ಗ್ರಾಹಕರ ಸೋಗಿನಲ್ಲಿ ಬಂದು ಕಳ್ಳತನ ಮಾಡುವ ಭಿಕ್ಷುಕರ ಗ್ಯಾಂಗ್, ಭಿಕ್ಷಕರನ್ನು ಪುನರ್ವಸತಿ ಕೇಂದ್ರಕ್ಕೆ ಶಿಫ್ಟ್ ಮಾಡಲು ಮುಂದಾದ ಕಮಲ್ ಪಂತ್
ಭಿಕ್ಷಕರನ್ನು ಪುನರ್ವಸತಿ ಕೇಂದ್ರಕ್ಕೆ ಶಿಫ್ಟ್ ಮಾಡ್ತೇವೆ. ಲಾಕ್‌ಡೌನ್ ಹಿನ್ನೆಲೆ ಶಿಫ್ಟ್ ಮಾಡುವುದಕ್ಕೆ ಆಗಿರಲಿಲ್ಲ. ಈಗ ಅನ್‌ಲಾಕ್ ಹಿನ್ನೆಲೆ ಭಿಕ್ಷುಕರನ್ನು ಶಿಫ್ಟ್ ಮಾಡ್ತೇವೆ. ಎಲ್ಲ ಪೊಲೀಸರು ಕರ್ತವ್ಯಕ್ಕೆ ಹಾಜರಾದ ಬಳಿಕ ಈ ಕಾರ್ಯ ಆರಂಭವಾಗುತ್ತೆ ಎಂದ ಕಮಲ್ ಪಂತ್.
ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಬಂದು ಭಿಕ್ಷುಕರು ಕಳ್ಳತನ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಲಾಕ್ ಡೌನ್ ಸಡಿಲಿಕೆ ಬೆನ್ನಲ್ಲೆ ಗ್ರಾಹಕರ ಸೋಗಿನಲ್ಲಿ ಬಂದು ಕೃತ್ಯವೆಸಗುತ್ತಿದ್ದಾರೆ. ನಗರದಲ್ಲಿ ಐವರ ಟ್ರೈನಿ ಗ್ಯಾಂಗ್ ಕಳ್ಳತನ ಮಾಡುತ್ತಿದೆ. ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಭಿಕ್ಷಕರನ್ನು ಪುನರ್ವಸತಿ ಕೇಂದ್ರಕ್ಕೆ ಶಿಫ್ಟ್ ಮಾಡ್ತೇವೆ. ಲಾಕ್‌ಡೌನ್ ಹಿನ್ನೆಲೆ ಶಿಫ್ಟ್ ಮಾಡುವುದಕ್ಕೆ ಆಗಿರಲಿಲ್ಲ. ಈಗ ಅನ್‌ಲಾಕ್ ಹಿನ್ನೆಲೆ ಭಿಕ್ಷುಕರನ್ನು ಶಿಫ್ಟ್ ಮಾಡ್ತೇವೆ. ಎಲ್ಲ ಪೊಲೀಸರು ಕರ್ತವ್ಯಕ್ಕೆ ಹಾಜರಾದ ಬಳಿಕ ಈ ಕಾರ್ಯ ಆರಂಭವಾಗುತ್ತೆ ಎಂದರು. ಐದು ಜನರ ವೆಲ್ ಟ್ರೈನ್ಡ್ ಗ್ಯಾಂಗ್ನಿಂದ ಕೃತ್ಯ ನಡೆದಿದೆ. ಇದೇ ಜುಲೈ 21ಕ್ಕೆ ಯಶವಂತಪುರ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ನಡೆದಿತ್ತು. ಮತ್ತಿಕೆರೆಯ ನ್ಯೂ ಸ್ಮಿತಾ ಡಿಪಾರ್ಟ್ಮೆಂಟಲ್ ಸ್ಟೋರ್ನಲ್ಲಿ ಕ್ಯಾಶಿಯರ್ ಗಮನ ಬೇರೆಡೆ ಸೆಳೆದು ಹಣ ಎಗರಿಸಿದ್ದರು. ಗ್ರಾಹಕರ ಸೋಗಿನಲ್ಲಿ ಬಂದು ಭಿಕ್ಷುಕರು ಕಳ್ಳತನ ಮಾಡಿದ್ದರು.
ಖರೀದಿ ನೆಪದಲ್ಲಿ ಮೂರು ಜನ ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸ್ಟೋರ್ಗೆ ಬಂದಿದ್ದರು. ಜಸ್ಟ್ 16 ಸೆಕೆಂಡ್ನಲ್ಲಿ ಲಾಕರ್ನಲ್ಲಿದ್ದ ಕಂತೆ-ಕಂತೆ ಹಣ ಕದ್ದು ಬ್ಯಾಗ್ನಲ್ಲಿ ಹಾಕಿಕೊಂಡು ಪರಾರಿಯಾಗಿದ್ದರು. ಚಾಲಾಕಿ ಗ್ಯಾಂಗ್ನ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆದ್ರೆ ಈ ಬಗ್ಗೆ ನ್ಯೂ ಸ್ಮಿತಾ ಡಿಪಾರ್ಟ್ಮೆಂಟಲ್ ಸ್ಟೋರ್ ಸಿಬ್ಬಂದಿ ದೂರು ನೀಡಿರಲಿಲ್ಲ.
ಇದನ್ನೂ ಓದಿ: ದಲಿತ ಮುಖ್ಯಮಂತ್ರಿ ಬಗ್ಗೆ ನಿರ್ಧರಿಸುವುದು ನಾನಲ್ಲ, ಹೈಕಮಾಂಡ್: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