ಬೆಂಗಳೂರಿನ ಮೇಘನಾ ಫುಡ್ಸ್​ ಗ್ರೂಪ್ ಕಂಪನಿ ಮೇಲೆ ಐಟಿ ದಾಳಿ

ಬೆಂಗಳೂರಿನ ಮೇಘನಾ ಫುಡ್ಸ್​ ಗ್ರೂಪ್ ಕಂಪನಿಗೆ ಸಂಬಂಧಿಸಿದ​ 10ಕ್ಕೂ ಹೆಚ್ಚು ಕಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮೇಘನಾ ಫುಡ್ಸ್ ಕಂಪನಿ ಹೋಟೆಲ್ ಮತ್ತು ರೆಸ್ಟೋರೆಂಟ್​ಗಳನ್ನು ನಡೆಸುತ್ತಿದ್ದು, ಇದರ ಕೋರಮಂಗಲ, ಇಂದಿರಾನಗರ, ಜಯನಗರದಲ್ಲಿರುವ ಶಾಖೆಗಳಿವೆ.

ಬೆಂಗಳೂರಿನ ಮೇಘನಾ ಫುಡ್ಸ್​ ಗ್ರೂಪ್ ಕಂಪನಿ ಮೇಲೆ ಐಟಿ ದಾಳಿ
ಆದಾಯ ತೆರಿಗೆ ಇಲಾಖೆ
Follow us
ಪ್ರಜ್ವಲ್ ಅಮೀನ್​, ಉಡುಪಿ
| Updated By: ವಿವೇಕ ಬಿರಾದಾರ

Updated on:Mar 19, 2024 | 3:07 PM

ಬೆಂಗಳೂರು, ಮಾರ್ಚ್​ 19: ಬೆಂಗಳೂರಿನ (Bengaluru) ಮೇಘನಾ ಫುಡ್ಸ್​ ಗ್ರೂಪ್ ಕಂಪನಿಗೆ ಸಂಬಂಧಿಸಿದ​ 10ಕ್ಕೂ ಹೆಚ್ಚು ಕಡೆ ಆದಾಯ ತೆರಿಗೆ ಇಲಾಖೆ (IT) ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮೇಘನಾ ಫುಡ್ಸ್ ಕಂಪನಿ ಹೋಟೆಲ್ ಮತ್ತು ರೆಸ್ಟೋರೆಂಟ್​ಗಳನ್ನು ನಡೆಸುತ್ತಿದ್ದು, ಇದರ ಕೋರಮಂಗಲ, ಇಂದಿರಾನಗರ, ಜಯನಗರದಲ್ಲಿರುವ ಶಾಖೆಗಳಿವೆ. ಆದಾಯ ತೆರಿಗೆ ಪಾವತಿಯಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕರ್ನಾಟಕ ಮತ್ತು ಗೋವಾ ವಿಭಾಗದ ಅಧಿಕಾರಿಗಳು ಆಗಮಿಸಿದ್ದಾರೆ.

ಏನಿದು ಐಟಿ ರೇಡ್?

ಆದಾಯ ತೆರಿಗೆ ಇಲಾಖೆ ಒಂದು ಸ್ಥಳದಲ್ಲಿ ನಡೆಸುವ ಶೋಧ ಮತ್ತು ಸರ್ವೇಕ್ಷಣೆ ಕಾರ್ಯಾಚರಣೆಯನ್ನೇ ರೇಡ್ ಎನ್ನುವುದು. ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ಅಕ್ರಮವಾಗಿ ಹಣ ಇಟ್ಟುಕೊಂಡಿದ್ದು ಗೊತ್ತಾದರೆ ಅಥವಾ ಅನುಮಾನ ಬಂದರೆ ಐಟಿ ಇಲಾಖೆ ರೇಡ್ ಮಾಡುತ್ತದೆ.

ಕಪ್ಪು ಹಣ ಸಂಗ್ರಹವನ್ನು ನಿಗ್ರಹಿಸಲು ಸಾಮಾನ್ಯವಾಗಿ ಈ ರೇಡ್ ನಡೆಸಲಾಗುತ್ತದೆ. ತೆರಿಗೆ ಪಾವತಿಯಾಗದ ಹಣವನ್ನು ಕಪ್ಪು ಹಣ ಎಂದು ಭಾವಿಸಲಾಗುತ್ತದೆ. ಹೀಗಾಗಿ, ಅನ್​ಅಕೌಂಟೆಡ್ ಆಗಿರುವ ಹಣ, ಅಂದರೆ ದಾಖಲೆ ಇಲ್ಲದ ಮತ್ತು ತೆರಿಗೆ ಕಟ್ಟದೇ ಇರುವ ಹಣ ಕಪ್ಪು ಹಣ. ಒಡವೆಯೂ ಒಳಗೊಂಡಂತೆ ಯಾವುದೇ ಲೆಕ್ಕವಿಲ್ಲದ ಆಸ್ತಿಗಳು ಇದರಲ್ಲಿ ಒಳಗೊಳ್ಳುತ್ತವೆ.

