ಜು 15ರಿಂದ ಮುಂಗಾರು ಅಧಿವೇಶನ: ಬೇಗ ಹಾಜರಾಗುವ ಶಾಸಕರಿಗೆ ಬಹುಮಾನ ಘೋಷಿಸಿದ ಯುಟಿ ಖಾದರ್

ಸೋಮವಾರದಿಂದ ವಿಧಾನಮಂಡಲದ ಮುಂಗಾರು ಅಧಿವೇಶನ ಪ್ರಯುಕ್ತ ವಿಧಾನಸೌಧದಲ್ಲಿ ಸ್ಪೀಕರ್​ ಯು.ಟಿ.ಖಾದರ್ ಹಾಗೂ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಜಂಟಿ ಸುದ್ದಿಗೋಷ್ಠಿ ಮಾಡಿದ್ದು, 16ನೇ ವಿಧಾನಸಭೆಯ 4ನೇ ಅಧಿವೇಶ ಜುಲೈ 15 ರಿಂದ 26ರವರೆಗೆ ನಡೆಯುವುದು. ಒಟ್ಟು 9 ದಿನಗಳ ಕಾಲ ನಡೆಯಲಿದೆ ಎಂದು ಹೇಳಿದ್ದಾರೆ.

ಜು 15ರಿಂದ ಮುಂಗಾರು ಅಧಿವೇಶನ: ಬೇಗ ಹಾಜರಾಗುವ ಶಾಸಕರಿಗೆ ಬಹುಮಾನ ಘೋಷಿಸಿದ ಯುಟಿ ಖಾದರ್
ಜು.15ರಿಂದ ಮುಂಗಾರು ಅಧಿವೇಶನ: ಬೇಗ ಹಾಜರಾಗುವ ಶಾಸಕರಿಗೆ ಬಹುಮಾನ ಘೋಷಿಸಿದ ಯುಟಿ ಖಾದರ್
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Jul 12, 2024 | 2:59 PM

ಬೆಂಗಳೂರು, ಜುಲೈ 12: 16ನೇ ವಿಧಾನಸಭೆಯ 4ನೇ ಮುಂಗಾರು ಅಧಿವೇಶನ (Monsoon session) ಜುಲೈ 15 ರಿಂದ 26ರವರೆಗೆ ನಡೆಯುವುದು. ಒಟ್ಟು 9 ದಿನಗಳ ಕಾಲ ಅಧಿವೇಶನ ನಡೆಯಲಿದೆ ಎಂದು ಸಭಾಧ್ಯಕ್ಷ ಯು.ಟಿ ಖಾದರ್ (ut Khader) ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಯು.ಟಿ.ಖಾದರ್ ಹಾಗೂ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಜಂಟಿ ಸುದ್ದಿಗೋಷ್ಠಿ ನಡೆಸಿದ್ದು, ಅಧಿವೇಶನದಲ್ಲಿ ಸರ್ಕಾರದಿಂದ ಸ್ವೀಕರಿಸಲಾಗುವ ವಿಧೇಯಕಗಳನ್ನ ಪರ್ಯಾಲೋಚನೆಗೆ ಹಾಗೂ ಅಂಗೀಕಾರಕ್ಕೆ ತೆಗೆದುಕೊಳ್ಳಲಾಗುವುದು ಎಂದರು.

9 ದಿನಗಳ ಕಾಲ ಪ್ರಶ್ನೋತ್ತರ ಕಲಾಪವನ್ನು ನಿಗದಿಪಡಿಸಲಾಗಿದೆ. ಇದರ ಜೊತೆಗೆ ಗಮನ ಸೆಳೆಯುವ ಸೂಚನೆ, ಶೂನ್ಯವೇಳೆ, ನಿಲುವಳಿ ಸೂಚನೆ, ನಿಯಮ 69ರ ಸೂಚನೆಗಳು, ಖಾಸಗಿ ಸದಸ್ಯರುಗಳ ಕಾರ್ಯಕ್ರಮಗಳನ್ನ ನಡೆಸಲಾಗುವುದು.

ಇದನ್ನೂ ಓದಿ: ದೈವಗಳ ಹರಕೆ ಕೋಲ ನೆರವೇರಿಸಿದ ಯು ಟಿ ಖಾದರ್ ವಿರುದ್ಧ ಮುಸ್ಲಿಂ ಧಾರ್ಮಿಕ ಮುಖಂಡನ ಆಕ್ರೋಶ

2024-24ನೇ‌ ಸಾಲಿನ ವಿಧಾನ ಮಂಡಲ, ವಿಧಾನ ಸಭೆಯ ಸ್ಥಾಯಿ ಸಮಿತಿಗಳ ಅವಧಿ ಆಗಸ್ಟ್​ 8ರಂದು ಮುಕ್ತಾಯಗೊಳ್ಳಲಿದೆ. ಹೀಗಾಗಿ 2024-25ನೇ ಸಾಲಿಗೆ ಹೊಸದಾಗಿ ಸಮಿತಿಗಳನ್ನ ರಚಿಸುವ ಸಂಬಂಧ ಚುನಾವಣಾ ಪ್ರಸ್ತಾವವನ್ನ ಮಂಡಿಸಿ, ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.

ಬೇಗ ಹಾಜರಾಗುವ ಶಾಸಕರಿಗೆ ಟೀ ಕಪ್

ಸಭೆಗೆ ಬೇಗ ಹಾಜರಾಗುವ ಶಾಸಕರಿಗೆ ಟೀ ಕಪ್ ನೀಡಲಾಗುವುದು. ಕಳೆದ ಭಾರೀ ನೀಡಿದ ಅವಕಾಶ ಈ ಭಾರಿಯೂ ನೀಡುತ್ತೇವೆ. ಇಡೀ‌ ದಿನ ಇರುವ ಸದಸ್ಯರುಗಳಿಗೆ ವಿಶೇಷ ಅವಕಾಶ ನೀಡಲಾಗುತ್ತೆ. ಅವರು‌ ಎಷ್ಟುತ್ತಿಗೆ ಬರುತ್ತಾರೆ, ಹೋಗುತ್ತಾರೆ ಗಮನದಲ್ಲಿ ಇಟ್ಟುಕೊಂಡು ಅವಕಾಶ ನೀಡುತ್ತೇವೆ. ಜು.20ರಂದು ವಿಧಾನಮಂಡಲ ಕಪ್ ಅನ್ನು ನೀಡುತ್ತೇವೆ. ವಿಧಾನಸಭೆ ಮತ್ತು‌ ವಿಧಾನ ಪರಿಷತ್​ನ ಸದಸ್ಯರು ಭಾಗಿಯಾಗಬಹುದು. ಗೆದ್ದವರಿಗೆ ಬಹುಮಾನ ನೀಡುತ್ತೇವೆ. ಕಲಾಪ‌ ವೀಕ್ಷಣೆಗೆ ಬರುವ ಮಕ್ಕಳು, ವಿದ್ಯಾರ್ಥಿಗಳಿಗೆ ಎಂದಿನಂತೆ ವ್ಯವಸ್ಥೆ ಇರಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಯೂನಿವರ್ಸಿಟಿಯಲ್ಲಿ ವಾಹನ ಸಂಚಾರ ಹೆಚ್ಚಳ; ಸರ್ಕಾರಕ್ಕೆ ಪತ್ರ ಬರೆದ ಬಸವರಾಜ ಹೊರಟ್ಟಿ

ಮುಂದಿನ‌ ದಿನಗಳಲ್ಲಿ‌ ಆ್ಯಪ್​ ಮಾಡುತ್ತೇವೆ. ವಿಧಾನಸೌಧದ ಯಾವ ಕೊಠಡಿಯಲ್ಲಿ ಯಾವ ಸಚಿವರು ಇದ್ದಾರೆ, ಕೊಠಡಿ ಸಂಖ್ಯೆ, ಇಲಾಖೆಯ ಹೆಸರು, ವಿಧಾನಸೌಧದ ಸಂಪೂರ್ಣ ಮಾಹಿತಿ ಆ ಆ್ಯಪ್​ನಲ್ಲಿ‌ ಇರಲಿದೆ. ಮುಂದಿನ‌ ದಿನಗಳಲ್ಲಿ ಇದು ಕಾರ್ಯರೂಪಕ್ಕೆ ಬರಲಿದೆ ಎಂದು ಹೇಳಿದ್ದಾರೆ.

