಯಿ ವಂಚಿಸಿದ್ದರು. ಕಳೆದ ಫೆಬ್ರವರಿ ತಿಂಗಳಲ್ಲಿ ವಂಚನೆ ಸಂಬಂಧ ಕೇಸ್ ದಾಖಲಾಗಿತ್ತು. ವಿಚಾರಣೆ ವೇಳೆ ಇದೇ ರೀತಿ ಆರೋಪಿ ಹಲವರಿಗೆ ವಂಚಿಸಿರೋದು ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಆವಲಹಳ್ಳಿ ಪೊಲೀಸರಿಂದ ತನಿಖೆ ಮುಂದುವರಿದಿದೆ.

  • 04 Nov 2026 06:32 PM (IST)

    ಖಾಸಗಿ ಶಾಲಾ ಕಟ್ಟಡದಲ್ಲೇ ಅಕ್ರಮವಾಗಿ ಪಟಾಕಿ ದಾಸ್ತಾನು!

    ಖಾಸಗಿ ಶಾಲಾ ಕಟ್ಟಡದಲ್ಲೇ ಅಕ್ರಮವಾಗಿ ಪಟಾಕಿ ದಾಸ್ತಾನು ಮಾಡಿರುವ ಘಟನೆ ​ಶಿವಮೊಗ್ಗದ ಜಯನಗರದ ಎರಡನೇ ಕ್ರಾಸ್‌ನಲ್ಲಿ ನಡೆದಿದೆ. ​ಕಿಡ್ಸ್ ಶಾಲೆಯ ಮೇಲ್ಭಾಗದಲ್ಲಿ ಅಮರ್ ಎಂಬುವರಿಂದ ಅಕ್ರಮವಾಗಿ ಪಟಾಕಿ ದಾಸ್ತಾನು ಮಾಡಲಾಗಿದ್ದು, ದಿಢೀರ್​ ದಾಳಿ ನಡೆಸಿ ಎಸಿ ಮೈತ್ರಿ ಭಾರಿ ಪ್ರಮಾಣದ​ ಪಟಾಕಿ ಜಪ್ತಿ ಮಾಡಿದ್ದಾರೆ.

  • 04 Nov 2026 06:15 PM (IST)

    ‘ಇದು ಯಾರ ಐಡಿಯಾ?’: ಸರ್ಕಾರದ ವಿರುದ್ಧ ಸುರೇಶ್​​ ಕುಮಾರ್​​ ಕಿಡಿ

    ಅಲ್ಪಸಂಖ್ಯಾತ ನಿರ್ದೇಶನಾಲಯದಿಂದ 60 ದಿನಗಳ ಸೇನಾ ತರಬೇತಿ ಕುರಿತು ಜಾಹೀರಾತು ಹಿನ್ನೆಲೆ ಇದು ಯಾರ ಐಡಿಯಾ ಎಂದು ಸಾಮಾಜಿಕ ಜಾಲತಾಣದಲ್ಲಿ ಶಾಸಕ ಸುರೇಶ್ ಕುಮಾರ್ ಪ್ರಶ್ನಿಸಿದ್ದಾರೆ. ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ನಾಗರಿಕರ ತೆರಿಗೆ ಹಣದಿಂದ 60 ದಿನಗಳ ಆರ್ಮಿ ಟ್ರೈನಿಂಗ್ ಯಾವ ರೀತಿ ಅಗತ್ಯ? ಮುಖ್ಯಮಂತ್ರಿಗಳೇ ಉತ್ತರಿಸಿ. ರಾಜ್ಯಕ್ಕೆ ಸ್ಪಷ್ಟನೆ ನೀಡಿ ಎಂದವರು ಆಗ್ರಹಿಸಿದ್ದಾರೆ.

  • 04 Nov 2026 06:04 PM (IST)

    ಅಂಜನಾದ್ರಿ ಬೆಟ್ಟದ ವಿವಾದ: ರಾಜ್ಯ ಧಾರ್ಮಿಕ ಪರಿಷತ್​​ ನೋಟಿಸ್

    ಹನುಮ ಜನ್ಮಸ್ಥಳ ಅಂಜನಾದ್ರಿ ಬೆಟ್ಟದ ವಿವಾದ ವಿಚಾರ ಸಂಬಂಧ ಕೊಪ್ಪಳ ಡಿಸಿ ಹಾಗೂ ವಿದ್ಯಾದಾಸ ಬಾಬಾಗೆ ರಾಜ್ಯ ಧಾರ್ಮಿಕ ಪರಿಷತ್​​ ನೋಟಿಸ್ ಜಾರಿಮಾಡಿದೆ.​​ ನ.11ರಂದು ದಾಖಲೆ ಸಮೇತ ಹಾಜರಾಗಲು ಸೂಚಿಸಲಾಗಿದೆ. ಅಂಜನಾದ್ರಿ ದೇವಸ್ಥಾನದಲ್ಲಿ ಪೂಜೆಗೆ ವಿದ್ಯಾದಾಸ ಬಾಬಾಗೆ ಪೂಜೆಗೆ ಹೈಕೋರ್ಟ್​​ನಿಂದ ಅವಕಾಶದ ಬಳಿಕ ಬೆಟ್ಟವನ್ನು ಬಾಬಾ ಕಬ್ಜಾ ಮಾಡಿದ್ದರು. ಬಳಿಕ ಬೆಟ್ಟವನ್ನ ಜಿಲ್ಲಾಡಳಿತ ತನ್ನ ಸುಪರ್ದಿಗೆ ಪಡೆದಿತ್ತು. ಜಿಲ್ಲಾಡಳಿತದ ಕ್ರಮದ ವಿರುದ್ಧ ಬಾಬಾ ನ್ಯಾಯಾಂಗನಿಂದನೆ ಆರೋಪ ಮಾಡಿರುವ ಕಾರಣ ಎರಡು ಪಾರ್ಟಿಗೂ ಧರ್ಮಪರಿಷತ್​​ನಿಂದ ನೋಟಿಸ್​ ಜಾರಿಮಾಡಲಾಗಿದೆ.