ಆದಾಯ ತೆರಿಗೆ ಇಲಾಖೆ ದೇಶದ ಹಣಕಾಸು ಬೆಳವಣಿಗೆ ಬಗ್ಗೆ ಸದಾ ಜಾಗೃತವಾಗಿರುತ್ತದೆ. ಯಾವ ಬಿಸಿನೆಸ್ ಎಷ್ಟು ಲಾಭ ಮಾಡಿದೆ ಇತ್ಯಾದಿ ಎಲ್ಲವನ್ನೂ ಗಮನಿಸುತ್ತಾ ಇರುತ್ತದೆ.

ಇದನ್ನೂ ಓದಿ: ಹುಬ್ಬಳ್ಳಿ: ಉದ್ಯಮಿ ಗಣೇಶ್ ಸೇಟ್ ಮನೆ ಮೇಲೆ ಐಟಿ ದಾಳಿ

ರೇಡ್​ಗೆ ಐಟಿ ಇಲಾಖೆ ಸಿದ್ಧತೆ ಹೇಗಿರುತ್ತೆ?

ಆದಾಯ ತೆರಿಗೆ ಇಲಾಖೆಯ ಕರ್ನಾಟಕ ವಿಭಾಗದ ಚೀಫ್ ಮುಖ್ಯ ಕಮಿಷನರ್ ಆಗಿ ನಿವೃತ್ತರಾಗಿರುವ ಹಾಗೂ ಕನ್ನಡದ ಖ್ಯಾತ ಸಾಹಿತಿಯೂ ಆಗಿರುವ ಕೆ ಸತ್ಯನಾರಾಯಣ ಅವರು ಟಿವಿ9 ಕನ್ನಡಕ್ಕೆ ನೀಡಿದ ಮಾಹಿತಿ ಪ್ರಕಾರ, ಐಟಿ ದಾಳಿ ಸಾಮಾನ್ಯವಾಗಿ ತೀರಾ ನಾಟಕೀಯವಾಗಿ, ದಿಢೀರ್ ಆಗಿ ನಡೆಯುವಂಥದ್ದಲ್ಲ. ಸಾಕಷ್ಟು ತಯಾರಿ ಮಾಡಿ, ಒಂದು ನೋಟ್ ಸಿದ್ಧಪಡಿಸಿ, ಡೈರೆಕ್ಟರ್, ಅಡಿಶನಲ್ ಡೈರೆಕ್ಟರ್ ಮಟ್ಟಕ್ಕೆ ಅದನ್ನು ತರಲಾಗುತ್ತದೆ. ಆ ಬಳಿಕ ವಾರಂಟ್ ಇಷ್ಯೂ ಮಾಡಲಾಗುತ್ತದೆ. ಇಲಾಖೆ ಮಟ್ಟದಲ್ಲೂ ಯಾವ ದುರ್ಬಳಕೆ ಆಗದಿರುವುದನ್ನು ಖಚಿಪಡಿಸಿಕೊಳ್ಳಲು ಕ್ರಾಸ್ ಚೆಕ್ ಮಾಡಲಾಗುತ್ತದೆ.

ಒಂದು ಕಡೆ ರೇಡ್ ನಡೆಸಲು ಬೇಕಾದ ಸಾಕ್ಷ್ಯಾಧಾರ ಇದ್ದರೂ ತತ್​ಕ್ಷಣವೇ ದಾಳಿ ಮಾಡಲಾಗುತ್ತದೆ ಎಂಬಂತಿಲ್ಲ. ಇಲಾಖೆಯಲ್ಲೂ ಸಿಬ್ಬಂದಿ ಕೊರತೆ ಇರುತ್ತದೆ. ಅಧಿಕಾರಿಗಳನ್ನು ಸಂಯೋಜಿಸಿ, ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ರೇಡ್ ಅಖಾಡಕ್ಕೆ ಇಳಿಯಲು ಒಂದೆರಡು ವಾರವೇ ಆಗಬಹುದು.

ಸುಖಾಸುಮ್ಮನೆ ರೇಡ್ ಮಾಡಲು ಆಗುವುದಿಲ್ಲ?

ರಾಜಕೀಯ ಒತ್ತಡ ಇತ್ಯಾದಿಯಿಂದ ಐಟಿ ರೇಡ್ ಆಗುವುದು ಕಡಿಮೆ. ಕೋರ್ಟ್​ನಲ್ಲಿ ವಿಚಾರಣೆಗೆ ಹೋಗುವುದರಿಂದ ಐಟಿ ಇಲಾಖೆ ಆಧಾರರಹಿತ ಪ್ರಕರಣಗಳನ್ನು ದಾಖಲಿಸುವುದಿಲ್ಲ.

Published On - 8:44 am, Tue, 19 March 24

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