ಶಾಸಕರ ಪ್ರಶಸ್ತಿ ಬಹುತೇಕ ಆಯ್ಕೆ: ಬಸವರಾಜ ಹೊರಟ್ಟಿ

ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, 2022-23ನೇ ಸಾಲಿನ ಅತ್ಯುತ್ತಮ ಶಾಸಕರ ಪ್ರಶಸ್ತಿ ಬಹುತೇಕ ಆಯ್ಕೆ ಆಗಿದೆ. ಈಗ ಹೇಳಲು‌ ಸಾಧ್ಯವಿಲ್ಲ. ಮೊದಲ ದಿನದ ಅಧಿವೇಶನ ಬೆಳಿಗ್ಗೆ 11ಕ್ಕೆ ಪ್ರಾರಂಭ ಆಗಲಿದೆ. ನಂತರ ಪ್ರತಿದಿನದ್ದು ತಿಳಿಸಲಾಗುತ್ತೆ. ವರ್ಷಕ್ಕೆ 60 ದಿನ ಅಧಿವೇಶನ ನಡೆಯಬೇಕು. ಆದರೆ ಇತ್ತೀಚಿನ‌ ದಿನಗಳಲ್ಲಿ‌ ಆಗುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಬಳಿ ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದಿದ್ದಾರೆ.

