ಟ್ರಾಫಿಕ್ ರೂಲ್ಸ್ ಉಲ್ಲಂಘಿಸುವವರೇ ಎಚ್ಚರ…ಬೆಂಗಳೂರಿಗೆ ಬಂದಿದೆ ITMS ಕ್ಯಾಮರಾ

TV9kannada Web Team

TV9kannada Web Team | Edited By: Vivek Biradar

Updated on: Dec 09, 2022 | 10:45 PM

ಹೈಯೆಂಡ್ ಕ್ಯಾಮರಾ ಮೂಲಕ ರೂಲ್ಸ್ ಬ್ರೇಕ್ ಮಾಡೋರ ಮೇಲೆ ಕಣ್ಣು ಇಡಲು ಬೆಂಗಳೂರು ಸಂಚಾರಿ ಪೊಲೀಸರು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಟ್ರಾಫಿಕ್ ರೂಲ್ಸ್ ಉಲ್ಲಂಘಿಸುವವರೇ ಎಚ್ಚರ...ಬೆಂಗಳೂರಿಗೆ ಬಂದಿದೆ  ITMS ಕ್ಯಾಮರಾ
ಸಾಂಧರ್ಬಿಕ ಚಿತ್ರ

ಬೆಂಗಳೂರು: ಕಳೆದ ಎರಡು ವಾರಗಳಿಂದ ನಗರದಲ್ಲಿ ಸಂಚಾರ ದಟ್ಟಣೆ ಹೇಳಿಕೊಳ್ಳುವಷ್ಟು ಕಡಿಮೆಯಾಗಿದೆ. ಪೀಕ್​ ಅವರ್​ನಲ್ಲಿ ಕಚೇರಿಗಳಿಗೆ ತಲುಪುವ ವಾಹನ ಸವಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಇನ್ನು ಈ ಹಿಂದೆ ರಸ್ತೆ ಬದಿ ನಿಂತು ರೂಲ್ಸ್​ ಬ್ರೇಕ್​ ಮಾಡೋರಿಗೆ ಫೈನ್​ ಹಾಕ್ತಿದ್ದ ಸಂಚಾರಿ ಪೊಲೀಸರು ಈಗ ಟ್ರಾಫಿಕ್​ ನಿಯಂತ್ರಣದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗಲೇ ಬೆಂಗಳೂರು ಸಂಚಾರಿ ಪೊಲೀಸರು ಸದ್ದಿಲ್ಲದೆ ವಾಹನ ಸವಾರರಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ಅದರಲ್ಲೂ ಸಂಚಾರ ನಿಯಮಗಳನ್ನ ಉಲ್ಲಂಘನೆ ಮಾಡಿ ಓಡಾಡುವ ವಾಹನ ಸವಾರರ ಮನೆ ಬಾಗಿಲಿಗೆ ದಂಡದ ರಸೀದಿ ಕಳಿಸಲು ಹೊಸ ಪ್ಲಾನ್​ ಮಾಡಿದ್ದಾರೆ.

ನಗರದಲ್ಲಿ ಈಗಾಗಲೇ ಟೆಕ್ನಾಲಜಿ ಬಳಸಿಕೊಂಡು ದಂಡದ ರಸೀದಿ ಮನೆಗೆ ತಲುಪಿಸುವ ಯೋಜನೆ ಜಾರಿಯಲ್ಲಿದೆ. ಆದರೆ ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ತಂದು ಪ್ರತಿ ರೂಲ್ಸ್​ ಬ್ರೇಕ್​ ಮಾಡುವ ವಾಹನವನ್ನು ಪತ್ತೆ ಹಚ್ಚಿ ದಂಡ ಹಾಕುವ ಪ್ರಯತ್ನದಲ್ಲಿದ್ದಾರೆ ಸಂಚಾರಿ ಪೊಲೀಸರು. ಅದಕ್ಕಾಗಿಯೇ ಸಿಗ್ನಲ್​ಗಳು, ರಸ್ತೆ ಮತ್ತು ಜಂಕ್ಷನ್​ಗಳಲ್ಲಿರುವ ಸಿಸಿಟಿವಿ, ಬಾಡಿ ಕ್ಯಾಮೆರಾ ಹಾಗೂ ಆ್ಯಪ್ ಆಧಾರಿತ ಮೊಬೈಲ್ ಮೂಲಕ ಸವಾರರಿಗೆ ದಂಡ ಹಾಕಲು ಯೋಜನೆ ರೂಪಿಸಿದ್ದಾರೆ. ಟ್ರಾಫಿಕ್​ ನಿಯಂತ್ರಣ ಮಾಡೋದರ ಜೊತೆಗೆ ಪೊಲೀಸರು ಬಾಡಿವೇರ್​ ಕ್ಯಾಮೆರಾ ಹಾಗೂ ಮೊಬೈಲ್​ಗಳಲ್ಲಿ ಫೋಟೋ ತೆಗೆದು ಸಾಕ್ಷಿ ಸಮೇತ ದಂಡದ ರಸೀದಿ ಕಳುಹಿಸುತಿದ್ದಾರೆ. ಇದರ ಜೊತೆಗೆ ನೋ ಎಂಟ್ರಿ, ಒನ್ ವೇ, ಸಿಗ್ನಲ್ ಜಂಪ್, ಜೀಬ್ರಾ ಕ್ರಾಸ್ ಉಲ್ಲಂಘನೆ ಸೇರಿದಂತೆ ಇತರೆ ಪ್ರಕರಣಗಳ ಉಲ್ಲಂಘನೆ ಪ್ರಕರಣಗಳ ಮೇಲೆ ಸಿಸಿಟಿವಿ ಮೂಲಕ ಟ್ರಾಫಿಕ್ ಪೊಲೀಸರು ತೀವ್ರ ನಿಗಾ ಇಟ್ಟಿದ್ದಾರೆ. ಇನ್ನು ಇದರ ಜೊತೆಗೆ ITMS ಸಿಸ್ಟಮ್ ಕೂಡ ಸೇರಿಕೊಂಡಿದೆ. ಹೌದು, ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ಸಂಚಾರಿ ಪೊಲೀಸರು ಈ ಪ್ರಯತ್ನಕ್ಕೆ ಮುಂದಾಗಿದ್ದಾರೆ. ವಿದೇಶಗಳಲ್ಲಿ ಬಳಸಲ್ಪಡುವ ಹೈ ಟೆಕ್ನಾಲಜಿ ಆಧರಿತ ಪ್ರಕ್ರಿಯೆಗೆ ಸತತ 6 ತಿಂಗಳ ಶ್ರಮ ಹಾಗೂ 20 ಕೋಟಿಗೂ ಅಧಿಕ ವೆಚ್ಚದಲ್ಲಿ ಕಾರ್ಯರೂಪಕ್ಕೆ ITMS ಬಂದಿದೆ. ಈ ಮೂಲಕ ರೂಲ್ಸ್ ಬ್ರೇಕ್ ಮಾಡೊ ಮಂದಿಗೆ ಕ್ಯಾಮಾರಾಗಳ ಜೊತೆಗೂಡಿ ಟೆಕ್ನಾಲಜಿಯಿಂದ ರೂಲ್ಸ್ ಬ್ರೇಕ್ ಮಾಡೊ ಮಂದಿಗೆ ಶಾಕ್ ನೀಡಲಿದೆ.

ತಾಜಾ ಸುದ್ದಿ

ಇದನ್ನೂ ಓದಿ: ಬೆಂಗಳೂರು: ಟ್ರಾಫಿಕ್​ ತೊಂದರೆ ನಿಯಂತ್ರಿಸಲು 5 ಹೊಸ ಸಂಚಾರಿ​ ಠಾಣೆ ನಿರ್ಮಾಣಕ್ಕೆ ಬೊಮ್ಮಾಯಿ ಸೂಚನೆ

