ಚಿನ್ನ ವಂಚನೆ ಕೇಸ್! ಐಶ್ವರ್ಯಾ ಗೌಡ ವಿರುದ್ಧ ಪೊಲೀಸ್ ಆಯುಕ್ತರಿಗೆ ಡಿಕೆ ಸುರೇಶ್ ದೂರು

ವಾರಾಹಿ ಜ್ಯುವೆಲ್ಲರಿ ಮಾಲಕಿ ವನಿತಾಗೆ ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಐಶ್ವರ್ಯಾ, ಹರೀಶ್​ಗೆ ಜನವರಿ 6ರವರೆಗೂ ಪೊಲೀಸ್ ಕಸ್ಟಡಿ ನೀಡಿ 4ನೇ ACMM ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಮಧ್ಯೆ ಐಶ್ವರ್ಯಾ ಗೌಡ ನನ್ನ ಹೆಸರು ದುರುಪಯೋಗಪಡಿಸಿಕೊಂಡಿದ್ದಾರೆಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮಾಜಿ ಸಂಸದ ಡಿ.ಕೆ.ಸುರೇಶ್ ಪತ್ರ ಬರೆಯುವ ಮೂಲಕ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಚಿನ್ನ ವಂಚನೆ ಕೇಸ್! ಐಶ್ವರ್ಯಾ ಗೌಡ ವಿರುದ್ಧ ಪೊಲೀಸ್ ಆಯುಕ್ತರಿಗೆ ಡಿಕೆ ಸುರೇಶ್ ದೂರು
ಚಿನ್ನ ವಂಚನೆ ಕೇಸ್! ಐಶ್ವರ್ಯಾ ಗೌಡ ವಿರುದ್ಧ ಪೊಲೀಸ್ ಆಯುಕ್ತರಿಗೆ ಡಿಕೆ ಸುರೇಶ್ ದೂರು
Edited By:

Updated on: Dec 30, 2024 | 7:36 PM

ಬೆಂಗಳೂರು, ಡಿಸೆಂಬರ್ 30: ವಾರಾಹಿ ವರ್ಲ್ಡ್‌ ಆಫ್‌ ಗೋಲ್ಡ್‌ ಜುವೆಲ್ಲರಿ ಶಾಪ್‌ ಚಿನ್ನ ಅಂಗಡಿ ಮಾಲಕಿ ವನಿತಾ ಐತಾಳ್​ಗೆ ಐಶ್ವರ್ಯಾಗೌಡ ವಂಚನೆ ಮಾಡಿರೋದು ಬೆಳಕಿಗೆ ಬಂದಿದೆ. ಸದ್ಯ ಈ ಪ್ರಕರಣ ಸಾಕಷ್ಟು ಚರ್ಚೆಗೆ ಕೂಡ ಗ್ರಾಸವಾಗಿದೆ. ಇದೀಗ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಈ ಮಧ್ಯೆ ಐಶ್ವರ್ಯಾ ಗೌಡ ನನ್ನ ಹೆಸರು ದುರುಪಯೋಗಪಡಿಸಿಕೊಂಡಿದ್ದಾರೆಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮಾಜಿ ಸಂಸದ ಡಿಕೆ.ಸುರೇಶ್ (DK Suresh) ಪತ್ರ ಬರೆದಿದ್ದಾರೆ.

ಡಿಕೆ ಸುರೇಶ್​ ದೂರಿನಲ್ಲೇನಿದೆ?

ಐಶ್ವರ್ಯ ಗೌಡ ಉರುಫ್ ನವ್ಯಶ್ರೀ ಎಂಬುವವರು ನನ್ನ ಹೆಸರನ್ನ ದುರುಪಯೋಗಪಡಿಸಿಕೊಂಡು ಹಲವಾರು ಜನರಿಗೆ ಚಿನ್ನದ ಆಭರಣ ಹಾಗೂ ಹಣವನ್ನು ವಂಚಿಸುತ್ತಿರುವುದಾಗಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದೆ.