  • 04 Nov 2026 04:44 PM (IST)

    ಕಬ್ಬು ಬೆಳೆಗಾರರ ಹೋರಾಟ: ಬಾಗಲಕೋಟೆಯಲ್ಲಿ ಬೆಳೆಗಾರರ ಜೊತೆ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ್ ಮಹತ್ವದ ಸಭೆ

    ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಸುದೀರ್ಘ ಹೋರಾಟಕ್ಕೆ ಸ್ಪಂದಿಸಿರುವ ರಾಜ್ಯ ಸರ್ಕಾರ, ಸಮಸ್ಯೆಯ ಇತ್ಯರ್ಥಕ್ಕೆ ಸಕ್ರಿಯವಾಗಿ ಮುಂದಾಗಿದೆ. ಕಬ್ಬು ಬೆಳೆಗಾರರ ಪ್ರಮುಖ ಕುಂದುಕೊರತೆಗಳನ್ನು ಆಲಿಸಲು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ್ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ಸಂಧಾನ ಸಭೆ ನಡೆಯುತ್ತಿದೆ.

  • 04 Nov 2026 04:13 PM (IST)

    ಕಂಠಪೂರ್ತಿ ಕುಡಿದು ಥಾರ್ ಕಾರು ಚಾಲನೆ: ಆನೇಕಲ್-ಥಳಿ ರಸ್ತೆಯಲ್ಲಿ ಹಳ್ಳಕ್ಕೆ ಬಿದ್ದ ವಾಹನ

    ಮದ್ಯದ ಅಮಲಿನಲ್ಲಿ ಅತಿ ವೇಗವಾಗಿ ಕಾರು ಚಾಲನೆ ಮಾಡಿದ ಪರಿಣಾಮ, ಮಹೀಂದ್ರಾ ಥಾರ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಉರುಳಿ ಬಿದ್ದಿರುವ ಭೀಕರ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

  • 04 Nov 2026 04:12 PM (IST)

    ಮೈಸೂರಿನಲ್ಲಿ ಮುಂದುವರಿದ ಹುಲಿ ಭೀತಿ: ನಂಜನಗೂಡಿನಲ್ಲಿ ಮೇಕೆ ಮೇಯಿಸುತ್ತಿದ್ದ ಆದಿವಾಸಿ ಮಹಿಳೆ ಹುಲಿ ದಾಳಿಗೆ ಬಲಿ

    ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಹುಲಿ ದಾಳಿ ಮುಂದುವರಿದಿದ್ದು, ಆದಿವಾಸಿ ಮಹಿಳೆಯೊಬ್ಬರನ್ನು ಕಾಡಿಗೆ ಎಳೆದೊಯ್ದು ಭಕ್ಷಿಸಿರುವ ದಾರುಣ ಘಟನೆ ನಡೆದಿದೆ.

  • 04 Nov 2026 03:29 PM (IST)

    ಮಾಫಿ ಸಾಕ್ಷಿ ಪ್ರದೋಷ್ ಮಧ್ಯಂತರ ಜಾಮೀನಿಗೆ ನಟ ದರ್ಶನ್ ವಕೀಲರ ತೀವ್ರ ಆಕ್ಷೇಪ

    ಸ್ಯಾಂಡಲ್‌ವುಡ್ ನಟ ದರ್ಶನ್ ಮತ್ತು ಗ್ಯಾಂಗ್ ಭಾಗಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿಮತ್ತೊಂದು ಪ್ರಮುಖ ಕಾನೂನು ಸಮರ ಎದುರಾಗಿದೆ. ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ  ಹೊರಹೊಮ್ಮಿರುವ ಆರೋಪಿ ಪ್ರದೋಷ್ ರಾವ್ ಸಲ್ಲಿಸಿರುವ ಮಧ್ಯಂತರ ಜಾಮೀನು ಅರ್ಜಿಗೆ ನಟ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಕಡಾಖ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

  • 04 Nov 2026 03:08 PM (IST)

