ಶಿಶುಗಳ ಹಸಿವು ನೀಗಿಸಲು ಬೆಂಗಳೂರಿನ ವಾಣಿವಿಲಾಸ್ ಆಸ್ಪತ್ರೆಯಲ್ಲಿ ಎದೆಹಾಲಿನ ಬ್ಯಾಂಕ್‌ ಸ್ಥಾಪನೆ

human breast milk bank :ತಾಯಂದಿರ ಎದೆಹಾಲು ಕುಡಿಯೋ ಭಾಗ್ಯ ಅದೆಷ್ಟೋ ಕಂದಮ್ಮಗಳಿಗೆ ಇರುವುದೇ ಇಲ್ಲ.. ಇಂಥ ಶಿಶುಗಳ ಹಸಿವು ನೀಗಿಸುವುದಕ್ಕೆ ಎಂದು ವಾಣಿವಿಲಾಸ ಆಸ್ಪತ್ರೆಯಲ್ಲಿ ಎದೆಹಾಲು ಬ್ಯಾಂಕ್ ಸ್ಥಾಪಿಸಿದ್ದು, ತಾಯಂದಿರಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.

ಶಿಶುಗಳ ಹಸಿವು ನೀಗಿಸಲು ಬೆಂಗಳೂರಿನ ವಾಣಿವಿಲಾಸ್ ಆಸ್ಪತ್ರೆಯಲ್ಲಿ ಎದೆಹಾಲಿನ ಬ್ಯಾಂಕ್‌ ಸ್ಥಾಪನೆ
ವಾಣಿವಿಲಾಸ ಆಸ್ಪತ್ರೆ
Follow us
Poornima Agali Nagaraj
| Updated By: ರಮೇಶ್ ಬಿ. ಜವಳಗೇರಾ

Updated on:Nov 10, 2023 | 7:50 AM

ಬೆಂಗಳೂರು, (ನವೆಂಬರ್ 10): ಕಾಲ ಬದಲಾದಂತೆ, ಆಹಾರ ಪದ್ದತಿಯೂ ಬದಲಾಗಿದೆ. ಇದರಿಂದಾಗಿ ಹೆರಿಗೆ ಬಳಿಕ ಕೆಲ ತಾಯಂದಿರಲ್ಲಿ ಎದೆಹಾಲಿನ ಕೊರತೆ ಉಂಟಾಗುತ್ತಿದೆ. 6 ತಿಂಗಳೊಳಗಿನ ಶೇ.46 ರಷ್ಟು ಶಿಶುಗಳಿಗೆ ಸರಿಯಾಗಿ ಸ್ತನ್ಯಪಾನ ಆಗುತ್ತಿಲ್ಲ. ಹೀಗಾಗಿ ಬೆಂಗಳೂರಿನ (Bengaluru) ವಾಣಿವಿಲಾಸ ಆಸ್ಪತ್ರೆಯಲ್ಲಿ(vanivilas hospital )1 ಕೋಟಿ ರೂ. ವೆಚ್ಚದಲ್ಲಿ ‘ಅಮೃತಧಾರೆ’ ಹೆಸರಲ್ಲಿ ತಾಯಂದಿರ ಎದೆಹಾಲಿನ ಬ್ಯಾಂಕ್‌ (human breast milk bank )ಸ್ಥಾಪಿಸಲಾಗಿದೆ.

ತೀವ್ರ ನಿಗಾ ಘಟಕದಲ್ಲಿರುವ ಶಿಶುಗಳಿಗೆ ನಿತ್ಯ ಒಂದೂವರೆ ಲೀಟರ್​ ಎದೆಹಾಲು ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿನ ದಾನಿಗಳಿಂದ 270 ಲೀಟರ್​​​​ ಎದೆಹಾಲು ಸಂಗ್ರಹಿಸಲಾಗಿದೆ. ಆಸ್ಪತ್ರೆ ಹೊರಗಿನ ತಾಯಂದಿರಿಂದ 19 ಲೀಟರ್​​ ಎದೆಹಾಲನ್ನು ದಾನ ಪಡೆದಿದ್ದು, ನೂರಾರು ಕಂದಮ್ಮಗಳಿಗೆ ಅನುಕೂಲವಾಗಿದೆ.

ಎದೆಹಾಲನ್ನು ಪಾಶ್ಚೀಕರಿಸಿದ ಬಳಿಕ ಪ್ಯಾಕ್‌ ಮಾಡಿ 120 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂರಕ್ಷಿಸಿ ಇಡಲಾಗುತ್ತೆ. ಆರು ತಿಂಗಳ ತನಕ ಈ ಹಾಲನ್ನು ಶೇಖರಿಸಿ ಇಡಬಹುದು. ಎದೆಹಾಲು ಬ್ಯಾಂಕ್‌ಗಳಲ್ಲಿ 150 ಮಿಲಿ ಲೀಟರ್​​ ಹಾಲಿಗೆ 6,500ರಿಂದ 8,000 ರೂಪಾಯಿ ಕೊಡಬೇಕು. ಆದ್ರೆ, ವಾಣಿವಿಲಾಸದಲ್ಲಿ ಉಚಿತವಾಗಿ ನೀಡಲಾಗುತ್ತೆ.

ಏನೇ ಹೇಳಿ, ಅಮ್ಮನ ಎದೆಹಾಲಿಗಿಂತ ಜೀವಾಮೃತ ಮತ್ತೊಂದಿಲ್ಲ. ಇದೀಗ ತಾಯಂದಿರುವ ಎದೆಹಾಲನ್ನ ದಾನವಾಗಿ ನೀಡ್ತಿದ್ದು, ಅನೇಕ ಮಕ್ಕಳ ಜೀವ ಉಳಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:42 am, Fri, 10 November 23