Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಸಿನಿಮಾ‌ ಸ್ಟೈಲ್ ನಲ್ಲಿ ನಕಲಿ ನೋಟು ಜಾಲ: ನಾಲ್ವರು ಅರೆಸ್ಟ್

ಹಣದ ವಿಷಯ ಬಂದಾಗ ನಂಬುವವರಿದ್ದರೆ, ಹೇಗಾದರೂ ಮಾಡಿ ನಂಬಿಸಿ ಮೋಸ ಮಾಡುತ್ತಾರೆ. ಮತ್ತೆ ಕೆಲವರು ಮೋಸ ಹೋಗಿದೀವಿ ಎಂದು ಗೊತ್ತಾಗಿಯೂ ತಾವೂ ಇನ್ನೊಬ್ಬರಿಗೆ ಮೋಸ ಮಾಡಲು ಮುಂದಾಗುತ್ತಾರೆ. ಹೀಗೆ ಮೋಸ  ಹೋದವನೊಬ್ಬ ತಾನೂ ಮೋಸ ಮಾಡುವುದಕ್ಕೆ ಹೋಗಿ, ಈ ಹಿಂದೆ ವಂಚಿಸಿದವರ ಸಮೇತ ಅರೆಸ್ಟ್ ಆಗಿದ್ದಾನೆ. ಅರೆ ಏನಿದು ಮೋಸ ಹೋಗಿದ್ದು, ಮೋಸ ಮಾಡಿದ್ದ ಸ್ಟೋರಿ ಅಂತೀರಾ? ಇದನ್ನು ಓದಿ.

ಬೆಂಗಳೂರಿನಲ್ಲಿ ಸಿನಿಮಾ‌ ಸ್ಟೈಲ್ ನಲ್ಲಿ ನಕಲಿ ನೋಟು ಜಾಲ: ನಾಲ್ವರು ಅರೆಸ್ಟ್
ಬೆಂಗಳೂರಿನಲ್ಲಿ ಸಿನಿಮಾ‌ ಸ್ಟೈಲ್ ನಲ್ಲಿ ನಕಲಿ ನೋಟು ಜಾಲ ಪತ್ತೆ, ನಾಲ್ವರು ಅರೆಸ್ಟ್
Follow us
Prajwal Kumar NY
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 10, 2024 | 10:35 PM

ಬೆಂಗಳೂರು, ಅ.10: ಈ ದುಡ್ಡು ಎನ್ನುವ ವಿಷಯ ಬಂದರೆ, ಮನುಷ್ಯ ಏನಾದರೂ ಮಾಡಲು ಮುಂದಾಗುತ್ತಾನೆ ಎಂಬುದಕ್ಕೆ ಈ ಸ್ಟೋರಿ ಉದಾಹರಣೆಯಾಗಿದೆ. ಹೌದು, ಹೀಗೆ ದುಡ್ಡಿನ ಹಿಂದೆ ಬಿದ್ದು ನಕಲಿ ನೋಟು ತಯಾರಿಸಿ, ವಂಚನೆ ಮಾಡುತ್ತಿದ್ದ ಜಾಲವನ್ನ ಬೆಂಗಳೂರಿನ ಹಲಸೂರು ಗೇಟ್ ಪೊಲೀಸರು(Halasuru Gate Police)ಅರೆಸ್ಟ್ ಮಾಡಿದ್ದಾರೆ. ನಕಲಿ ನೋಟ್ ಮುದ್ರಿಸುತ್ತಿದ್ದ ಮೂವರು ಹಾಗೂ ಅದನ್ನು ಆರ್​ಬಿಐಗೆ ಕೊಟ್ಟು ಎಕ್ಸ್​ಚೇಂಜ್​ಗೆ ಹೋಗಿದ್ದವನನ್ನ ಸೇರಿ ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಬ್ದುಲ್, ಪ್ರಸೀತ್, ಮೊಹಮ್ಮದ್ ಅಪ್ನಾಸ್ ಹಾಗೂ ನೂರುದ್ದೀನ್ ಅಲಿಯಾಸ್​ ಅನ್ವರ್ ಬಂಧಿತ ಆರೋಪಿಗಳು.

