ಆಕಸ್ಮಿಕವಾಗಿ ಸೋಪ್ ಮೇಲೆ ಕಾಲಿಟ್ಟು ಕಟ್ಟಡದ ಮೇಲಿಂದ ಬಿದ್ದ ಮಹಿಳೆ
ಆಕಸ್ಮಿಕವಾಗಿ ಸೋಪ್ ಮೇಲೆ ಕಾಲಿಟ್ಟು ಮಹಿಳೆಯೊಬ್ಬರು ಕಟ್ಟಡದ ಮೇಲಿಂದ ಬಿದ್ದ ಘಟನೆ ಬೆಂಗಳೂರಿನ ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯ ಕನಕನಗರದಲ್ಲಿ ನಡೆದಿದೆ. ತಕ್ಷಣ ಸ್ಥಳೀಯರು ಆಟೋ ಮೂಲಕ ಮಹಿಳೆಯನ್ನ ಆಸ್ಪತ್ರೆಗೆ ಸಾಗಿಸಿದ್ದಾರೆ. ಸದ್ಯ ಐಸಿಯು ವಾರ್ಡ್ ನಲ್ಲಿ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರು, ಜೂ.21: ಬೆಂಗಳೂರಿನ ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯ ಕನಕನಗರದಲ್ಲಿ ಆಕಸ್ಮಿಕವಾಗಿ ಸೋಪ್ ಮೇಲೆ ಕಾಲಿಟ್ಟು ಮಹಿಳೆಯೊಬ್ಬರು ಕಟ್ಟಡದ ಮೇಲಿಂದ ಬಿದ್ದ ಘಟನೆ ನಡೆದಿದೆ. ರುಬಾಯ್(27) ಕಟ್ಟಡದಿಂದ ಬಿದ್ದಿರುವ ಮಹಿಳೆ. ಕಟ್ಟಡದ ಮೇಲೆ ಪತಿಯೊಂದಿಗೆ ನಿಂತಿದ್ದ ಪತ್ನಿ ರುಬಾಯ್, ಈ ವೇಳೆ ಆಕಸ್ಮಿಕವಾಗಿ ಸೋಪು ಮೇಲೆ ಕಾಲಿಟ್ಟು ಜಾರಿದ್ದಾರೆ. ಕೂಡಲೇ ಪಕ್ಕದಲ್ಲೇ ನಿಂತಿದ್ದ ಪತಿ, ಪತ್ನಿಯ ಕೈಯನ್ನು ಹಿಡಿದುಕೊಂಡಿದ್ದು, ಆ ಬಳಿಕ ಕೈ ಜಾರಿ ಕೆಳಬಿದ್ದಿದ್ದಾರೆ. ತಕ್ಷಣ ಸ್ಥಳೀಯರು ಆಟೋ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಸದ್ಯ ಐಸಿಯು ವಾರ್ಡ್ ನಲ್ಲಿ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ.
ಕೋಮಾದಲ್ಲಿರುವ ಮಹಿಳೆ
ಇನ್ನು ಮಹಿಳೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೇಲಿಂದ ಬಿದ್ದ ರಭಸಕ್ಕೆ ಮಹಿಳೆ ಕೋಮಾಕ್ಕೆ ಹೋಗಿದ್ದಾರೆ. ಕಟ್ಟಡದ ಮೇಲಿಂದ ಬಿದ್ದ ಮಹಿಳೆಯ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ. ಕಳೆದ ಮೂರು ದಿನದ ಹಿಂದ ನಡೆದ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇದನ್ನೂ ಓದಿ:ಕಾಲೇಜು ಕಟ್ಟಡದಿಂದ ಬಿದ್ದು ಸಾಯುವ ಮುನ್ನ ಅಪ್ಪ, ಅಮ್ಮ, ಅಕ್ಕ, ತಂಗಿಗೆ ಕರುಳುಹಿಂಡುವ ಮೆಸೇಜ್ ಬರೆದ ಬಾಲಕಿ
ಆರ್ ಆರ್ ನಗರದಲ್ಲಿ ವೃದ್ಧೆಯಿಂದ ಚೈನ್ ಸ್ನ್ಯಾಚಿಂಗ್
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದ್ದು, ಇಂದು(ಜೂ.21) ಆರ್.ಆರ್.ನಗರದ ಕೃಷ್ಣಗಾರ್ಡನ್ ಬಳಿ ವಾಕಿಂಗ್ ಮಾಡುತ್ತಿದ್ದ ಅಜ್ಜಿಯ ಸರವನ್ನು ಖದೀಮರು ಕಣ್ಣು ಮಿಟಕಿಸುವುದರ ಒಳಗಾಗಿ ಎಗರಿಸಿದ್ದಾರೆ. ಇತ್ತ ಸರ ಕಸಿಯುತ್ತಿದ್ದಂತೆ ವೃದ್ಧೆ ಕೆಳಗೆ ಬಿದ್ದಿದ್ದಾರೆ. ಈ ಕುರಿತು ಆರ್.ಆರ್.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿ, ಕಳ್ಳರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