    ‘ಅಗ್ನಿವೀರ’ರಿಗೆ ಕೇಂದ್ರ ಸರ್ಕಾರದಿಂದ ಭಾರಿ ಸಿಹಿಸುದ್ದಿ

    ದೇಶದ ಯುವಜನತೆಗೆ ಹಾಗೂ ಸೇನಾ ಆಕಾಂಕ್ಷಿಗಳಿಗೆ ಕೇಂದ್ರ ಸರ್ಕಾರ ಮತ್ತು ಭಾರತೀಯ ಸಶಸ್ತ್ರ ಪಡೆಗಳು ಭಾರಿ ಸಿಹಿಸುದ್ದಿ ನೀಡಿವೆ. ಭಾರತೀಯ ಸೇನೆಯ ‘ಅಗ್ನಿವೀರ್’ (Agniveer) ಯೋಜನೆಯಡಿಯ ಸೇವಾ ಅವಧಿಯನ್ನು ಹೆಚ್ಚುವರಿಯಾಗಿ 2 ವರ್ಷಗಳ ಕಾಲ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ನವದೆಹಲಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (CDS) ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಅವರು ಈ ಪರಿಷ್ಕೃತ ಯೋಜನೆಯ ಮಹತ್ವದ ವಿವರಗಳನ್ನು ಪ್ರಕಟಿಸಿದ್ದಾರೆ.

  • 04 Nov 2026 02:46 PM (IST)

    ರಾಜಮಾತೆ ಪ್ರಮೋದಾ ದೇವಿ ಆರೋಪ ವಿಚಾರ: ‘ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ತೇವೆ’ ಎಂದ ಸಿಎಂ ಡಿ.ಕೆ. ಶಿವಕುಮಾರ್

    ಮೈಸೂರು ರಾಜಮನೆತನದ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು ವ್ಯಕ್ತಪಡಿಸಿರುವ ಅಸಮಾಧಾನ ಹಾಗೂ ಆರೋಪಗಳ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ರಾಜಮನೆತನಕ್ಕೆ ಸರ್ಕಾರದಿಂದ ಸಂಪೂರ್ಣ ಗೌರವವಿದೆ ಎಂದು ತಿಳಿಸಿರುವ ಸಿಎಂ, ಅವರ ಹೇಳಿಕೆಯನ್ನು ಪರಿಶೀಲಿಸಿದ ಬಳಿಕ ಅವರೊಂದಿಗೇ ನೇರವಾಗಿ ಮಾತನಾಡುವುದಾಗಿ ಸ್ಪಷ್ಟಪಡಿಸಿದ್ದಾರೆ.

  • 04 Nov 2026 02:04 PM (IST)

    ಅರಾಮಾಗಿ ಬಂದು ಬಂಧಿಸಲಿ, ನಾನೇ ರೆಡ್ ಕಾರ್ಪೆಟ್ ಹಾಕಿಸುತ್ತೇನೆ: ಪ್ರಿಯಾಂಕ್ ಖರ್ಗೆಗೆ ಆರ್. ಅಶೋಕ್ ಸವಾಲು!

    ವಿಪಕ್ಷಗಳನ್ನು ಜೈಲಿಗೆ ಕಳುಹಿಸುವುದಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆಗೆ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರವಾಗಿ ತಿರುಗೇಟು ನೀಡಿದ್ದಾರೆ. ತುರ್ತು ಪರಿಸ್ಥಿತಿಯಲ್ಲೇ ಜೈಲಿಗೆ ಹೋಗಿ ಬಂದಿರುವ ನಮಗೆ ಈ ಗೊಡ್ಡು ಬೆದರಿಕೆಗಳು ಅಂಜಿಸುವುದಿಲ್ಲ. ಇನ್ನೊಂದು ವರ್ಷ ಅಧಿಕಾರವಿದೆ ಎಂದು ಎಗರಿ ಕುಣಿಯುತ್ತಿದ್ದು, ಮುಂದೆ ಚೊಂಬು ಹಿಡಿಯಬೇಕಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

  • 04 Nov 2026 01:41 PM (IST)

    ಅಂಬಾರಿಗೆ ಬಾಡಿಗೆಯಲ್ಲ, ರಾಯಲ್ಟಿ ನೀಡಲಾಗುತ್ತದೆ: ಪ್ರಮೋದಾದೇವಿ ಸ್ಪಷ್ಟನೆ!

    ಅಂಬಾರಿ ಹೊರುವ ಆನೆಗೆ ಬಾಡಿಗೆಯಲ್ಲ, ಬದಲಿಗೆ ಗೌರವಧನ (ರಾಯಲ್ಟಿ) ನೀಡಲಾಗುತ್ತದೆ ಎಂದು ಪ್ರಮೋದಾದೇವಿ ಒಡೆಯರ್ ಸ್ಪಷ್ಟಪಡಿಸಿದ್ದಾರೆ. ಆ ಹಣಕ್ಕೆ ನಾವು ಜಿಎಸ್‌ಟಿ ಕೂಡ ಕಟ್ಟುತ್ತೇವೆ. ಗೌರವಧನ ನಿರಾಕರಿಸಿದರೆ ಮುಂದಿನ ನಿರ್ಧಾರ ತಿಳಿಸುವುದಾಗಿ ಎಚ್ಚರಿಸಿರುವ ಅವರು, ಎಷ್ಟು ಹಣ ನೀಡಿದ್ದಾರೆ ಎಂಬುದನ್ನು ಸರ್ಕಾರದವರನ್ನೇ ಕೇಳಿ ಎಂದಿದ್ದಾರೆ.

