AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಡಿತರ ಫಲಾನುಭವಿಗಳಿಗೆ ಸಿಹಿಸುದ್ದಿ; ಪಡಿತರ ಚೀಟಿ ವಿತರಿಸಲು ಸರ್ಕಾರ ನಿರ್ದೇಶನ

ಆಧ್ಯಾತ ಪಡಿತರ ಚೀಟಿ ಹಾಗೂ ಆಧ್ಯತೇತರ ಪಡಿತರ ಚೀಟಿಗಾಗಿ ಅರ್ಜಿಸಲ್ಲಿಸಿದ್ದ ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಿಸುವ ಬಗ್ಗೆ ಸರ್ಕಾರ ನಿರ್ದೇಶನ ಹೊರಡಿಸಿದೆ. ಆಹಾರ ಇಲಾಖೆಗೆ 16/08/2023 ರವರೆಗೂ ಒಟ್ಟು 2,96,986, ಆಧ್ಯಾತ ಪಡಿತರ (PHH) ಚೀಟಿಗಳು ಹಾಗೂ ಆಧ್ಯೇತರ ಪಡಿತರ ಚೀಟಿಗಾಗಿ (NPHH /APL) 71410 ಅರ್ಜಿ ಸಲ್ಲಿಕೆ ಆಗಿವೆ.

ಪಡಿತರ ಫಲಾನುಭವಿಗಳಿಗೆ ಸಿಹಿಸುದ್ದಿ; ಪಡಿತರ ಚೀಟಿ ವಿತರಿಸಲು ಸರ್ಕಾರ ನಿರ್ದೇಶನ
ವಿಧಾನಸೌಧ
Follow us
Poornima Agali Nagaraj
| Updated By: ಆಯೇಷಾ ಬಾನು

Updated on: Oct 09, 2023 | 9:26 AM

ಬೆಂಗಳೂರು, ಅ.09: ಆಹಾರ ಇಲಾಖೆಯ ಆಧ್ಯಾತಾ ಹಾಗೂ ಆಧ್ಯೇತರ ಪಡಿತರ ಫಲಾನುಭವಿಗಳಿಗೆ ಸಿಹಿಸುದ್ದಿ ನೀಡಿದೆ. ಆಧ್ಯಾತ ಪಡಿತರ ಚೀಟಿ ಹಾಗೂ ಆಧ್ಯತೇತರ ಪಡಿತರ ಚೀಟಿಗಾಗಿ ಅರ್ಜಿಸಲ್ಲಿಸಿದ್ದ ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಿಸುವ ಬಗ್ಗೆ ಸರ್ಕಾರ ನಿರ್ದೇಶನ ಹೊರಡಿಸಿದೆ. ಆಹಾರ ಇಲಾಖೆಗೆ 16/08/2023 ರವರೆಗೂ ಒಟ್ಟು 2,96,986, ಆಧ್ಯಾತ ಪಡಿತರ (PHH) ಚೀಟಿಗಳು ಹಾಗೂ ಆಧ್ಯೇತರ ಪಡಿತರ ಚೀಟಿಗಾಗಿ (NPHH /APL) 71410 ಅರ್ಜಿ ಸಲ್ಲಿಕೆ ಆಗಿವೆ. ಈ ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಿಸಲು ಸರ್ಕಾರ ನಿರ್ದೇಶನ ನೀಡಿದೆ. ಅಲ್ಲದೇ ಪಡಿತರ ಚೀಟಿ ವಿತರಣೆ ಮುನ್ನ ಆಹಾರ ಇಲಾಖೆ ಕೆಲವು ಷರತ್ತು ವಿಧಿಸಿದೆ.

