ಸುದ್ದಿ ಪ್ರಸಾರ ನಿಲ್ಲಿಸಲು ಹಣಕ್ಕೆ ಬೇಡಿಕೆ ಆರೋಪ: ವಾಹಿನಿಯ ಮೂವರು ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲು
ಆಡಿಯೋ, ವಿಡಿಯೋ ಸಾಕ್ಷ್ಯ ಸಮೇತ ದೂರು ಸಲ್ಲಿಕೆ ಹಿನ್ನೆಲೆ ತೀರ್ಥಪ್ರಸಾದ್ ಎಂಬಾತನನ್ನು ಬಂಧಿಸಿ ತನಿಖೆ ನಡೆಸಿರುವ ಪೊಲೀಸರು. ಇನ್ನುಳಿದ ಆರೋಪಿಗಳ ಪಾತ್ರದ ಬಗ್ಗೆಯೂ ತನಿಖೆ ನಡೆಸಿದ್ದಾರೆ.
ಬೆಂಗಳೂರು: ಸುದ್ದಿ ಪ್ರಸಾರ ನಿಲ್ಲಿಸಲು ಹಣಕ್ಕೆ ಬೇಡಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಖಾಸಗಿ ಸುದ್ದಿ ವಾಹಿನಿಯ ಮೂವರು ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಮೊದಲನೇ ಆರೋಪಿ ತೀರ್ಥಪ್ರಸಾದ್ ಎಂಬಾತನನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದರು. ಇದೀಗ ಸುದ್ದಿ ವಾಹಿನಿಯ MD ವಿರುದ್ಧವೂ ದೂರುದಾರರ ಆರೋಪ ಮಾಡಿದ್ದಾರೆ. ಅದೇ ಸುದ್ದಿವಾಹಿನಿಯ ಎಂಡಿ ಎರಡನೇ ಆರೋಪಿ, ಮತ್ತೊಬ್ಬ ಸಿಬ್ಬಂದಿ ಮೂರನೇ ಆರೋಪಿಯಾಗಿ ಎಫ್ಐಆರ್ ದಾಖಲಿಸಲಾಗಿದೆ.
ಕಾರಿನಲ್ಲಿ ಹಣದ ಕಂತೆ ಜೊತೆ ಕುಳಿತಿದ್ದ ತೀರ್ಥಪ್ರಸಾದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆಡಿಯೋ, ವಿಡಿಯೋ ಸಾಕ್ಷ್ಯ ಸಮೇತ ದೂರು ಸಲ್ಲಿಕೆ ಹಿನ್ನೆಲೆ ತೀರ್ಥಪ್ರಸಾದ್ ಎಂಬಾತನನ್ನು ಬಂಧಿಸಿ ತನಿಖೆ ನಡೆಸಿರುವ ಪೊಲೀಸರು. ಇನ್ನುಳಿದ ಆರೋಪಿಗಳ ಪಾತ್ರದ ಬಗ್ಗೆಯೂ ತನಿಖೆ ನಡೆಸಿದ್ದಾರೆ. ಇದೇ ಪ್ರಕರಣದಲ್ಲಿ ನಾಲ್ಕನೇ ಹಾಗೂ ಐದನೇ ಆರೋಪಿಯಾಗಿ ರಮೇಶ್ ಗೌಡ, ಶ್ರೀಧರ್ ಹೆಸರು ಕೇಳಿಬಂದಿದೆ.
ನೈಸ್ ರಸ್ತೆಯಲ್ಲಿ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಶಂಕೆ ಕಾರಿಗೆ ಲಾರಿ ಢಿಕ್ಕಿ ಆಗಿ, ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಬನ್ನೇರುಘಟ್ಟ – ತುಮಕೂರು ರೋಡ್ ಮಾರ್ಗದಲ್ಲಿ ಘಟನೆ ನಡೆದಿದೆ. ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಅಲಯನ್ಸ್ ವಿವಿ ಸಂಸ್ಥಾಪಕ ಮಧುಕರ್ ಅಂಗೂರ್ ಬಂಧನ ಅಲಯನ್ಸ್ ವಿವಿ ಸಂಸ್ಥಾಪಕ ಮಧುಕರ್ ಅಂಗೂರ್ ಬಂಧನ ಮಾಡಲಾಗಿದೆ. ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಆರೋಪಿ ಮಧುಕರ್ ಸೆರೆ ಆಗಿದ್ದಾರೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳಿಂದ ಮಧುಕರ್ ಸೆರೆ ಹಿಡಿಯಲಾಗಿದೆ. ಮಧುಕರ್ ಮೇಲೆ ನೂರಾರು ಕೋಟಿ ಅವ್ಯವಹಾರ ಆರೋಪ ಕೇಳಿ ಬಂದಿತ್ತು. ಮಧುಕರ್ಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ಸೂಚಿಸಿತ್ತು. ಸಮರ್ಪಕ ದಾಖಲೆ ಒದಗಿಸದ ಹಿನ್ನೆಲೆ ಮಧುಕರ್ ಬಂಧನ ಮಾಡಲಾಗಿದೆ. ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಶಾಂತಿನಗರದ ED ಕಚೇರಿಯಲ್ಲಿಂದು ಮಧುಕರ್ ವಿಚಾರಣೆ ನಡೆಸಲಾಗಿದೆ. ಈ ವೇಳೆ ಮಧುಕರ್ ವಶಕ್ಕೆ ಪಡೆದು ಇಡಿ ಬಂಧಿಸಿದೆ.
ವೀಕೆಂಡ್ ಕರ್ಫ್ಯೂ ಹಿನ್ನೆಲೆ: ಎಣ್ಣೆ ಸ್ಟಾಕ್ ಮಾಡಿಕೊಳ್ಳಲು ಮೇಕೆ ಕದ್ದು ಮಾರಿದ ಪುತ್ರ ವಿಕೇಂಡ್ ಕರ್ಫ್ಯೂ ವೇಳೆ ಮದ್ಯ ಮಾರಾಟಕ್ಕೆ ನಿಷೇಧ ಹಿನ್ನೆಲೆ ಎಣ್ಣೆ ಸ್ಟಾಕ್ ಮಾಡಿಕೊಳ್ಳಲು ಮಗನೇ ಮೇಕೆ ಕದ್ದು ಮಾರಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ತರಬನಹಳ್ಳಿಯಲ್ಲಿ ನಡೆದಿದೆ. ತಾಯಿಗೆ ತಿಳಿಯದೇ ಮೇಕೆ ಮಾರಿ ಮಗ ಎಣ್ಣೆ ಖರೀದಿಸಿದ್ದಾನೆ. ತರಬನಹಳ್ಳಿಯ ಸಾವಿತ್ರಮ್ಮನ ಮಗ ರಜಿನಿಕಾಂತ್ನಿಂದ ಕೃತ್ಯ ನಡೆದಿದೆ. 15 ಸಾವಿರ ಬೆಲೆಬಾಳುವ ಮೇಕೆ ಕದ್ದು ಮಾರಿ ಎಣ್ಣೆ ಖರೀದಿ ಮಾಡಿದ್ದಾನೆ. ಈ ಬಗ್ಗೆ ದೂರು ನೀಡಲು ತಾಯಿ ಠಾಣೆಗೆ ತೆರಳಿದ್ದರಿಂದ ಮಗ ರಜಿನಿಕಾಂತ್ ಪರಾರಿ ಆಗಿದ್ದಾನೆ. ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕಾಡು ಪ್ರಾಣಿಗಳನ್ನ ಬೇಟೆಯಾಡಿ ಮಾರಾಟ; ಅಪರಿಚಿತರ ವಿರುದ್ಧ ಕೇಸ್ ದಾಖಲು ಕಾಡು ಪ್ರಾಣಿಗಳನ್ನ ಬೇಟೆಯಾಡಿ ಮಾರಾಟ ಮಾಡ್ತಿದ್ದ ಹಿನ್ನೆಲೆ ಯಂಟಗಾನಹಳ್ಳಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಪರಿಚಿತರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ಬಳಿಯ ಭಾಗದಲ್ಲಿ ಅರಣ್ಯಾಧಿಕಾರಿಗಳು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಸೆಕ್ಷನ್ 9ರಡಿ ಕೇಸ್ ದಾಖಲಿಸಲಾಗಿದೆ.
ಇದನ್ನೂ ಓದಿ: Bengaluru Crime: ಸುದ್ದಿ ಪ್ರಸಾರ ತಡೆಗೆ ಹಣ ಪಡೆದಿದ್ದ ಆರೋಪ; ಖಾಸಗಿ ಸುದ್ದಿವಾಹಿನಿಯ ಸಿಬ್ಬಂದಿ ಅರೆಸ್ಟ್
ಇದನ್ನೂ ಓದಿ: ಕ್ರೈಂಗೆ ತವರಾಗುತ್ತಿರುವ ಆನೇಕಲ್! ಕೇಂದ್ರ ಸಚಿವರ ಮನೆಯ ಮುಂದೆಯೇ ಕಾರು ಅಡ್ಡಗಟ್ಟಿ ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