ಸೆಪ್ಟೆಂಬರ್ 13ರಂದು ರೈತರಿಂದ ವಿಧಾನಸೌಧ ಮುತ್ತಿಗೆ, ಸೆ. 27 ಕರ್ನಾಟಕ ಬಂದ್ ಮಾಡ್ತೀವಿ: ಕೋಡಿಹಳ್ಳಿ ಚಂದ್ರಶೇಖರ್ ಪ್ರಕಟ

ಸೆಪ್ಟೆಂಬರ್ 13ರಂದು ರೈತರಿಂದ ವಿಧಾನಸೌಧ ಮುತ್ತಿಗೆ, ಸೆ. 27 ಕರ್ನಾಟಕ ಬಂದ್ ಮಾಡ್ತೀವಿ: ಕೋಡಿಹಳ್ಳಿ ಚಂದ್ರಶೇಖರ್ ಪ್ರಕಟ
ಕೋಡಿಹಳ್ಳಿ ಚಂದ್ರಶೇಖರ್

ಬೆಂಗಳೂರು: ಮುಂದಿನ ಸೋಮವಾರ ಸೆಪ್ಟೆಂಬರ್ 13ರಂದು ರೈತರಿಂದ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್ ಪ್ರಕಟಿಸಿದ್ದಾರೆ.

ಈಗಾಗಲೇ ಸುಪ್ರೀಂ ಕೋರ್ಟ್ ಕೃಷಿ ಕಾಯ್ದೆಯ ಬಗ್ಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸುಗ್ರೀವಾಜ್ಞೆಯನ್ನು ತಡೆಹಿಡಿಯುವಂತೆ ನಿರ್ದೇಶನ ನೀಡಿದೆ. ಹೀಗಾಗಿ ಕರ್ನಾಟಕ ಸರ್ಕಾರ ಇದನ್ನು ಪಾಲನೆ ಮಾಡಬೇಕು. ರಾಜ್ಯ ಜಾರಿಗೊಳಿಸಿರುವ ಭೂ ಸುಧಾರಣಾ ಕಾಯ್ದೆ, ಕೃಷಿ ಮಾರುಕಟ್ಟೆ ಕಾಯ್ದೆ ಭೂಸ್ವಾಧೀನ ಕಾಯ್ದೆ ಕಾನೂನು ತಡೆಹಿಡಿಯಬೇಕು ಅಂತಾ ಆಗ್ರಹಿಸಿ ಕೋಡಿಹಳ್ಳಿ ನೇತೃತ್ವದಲ್ಲಿ ರೈತ ಸಂಘ ವಿಧಾನಸೌಧ ಮುತ್ತಿಗೆ ಹಾಕಲು ಮುಂದಾಗಿದೆ.

ರೈತರ ಹೆಸರಿನಲ್ಲಿ ಮೋಸ ಮಾಡಿರೋದು ಇಡೀ ದೇಶದಲ್ಲಿ ಕರ್ನಾಟಕ ಸರ್ಕಾರ ಮಾತ್ರ ಎಂದು ಕಿಡಿಕಾರಿದ ಕೋಡಿಹಳ್ಳಿ ಚಂದ್ರಶೇಖರ್, ಬೊಮ್ಮಾಯಿಯವರು ಬಿಎಸ್ ಯಡಿಯೂರಪ್ಪ ಅವರಂತೆ ಧೋರಣೆ ಮುಂದುವರೆಸಿದರೆ ನಮ್ಮ ಹೋರಾಟ ಎದುರಿಸಬೇಕಾಗುತ್ತೆ. ಸೆಪ್ಟೆಂಬರ್ 27 ಭಾರತ್ ಬಂದ್ ಇದೆ. ಆ ದಿನ ನಾವು ಕರ್ನಾಟಕ ಬಂದ್ ಮಾಡ್ತೀವಿ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ತಪ್ಪು ಮಾಡಿದವರು ಅವರಿಗೆ ಬೇಕಾದ ಭದ್ರತೆ ಮಾಡಿಕೊಂಡಿರ್ತಾರೆ. ಕೊರೋನಾ ಸಮಯದಲ್ಲಿ ಸುಗ್ರೀವಾಜ್ಞೆ ತರೋದು ಸರಿಯೇ? ಎಲ್ಲೋ ಮಲಗಿದ್ದ ಮಾಜಿ ಸಿಎಂ ಒಬ್ಬರು ಬಂದು ಈ ಕಾಯ್ದೆ ಗೆ ಬೆಂಬಲ ವ್ಯಕ್ತಪಡಿಸಿದರು ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್​ ವಿರುದ್ಧ ಜನರನ್ನು ಎತ್ತಿಕಟ್ಟಿದ ಆರೋಪದಡಿ ದೂರು ದಾಖಲು

(Farmers vidhana soudha chalo on september 13 says kodihalli chandrashekar)

Click on your DTH Provider to Add TV9 Kannada