ಆಹಾರ ಇಲಾಖೆಯ ಷರತ್ತುಗಳು

  1. ಪ್ರಸ್ತುತ ಅನುಮತಿಸಿರುವ ಹೊಸ ಆಧ್ಯಾತ ಚೀಟಿಗಳ 2.96 ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಹೊಸ ಪಡಿತರ ಚೀಟಿಗೆ ಸಂಬಂಧಿಸಿದಂತೆ ಯಾವುದೇ ಅರ್ಜಿಗಳನ್ನ ಸ್ವೀಕರಿಸುವಂತಿಲ್ಲ.
  2. ಆದ್ಯತೇಕರ (APL) ಪಡಿತರ ಚೀಟಿಯನ್ನ ಕೋರಿ ಅರ್ಜಿ ಸಲ್ಲಿಸಿರುವ ಅರ್ಜಿಗಳ ಅನುಮೋದನೆ ನೀಡುವುದನ್ನ ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದೆ.
  3. ಆದ್ಯಾತಾ ಪಡಿತರ ಚೀಟಿಯನ್ನ ಕೋರಿ ಸಲ್ಲಿಸಿರುವ 2.96 ಲಕ್ಷ ಅರ್ಜಿಗಳ ವಿತರಣೆ ನಂತರವು ಪ್ರಸ್ತುತ ಚಾಲ್ತಿಯಲ್ಲಿರುವ ಆದ್ಯಾತಾ / ಅಂತ್ಯೋದಯ ಪಡಿತರ ಚೀಟಿಗಳ ಸಂಖ್ಯೆಯನ್ನ ಮೀರುವಂತಿಲ್ಲ.
  4. ಆರು ತಿಂಗಳಿನಿಂದ ಆಹಾರ ಧಾನ್ಯ ಪಡೆಯದೇ ಇರುವ ಪಡಿತರ ಚೀಟಿಗಳನ್ನ ಅಮಾನತ್ತುಗೊಳಿಸಲು ಸಕ್ಷಮ ಪ್ರಧೀಕಾರದಿಂದ ಅನುಮೋದನೆ ಪಡೆಯಬೇಕು.
  5. ಆದ್ಯಾತ ಪಡಿತರ ಚೀಟಿಯನ್ನ ಕೋರಿ ಸಲ್ಲಿಕೆಯಾಗಿರುವ 2.96 ಲಕ್ಷ ಅರ್ಜಿಗಳ ವಿಲೇವಾರಿಯಿಂದಿಗೆ ಏಕಕಾಲದಲ್ಲಿ ಆರು ತಿಂಗಳ ನಿರಂತರ ಪಡಿತರವನ್ನ ಪಡೆಯದೇ ಅಧ್ಯಾತಾ ಪಡಿತರ ಚೀಟಿಯನ್ನ ಅಮಾನತುಗೊಳಿಸುವುದು.
  6. ಅನುಮಾನತ್ತು ಪಡಿಸಿರುವ ಚೀಟಿಗಳನ್ನ ಪುನರ್ ಸ್ಥಾಪಿಸಿವುದಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರರು ಖುದ್ದು ಸ್ಥಳ ಪರಿಶೀಲನೆ ಮತ್ತು ದಾಖಲಾತಿ ಪರಿಶೀಲನೆ ನಡೆಸಿ ವರದಿ ನೀಡ ತಕ್ಕದ್ದು.‌

    ಇದನ್ನೂ ಓದಿ: 2024ಕ್ಕೆ ಮತ್ತೆ ವಿಧಾನಸಭೆ ಚುನಾವಣೆ ಖಚಿತ; ಡಿಕೆಶಿ ತಿಹಾರ್ ಜೈಲಿಗೆ ಹೋಗುವ ಕಾಲ ಸನ್ನಿಹಿತ: ಹೊಸ ಬಾಂಬ್ ಸಿಡಿಸಿದ ಕುಮಾರಸ್ವಾಮಿ

ಪಡಿತರ ಚೀಟಿ ತಿದ್ದುಪಡಿ ಅವಕಾಶ

ಬಿಪಿಎಲ್‌ ಕಾರ್ಡ್‌ಗೆ ಫಲಾನುಭವಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶ ಮಾಡಿಕೊಡಲಾಗಿದೆ. ಬೆಂಗಳೂರು ಒನ್‌, ಕರ್ನಾಟಕ ಒನ್‌, ಗ್ರಾಮ ಒನ್‌ ಕೇಂದ್ರಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 7ರವರೆಗೆ ಸರಿಪಡಿಸಿಕೊಳ್ಳಬಹುದು. ಅದನ್ನು ಕೂಡ ಮೂರು ಹಂತಗಳಲ್ಲಿ ನಾನಾ ಜಿಲ್ಲೆಗಳಿಗೆ ನಿಗದಿತ ದಿನಾಂಕ ನಿಗದಿಪಡಿಸಲಾಗಿದೆ.

ಅ.11 ರಿಂದ 13ರವರೆಗೆ ಬಳ್ಳಾರಿ, ಕಲಬುರಗಿ, ಬೀದರ್‌, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಯಾದಗಿರಿ, ವಿಜಯನಗರ ಸೇರಿ ಒಟ್ಟು 14 ಜಿಲ್ಲೆಗಳಲ್ಲಿ ಅವಕಾಶ ನೀಡಲಾಗಿದೆ. ಎಲ್ಲಾ ವಿಭಾಗಗಳಲ್ಲಿಯೂ ಬೆಳಗ್ಗೆ 10 ರಿಂದ ಸಂಜೆ 7ರವರೆಗೆ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