ವಿಪಕ್ಷಗಳಿಂದ ಒಂದು ವಾರ ಹೆಚ್ಚಿನವರೆಗೆ ಅಧಿವೇಶನ ನಡೆಸುವ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಸಭೆ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಸಚಿವರುಗಳಿಂದ ಕೊಠಡಿ ನವೀಕರಣ ವಿಚಾರವಾಗಿ ಮಾತನಾಡಿ ಸುಣ್ಣ ಬಣ್ಣ ಹಚ್ಚಿಕೊಳ್ಳಲು ಅವಕಾಶ ಇದೆ. ಶೌಚಾಲಯ, ಬಣ್ಣ ಬದಲಿಸಿಕೊಳ್ಳಬಹುದು. ನವೀಕರಣ ಮಾಡಬಾರದು, ಅನುಮತಿ ಪಡೆದು ಮಾಡಬೇಕು. ವಾಸ್ತು ಪ್ರಕಾರ ವಿಧಾನಸೌಧ ಮಾಡಿದ್ದಾರೆ. ಮತ್ತೆ ಆ ರೀತಿ ಅವಕಾಶ ಕೊಡುವುದಿಲ್ಲ. ಆ ರೀತಿ ಮಾಡಬಾರದು ಅಂತ ಹೇಳುತ್ತೇವೆ. ಈ ಹಿಂದೆ ಒಬ್ಬ ಸಚಿವರು ಈ ರೀತಿ ಮಾಡಿ ತೊಂದರೆ ಆಗಿತ್ತು. ಅವರ ಹೆಸರು ಹೇಳುವುದಿಲ್ಲ. ಯಾವ ಸಚಿವರೂ ಕೊಠಡಿಯ ಗೋಡೆ ಹೊಡೆಯುವುದಕ್ಕೆ ಅವಕಾಶವಿಲ್ಲ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ
‘ಮಾರ್ಟಿನ್’ ಖದರ್ ಬೇರೆಯದ್ದೇ ರೀತಿ ಇರುತ್ತದೆ: ಧ್ರುವ ಸರ್ಜಾ
‘ಮಾರ್ಟಿನ್’ ಖದರ್ ಬೇರೆಯದ್ದೇ ರೀತಿ ಇರುತ್ತದೆ: ಧ್ರುವ ಸರ್ಜಾ
ಭಾರೀ ಮಳೆಗೆ ಕೊಲ್ಕತ್ತಾ ವಿಮಾನ ನಿಲ್ದಾಣದ ರನ್‌ವೇ ಜಲಾವೃತ
ಭಾರೀ ಮಳೆಗೆ ಕೊಲ್ಕತ್ತಾ ವಿಮಾನ ನಿಲ್ದಾಣದ ರನ್‌ವೇ ಜಲಾವೃತ
ಊರುಗೋಲಿನ ಸಹಾಯದಿಂದ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ಬಿಜೆಪಿ ಕಾರ್ಯಕರ್ತ
ಊರುಗೋಲಿನ ಸಹಾಯದಿಂದ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ಬಿಜೆಪಿ ಕಾರ್ಯಕರ್ತ
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ಲ್ಯಾಬ್ ಟೆಕ್ನಿಷಿಯನ್‌; ದಂಗಾದ ರೋಗಿಗಳು
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ಲ್ಯಾಬ್ ಟೆಕ್ನಿಷಿಯನ್‌; ದಂಗಾದ ರೋಗಿಗಳು
ನನ್ನ ಗಂಡನಿಗೆ MLA ಮತ್ತು ಮಗ 30 ಲಕ್ಷಕ್ಕೆ ಟಾರ್ಚರ್ ಕೊಟ್ಟವ್ರೆ ಸರ್
ನನ್ನ ಗಂಡನಿಗೆ MLA ಮತ್ತು ಮಗ 30 ಲಕ್ಷಕ್ಕೆ ಟಾರ್ಚರ್ ಕೊಟ್ಟವ್ರೆ ಸರ್
ಪಾದಯಾತ್ರೆ ಮುಗಿಯುವುದರೊಳಗೆ ಸಿಎಂ ರಾಜೀನಾಮೆ ಕೊಡುತ್ತಾರೆ: ಯಡಿಯೂರಪ್ಪ
ಪಾದಯಾತ್ರೆ ಮುಗಿಯುವುದರೊಳಗೆ ಸಿಎಂ ರಾಜೀನಾಮೆ ಕೊಡುತ್ತಾರೆ: ಯಡಿಯೂರಪ್ಪ
BJP JDS Padayatra: ಮೈಸೂರು ಚಲೋ ಸಮಾವೇಶದಲ್ಲಿ ಪ್ರಹ್ಲಾದ್ ಜೋಶಿ ಭಾಷಣ
BJP JDS Padayatra: ಮೈಸೂರು ಚಲೋ ಸಮಾವೇಶದಲ್ಲಿ ಪ್ರಹ್ಲಾದ್ ಜೋಶಿ ಭಾಷಣ
ನಥಿಂಗ್ ಫೋನ್ ಸಿರೀಸ್​ನಲ್ಲಿ ಬಂತು ಮತ್ತೊಂದು ಸೂಪರ್ ಡಿಸೈನ್ ಫೋನ್
ನಥಿಂಗ್ ಫೋನ್ ಸಿರೀಸ್​ನಲ್ಲಿ ಬಂತು ಮತ್ತೊಂದು ಸೂಪರ್ ಡಿಸೈನ್ ಫೋನ್
ಬೌಂಡರಿ ಲೈನ್​ನಲ್ಲಿ ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದ ಮಿಚೆಲ್ ಸ್ಯಾಂಟ್ನರ್
ಬೌಂಡರಿ ಲೈನ್​ನಲ್ಲಿ ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದ ಮಿಚೆಲ್ ಸ್ಯಾಂಟ್ನರ್
ಹೇಗಿರಲಿದೆ ತರುಣ್ ಸುಧೀರ್-ಸೋನಲ್ ವಿವಾಹ? ಮಾಹಿತಿ ಕೊಟ್ಟ ಜೋಡಿ
ಹೇಗಿರಲಿದೆ ತರುಣ್ ಸುಧೀರ್-ಸೋನಲ್ ವಿವಾಹ? ಮಾಹಿತಿ ಕೊಟ್ಟ ಜೋಡಿ