ಅನುದಾನ ವಿಚಾರದಲ್ಲಿ ಕೇಂದ್ರದಿಂದ ಕರ್ನಾಟಕಕ್ಕೆ ಯಾಕೆ ಅನ್ಯಾಯ: ಬಜೆಟ್ ಮೇಲೆ ಹೆಚ್.ಡಿ. ಕುಮಾರಸ್ವಾಮಿ ಭಾಷಣ

HD Kumaraswamy: ಕೇಂದ್ರ ಸರ್ಕಾರ ರಾಜಸ್ಥಾನ, ಗುಜರಾತ್‌ಗಳಿಗೆ ಹೆಚ್ಚು ಅನುದಾನವನ್ನು ಕೊಡುತ್ತಿದೆ. ಉತ್ತರ ಪ್ರದೇಶಕ್ಕೆ 100ಕ್ಕೆ 256 ಕೋಟಿ ರೂಪಾಯಿ ಅನುದಾನ ನೀಡ್ತಾರೆ. ಅಲ್ಲಿನ ಜನಸಂಖ್ಯೆ, ತಲಾದಾಯದ ಮೇಲೆ ಅನುದಾನ ನೀಡುತ್ತಿದೆ. ಆದರೆ ನಮ್ಮ ರಾಜ್ಯಕ್ಕೆ ಏಕೆ ಅನ್ಯಾಯ ಮಾಡುತ್ತಿದ್ದಾರೆಂದು ಪ್ರಶ್ನೆ ಮಾಡಿದ್ದಾರೆ.

ಅನುದಾನ ವಿಚಾರದಲ್ಲಿ ಕೇಂದ್ರದಿಂದ ಕರ್ನಾಟಕಕ್ಕೆ ಯಾಕೆ ಅನ್ಯಾಯ: ಬಜೆಟ್ ಮೇಲೆ ಹೆಚ್.ಡಿ. ಕುಮಾರಸ್ವಾಮಿ ಭಾಷಣ
ಹೆಚ್​ಡಿ ಕುಮಾರಸ್ವಾಮಿ
Follow us
TV9 Web
| Updated By: ganapathi bhat

Updated on:Mar 09, 2022 | 2:14 PM

ಬೆಂಗಳೂರು: ನಾವು ಪ್ರಾಮಾಣಿಕವಾಗಿ ತೆರಿಗೆ ಕಟ್ಟಿದ್ದೇ ತಪ್ಪಾಯ್ತೆಂಬ ಭಾವನೆ ಮೂಡ್ತಿದೆ. GST ವಿಚಾರದಲ್ಲಿ ಕುತ್ತಿಗೆ, ಹಗ್ಗ ಎರಡೂ ಕೇಂದ್ರಕ್ಕೆ ಕೊಟ್ಟಿದ್ದೇವೆ. ಅವರು ಯಾವಾಗ ಬೇಕಾದರು‌ ನೇಣು‌ ಹಾಕಬಹುದು. ನಾನು ಈ ಮಾತನ್ನು 2017ರಲ್ಲಿಯೇ ಹೇಳಿದ್ದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಆರ್ಥಿಕ ಸರ್ವಾಧಿಕಾರ ಒಕ್ಕೂಟ ವ್ಯವಸ್ಥೆಯಲ್ಲಿ ಮಾರಕ. ನಮ್ಮ ತೆರಿಗೆ ಹಣವನ್ನ ಕೇಂದ್ರಕ್ಕೆ ಕಟ್ಟುತ್ತೇವೆ. ಇದರಿಂದ ರಾಜ್ಯಗಳಿಗೆ ಇರುವ ಅವಕಾಶವೂ ಇಲ್ಲದಂತಾಗಿದೆ ಎಂದು ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಬಜೆಟ್ ಮೇಲೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಚರ್ಚೆ ನಡೆಸಿದ್ದಾರೆ.

