
ಬೆಂಗಳೂರು, ಸೆಪ್ಟೆಂಬರ್ 06: ಇಂದು ಬೆಂಗಳೂರು ಸೇರಿದಂತೆ ವಿವಿಧ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಸೂಚಿ ಸಾಧಾರಣ ಹಂತದಲ್ಲಿದ್ದು, ಒಟ್ಟಾರೆಯಾಗಿ ತೃಪ್ತಿಕರ ಸ್ಥಿತಿಯಲ್ಲಿದೆ. ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ವಾತಾವರಣದಲ್ಲಿನ ಧೂಳು ಹಾಗೂ ಮಾಲಿನ್ಯಕಾರಕ ಕಣಗಳು ಕಡಿಮೆಯಾಗಿ ಗಾಳಿಯ ಶುದ್ಧತೆ ಕಾಯ್ದುಕೊಂಡಿದೆ.
ಇಂದು ಬೆಂಗಳೂರಿನ ಸರಾಸರಿ AQI ಮಟ್ಟ 75ರಷ್ಟಿದ್ದು, ಇದು ಸಾಧಾರಣ ವಿಭಾಗಕ್ಕೆ ಸೇರುತ್ತದೆ. ನಗರದ ಪ್ರಮುಖ ಮಾಲಿನ್ಯಕಾರಕವಾಗಿ ಸೂಕ್ಷ್ಮ ಧೂಳಿನ ಕಣಗಳು ದಾಖಲಾಗಿದೆ.
ಬೆಂಗಳೂರಿನ ಗಾಳಿಯ ಗುಣಮಟ್ಟವು ಉತ್ತಮವಾಗಿದ್ದರೂ, ಉಸಿರಾಟದ ತೊಂದರೆ ಅಥವಾ ಆಸ್ತಮಾ ಇರುವ ಹಿರಿಯರು ಮತ್ತು ಮಕ್ಕಳು ಬೆಳಗಿನ ಜಾವ ಅತಿಯಾದ ಹೊರಾಂಗಣ ಚಟುವಟಿಕೆಗಳ ವೇಳೆ ಕೊಂಚ ಮುನ್ನೆಚ್ಚರಿಕೆ ವಹಿಸುವುದು ಒಳಿತು.
ಬೆಂಗಳೂರು ಮಾತ್ರವಲ್ಲದೆ ಕರ್ನಾಟಕದ ಇತರ ನಗರಗಳಲ್ಲಿಯೂ ವಾಯು ಗುಣಮಟ್ಟವು ಬಹುತೇಕ ‘ಉತ್ತಮ’ದಿಂದ ‘ಸಾಧಾರಣ’ ಹಂತದಲ್ಲಿದೆ.
ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಸಾಧಾರಣ ಮಳೆಯಾಗುತ್ತಿರುವುದರಿಂದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ವಾಯು ಗುಣಮಟ್ಟ ಅತ್ಯಂತ ಶ್ರೇಷ್ಠ ಮಟ್ಟದಲ್ಲಿದೆ. ಕೈಗಾರಿಕಾ ಪ್ರದೇಶಗಳಾದ ಪೀಣ್ಯ ಮತ್ತು ಹುಬ್ಬಳ್ಳಿಯಲ್ಲಿ ಸಾರಿಗೆ ಸಂಚಾರದಿಂದಾಗಿ ಮಾಲಿನ್ಯದ ಪ್ರಮಾಣ ತುಸು ಹೆಚ್ಚಿದ್ದರೂ ಅಪಾಯಕಾರಿ ಮಟ್ಟ ದಾಟಿಲ್ಲ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