
ಬೆಂಗಳೂರು, ಅಕ್ಟೋಬರ್ 13: ರಾಜ್ಯದಲ್ಲಿ ಹವಾಮಾನ ಬದಲಾವಣೆ ಹಾಗೂ ಮಳೆಯ ಪ್ರಭಾವದಿಂದಾಗಿ ವಾಯು ಗುಣಮಟ್ಟ ಸೂಚ್ಯಂಕದಲ್ಲಿ (AQI) ಏರಿಳಿತ ಕಂಡುಬರುತ್ತಿದೆ. ಅಕ್ಟೋಬರ್ 13ರಂದು ರಾಜಧಾನಿ ಬೆಂಗಳೂರು ಹಾಗೂ ಪ್ರಮುಖ ನಗರಗಳಲ್ಲಿ ಗಾಳಿಯ ಗುಣಮಟ್ಟವು ಸಾಧಾರಣ ಹಾಗೂ ಸೂಕ್ಷ್ಮ ವ್ಯಕ್ತಿಗಳಿಗೆ ಸ್ವಲ್ಪ ಹಾನಿಕಾರಕ ಹಂತದಲ್ಲಿದೆ. ಸಾರ್ವಜನಿಕರು ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವಂತೆ ತಜ್ಞರು ಸೂಚಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ವಾಯು ಗುಣಮಟ್ಟ ಸೂಚ್ಯಂಕವು (AQI) ಸರಿಸುಮಾರು 119 ರಷ್ಟಿದ್ದು, ಇದು ‘ಕಳಪೆ’ ಅಥವಾ ಸೂಕ್ಷ್ಮ ವೃಂದದವರಿಗೆ ಅನಾರೋಗ್ಯಕರ ವರ್ಗಕ್ಕೆ ಸೇರುತ್ತದೆ. ನಗರದಲ್ಲಿ ಪಿ.ಎಂ 2.5 (PM2.5) ಮತ್ತು ಪಿ.ಎಂ 10 (PM10) ಧೂಳಿನ ಕಣಗಳ ಪ್ರಮಾಣ ಹೆಚ್ಚಾಗಿರುವುದು ಕಂಡುಬಂದಿದೆ. ಆಸ್ತಮಾ ರೋಗಿಗಳು ಮತ್ತು ಉಸಿರಾಟದ ಸಮಸ್ಯೆ ಇರುವವರು ಅನಾವಶ್ಯಕವಾಗಿ ಹೊರಗಡೆ ಓಡಾಡುವುದನ್ನು ಕಡಿಮೆ ಮಾಡಲು ಮತ್ತು ಅಗತ್ಯವಿದ್ದರೆ ಮಾಸ್ಕ್ ಧರಿಸಲು ವೈದ್ಯರು ಸಲಹೆ ನೀಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