ಕೇಂದ್ರದಿಂದ ಹೆಚ್ಚು ಅನುದಾನ ತರುವಂತೆ ಒತ್ತಡ ಹಾಕಬೇಕು. ಈ ಹಿಂದೆ ಕೇಂದ್ರದಿಂದ ಶೇಕಡಾ 73ರಷ್ಟು ಅನುದಾನ ಬರ್ತಿತ್ತು. ಈಗ ಅನುದಾನ ಶೇಕಡಾ 49ಕ್ಕೆ ಇಳಿದಿದೆ ಎಂದು ಹೇಳಿದ್ದಾರೆ. ಇದಕ್ಕೆ ಕಾರಣವೇನೆಂದು ಸದನದಲ್ಲಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಏಕೆ ಕೊರತೆಯನ್ನು ತೋರಿಸಿದೆ? ಕೇಂದ್ರದ ಅನುಕಂಪ ಪಡೆಯಲು ಕೊರತೆ ತೋರಿಸಿದ್ದೀರಾ? ರಾಜಸ್ಥಾನ, ಗುಜರಾತ್‌ಗಳಿಗೆ ಹೆಚ್ಚು ಅನುದಾನವನ್ನು ಕೊಡುತ್ತಿದೆ. ಉತ್ತರ ಪ್ರದೇಶಕ್ಕೆ 100ಕ್ಕೆ 256 ಕೋಟಿ ರೂಪಾಯಿ ಅನುದಾನ ನೀಡ್ತಾರೆ. ಅಲ್ಲಿನ ಜನಸಂಖ್ಯೆ, ತಲಾದಾಯದ ಮೇಲೆ ಅನುದಾನ ನೀಡುತ್ತಿದೆ. ಆದರೆ ನಮ್ಮ ರಾಜ್ಯಕ್ಕೆ ಏಕೆ ಅನ್ಯಾಯ ಮಾಡುತ್ತಿದ್ದಾರೆಂದು ಪ್ರಶ್ನೆ ಮಾಡಿದ್ದಾರೆ.

ವಿಪಕ್ಷ ನಾಯಕರು ಸರ್ಕಾರದ ಸಾಲದ ಬಗ್ಗೆ ಗಮನ ಸೆಳೆದಿದ್ದಾರೆ. ಪ್ರತಿ ವರ್ಷ 2ರಿಂದ 4 ಸಾವಿರ ಕೋಟಿ ಸಾಲ ಹೆಚ್ಚಾಗುತ್ತಲೇ ಇದೆ. ಸಿದ್ದರಾಮಯ್ಯ, ಯಡಿಯೂರಪ್ಪ, ನನ್ನ ಅವಧಿಯಲ್ಲೂ ಹೆಚ್ಚಾಗಿದೆ. ಬೊಮ್ಮಾಯಿ ಕಾಲದಲ್ಲಿ ಹೆಚ್ಚು ಸಾಲ ಮಾಡಿದರೆಂದು ಆರೋಪಿಸ್ತಿಲ್ಲ. ಅವರವರ ಪರಿಮಿತಿಯಲ್ಲಿ ಸಾಲ ಮಾಡುವುದಕ್ಕೆ ಅವಕಾಶ ಇದೆ ಎಂದು ತಿಳಿಸಿದ್ದಾರೆ.

