ಬೊಮ್ಮಸಂದ್ರ ಟು ಹೊಸೂರುವೆರೆಗೆ ಮೆಟ್ರೋ; ಕನ್ನಡ ಪರ ಹೋರಾಟಗಾರರ ವಿರೋಧ, ಏಕೆ?

ಬೆಂಗಳೂರು ಮೆಟ್ರೋವನ್ನು ತಮಿಳುನಾಡಿನ ಕೈಗಾರಿಕಾ ಪಟ್ಟಣವಾದ ಹೊಸೂರ್‌ಗೆ ಸಂಪರ್ಕಿಸುವ ಪ್ರಸ್ತಾಪವು ಕರ್ನಾಟಕದಲ್ಲಿ ವಿವಾದವನ್ನು ಹುಟ್ಟುಹಾಕಿದೆ. ಈ ಮೆಟ್ರೋ ಯೋಜನೆ ಶುರುವಾದರೆ ತಮಿಳುನಾಡಿನ ಜನರು ಹೆಚ್ಚು ವಲಸೆಗೆ ಬರುವ ಸಾಧ್ಯತೆ ಇದೆ ಎಂದು ಕನ್ನಡ ಪರ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ.

ಬೊಮ್ಮಸಂದ್ರ ಟು ಹೊಸೂರುವೆರೆಗೆ ಮೆಟ್ರೋ; ಕನ್ನಡ ಪರ ಹೋರಾಟಗಾರರ ವಿರೋಧ, ಏಕೆ?
ನಮ್ಮ ಮೆಟ್ರೋ
Follow us
ಆಯೇಷಾ ಬಾನು
|

Updated on: Sep 12, 2024 | 1:34 PM

ಬೆಂಗಳೂರು, ಸೆ.12: ನಗರದ ಜನರ ಜೀವನಾಡಿ ಸಾರಿಗೆಯಾಗಿರುವ ನಮ್ಮ ಮೆಟ್ರೋ (Namma Metro) ದಿನದಿಂದ ದಿನಕ್ಕೇ ವಿಸ್ತರಣೆ ಆಗುತ್ತಲೇ ಇದೆ. ಇದೀಗ ಬೆಂಗಳೂರಿನಿಂದ ಹೊಸೂರುವೆರೆಗೆ ನಮ್ಮ ಮೆಟ್ರೋ ವಿಸ್ತರಣೆ ಚರ್ಚೆ ಜೋರಾಗಿದ್ದು ವ್ಯಾಪಕ ವಿರೋಧಗಳು ವ್ಯಕ್ತವಾಗುತ್ತಿವೆ. ಚೆನ್ನೈ ಮೆಟ್ರೋ ರೈಲು ಲಿಮಿಟೆಡ್ ಕರ್ನಾಟಕದ ಬೊಮ್ಮಸಂದ್ರದಿಂದ ತಮಿಳುನಾಡಿನ ಹೊಸೂರಿನ ವರೆಗೆ ಮೆಟ್ರೋ ಸಂಪರ್ಕ ಬೆಳೆಸುವ ಯೋಜನೆಯ ಕಾರ್ಯಸಾಧ್ಯತೆಯ ವರದಿಯನ್ನು ರಾಜ್ಯದ (Karnataka Government)ಮುಂದಿಟ್ಟಿದೆ. ಸದ್ಯ ಈ ಯೋಜನೆಗೆ ಹಲವು ಕನ್ನಡ ಪರ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಮೆಟ್ರೋವನ್ನು ತಮಿಳುನಾಡಿನ ಕೈಗಾರಿಕಾ ಪಟ್ಟಣವಾದ ಹೊಸೂರ್‌ಗೆ ಸಂಪರ್ಕಿಸುವ ಪ್ರಸ್ತಾಪವು ಕರ್ನಾಟಕದಲ್ಲಿ ವಿವಾದವನ್ನು ಹುಟ್ಟುಹಾಕಿದೆ. ಬೆಂಗಳೂರಿನಿಂದ ಹೊಸೂರಿಗೆ ಮೆಟ್ರೋ ಸಂಪರ್ಕವಾದರೆ ನೆರೆಯ ರಾಜ್ಯದಿಂದ ಬೆಂಗಳೂರಿಗೆ ಹೆಚ್ಚು ಸಂಖ್ಯೆಯಲ್ಲಿ ಜನರು ವಲಸೆ ಬರುವ ಸಾಧ್ಯತೆ ಇದೆ ಎಂದು ಕನ್ನಡ ಪರ ಹೋರಾಟಗಾರರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಚೆನ್ನೈ ಮೆಟ್ರೋ ರೈಲು ಲಿಮಿಟೆಡ್ ಕರ್ನಾಟಕದ ಬೊಮ್ಮಸಂದ್ರವನ್ನು ತಮಿಳುನಾಡಿನ ಹೊಸೂರಿಗೆ ಸಂಪರ್ಕಿಸುವ ಕಾರ್ಯಸಾಧ್ಯತೆಯ ವರದಿಯನ್ನು ಮುಂದಿಟ್ಟಿದೆ. ಇದು ಜಾರಿಯಾದರೆ ಇದು ದಕ್ಷಿಣ ಭಾರತದ ಮೊದಲ ಅಂತರರಾಜ್ಯ ಮೆಟ್ರೋ ಆಗಲಿದೆ.

ಈ ಯೋಜನೆ ತಮಿಳುನಾಡಿನಲ್ಲಿ ಸುಮಾರು 11 ಕಿಮೀ ಮತ್ತು ಕರ್ನಾಟಕದಲ್ಲಿ 12 ಕಿಮೀ ಸೇರಿದಂತೆ 23 ಕಿಲೋಮೀಟರ್ ಉದ್ದವನ್ನು ಒಳಗೊಂಡಿದೆ. ಈ ಮಾರ್ಗದಲ್ಲಿ 12 ಮೆಟ್ರೋ ನಿಲ್ದಾಣಗಳು ಮತ್ತು ಡಿಪೋವನ್ನು ನಿರ್ಮಿಸಲು ಯೋಚಿಸಲಾಗಿದೆ.

ಇದನ್ನೂ ಓದಿ: ಕ್ಯಾನ್ಸರ್​ನಿಂದ ಬಳಲುತ್ತಿದ್ದರೂ ನಮ್ಮ ಮೆಟ್ರೋಗೆ ಧ್ವನಿ ನೀಡಿದ್ದ ನಮ್ಮ ಅಪರ್ಣಾ; ಹೊಸ ಮಾರ್ಗಗಳಲ್ಲೂ ತೇಲಿಬರಲಿದೆ ಅವರ ಸಿರಿ ಕಂಠ!

“ನಾವು ನಮ್ಮ ಮೆಟ್ರೋವನ್ನು ತಮಿಳುನಾಡಿನ ಜೊತೆ ಜೋಡಿಸಬಾರದು. ಈಗಾಗಲೇ ತಮಿಳುನಾಡಿನಿಂದ ಲಕ್ಷಾಂತರ ಮಂದಿ ಇಲ್ಲಿಗೆ ಬಂದು ಬದುಕು ಕಟ್ಟಿಕೊಂಡಿದ್ದಾರೆ. ಅತ್ತಿಬೆಲೆ, ಇಲೆಕ್ಟ್ರಾನಿಕ್ ಸಿಟಿಯಂತಹ ಗಡಿ ಪ್ರದೇಶಗಳಲ್ಲಿ ತಮಿಳುನಾಡಿನವರು ಬಂದು ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವುದನ್ನು ಈಗಾಗಲೇ ನೋಡುತ್ತಿದ್ದೇವೆ. ನಾವು ಮೆಟ್ರೋವನ್ನು ತಮಿಳುನಾಡಿಗೆ ಜೋಡಿಸಿದರೆ, ಹೆಚ್ಚಿನ ಜನರು ವಲಸೆ ಹೋಗುವುದು ಸುಲಭವಾಗುತ್ತದೆ. ಇದು ಕನ್ನಡಿಗರ ಜೀವನವನ್ನು ಕಷ್ಟಕರವಾಗಿಸುತ್ತದೆ.

ಡಿ.ಕೆ.ಶಿವಕುಮಾರ್ ಮತ್ತು ಮುಖ್ಯಮಂತ್ರಿ  ಸಿದ್ದರಾಮಯ್ಯ ಬಳಿ ಹೇಳಿದ್ದೆವು. ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದರು. ಈ ಬಗ್ಗೆ ಶೀಘ್ರವೇ ಕ್ರಮಕೈಗೊಳ್ಳುತ್ತೇವೆ ಎಂದು ಕನ್ನಡ ಪರ ಸಂಘಟನೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ವಿರೋಧ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