ರಾತ್ರೋರಾತ್ರಿ ದೇವಸ್ಥಾನಕ್ಕೆ ನುಗ್ಗಿ ವಿಗ್ರಹ ಧ್ವಂಸ: ಪದೇಪದೆ ಇದೇ ದೇಗುಲ ಟಾರ್ಗೆಟ್​​​ ಮಾಡುತ್ತಿರುವ ಪುಂಡರು

ರಾತ್ರೋರಾತ್ರಿ ದೇವಸ್ಥಾನಕ್ಕೆ ನುಗ್ಗಿ ನಾಗದೇವರ ವಿಗ್ರಹ ಧ್ವಂಸ ಮಾಡಿರುವಂತಹ ಘಟನ ಬೆಂಗಳೂರಿನ ಬಾಪೂಜಿನಗರದ ಮುನೇಶ್ವರ ದೇಗುಲದಲ್ಲಿ ನಡೆದಿದೆ.

ರಾತ್ರೋರಾತ್ರಿ ದೇವಸ್ಥಾನಕ್ಕೆ ನುಗ್ಗಿ ವಿಗ್ರಹ ಧ್ವಂಸ: ಪದೇಪದೆ ಇದೇ ದೇಗುಲ ಟಾರ್ಗೆಟ್​​​ ಮಾಡುತ್ತಿರುವ ಪುಂಡರು
ಬಾಪೂಜಿನಗರದ ಮುನೇಶ್ವರ ದೇಗುಲದಲ್ಲಿ ನಾಗದೇವರ ವಿಗ್ರಹ ಧ್ವಂಸ
Follow us
ಗಂಗಾಧರ​ ಬ. ಸಾಬೋಜಿ
|

Updated on:Mar 26, 2023 | 9:20 PM

ಬೆಂಗಳೂರು: ರಾತ್ರೋರಾತ್ರಿ ದೇವಸ್ಥಾನಕ್ಕೆ ನುಗ್ಗಿ ನಾಗದೇವರ ವಿಗ್ರಹ ಧ್ವಂಸ (Idol vandalised) ಮಾಡಿರುವಂತಹ ಘಟನ ಬೆಂಗಳೂರಿನ ಬಾಪೂಜಿನಗರದ ಮುನೇಶ್ವರ ದೇಗುಲದಲ್ಲಿ ನಡೆದಿದೆ. ಪದೇಪದೆ ಇದೇ ದೇಗುಲ ಟಾರ್ಗೆಟ್​​​ ಮಾಡುತ್ತಿರುವ ಪುಂಡರು ಕಳೆದೊಂದು ವರ್ಷದಲ್ಲಿ 3 ಬಾರಿ ವಿಗ್ರಹ ನಾಶಪಡಿಸಿದ್ದಾರೆ. ಪೊಲೀಸರಿಗೆ ಈಗಾಗಲೇ ದೇವಸ್ಥಾನ ಆಡಳಿತ ಮಂಡಳಿ ಮತ್ತು ಬಜರಂಗದಳ ಕಾರ್ಯಕರ್ತರಿಂದಲೂ ದೂರು ನೀಡಲಾಗಿದೆ. ದೇವಸ್ಥಾನದ ಸುತ್ತ ಇರುವ ಮುಸ್ಲಿಂ ಯುವಕರಿಂದ ಕೃತ್ಯವೆಸಗಿರಬಹುದು ಎಂದು ಹಿಂದೂ ಜಾಗರಣ ಸಮಿತಿ ಆರೋಪ ಮಾಡಿದೆ. ಪೊಲೀಸರ ಭದ್ರತೆ ನೀಡಿ ದೇವಸ್ಥಾನ ರಕ್ಷಿಸಬೇಕು ಅಂತ ಆಗ್ರಹಿಸಲಾಗಿದೆ. ಸದ್ಯ ಮುನೇಶ್ವರ ದೇಗುಲಕ್ಕೆ ಬ್ಯಾಟರಾಯನಪುರ ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ.

ಚರ್ಚ್​ಗೆ ನುಗ್ಗಿ ಏಸು ಮೂರ್ತಿ ಧ್ವಂಸಗೊಳಿಸಿದ ದುಷ್ಕರ್ಮಿಗಳು

ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣದ ಸೆಂಟ್‌ ಮೇರಿಸ್ ಚರ್ಚ್‌ (St. Mary’s Church) ಮೇಲೆ ಇತ್ತೀಚೆಗೆ ದುಷ್ಕರ್ಮಿಗಳು ದಾಳಿ ಮಾಡಿದ್ದರು. ದುಷ್ಕರ್ಮಿಗಳು ಚರ್ಚ್ ಒಳಗೆ ನುಗ್ಗಿ ಬಾಲ ಏಸುವಿನ ಮೂರ್ತಿ ಹಾಗೂ ತೊಟ್ಟಿಲನ್ನು ಒಡೆದು ಹಾಕಿದ್ದರು. ಕ್ರಿಸ್‌ಮಸ್ ಹಬ್ಬಕೆಂದು ಚರ್ಚ್ ಒಳಗಿನ ಟೇಬಲ್ ಮೇಲೆ ಬುಟ್ಟಿಯಲ್ಲಿನ, ತೊಟ್ಟಿಲಲ್ಲಿ ಬಾಲ ಏಸು ಅನ್ನು ಮಲಗಿಸಲಾಗಿತ್ತು.

ಇದನ್ನೂ ಓದಿ: ಮೈಸೂರು: ಜೆಡಿಎಸ್​ ಪಂಚರತ್ನ ಸಮಾರೋಪ ಸಮಾರಂಭದಲ್ಲಿ ಹೆಚ್​ಡಿ ಕುಮಾರಸ್ವಾಮಿ ಭರಸವಸೆಗಳ ಸುರಿಮಳೆ

ಚರ್ಚ್​ನಲ್ಲಿ ಯಾರು ಇಲ್ಲದ ವೇಳೆ ದುಷ್ಕರ್ಮಿಗಳಿಂದ ದಾಳಿ ಮಾಡಿ, ಬಾಲ ಏಸುವಿನ‌ ಮೂರ್ತಿಯನ್ನ ಪುಡಿ ಪುಡಿ ಮಾಡಿದ್ದರು. ಹಾಗೇ ಚರ್ಚ್ ಹೊರಗೆ ಇದ್ದ ಹುಂಡಿ ಕೂಡ ಕಳ್ಳತನವಾಗಿತ್ತು. ಚರ್ಚ್​ನ ಫಾದರ್ ಜಾನ್ ಪೌಲ್ ಮೈಸೂರಿಗೆ ತೆರಳಿದ ವೇಳೆಯಲ್ಲಿ ಘಟನೆ ಸಂಭವಿಸಿದೆ. ಸ್ಥಳಕ್ಕೆ ಪಿರಿಯಾಪಟ್ಟಣ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದರು.

ತಡೆಗೋಡೆ ನಿರ್ಮಾಣದ ವೇಳೆ ಬರೆ ಕುಸಿತ: ಮೂವರು ಕಾರ್ಮಿಕರ ಸಾವು

ಮಂಗಳೂರು: ತಡೆಗೋಡೆ ನಿರ್ಮಾಣದ ಸೆಂಟ್ರಿಂಗ್​ ಕೆಲಸ ಮಾಡುತ್ತಿದ್ದ ವೇಳೆ ಬರೆ ಕುಸಿದು ಮಣಿನಡಿ ಸಿಲುಕಿದ್ದ ಮೂವರು ಕಾರ್ಮಿಕರು ಸಾವನ್ನಪ್ಪಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗಾಂಧಿನಗರದ ಗುರುಂಪು ಬಳಿ ನಡೆದಿದೆ.  ಸೋಮಶೇಖರರೆಡ್ಡಿ(45), ಪತ್ನಿ ಶಾಂತಾ(40), ಮೃತ ಮತ್ತೋರ್ವ ಕಾರ್ಮಿಕನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಮತ್ತು ಸ್ಥಳೀಯರ ಸಹಾಯದಿಂದ ಶವಗಳನ್ನು ಹೊರತೆಗೆಯಲಾಗಿದೆ.

ಇದನ್ನೂ ಓದಿ: Amit Shah: ವಿಧಾನಸೌಧ ಎದುರು ಬಸವೇಶ್ವರ, ಕೆಂಪೇಗೌಡ ಪ್ರತಿಮೆ ಅನಾವರಣಗೊಳಿಸಿದ ಅಮಿತ್​ ಶಾ

ಮೃತಪಟ್ಟ ಕಾರ್ಮಿಕರು ಗದಗ ಜಿಲ್ಲೆ ಮುಂಡರಗಿ ಮೂಲದವರು ಎಂದು ಗುರುತಿಸಲಾಗುತ್ತಿದೆ. 7 ಕಾರ್ಮಿಕರು ತಡೆಗೋಡೆ ನಿರ್ಮಿಸುತ್ತಿದ್ದ ವೇಳೆ ಗುಡ್ಡ ಕುಸಿತ ಉಂಟಾಗಿದೆ. ಮೂವರ ಮೃತದೇಹ ಸುಳ್ಯ ಆಸ್ಪತ್ರೆಗೆ ಶವಾಗಾರಕ್ಕೆ ಸ್ಥಳಾಂತರ ಮಾಡಲಾಗಿದೆ. ಸ್ಥಳಕ್ಕೆ ಸಚಿವ ಎಸ್.ಅಂಗಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:20 pm, Sun, 26 March 23

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