ಗೋಹತ್ಯೆ ನಿಷೇಧ ಕಾಯ್ದೆಯಿಂದ ರೈತರಿಗೆ ತೊಂದರೆ ಆಗುತ್ತಿದೆ

ಗೋಹತ್ಯೆ ನಿಷೇಧ ಕಾಯ್ದೆಯಿಂದ ರೈತರಿಗೆ ತೊಂದರೆ ಆಗುತ್ತಿದೆ. ರೈತರು ಎದುರಿಸುತ್ತಿರುವ ಸಮಸ್ಯೆಗಳ ಅನುಭವವಾಗಿದೆ. ನನ್ನ ತೋಟದ ಮನೆಯಲ್ಲಿ ಹಸುಗಳು 13 ಕರು ಹಾಕಿವೆ. ಈ ಪೈಕಿ 8 ಗಂಡು, ಐದು ಹೆಣ್ಣು ಕರಗಳು ಇವೆ. ನಾನು ಶಕ್ತನಾಗಿರುವ ಹಿನ್ನೆಲೆ ಕರುಗಳನ್ನು ನೋಡಿಕೊಳ್ತಿದ್ದೇನೆ. ಆದರೆ ಬಡ ರೈತರು ನನ್ನಂತೆ ನೋಡಿಕೊಳ್ಳಲು ಆಗೋದಿಲ್ಲ. ಹಸುಗಳಿಗೆ ಆಹಾರ ಖರೀದಿಸುವುದಕ್ಕೆ ರೈತರಿಂದ ಆಗ್ತಿಲ್ಲ. ಹಾಲು ಉತ್ಪಾದಕ ಸಹಕಾರ ಸಂಘಗಳಲ್ಲಿ ಲೂಟಿ ಮಾಡ್ತಿದ್ದಾರೆ. ಸುಮಾರು 50 ಲಕ್ಷ ಲೂಟಿ ಮಾಡುತ್ತಿದ್ದಾರೆಂದು ಆರೋಪ ಇದೆ. ಲೂಟಿ ಮಾಡಿದವರಿಗೆ ರಕ್ಷಣೆ ಕೂಡ ಕೊಡಲಾಗುತ್ತಿದೆ. ಸಹಕಾರಿ ಕ್ಷೇತ್ರ ಕಲುಷಿತವಾಗಿದೆ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಮೇಕೆದಾಟು ವಿಚಾರ: ಸಾವಿರ ಕೋಟಿ ರೂ. ಕಣ್ಣೊರೆಸುವ ತಂತ್ರವಾಗಬಾರದು

ಇದೇ ವೇಳೆ ಮೇಕೆದಾಟು ವಿಚಾರವನ್ನು ಕುಮಾರಸ್ವಾಮಿ ಪ್ರಸ್ತಾಪಿಸಿದ್ದಾರೆ. DPRನಲ್ಲಿ ಹೆಚ್ಚುವರಿ ನೀರು ಬಳಸಿಕೊಳ್ಳುವ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಹೀಗಾಗಿ ತಮಿಳುನಾಡು ಕ್ಯಾತೆ ತೆಗೆದಿದೆ. ತಮಿಳುನಾಡು, ಕರ್ನಾಟಕ ಚರ್ಚಿಸಬೇಕೆಂದು ಹೇಳಿದ್ದಾರೆ. ಕೇಂದ್ರ ಸಚಿವರು ಇಂತಹ ಹೇಳಿಕೆ ನೀಡುವ ಅಗತ್ಯವೇನಿತ್ತು? ಈ ವಿಚಾರವಾಗಿ ಎಲ್ಲರನ್ನೂ ದೆಹಲಿಗೆ ಕರೆದುಕೊಂಡು ಹೋಗುವ ಬಗ್ಗೆ ನಾವೇ ಕೇಂದ್ರ ಸರ್ಕಾರದ ಗಮನಕ್ಕೆ ತರುತ್ತೇವೆ. ಸಾವಿರ ಕೋಟಿ ರೂ. ಕಣ್ಣೊರೆಸುವ ತಂತ್ರವಾಗಬಾರದು. ಮೇಕೆದಾಟು ಬಳಿ ಜಲಾಶಯ ಕಟ್ಟುವುದಕ್ಕೆ ಆಕ್ಷೇಪವಿಲ್ಲ. ಹೀಗಂತ ಸುಪ್ರೀಂಕೋರ್ಟ್‌ಗೆ ತಮಿಳುನಾಡು ತಿಳಿಸಿದೆ. ಮೇಕೆದಾಟು ಪಾದಯಾತ್ರೆಯಿಂದ ಏನೂ ಆಗುವುದಿಲ್ಲ. ಯಾರ ಭದ್ರಕೋಟೆನೂ ಏನೂ ಆಗಲ್ಲ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ನಾನು ಕೂಡ ಭಾಗ್ಯಗಳ ಹಣೆಬರಹವನ್ನು ನೋಡಿದ್ದೇನೆ

ವಿಧಾನಸಭೆಯಲ್ಲಿ ಬಜೆಟ್ ಮೇಲೆ ಕುಮಾರಸ್ವಾಮಿ ಚರ್ಚೆ ನಡೆಸಿದ್ದಾರೆ. ಚರ್ಚೆ ವೇಳೆ ಸಿದ್ದರಾಮಯ್ಯ ಭಾಷಣದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಇದಕ್ಕೆ ಕಾಂಗ್ರೆಸ್ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನೀವು ಬಜೆಟ್ ವಿಚಾರವಾಗಿ ಮಾತನಾಡಿ ಎಂದ ಸದಸ್ಯರಿಗೆ ನಾನು ಬಜೆಟ್ ಬಗ್ಗೆ ಮಾತಾಡುತ್ತಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಸಿದ್ದರಾಮಯ್ಯ ಕೆಲ ವಿಷಯಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅದಕ್ಕೆ ಬೆಂಬಲವಾಗಿ ನಾನು ಮಾತನಾಡುತ್ತಿದ್ದೇನೆ. ಬಜೆಟ್‌ನ ಲೋಪದೋಷಗಳ ಬಗ್ಗೆ ನಾನು ಮಾತಾಡ್ತಿದ್ದೇನೆ. ಕಾಂಗ್ರೆಸ್ ಪಕ್ಷದ ಸದಸ್ಯರು ತಾಳ್ಮೆಯಿಂದ ಇರಬೇಕು. ನಾನು ಕೂಡ ಭಾಗ್ಯಗಳ ಹಣೆಬರಹವನ್ನು ನೋಡಿದ್ದೇನೆ ಎಂದು ಕಾಂಗ್ರೆಸ್ ಸದಸ್ಯರ ಆಕ್ಷೇಪಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ ಸರಿಯಾಗಿ ಮಾತನಾಡುತ್ತಿದ್ದಾರೆ. ಅವರನ್ನು ಮಾತಾಡಲು ಬಿಡಿ ಎಂದು ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ. ನಾನು ಯಾರನ್ನೂ ಟೀಕಿಸ್ತಿಲ್ಲ, ವಾಸ್ತವಾಂಶ ಹೇಳುತ್ತಿದ್ದೇನೆ. ನಾನು ಅವರಿಗೆ ಸರ್ಟಿಫಿಕೆಟ್ ಕೊಡ್ತಿದ್ದೇನೆ, ನಿಮಗೆ ಬೇಡವಾ? ಸಿದ್ದರಾಮಯ್ಯಗೆ ಅಭಿನಂದನೆ ಹೇಳೋದು ಬೇಡ್ವಾ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಸಿದ್ದರಾಮಯ್ಯ ಭಾಷಣದ ಬಗ್ಗೆ ಕುಮಾರಸ್ವಾಮಿ ಪ್ರಸ್ತಾಪಕ್ಕೆ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಜೆಟ್ ಮೇಲೆ ಚರ್ಚಿಸ್ತ್ತಿದ್ದೀರೋ, ಸಿದ್ದರಾಮಯ್ಯ ಬಗ್ಗೆಯೋ ಎಂದು ಯು.ಟಿ.ಖಾದರ್ ಆಕ್ಷೇಪದ ಬಳಿಕೆ ಸದನದಲ್ಲಿ ಗದ್ದಲ ಉಂಟಾಗಿದೆ. ಸಿದ್ದರಾಮಯ್ಯ ಭಾಷಣವನ್ನು ನಾನು ನೋಡಿದ್ದೇನೆ. ಸಿದ್ದರಾಮಯ್ಯ ಮಾತಾಡಿರೋದೆಲ್ಲ ಪೊಲಿಟಿಕಲ್ ಭಾಷಣ ಎಂದು ಕುಮಾರಸ್ವಾಮಿ ಹೇಳಿಕೆಗೆ ಕಾಂಗ್ರೆಸ್, JDS ಸದಸ್ಯರ ಮಾತಿನ ಸಮರ ಏರ್ಪಟ್ಟಿದೆ.

ನಮ್ಮ ನಾಯಕರು ಮಾತನಾಡುವಾಗ ಗೌರವ ಕೊಡದಿದ್ದರೆ ಇಲ್ಲಿ ಏಕೆ ಇರಬೇಕೆಂದು ಜೆಡಿಎಸ್ ಶಾಸಕರು ಕಿಡಿ

ಇದಕ್ಕೂ ಮೊದಲು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಬಜೆಟ್ ಮೇಲೆ ಚರ್ಚೆಗೆ ಮುಂದಾಗಿದ್ದ ವೇಳೆ ಅಧಿಕಾರಿಗಳು ಯಾರೂ ಇಲ್ಲವೆಂದು ಜೆಡಿಎಸ್ ಸದಸ್ಯರ ಆಕ್ಷೇಪ ವ್ಯಕ್ತವಾಗಿದೆ. ನಮ್ಮ ನಾಯಕರು ಮಾತನಾಡುವಾಗ ಗೌರವ ಕೊಡದಿದ್ದರೆ ಇಲ್ಲಿ ಏಕೆ ಇರಬೇಕೆಂದು ಜೆಡಿಎಸ್ ಶಾಸಕರು ಕಿಡಿಕಾರಿದ್ದಾರೆ. ಕಳೆದ 2 ಸದನದಲ್ಲೂ ನನಗೆ ಮಾತಾಡಲು ಅವಕಾಶ ಸಿಗಲಿಲ್ಲ. ಆದರೆ ಈ ಬಾರಿ ಅವಕಾಶ ಸಿಕ್ಕಿದೆ, ಅದಕ್ಕಾಗಿ ಅಧಿಕೃತ ವಿರೋಧ ಪಕ್ಷಕ್ಕೂ ಹಾಗೂ ಸರ್ಕಾರಕ್ಕೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಿದ್ದರಾಮಯ್ಯಗೆ ಹೆಚ್‌ಡಿಕೆ ಟಾಂಗ್ ಕೊಟ್ಟಿದ್ದಾರೆ.

ವಿಧಾನಸಭೆಯಲ್ಲಿ ಬಜೆಟ್ ಮೇಲೆ ಕುಮಾರಸ್ವಾಮಿ ಚರ್ಚೆ ನಡೆಸಿದ್ದಾರೆ. ವಿಪಕ್ಷ ನಾಯಕರು ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ. ಬಜೆಟ್ ಮಂಡಿಸಿದ ಸರ್ಕಾರ, ವಿಪಕ್ಷಕ್ಕೆ ಧನ್ಯವಾದಗಳು. ನಾವು ಸರ್ಕಾರಕ್ಕೆ ಸಲಹೆ ಕೊಟ್ಟರೆ ನಮ್ಮನ್ನ ಟೀಕಿಸುತ್ತಾರೆ. ರಾಷ್ಟ್ರೀಯ ಪಕ್ಷದ ನಾಯಕರು ನಮ್ಮನ್ನ ಟೀಕೆ ಮಾಡ್ತಾರೆ. ನಾವು ಬಿಜೆಪಿ ಬಿ ಟೀಂ ಎಂಬ ಆರೋಪ ಎದುರಿಸಬೇಕಾಗಿದೆ ಎಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯವನ್ನು ವಂಚಿಸಿರುವುದು ಚರ್ಚೆಯಾಗಬೇಕು: ಕುಮಾರಸ್ವಾಮಿ

ಇದನ್ನೂ ಓದಿ: ಅವಧಿಗೂ ಮುನ್ನವೇ ಚುನಾವಣೆ ಬರುವ ಸಾಧ್ಯತೆ ಇದೆ; ಚುನಾವಣೆಗೆ ಜೆಡಿಎಸ್ ಪಕ್ಷ ಸಿದ್ಧವಾಗುತ್ತಿದೆ: ಹೆಚ್​ಡಿ ಕುಮಾರಸ್ವಾಮಿ

Published On - 2:09 pm, Wed, 9 March 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