ಘಟನೆ ವಿವರ

ಇನ್ನು ಈ ನಾಲ್ಕು ಜನರಲ್ಲಿ ಎ1 ಆರೋಪಿ ಅಬ್ದುಲ್ ಬಿಟ್ಟು ಮೂರು ಆರೋಪಿಗಳು ಕೇರಳ ಮೂಲದವರಾಗಿದ್ದು, ಎಲ್ಲರೂ ನಕಲಿ ನೋಟು​ ಪ್ರಿಂಟ್ ಮಾಡಿ ಅದನ್ನ ಬ್ಯುಸಿನೆಸ್ ನೆಪದಲ್ಲಿ ನೀಡಿ ಮೋಸ ಮಾಡುತ್ತಿದ್ದರು. ಹೀಗಿದ್ದಾಗ ಇವರ ಕೈಗೆ ಅಬ್ದುಲ್ ಸಿಕ್ಕಿದ್ದ. ಪ್ರಸೀತ್​ಗೆ ಗ್ರಾನೈಟ್ ಸೇಲ್ ಮಾಡಿದ್ದ ಅಬ್ದುಲ್​ಗೆ ಪ್ರಸೀತ್ ಸುಮಾರು 40 ರಿಂದ 45 ಲಕ್ಷ ರೂ. ಕೊಡಬೇಕಿತ್ತು. ಪದೇ ಪದೇ ಹಣ ಕೇಳುತ್ತಿದ್ದ ಅಬ್ದುಲ್​ಗೆ ‘ನೊಡಪ್ಪಾ ನನ್ ಹತ್ರ‌ 2 ಸಾವಿರ ಮುಖ ಬೆಲೆಯ ನೋಟುಗಳಿದ್ದು, ಒಟ್ಟು 25ಲಕ್ಷ ರೂ. ಇದೆ. ಆದರೆ, ಈಗ ಬ್ಯಾನ್ ಆಗಿದೆ. ಬೇಕಾದರೆ ಆರ್​ಬಿಐಗೆ ಕೊಟ್ಟು ಎಕ್ಸ್​ಚೇಂಜ್​ ಮಾಡಿಕೋ ಎಂದು ಕೊಟ್ಟಿದ್ದ.

ಇದನ್ನೂ ಓದಿ:ನಕಲಿ ನೋಟು ಮುದ್ರಣ ಜಾಲ ಪತ್ತೆಗೆ ಮದರಸಾಗೆ ನುಗ್ಗಿದ್ದ ಅಧಿಕಾರಿಗಳಿಗೆ ಸಿಕ್ಕಿದ್ದು ಆರ್​ಎಸ್​ಎಸ್​ ಕುರಿತ ವಿವಾದಾತ್ಮಕ ಪುಸ್ತಕ

ಹೆಂಗೋ ದುಡ್ಡು ಬಂತು ಎಂದು 25 ಲಕ್ಷ ರೂ. ನಕಲಿ ನೋಟು ತೆಗದುಕೊಂಡಿದ್ದ ಅಬ್ದುಲ್, ಅದನ್ನ ಆರ್​ಬಿಐಗೆ ಕೊಟ್ಟು ಎಕ್ಸ್​ಚೇಂಜ್​ ಮಾಡೋಕೆ ಹೋಗಿದ್ದ. ಅದಕ್ಕೂ ಮುಂಚೆ ಮಷೀನ್​ವೊಂದರಲ್ಲಿ ಹಣ ಚೆಕ್ ಮಾಡಿದ್ದ. ಚೇಕಿಂಗ್ ವೇಳೆ ಎಲ್ಲವೂ ಕೋಟಾ ನೋಟು ಎಂದು ಗೊತ್ತಾಗಿದೆ. ಆಗಲೇ ಎಚ್ಚೆತ್ತುಕ್ಕೊಳ್ಳಬೇಕಿದ್ದ ಅಬ್ದುಲ್, ಆರ್​ಬಿಐಗೆ ಕೊಟ್ಟು ಹಣ ಪಡೆದರಾಯಿತು ಎಂದು ಹೋಗಿದ್ದ. ಆದ್ರೆ, ಆರ್​ಬಿಐ ಅಧಿಕಾರಿಗಳು ಕೋಟಾ ನೋಟು ಎಂದು ಗೊತ್ತಾಗಿ 25ಲಕ್ಷ ರೂಪಾಯಿಯನ್ನು ಸೀಜ್ ಮಾಡಿ ಹಲಸೂರ್ ಗೇಟ್ ಪೊಲೀಸರಿಗೆ ಮಾಹಿತಿ ನೀಡಿದರು.