ಇದನ್ನೂ ಓದಿ: ಜಾಮೂನ್​ಗೆ ಮೈಸೂರು ಪಾಕ್​ ಟಾರ್ಗೆಟ್​: ಶ್ವೇತಾಳನ್ನ ಹನಿಟ್ರ್ಯಾಪ್ ಗೆ ಬಳಸಿಕೊಂಡ್ರಾ ವರ್ತೂರ್ ಪ್ರಕಾಶ್?

ಸದರಿ ವಿಷಯಕ್ಕೆ ಸಂಬಂಧಿಸಿದಂತೆ ವಂಚನೆ ಮಾಡಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಇಂತಹ ಅನ್ಯಾಯಗಳು ಆಗದಂತೆ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರಿಗೆ ಪತ್ರದ ಮೂಲಕ ಡಿಕೆ ಸುರೇಶ್ ಆಗ್ರಹಿಸಿದ್ದಾರೆ.

ಬೆಂಗಳೂರಿನ ವಾರಾಹಿ ವರ್ಲ್ಡ್‌ ಆಫ್‌ ಗೋಲ್ಡ್‌ ಜುವೆಲ್ಲರಿ ಶಾಪ್‌ ಚಿನ್ನ ಅಂಗಡಿ ಮಾಲಕಿ ವನಿತಾ ಐತಾಳ್​ಗೆ ನಾನು ಡಿಕೆ.ಸುರೇಶ್​ ಸಹೋದರಿ ಎಂದು ಐಶ್ವರ್ಯಾಗೌಡ ಕೋಟಿ ಕೋಟಿ ರೂ. ಲೂಟಿ ಮಾಡಿರೋದು, ರಾಜ್ಯದಲ್ಲಿ ಸಂಚನವನ್ನೇ ಸೃಷ್ಟಿಸಿದೆ. ಚಿನ್ನದಂಗಡಿ ಮಾಲಕಿ ವನಿತಾ ದೂರಿನ ಮೇಲೆ ಐಶ್ವರ್ಯಾಗೆ ನೋಟಿಸ್​ ಕೊಡಲಾಗಿತ್ತು.

ಇದನ್ನೂ ಓದಿ: ಶ್ವೇತಾ ಗೌಡ ಜತೆ ವರ್ತೂರ್‌ ಪ್ರಕಾಶ್‌ ಎಂಗೇಜ್​ಮೆಂಟ್​ಗೆ ಸಿದ್ಧತೆ: ತನಿಖೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ

ಇತ್ತೀಚೆಗೆ ಚಂದ್ರಾಲೇಔಟ್​ ಪೊಲೀಸರ ಮುಂದೆ ಹಾಜರಾದ ಐಶ್ವರ್ಯಾಗೌಡ, ಪತ್ನಿ ಹರೀಶ್​ನನ್ನ ವಿಚಾರಣೆ ಮಾಡಿದ್ದರು. ವಂಚನೆ ಸಂಬಂಧ ಮಹತ್ವದ ದಾಖಲೆ ಮುಂದಿಟ್ಟು ವಿಚಾರಣೆ ವೇಳೆ ಸೂಕ್ತ ಉತ್ತರ ದೊರೆಯದ ಹಿನ್ನೆಲೆ ಇಬ್ಬರನ್ನು ಅರೆಸ್ಟ್ ಮಾಡಿದ್ದರು. ಇಂದು ಚಂದ್ರಾಲೇಔಟ್ ಠಾಣೆ ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದ್ದರು. ಐಶ್ವರ್ಯಾ, ಹರೀಶ್​ಗೆ ಜನವರಿ 6ರವರೆಗೂ ಪೊಲೀಸ್ ಕಸ್ಟಡಿ ನೀಡಿ 4ನೇ ಎಚಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಪ್ರಸನ್ನ ಗಾಂವ್ಕರ್​

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Loading...
Unable to load recommendations.
Follow Us