ಅಸಲಿಗೆ ITMS ಅಂದ್ರೆ ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್. ಹೈಯೆಂಡ್ ಕ್ಯಾಮರಾ ಮೂಲಕ ರೂಲ್ಸ್ ಬ್ರೇಕ್ ಮಾಡೋರ ಮೇಲೆ ಕಣ್ಣು ಇಡಲು ಸಂಚಾರಿ ಪೊಲೀಸರು ತಂದಿರುವ ಹೊಸ ಪ್ರಯತ್ನ. ಇದು ಸಂಪರ್ಕರಹಿತ ಸ್ವಯಂ ಚಾಲಿತ ಕ್ಯಾಮರವಾಗಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮಷಿನ್ ಲರ್ನಿಂಗ್ ಎಂಬ ಎರಡು ತಂತ್ರಜ್ಞಾನಗಳ ಬಳಸಿಕೊಳ್ಳುವ ಮೂಲಕ ಐಟಿಎಂಎಸ್ ನಿಯಮ ಉಲ್ಲಂಘನೆಯಾದ ಗಾಡಿಗಳ ಮೇಲೆ ಸ್ವಯಂಚಾಲಿತ ಗುರುತಿಸುತ್ತದೆ. ವಾಹನ ಸವಾರರ ಪ್ರತೀ ಮೂಮೆಂಟ್ ರೆಕಾರ್ಡ್ ಮಾಡಲಿರುವ ಹೈ ರೆಸಲ್ಯೂಷನ್ ಇರೋ ಹೈಯೆಂಡ್ ಕ್ಯಾಮರಾಗಳು 24 ಗಂಟೆಯೂ ಪ್ರತೀ ವೈಯ್ಲೇಷನ್ ಮೂಮೆಂಟ್ ರೆಕಾರ್ಡ್ ಮಾಡುತಿದೆ. ತ್ರಿಬಲ್ ರೈಡಿಂಗ್, ವೇಗದ ಮಿತಿ, ರೆಡ್ ಲೈಟ್ ವೈಲೇಷನ್, ಸ್ಟಾಪ್ ಲೇನ್ ಉಲ್ಲಂಘನೆ, ಹೆಲ್ಮೆಟ್ ಇಲ್ಲದ ಚಾಲನೆ, ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ ಹಾಗೂ ಸೀಟ್ ಬೆಲ್ಟ್ ಹಾಕದಿದರೇ ಕ್ಯಾಮರಾ ಅದನ್ನು ಗುರುತಿಸುತ್ತದೆ. ಇನ್ನು ರಾತ್ರಿ ಹೊತ್ತಿನಲ್ಲೂ ಕಾರ್ಯನಿರ್ವಹಿಸಲಿರೊ ಕ್ಯಾಮೆರಾಗಳು ನಿಯಮ ಉಲ್ಲಂಘನೆ ಬಗ್ಗೆ ನಿಗಾ ವಹಿಸಲಿವೆ. ಇನ್ನು ಈಗಾಗಲೇ ಓಲ್ಡ್ ಮದ್ರಾಸ್ ರಸ್ತೆ, ಶಿವಾನಂದ ಸರ್ಕಲ್, ನವರಂಗ್, ಸಿಎಂಎಚ್ ರೋಡ್ ಹಾಗೂ ಕೊರಮಂಗಲ ಸೇರಿದಂತೆ 50 ಜಂಕ್ಷನ್​ಗಳಲ್ಲಿ 250 ITMS ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಈ ಕ್ಯಾಮರಾಗಳು ರೂಲ್ಸ್ ಬ್ರೇಕ್ ಮಾಡಿದ ತಕ್ಷಣವೇ ಐದು ಸೆಕೆಂಡ್​ನ ವಿಡಿಯೋ ಚಿತ್ರೀಕರಣದ ಜೊತೆ ನಿಯಮ ಉಲ್ಲಂಘಿಸಿದ ಸವಾರನ ಮೊಬೈಲ್​ಗೆ ಫೈನ್ ಮಾಹಿತಿ ಬರತ್ತೆ.

ಇದನ್ನೂ ಓದಿ: ಅಪಘಾತ ಪ್ರಕರಣದಲ್ಲಿ ಜಪ್ತಿಯಾದ ವಾಹನ 24 ಗಂಟೆಯೊಳಗೆ ಮಾಲೀಕರಿಗೆ ಹಸ್ತಾಂತರ: ಕಮಿಷನರ್ ಡಾ.ಸಲೀಂ

ಈ ವೇಳೆ ಮೊಬೈಲ್​ನಲ್ಲೆ ಕ್ಯೂ ಆರ್ ಕೋಡ್ ಮೂಲಕ ಫೈನ್ ಕಟ್ಟಬೇಕು. ಇಲ್ಲವಾದಲ್ಲಿ ಫೈನ್ ಕಟ್ಟಿಲ್ಲ ಅಂದರೇ 24 ಗಂಟೆಗಳಲ್ಲಿ ಮನೆ ಬಾಗಿಲಿಗೆ ಬರುತ್ತೆ ನೊಟೀಸ್ ಸಹ ಬರಲಿದೆ. ಆಗಲು ಲೆಕ್ಕಿಸದಿದ್ದರೇ, ಇನ್ಸ್ಯೂರೆನ್ಸ್ ಅಥವ ಎಫ್​​ಸಿ ಮಾಡಿಸಲು ಹೋದಾಗ ದಂಡ ಕಡ್ಡಾಯವಾಗಿ ಪಾವತಿಸಬೇಕಾಗತ್ತೆ.

ನಗರದಲ್ಲಿ ಈ ಮೊದಲು ಪ್ರತಿನಿತ್ಯ 30 ಸಾವಿರ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತಿದ್ದವು. ಆದರೂ ಜನ ಸಂಚಾರಿ ನಿಯಮಗಳನ್ನು ಪಾಲಿಸಲು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಟ್ರಾಫಿಕ್ ಕ್ಲಿಯರೆನ್ಸ್ ಜೊತೆಗೆ ಟೆಕ್ನಾಲಜಿ ಸಹಾಯದಿಂದ ಸವಾರರ ಮೇಲೆ ದಂಡ ಪ್ರಯೋಗ ಮಾಡಲು ಸಂಚಾರಿ ಪೊಲೀಸರು ಮುಂದಾಗಿದ್ದಾರೆ. ಇದು ಮುಂದಿನ ದಿನಗಳಲ್ಲಿ ಯಾವ ರೀತಿ ವರ್ಕ್ ಆಗತ್ತೆ ಕಾದು ನೋಡಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada