ಸಹೋದ್ಯೋಗಿ ಮಹಿಳೆಗೆ ಮೆಸೇಜ್ ಮಾಡಿ ಕೆಲಸ ಕಳೆದುಕೊಂಡ ಯುವಕ
ಇರಲಾರದವರು ಇರುವೆ ಬಿಟ್ಟುಕೊಂಡರು ಎನ್ನುವ ಗಾದೆಯಂತೆ ಇಟಿಯೋಸ್ ಡಿಜಿಟಲ್ ಸರ್ವಿಸ್ ಎಂಬ ಸಂಸ್ಥೆಯ ನೌಕರನೊಬ್ಬ ಸಹೋದ್ಯೋಗಿ ಮಹಿಳೆಗೆ ಮೆಸೇಜ್ ಮಾಡಿ ಕೆಲಸ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ(Bengaluru) ನಡೆದಿದೆ. ಸಧ್ಯ ಐದು ವರ್ಷಗಳ ಕಾಲ ಕಂಪನಿ ಟರ್ಮಿನೇಷನ್ ಮಾಡಿದ್ದು, ದೂರು ಕೂಡ ದಾಖಲು ಮಾಡುತ್ತೇವೆ ಎಂದು ಕಂಪನಿ ಹೇಳಿದೆ.
ಬೆಂಗಳೂರು, ಅ.11: ಸುಮ್ಮನೆ ಇರದೆ ಇರುವೆ ಬಿಟ್ಟುಕೊಂಡರು ಎನ್ನುವ ಗಾದೆಯಂತೆ ಇಲ್ಲೊಬ್ಬ ಯುವಕನೋರ್ವ ಸಹೋದ್ಯೋಗಿ ಮಹಿಳೆಗೆ ಮೆಸೇಜ್ ಮಾಡಿ ಕೆಲಸ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ(Bengaluru) ನಡೆದಿದೆ. ಇದೀಗ ಮಹಿಳೆಗೆ ಆ್ಯಸಿಡ್ ಹಾಕುತ್ತೀನಿ ಎಂದ ಯುವಕ ನಿಖಿತ್ ಶೆಟ್ಟಿ ಎಂಬಾತನ ವಿರುದ್ಧ ಆಕೆಯ ಪತಿ ಪೊಲೀಸರಿಗೆ ಪೋಸ್ಟ್ ಮಾಡಿ ದೂರು ನೀಡಿದ್ದಾರೆ.
ಆಗಿದ್ದೇನು?
ಇಟಿಯೋಸ್ ಡಿಜಿಟಲ್ ಸರ್ವಿಸ್ ಎಂಬ ಸಂಸ್ಥೆಯ ನೌಕರನಾಗಿದ್ದ ನಿಖಿತ್, ‘ಕರ್ನಾಟಕದಲ್ಲಿ ನೀಟಾಗಿ ಬಟ್ಟೆ ಹಾಕೋದಕ್ಕೆ ಹೇಳು ಇಲ್ಲದಿದ್ದಲ್ಲಿ ಆ್ಯಸಿಡ್ ಹಾಕ್ತಿನಿ ಎಂದು ಮಹಿಳೆ ಪತಿ ಶಹಬಾಝ್ ಅನ್ಸರ್ಗೆ ಸಂದೇಶ ಮಾಡುವ ಮೂಲಕ ಬೆದರಿಕೆ ಹಾಕಿದ್ದ. ಈ ವಿಚಾರವನ್ನು ಮಹಿಳೆಯ ಪತಿ ‘ನನ್ನ ಹೆಂಡತಿಯ ಬಟ್ಟೆಯ ಆಯ್ಕೆಯನ್ನು ಪ್ರಶ್ನೆ ಮಾಡಿರುವ ಈ ಯುವಕ, ನನ್ನ ಹೆಂಡತಿಯ ಮುಖದ ಮೇಲೆ ಆ್ಯಸಿಡ್ ಎರಚುವುದಾಗಿ ಬೆದರಿಕೆ ಹಾಕುತ್ತಿದ್ದಾನೆ. ಈ ರೀತಿಯ ಯಾವುದೇ ಘಟನೆ ನಡೆಯದಂತೆ ಈ ವ್ಯಕ್ತಿಯ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಿ’ ಎಂದು ಶಹಬಾಜ್ ಅನ್ಸಾರ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದು.
ಇದನ್ನೂ ಓದಿ:50 ಕೋಟಿಗೆ ಡಿಮ್ಯಾಂಡ್, ಬೆದರಿಕೆ ಆರೋಪ: ಕುಮಾರಸ್ವಾಮಿಗೆ ಸದ್ಯಕ್ಕಿಲ್ಲ ತನಿಖೆ ತಲೆಬಿಸಿ, ದಾಖಲೆ ನೀಡದ ವಿಜಯ್ ಟಾಟಾ
ಇದನ್ನು ಡಿಜಿಪಿ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ. ಕೆ. ಶಿವಕುಮಾರ್ ಹಾಗೂ ಇಟಿಯೋಸ್ ಡಿಜಿಟಲ್ ಸರ್ವಿಸ್ಗೆ ಟ್ಯಾಗ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ನಿಕಿತ್ ಶೆಟ್ಟಿಯನ್ನ ಕಂಪನಿಯಿಂದ ತೆಗೆಯಲಾಗಿದೆ. ಐದು ವರ್ಷಗಳ ಕಾಲ ಕಂಪನಿ ಟರ್ಮಿನೇಷನ್ ಮಾಡಿದೆ. ಹಾಗೂ ದೂರು ಕೂಡ ದಾಖಲು ಮಾಡುತ್ತೇವೆ ಎಂದು ಕಂಪನಿ ಹೇಳಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:44 pm, Fri, 11 October 24