  • 04 Nov 2026 01:11 PM (IST)

    ಗೃಹಲಕ್ಷ್ಮಿ ಹಣ ದುರುಪಯೋಗ ಆರೋಪ: ನಿಖಿಲ್ ಬಳಿ ಆಧಾರವಿದ್ದರೆ ಕೊಡಲಿ ಎಂದ ಸಚಿವ ಬಾಲಕೃಷ್ಣ!

    ಗೃಹಲಕ್ಷ್ಮಿ ಯೋಜನೆ ಹಣ ದುರುಪಯೋಗವಾಗುತ್ತಿದೆ ಎಂಬ ನಿಖಿಲ್ ಕುಮಾರಸ್ವಾಮಿ ಹೇಳಿಕೆಗೆ ಸಚಿವ ಹೆಚ್.ಸಿ. ಬಾಲಕೃಷ್ಣ ತೀವ್ರ ತಿರುಗೇಟು ನೀಡಿದ್ದಾರೆ. ಅವರ ಬಳಿ ಸೂಕ್ತ ಆಧಾರವಿದ್ದರೆ ಬಿಡುಗಡೆ ಮಾಡಲಿ, ಸುಮ್ಮನೆ ಉಢಾಫೆ ಮಾತನಾಡುವುದನ್ನು ಬಿಟ್ಟು ಬೆಳೆದ ಮೇಲೆ ಗೌರವಯುತವಾಗಿ ಮಾತನಾಡಲು ಕಲಿಯಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

  • 04 Nov 2026 12:38 PM (IST)

    ಸಾಮಾನ್ಯ ಸಾರಿಗೆಯಲ್ಲಿ ₹9 ಹಾಗೂ ವೇಗದೂತ ಬಸ್‌ಗಳಲ್ಲಿ ₹18 ವರೆಗೆ ದರ ಏರಿಕೆ

    ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಪರಿಷ್ಕರಿಸಲಾಗಿದೆ. ಸಾಮಾನ್ಯ ಸಾರಿಗೆಯಲ್ಲಿ ₹9 ಹಾಗೂ ವೇಗದೂತ ಬಸ್‌ಗಳಲ್ಲಿ ₹18 ವರೆಗೆ ದರ ಹೆಚ್ಚಿಸಲಾಗಿದೆ. ಬೆಂಗಳೂರಿನಿಂದ ನೆಲಮಂಗಲ, ಹೊಸಕೋಟೆಗೆ ₹44 ಹಾಗೂ ಮಾಗಡಿಗೆ ₹57ಕ್ಕೆ ಟಿಕೆಟ್ ದರ ಏರಿಕೆಯಾಗಿದೆ.

  • 04 Nov 2026 12:25 PM (IST)

    ಸಾರಿಗೆ ಪ್ರಯಾಣಿಕರಿಗೆ ಶಾಕ್: ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ದರ ಏರಿಕೆ ಪಟ್ಟಿ ಇಲ್ಲಿದೆ!

    ರಾಜ್ಯದಲ್ಲಿ ಬಸ್ ಪ್ರಯಾಣ ದರವನ್ನು ಪರಿಷ್ಕರಿಸಲಾಗಿದ್ದು, ಬೆಂಗಳೂರಿನಿಂದ ನೆಲಮಂಗಲ, ಹೊಸಕೋಟೆಗೆ 44 ರೂ. ಹಾಗೂ ಮೈಸೂರಿಗೆ 197 ರೂ. ಆಗಿದೆ. ತುಮಕೂರು, ಕೋಲಾರಕ್ಕೆ 100 ರೂ. ಹಾಗೂ ಹಾಸನಕ್ಕೆ 270 ರೂ.ಗೆ ಏರಿಕೆಯಾಗುವ ಮೂಲಕ ಪ್ರಯಾಣಿಕರ ಪಾಕೆಟ್‌ಗೆ ಬಿಸಿ ತಟ್ಟಿದೆ.

  • 04 Nov 2026 12:23 PM (IST)

    ಹಾಲು ಹಾಗೂ ಮೊಸರು ದರ ಏರಿಕೆ ವಿರೋಧ: KMF ಮಹತ್ವದ ಸಭೆ ಮುಂದೂಡಿಕೆ!

    ಹಾಲು ಮತ್ತು ಮೊಸರು ದರ ಏರಿಕೆ ವಿಚಾರವಾಗಿ ಇಂದು ನಿಗದಿಯಾಗಿದ್ದ ಕೆಎಂಎಫ್‌ (KMF) ಸಭೆಯನ್ನು ಮುಂದೂಡಲಾಗಿದೆ. ಡಿ.ಕೆ. ಸುರೇಶ್ ಅವರ ಹೇಳಿಕೆ ಹಾಗೂ ವಿರೋಧದ ನಡುವೆಯೂ, ನಾಳೆ ಅಥವಾ ನಾಡಿದ್ದು ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

  • 04 Nov 2026 12:13 PM (IST)

    ಬಿಎಂಟಿಸಿ ಪ್ರಯಾಣಿಕರಿಗೆ ಶಾಕ್: ಮೆಜೆಸ್ಟಿಕ್‌ನಿಂದ ನೆಲಮಂಗಲ, ಹೊಸಕೋಟೆ ಬಸ್ ದರ ಏರಿಕೆ!

    ಬಿಎಂಟಿಸಿ ಬಸ್ ಪ್ರಯಾಣ ದರವನ್ನು ಶೇಕಡಾವಾರು ಲೆಕ್ಕದಲ್ಲಿ ಹೆಚ್ಚಿಸದೆ, ಸ್ಟೇಜ್‌ಗಳ ಆಧಾರದ ಮೇಲೆ ಮಾತ್ರ ಏರಿಕೆ ಮಾಡಲಾಗಿದೆ. ಮೆಜೆಸ್ಟಿಕ್‌ನಿಂದ ನೆಲಮಂಗಲ ಹಾಗೂ ಹೊಸಕೋಟೆಗೆ ಇದ್ದ 35 ರೂ. ದರ ಈಗ ₹44ಕ್ಕೆ ಏರಿಕೆಯಾಗಿದ್ದು, ಪ್ರತಿ ಸ್ಟೇಜ್‌ಗೆ ಇದ್ದ 6 ರೂ. ದರ 10 ರೂ.ಗೆ ಹೆಚ್ಚಿಸಲಾಗಿದೆ.

  • 04 Nov 2026 12:04 PM (IST)

    ಫ್ರೀ ಬಸ್‌ನಿಂದ ನಷ್ಟವಿಲ್ಲ, ನಿಗಮಕ್ಕೆ ಸರ್ಕಾರವೇ ಹಣ ನೀಡುತ್ತಿದೆ: ಸಚಿವ ಬೈರತಿ ಸುರೇಶ್!

    ಉಚಿತ ಬಸ್ ಪ್ರಯಾಣದಿಂದ ನಿಗಮಗಳಿಗೆ ನಷ್ಟವಾಗುತ್ತಿಲ್ಲ, ಮಹಿಳೆಯರ ಟಿಕೆಟ್ ಹಣವನ್ನು ಸರ್ಕಾರವೇ ಭರಿಸುತ್ತಿದೆ ಎಂದು ಸಚಿವ ಬೈರತಿ ಸುರೇಶ್ ಸ್ಪಷ್ಟಪಡಿಸಿದ್ದಾರೆ. ಡೀಸೆಲ್ ದರ ಹಾಗೂ ನಿರ್ವಹಣಾ ವೆಚ್ಚ ಹೆಚ್ಚಾದಾಗ ಮಾತ್ರ ಟಿಕೆಟ್ ದರ ಏರಿಸಲು ನಿಗಮಗಳಿಗೆ ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

  • 04 Nov 2026 11:31 AM (IST)

    ದಸರಾ ವಿವಾದ: ಸಿಎಂ ಡಿ.ಕೆ.ಶಿವಕುಮಾರ್‌ಗೆ ಧನ್ಯವಾದ ಅರ್ಪಿಸಿದ ಪ್ರಮೋದಾದೇವಿ ಒಡೆಯರ್!

    ಮೈಸೂರು ದಸರಾ ಸಮಯದಲ್ಲಿ ಅರಮನೆ ಸಂಪ್ರದಾಯಕ್ಕೆ ಅಡ್ಡಿಯಾದ ಆರೋಪದ ಕುರಿತು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದಾಗಿ ಹೇಳಿದ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಧನ್ಯವಾದ ಅರ್ಪಿಸಿದ್ದಾರೆ. ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.

  • 04 Nov 2026 11:14 AM (IST)

    ರಾಜ್ಯದಲ್ಲಿ ಅಕ್ಕಿ ಬೆಲೆ ಶೇ 30ರಷ್ಟು ಏರಿಕೆ!

    ಮಳೆ ಕೊರತೆಯಿಂದ ಭತ್ತದ ಇಳುವರಿ ಕುಸಿದು ರಾಜ್ಯದಲ್ಲಿ ಅಕ್ಕಿ ಬೆಲೆ ಶೇ. 30ರಷ್ಟು ಹೆಚ್ಚಿದ್ದು, ಕೆಜಿಗೆ ₹100 ಗಡಿ ದಾಟಿದೆ. ಹೋಟೆಲ್ ಉದ್ಯಮಕ್ಕೆ ಹೊಡೆತ ಬಿದ್ದಿದ್ದು, ಅಕ್ರಮ ದಾಸ್ತಾನು ಮಾಡುವವರ ವಿರುದ್ಧ ಸಚಿವ ರಿಜ್ವಾನ್ ಅರ್ಷದ್ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ 18 ಲಕ್ಷ ಕೆಜಿ ಅಕ್ಕಿ ಜಪ್ತಿ ಮಾಡಿ 232 ಮಂದಿಯನ್ನು ಬಂಧಿಸಲಾಗಿದೆ. ಮತ್ತಷ್ಟು ಓದಿ

  • 04 Nov 2026 11:13 AM (IST)

    ಗೃಹಲಕ್ಷ್ಮಿ ಯೋಜನೆಯ ₹2,600 ಕೋಟಿ ಡೈವರ್ಟ್: ನಿಖಿಲ್ ಕುಮಾರಸ್ವಾಮಿ ಗಂಭೀರ ಆರೋಪ!

    ಸರ್ಕಾರ ದಿವಾಳಿಯಾಗಿದ್ದು, ಫೆಬ್ರವರಿ-ಮಾರ್ಚ್ ತಿಂಗಳ ಗೃಹಲಕ್ಷ್ಮಿ ಯೋಜನೆಯ 2,600 ಕೋಟಿ ರೂಪಾಯಿ ಹಣವನ್ನು ಬೇರೆಡೆಗೆ ಡೈವರ್ಟ್ ಮಾಡಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ. ಕೋರ್ಟ್‌ಗೆ ಸಲ್ಲಿಸಿದ ಆಕ್ಷೇಪಣೆಯಲ್ಲಿ ಸರ್ಕಾರವೇ ಆರ್ಥಿಕ ಕೊರತೆ ಒಪ್ಪಿಕೊಂಡಿದ್ದು, ಈ ಹಣ ಉಪಚುನಾವಣೆಗೆ ಬಳಕೆಯಾಗುವ ಸಾಧ್ಯತೆಯಿದೆ ಎಂದು ದೂರಿದ್ದಾರೆ.

  • 04 Nov 2026 10:56 AM (IST)

    KPSC ಹಗರಣ: ಶಿವಶಂಕರಪ್ಪ ಸಾಹುಕಾರನ 40 ಕೋಟಿ ಪ್ರಾಜೆಕ್ಟ್ ಬಯಲು!

    KPSC ಪಶುವೈದ್ಯರ ನೇಮಕಾತಿ ಹಗರಣದ ಆರೋಪಿ ಶಿವಶಂಕರಪ್ಪ ಸಾಹುಕಾರನ ಮನೆ ಮೇಲೆ ದಾಳಿ ನಡೆಸಿದ ED, ಸ್ಫೋಟಕ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಯಾದಗಿರಿಯ ಮಾದರ್ಕಿಯಲ್ಲಿ 8 ಎಕರೆ ಜಾಗದಲ್ಲಿ ಶಾಲೆ, ಆಸ್ಪತ್ರೆ ಹಾಗೂ ರೆಸ್ಟೋರೆಂಟ್ ನಿರ್ಮಿಸಲು 40 ಕೋಟಿ ರೂ. ವೆಚ್ಚದ ರಹಸ್ಯ ಪ್ರಾಜೆಕ್ಟ್‌ ಯೋಜನೆಯಿರುವುದು ತನಿಖೆಯಲ್ಲಿ ಬಯಲಾಗಿದೆ.

  • 04 Nov 2026 10:35 AM (IST)

    ಸಿಎಂ ಭೇಟಿಯಾದ ಸಚಿವ ಜಮೀರ್, ಶಾಸಕ ನಾಗೇಂದ್ರ!

    ನವೆಂಬರ್ 10ಕ್ಕೆ ನಾಗೇಂದ್ರ ಮತ್ತೆ ಸಚಿವರಾಗಲಿದ್ದಾರೆ ಎಂದು ಸಚಿವ ಜಮೀರ್ ಅಹಮದ್ ನೀಡಿರುವ ಹೇಳಿಕೆ ಬೆನ್ನಲ್ಲೇ, ಅವರಿಬ್ಬರೂ ಒಟ್ಟಾಗಿ ಸಿಎಂ ಭೇಟಿಯಾಗಿದ್ದಾರೆ. ಸಂಪುಟ ಪುನಾರಚನೆ ಹಾಗೂ ನಾಗೇಂದ್ರ ಸಚಿವ ಸಂಪುಟ ಸೇರ್ಪಡೆ ಕುರಿತ ಚರ್ಚೆಯ ಹಿನ್ನೆಲೆಯಲ್ಲಿ ಈ ಭೇಟಿ ತೀವ್ರ ಕುತೂಹಲ ಮೂಡಿಸಿದೆ.

  • 04 Nov 2026 09:34 AM (IST)

    ಸಿದ್ದರಾಮಯ್ಯ ಸ್ಟಿಂಗ್ ಪ್ರಕರಣ: ಪ್ರಜ್ವಲ್ ವಿಚಾರಣೆ, ಮೊಬೈಲ್ ರಹಸ್ಯ ಭೇದಿಸಿದ CCB!

    ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಪ್ರಕರಣದಲ್ಲಿ ಪ್ರಜ್ವಲ್ ವಿಚಾರಣೆಗೆ ಹಾಜರಾಗಿದ್ದು, ವೀಡಿಯೋ ಹಾಗೂ ರಿತೇಶ್ ಪಾಂಡೆ ಬಗ್ಗೆ ತನಗೆ ಮಾಹಿತಿ ಇಲ್ಲವೆಂದು ಹೇಳಿದ್ದಾರೆ. ಇತ್ತ CCB ಪೊಲೀಸರು ರಿತೇಶ್ ಪಾಂಡೆ ಮೊಬೈಲ್ ಖರೀದಿಸಿದ ಅಂಗಡಿಯ ಸಿಸಿಟಿವಿ ಫೂಟೇಜ್ ಹಾಗೂ ಬಿಲ್ ವಶಪಡಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

  • 04 Nov 2026 09:32 AM (IST)

    ರಾತ್ರೋರಾತ್ರಿ ಕೆರೆ ಮಣ್ಣು ಕಳ್ಳತನ, ಅಧಿಕಾರಿಗಳ ಸಾಥ್ ಶಂಕೆ!

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ರೈಲ್ವೆ ಗೊಲ್ಲಹಳ್ಳಿ ಕೆರೆಯಲ್ಲಿ ಜೆಸಿಬಿ ಹಾಗೂ ಟಿಪ್ಪರ್ ಬಳಸಿ ರಾತ್ರೋರಾತ್ರಿ ಲಕ್ಷಾಂತರ ರೂಪಾಯಿ ಮೌಲ್ಯದ ಮಣ್ಣನ್ನು ಅಕ್ರಮವಾಗಿ ಕದ್ದು ಸಾಗಿಸಲಾಗುತ್ತಿದೆ. ಈ ಅಕ್ರಮ ದಂಧೆಯಲ್ಲಿ ಗೋಪಾಲಪುರ ಮತ್ತು ರೈಲ್ವೆ ಗೊಲ್ಲಹಳ್ಳಿ ಪಂಚಾಯತಿಯ ಅಧಿಕಾರಿಗಳು ಹಾಗೂ ಇಒ ಭಾಗಿಯಾಗಿದ್ದಾರೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ.

  • 04 Nov 2026 09:31 AM (IST)

    ಆಂಧ್ರ ಚಂಡಮಾರುತ: ನೆರವಿಗೆ ಧಾವಿಸಿದ 100 ಜೆಸ್ಕಾಂ ಪವರ್‌ಮ್ಯಾನ್‌ಗಳು!

    ಆಂಧ್ರಪ್ರದೇಶದಲ್ಲಿ ಚಂಡಮಾರುತ ಹಾಗೂ ಪ್ರವಾಹ ಸೃಷ್ಟಿಸಿರುವ ಅನಾಹುತಕ್ಕೆ ನೆರವಾಗಲು ಜೆಸ್ಕಾಂ ಸಂಸ್ಥೆಯು ೧೦೦ ಮಂದಿ ಪವರ್‌ಮ್ಯಾನ್‌ಗಳ ತಂಡವನ್ನು ರವಾನಿಸಿದೆ. ಸರ್ಕಾರದ ಆದೇಶದಂತೆ, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ್ ಅವರು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮುಂಜಾಗ್ರತೆಯಿಂದ ವಿದ್ಯುತ್ ಪುನರುಜ್ಜೀವನ ಕೆಲಸ ನಿರ್ವಹಿಸಲು ಸಿಬ್ಬಂದಿಗೆ ಸೂಚಿಸಿ ಕಳುಹಿಸಿಕೊಟ್ಟಿದ್ದಾರೆ.

  • 04 Nov 2026 09:30 AM (IST)

    ಮಣಿಪಾಲದಲ್ಲಿ ನಡುರಾತ್ರಿ ರಸ್ತೆ ಮಧ್ಯೆ ಯುವಕರ ಮಾರಾಮಾರಿ!

    ಮಣಿಪಾಲ ಪೊಲೀಸ್ ಠಾಣೆ ಸಮೀಪವೇ ಮದ್ಯಪಾನ ಮಾಡಿದ ಯುವಕರ ಗುಂಪು ನಡುರಸ್ತೆಯಲ್ಲಿ ಹೊಡೆದಾಡಿಕೊಂಡಿದೆ. ಪಬ್‌ಗಳ ಮುಂದೆ ಅವಧಿ ಮೀರಿ ಮದ್ಯ ಪೂರೈಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕರು ಆರೋಪಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹಿಸಿದ್ದಾರೆ.

  • 04 Nov 2026 09:27 AM (IST)

    ಸಾರಿಗೆಗೆ ತೊಂದರೆ: ಶಾಲಾ ಮಕ್ಕಳಿಂದಲೇ ರಸ್ತೆ ಗುಂಡಿ ಮುಚ್ಚುವ ಕೆಲಸ!

    ಕಲಬುರಗಿಯ ಕಮಲಾಪುರ ತಾಲೂಕಿನ ಕಾಳಮಂದರಗಿ ಬಳಿ ರಸ್ತೆ ಸಂಪೂರ್ಣ ಹಾಳಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತ ಶಾಲಾ ಮಕ್ಕಳು ಸಲಿಕೆ-ಪಿಕಾಸಿ ಹಿಡಿದು ತಾವೇ ಗುಂಡಿಗಳನ್ನು ಮುಚ್ಚಿದ್ದಾರೆ. ಸಂಚಾರಕ್ಕೆ ಸಂಕಷ್ಟ ಎದುರಾಗಿದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಶಾಸಕ ಬಸವರಾಜ ಮತ್ತಿಮೂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • 04 Nov 2026 08:11 AM (IST)

    ಮಂಗಳೂರಿನಲ್ಲಿ 15.3 ಲಕ್ಷದ ಡ್ರಗ್ಸ್ ವಶ: ನಸೀಮಾ ಬಂಧನ!

    ಮಂಗಳೂರು ನಗರದಲ್ಲಿ ಯುವಕರಿಗೆ ಡ್ರಗ್ಸ್ ಪೂರೈಸುತ್ತಿದ್ದ ಆರೋಪಿ ನಸೀಮಾಳನ್ನು ಮಂಗಳೂರು ಉತ್ತರ ಪೊಲೀಸರು ಉಜ್ಜೂಡಿಯ ರಾಧಾ ರೆಸಿಡೆನ್ಸಿ ಫ್ಲಾಟ್‌ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ. ಡ್ರಗ್ಸ್ ಸೇವಿಸಿದವರ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ್ದು, 15.30 ಲಕ್ಷ ಮೌಲ್ಯದ 153 ಗ್ರಾಂ MDMA ವಶಪಡಿಸಿಕೊಂಡಿದ್ದಾರೆ.

Published On - Nov 04,2026 8:10 AM

Follow Us
ಬಿಗ್ ಬಾಸ್ ಮನೆಯಲ್ಲಿ ಮಂಜ-ಮಂಜಿ ಪ್ರಸಂಗ; ಎಳೆಎಳೆಯಾಗಿ ವಿವರಿಸಿದ ಸುದೀಪ್
ಬಿಗ್ ಬಾಸ್ ಮನೆಯಲ್ಲಿ ಮಂಜ-ಮಂಜಿ ಪ್ರಸಂಗ; ಎಳೆಎಳೆಯಾಗಿ ವಿವರಿಸಿದ ಸುದೀಪ್
ಬೆಂಗಳೂರು ಪಿಂಕ್ ಲೈನ್ ಮೆಟ್ರೋಗೆ ಮೊದಲ ದಿನವೇ ಭರ್ಜರಿ ಸ್ಪಂದನೆ
ಬೆಂಗಳೂರು ಪಿಂಕ್ ಲೈನ್ ಮೆಟ್ರೋಗೆ ಮೊದಲ ದಿನವೇ ಭರ್ಜರಿ ಸ್ಪಂದನೆ
ಇಂದು ಈ ರಾಶಿಯವರಿಗೆ ಆರ್ಥಿಕವಾಗಿ ಅಧಿಕ ಲಾಭ
ಇಂದು ಈ ರಾಶಿಯವರಿಗೆ ಆರ್ಥಿಕವಾಗಿ ಅಧಿಕ ಲಾಭ
ನಿಗಮ ಮಂಡಳಿಗಳಲ್ಲಿ ಆರ್‌ಎಸ್‌ಎಸ್ ನಂಟು ಇರುವವರು ಸ್ವತಃ ರಾಜೀನಾಮೆ ನೀಡಬೇಕು
ನಿಗಮ ಮಂಡಳಿಗಳಲ್ಲಿ ಆರ್‌ಎಸ್‌ಎಸ್ ನಂಟು ಇರುವವರು ಸ್ವತಃ ರಾಜೀನಾಮೆ ನೀಡಬೇಕು
"ನಾನು ನೋಡಿದ್ದ ಡಿಕೆಶಿ ಘರ್ಜನೆ ಬೇರೆ ಇತ್ತು, ಈಗಿನವರು ಬೇರೆ"
ಕ್ಯಾನ್ಸರ್ ಪೀಡಿತ ಮಕ್ಕಳನ್ನು ಕಂಡು ಬೇಸರ ವ್ಯಕ್ತಪಡಿಸಿದ ಸಿಎಂ
ಕ್ಯಾನ್ಸರ್ ಪೀಡಿತ ಮಕ್ಕಳನ್ನು ಕಂಡು ಬೇಸರ ವ್ಯಕ್ತಪಡಿಸಿದ ಸಿಎಂ
ಬಿಗ್​​ಬಾಸ್ ಟಾಸ್ಕ್ ಫಲಿತಾಂಶ ನೀಡಿದ ಎಐ: ಗೆದ್ದಿದ್ದು ಯಾರು?
ಬಿಗ್​​ಬಾಸ್ ಟಾಸ್ಕ್ ಫಲಿತಾಂಶ ನೀಡಿದ ಎಐ: ಗೆದ್ದಿದ್ದು ಯಾರು?
ಅಮಾಯಕ ರೋಷನ್‌ ಹೆಸರಲ್ಲಿ 350 ಕೋಟಿ ರೂ. ವ್ಯವಹಾರ, ಬೆಳಕಿಗೆ ಬಂದಿದ್ದು ಹೇಗೆ
ಅಮಾಯಕ ರೋಷನ್‌ ಹೆಸರಲ್ಲಿ 350 ಕೋಟಿ ರೂ. ವ್ಯವಹಾರ, ಬೆಳಕಿಗೆ ಬಂದಿದ್ದು ಹೇಗೆ
ದೇಗುಲ ಪ್ರವೇಶ ನಿರಾಕರಣೆ ವಿಚಾರ: ಹೆಣ್ಣುಮಕ್ಕಳಿಗೆ ಬೇಸರ ತಂದಿದೆ
ದೇಗುಲ ಪ್ರವೇಶ ನಿರಾಕರಣೆ ವಿಚಾರ: ಹೆಣ್ಣುಮಕ್ಕಳಿಗೆ ಬೇಸರ ತಂದಿದೆ
ಕರ್ನಾಟಕದಲ್ಲಿ ಆಸ್ತಿ ಮಾರ್ಗಸೂಚಿ ಬೆಲೆ ಹೆಚ್ಚಳ: ಖರೀದಿದಾರರಿಗೆ ಆಘಾತ
ಕರ್ನಾಟಕದಲ್ಲಿ ಆಸ್ತಿ ಮಾರ್ಗಸೂಚಿ ಬೆಲೆ ಹೆಚ್ಚಳ: ಖರೀದಿದಾರರಿಗೆ ಆಘಾತ