ಅಕ್ರಮ ಫ್ಲೆಕ್ಸ್, ಹೋರ್ಡಿಂಗ್ಸ್ : ಬಿಬಿಎಂಪಿ, ಪೊಲೀಸ್ ಇಲಾಖೆಗೆ ಹೈಕೋರ್ಟ್ ತರಾಟೆ

ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಇತ್ತೀಚೆಗೆ ಅನಧಿಕೃತ​ ಫ್ಲೆಕ್ಸ್​, ಹೋರ್ಡಿಂಗ್ಸ್ ಹಾವಳಿ ಹೆಚ್ಚಾಗಿದೆ. ಈ ಕುರಿತು ಕ್ರಮಕೈಗೊಳ್ಳದ ಬಿಬಿಎಂಪಿ, ಪೊಲೀಸ್​ ಇಲಾಖೆಯನ್ನು ಹೈಕೋರ್ಟ್​ ತರಾಟೆಗೆ ತೆಗೆದುಕೊಂಡಿದ್ದು, ಈ ಕುರಿತು ಕ್ರಮಕೈಗೊಳ್ಳಲು ಕೋರ್ಟ್ ಆದೇಶಗಳಿದ್ದರೂ ನ್ಯಾಯಾಂಗ ನಿಂದನೆ ಏಕೆ ದಾಖಲಿಸಬಾರದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಹಾಗೂ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್​ ನೋಟಿಸ್ ನೀಡಿದೆ. ಜೊತೆಗೆ ಜುಲೈ.26 ರರೊಳಗೆ ಉತ್ತರಿಸುವಂತೆ ಆದೇಶಿಸಿದೆ.

ಅಕ್ರಮ ಫ್ಲೆಕ್ಸ್, ಹೋರ್ಡಿಂಗ್ಸ್ : ಬಿಬಿಎಂಪಿ, ಪೊಲೀಸ್ ಇಲಾಖೆಗೆ ಹೈಕೋರ್ಟ್ ತರಾಟೆ
ಬಿಬಿಎಂಪಿ, ಪೊಲೀಸ್ ಇಲಾಖೆಗೆ ಹೈಕೋರ್ಟ್ ತರಾಟೆ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 12, 2024 | 3:18 PM

ಬೆಂಗಳೂರು, ಜು.12: ರಾಜ್ಯ ರಾಜಧಾನಿ ಬೆಂಗಳೂರಿ(Bengaluru)ನಲ್ಲಿ ಅಕ್ರಮ ಫ್ಲೆಕ್ಸ್, ಹೋರ್ಡಿಂಗ್ಸ್ ಹಾವಳಿ ಹೆಚ್ಚಾದ ಹಿನ್ನೆಲೆ ಹೈಕೋರ್ಟ್(High Court)​ ಸ್ವಯಂ ಪ್ರೇರಿತ ಪಿಐಎಲ್ ದಾಖಲು ಮಾಡಿಕೊಂಡಿದ್ದು, ಕ್ರಮ ಕೈಗೊಳ್ಳದ ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆಯನ್ನ ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ. ರಾಜ್ಯದಲ್ಲಿ ಈಗಾಗಲೇ 6.8 ಲಕ್ಷ ಅಕ್ರಮ ಜಾಹಿರಾತುಗಳಿವೆ ಎಂಬ ವರದಿಯಿದೆ. ರಸ್ತೆಗಳಲ್ಲಿ ಅಕ್ರಮ ಹೋರ್ಡಿಂಗ್​ಗಳ ಹಾವಳಿ ಮುಂದುವರಿದಿದೆ. ಈ ಅಕ್ರಮ ಜಾಹಿರಾತುಗಳಿಂದಾಗಿ ಪಾದಚಾರಿಗಳಿಗೆ ಸಮಸ್ಯೆ ಹಾಗೂ ಸಂಚಾರದಟ್ಟಣೆಗೆ ಕಾರಣವಾಗುತ್ತಿದೆ. ಜೊತೆಗೆ ಕೋರ್ಟ್ ಆದೇಶಗಳಿದ್ದರೂ ಸಂಬಂಧಪಟ್ಟ ಪ್ರಾಧಿಕಾರಗಳು ಪಾಲಿಸಿಲ್ಲ ಎಂದು ಹೈಕೋರ್ಟ್ ವಾಗ್ದಾಳಿ ನಡೆಸಿದೆ.

ಜುಲೈ.26 ರರೊಳಗೆ ಉತ್ತರಿಸುವಂತೆ ಆದೇಶ

ಇನ್ನು ಈ ಕುರಿತು ನ್ಯಾಯಾಂಗ ನಿಂದನೆ ಏಕೆ ದಾಖಲಿಸಬಾರದೆಂದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಹಾಗೂ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್​ ನೋಟಿಸ್ ನೀಡಿದೆ. ಇದಕ್ಕೆ ಜುಲೈ.26 ರರೊಳಗೆ ಉತ್ತರಿಸುವಂತೆ ಆದೇಶಿಸಿದೆ. ಜೊತೆಗೆ ಸರ್ಕಾರದ ಅನುಮೋದನೆಯೊಂದಿಗೆ ಜಾಹೀರಾತು ನಿಯಮ ರೂಪಿಸಲಾಗಿದೆ. ಬಿಬಿಎಂಪಿ ಜಾಹೀರಾತು ಸಂಬಂಧ ಕರಡು ಬೈಲಾ ಪ್ರಕಟಿಸಬೇಕಿದೆ ಎಂದು ಹೈಕೋರ್ಟ್​ಗೆ ಎಎಜಿ ಪ್ರತಿಮಾ ಹೊನ್ನಾಪುರ ಮಾಹಿತಿ ನೀಡಿದ್ದಾರೆ. ಪ್ರತಿ ಅಕ್ರಮ ಜಾಹೀರಾತು ತಡೆಗೆ ವಿಫಲವಾದರೆ 1 ಲಕ್ಷ ರೂ. ದಂಡ ನೀಡಬೇಕೆಂದು ಆದೇಶವಿದೆ. ಆದರೂ, ಕೋರ್ಟ್ ಆದೇಶ ಪಾಲಿಸಲು ಬಿಬಿಎಂಪಿಯಿಂದ ನಿರ್ಲಕ್ಷ್ಯ ತೋರಲಾಗಿದೆ. ಫ್ಲೆಕ್ಸ್ ಹಾವಳಿ ತಡೆಯಲು ಸದಾಕಾಲವೂ ಸನ್ನದ್ಧವಾಗಿರಬೇಕು. 5 ನೇ ಗೇರ್​ನಲ್ಲಿ ಕೆಲಸ ಮಾಡಲು ಬಿಬಿಎಂಪಿಗೆ ಸೂಚನೆ ನೀಡಿದೆ.

ಇದನ್ನೂ ಓದಿ:ಬೆಂಗಳೂರು: ಅಕ್ರಮ ಬ್ಯಾನರ್​​, ಹೋರ್ಡಿಂಗ್ಸ್​, ಫ್ಲೆಕ್ಸ್​ ಕಂಡರೆ ಬಿಬಿಎಂಪಿಯ ಈ ನಂಬರ್​ಗೆ ವಾಟ್ಸಪ್​ ಮಾಡಿ

ಅಕ್ರಮ ಬ್ಯಾನರ್​ಗಳ ಬಗ್ಗೆ ದೂರಿಗೆ ಸಹಾಯವಾಣಿ ತೆರದಿದ್ದ ಬಿಬಿಎಂಪಿ

ಇತ್ತೀಚೆಗೆ ನಗರದಲ್ಲಿ ಅನಧಿಕೃತವಾಗಿ​ ಫ್ಲೆಕ್ಸ್​, ಹೋರ್ಡಿಂಗ್ಸ್​ ಹಾಕುವುದನ್ನು ಬಿಬಿಎಂಪಿ ನಿಷೇಧಿಸಿ, ಈ ರೀತಿ ಬ್ಯಾನರ್‌ಗಳನ್ನು ಹಾಕಿ ಸಾರ್ವಜನಿಕ ಸೌಂದರ್ಯಕ್ಕೆ ದಕ್ಕೆ ತರುವುದು ಬಿಬಿಎಂಪಿ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದಿತ್ತು. ಜೊತೆಗೆ ನಮ್ಮ ವ್ಯಾಪ್ತಿಯಲ್ಲಿ ನಮ್ಮ ಕಣ್ಣು ತಪ್ಪಿಸಿ ಅಕ್ರಮವಾಗಿ ಹೋರ್ಡಿಂಗ್ಸ್​, ಫ್ಲೆಕ್ಸ್​, ಬ್ಯಾನರ್ ಹಾಕಿದರೇ, ಆ ಸ್ಥಳ ಮತ್ತು ಜಾಹಿರಾತು ಫೋಟೋ ತೆಗೆದು ದೂರುಗಳನ್ನು ನೀಡಲು ಬಿಬಿಎಂಪಿ 94806 85700 ವಾಟ್ಸಪ್​ ಸಂಖ್ಯೆ ನೀಡಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ದುನಿಯಾ ವಿಜಯ್ ನಿರ್ದೇಶನದಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ ಶಿವಣ್ಣ
ದುನಿಯಾ ವಿಜಯ್ ನಿರ್ದೇಶನದಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ ಶಿವಣ್ಣ
‘ಮಾರ್ಟಿನ್’ ಖದರ್ ಬೇರೆಯದ್ದೇ ರೀತಿ ಇರುತ್ತದೆ: ಧ್ರುವ ಸರ್ಜಾ
‘ಮಾರ್ಟಿನ್’ ಖದರ್ ಬೇರೆಯದ್ದೇ ರೀತಿ ಇರುತ್ತದೆ: ಧ್ರುವ ಸರ್ಜಾ
ಭಾರೀ ಮಳೆಗೆ ಕೊಲ್ಕತ್ತಾ ವಿಮಾನ ನಿಲ್ದಾಣದ ರನ್‌ವೇ ಜಲಾವೃತ
ಭಾರೀ ಮಳೆಗೆ ಕೊಲ್ಕತ್ತಾ ವಿಮಾನ ನಿಲ್ದಾಣದ ರನ್‌ವೇ ಜಲಾವೃತ
ಊರುಗೋಲಿನ ಸಹಾಯದಿಂದ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ಬಿಜೆಪಿ ಕಾರ್ಯಕರ್ತ
ಊರುಗೋಲಿನ ಸಹಾಯದಿಂದ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ಬಿಜೆಪಿ ಕಾರ್ಯಕರ್ತ
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ಲ್ಯಾಬ್ ಟೆಕ್ನಿಷಿಯನ್‌; ದಂಗಾದ ರೋಗಿಗಳು
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ಲ್ಯಾಬ್ ಟೆಕ್ನಿಷಿಯನ್‌; ದಂಗಾದ ರೋಗಿಗಳು
ನನ್ನ ಗಂಡನಿಗೆ MLA ಮತ್ತು ಮಗ 30 ಲಕ್ಷಕ್ಕೆ ಟಾರ್ಚರ್ ಕೊಟ್ಟವ್ರೆ ಸರ್
ನನ್ನ ಗಂಡನಿಗೆ MLA ಮತ್ತು ಮಗ 30 ಲಕ್ಷಕ್ಕೆ ಟಾರ್ಚರ್ ಕೊಟ್ಟವ್ರೆ ಸರ್
ಪಾದಯಾತ್ರೆ ಮುಗಿಯುವುದರೊಳಗೆ ಸಿಎಂ ರಾಜೀನಾಮೆ ಕೊಡುತ್ತಾರೆ: ಯಡಿಯೂರಪ್ಪ
ಪಾದಯಾತ್ರೆ ಮುಗಿಯುವುದರೊಳಗೆ ಸಿಎಂ ರಾಜೀನಾಮೆ ಕೊಡುತ್ತಾರೆ: ಯಡಿಯೂರಪ್ಪ
BJP JDS Padayatra: ಮೈಸೂರು ಚಲೋ ಸಮಾವೇಶದಲ್ಲಿ ಪ್ರಹ್ಲಾದ್ ಜೋಶಿ ಭಾಷಣ
BJP JDS Padayatra: ಮೈಸೂರು ಚಲೋ ಸಮಾವೇಶದಲ್ಲಿ ಪ್ರಹ್ಲಾದ್ ಜೋಶಿ ಭಾಷಣ
ನಥಿಂಗ್ ಫೋನ್ ಸಿರೀಸ್​ನಲ್ಲಿ ಬಂತು ಮತ್ತೊಂದು ಸೂಪರ್ ಡಿಸೈನ್ ಫೋನ್
ನಥಿಂಗ್ ಫೋನ್ ಸಿರೀಸ್​ನಲ್ಲಿ ಬಂತು ಮತ್ತೊಂದು ಸೂಪರ್ ಡಿಸೈನ್ ಫೋನ್
ಬೌಂಡರಿ ಲೈನ್​ನಲ್ಲಿ ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದ ಮಿಚೆಲ್ ಸ್ಯಾಂಟ್ನರ್
ಬೌಂಡರಿ ಲೈನ್​ನಲ್ಲಿ ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದ ಮಿಚೆಲ್ ಸ್ಯಾಂಟ್ನರ್