ಇನ್ನು ಕೂಡಲೇ ಆರೋಪಿ ಅಬ್ದುಲ್​ನನ್ನ ಅರೆಸ್ಟ್ ಮಾಡಿದ್ದ ಹಲಸೂರ್ ಗೇಟ್ ಪೊಲೀಸರು, ತನಿಖೆ ನಡೆಸಿದಾಗ ಇಡೀ ಜಾಲ ಪತ್ತೆಯಾಗಿದೆ. ಕೇರಳದಲ್ಲಿ ಇವರು ನೋಟ್ ಪ್ರಿಂಟ್ ಮಾಡಿ ವಂಚನೆ ಮಾಡುತ್ತಿರುವುದು ಎಂದು ಗೊತ್ತಾಗಿದೆ. ಈ ಮುಂಚೆ ಮಂಗಳೂರಿನಲ್ಲೂ ಆರೋಪಿಗಳು ಚೀಟಿಂಗ್ ಮಾಡಿ ಅರೆಸ್ಟ್ ಆಗಿದ್ದರು. ಸದ್ಯ ಆರೋಪಿಗಳನ್ನ ಬಂಧಿಸಿ ಸುಮಾರು 45ಲಕ್ಷ ರೂ. 2 ಸಾವಿರ ಮುಖ ಬೆಲೆಯ ನಕಲಿ ನೋಟು ಸೀಜ್ ಮಾಡಿದ್ದಾರೆ. ಪೊಲೀಸರು ಎಲ್ಲರನ್ನೂ ಜೈಲಿಗೆ ಕಳಿಸಿದ್ದಾರೆ. ಈತರ ನೋಟು ಎಕ್ಸ್​ಚೇಂಜ್​ ಎಂದು ಯಾರಾದರೂ ನಿಮ್ಮ ಬಳಿಯೂ ಬರಬಹುದು ಹುಷಾರಾಗಿರಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ರಾಜಸ್ಥಾನದ ಬಿಜೆಪಿ ಅಧ್ಯಕ್ಷರೆದುರೇ ಇಬ್ಬರು ನಾಯಕರ ಹೊಡೆದಾಟ; ವಿಡಿಯೋ ವೈರಲ್
ರಾಜಸ್ಥಾನದ ಬಿಜೆಪಿ ಅಧ್ಯಕ್ಷರೆದುರೇ ಇಬ್ಬರು ನಾಯಕರ ಹೊಡೆದಾಟ; ವಿಡಿಯೋ ವೈರಲ್
ಚಾಮುಂಡೇಶ್ವರಿ ದೇವಾಲಯಕ್ಕೆ ಬಂದ ದರ್ಶನ್ ಪುತ್ರ ವಿನೀಶ್
ಚಾಮುಂಡೇಶ್ವರಿ ದೇವಾಲಯಕ್ಕೆ ಬಂದ ದರ್ಶನ್ ಪುತ್ರ ವಿನೀಶ್
ಕಾಂಗ್ರೆಸ್ ಸಾಮೂಹಿಕ ನಾಯಕತ್ವದಲ್ಲಿ ವಿಶ್ವಾಸ ಹೊಂದಿದೆ: ಎಂಬಿ ಪಾಟೀಲ್
ಕಾಂಗ್ರೆಸ್ ಸಾಮೂಹಿಕ ನಾಯಕತ್ವದಲ್ಲಿ ವಿಶ್ವಾಸ ಹೊಂದಿದೆ: ಎಂಬಿ ಪಾಟೀಲ್
ಘಟನೆ ವಿವರಿಸಿದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು
ಘಟನೆ ವಿವರಿಸಿದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು