ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಯಿಂದ 50ಕ್ಕೂ ಹೆಚ್ಚು ಹೆಸರು ಡಿಲೀಟ್?

|

Updated on: Dec 05, 2019 | 2:30 PM

ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಮತದಾರರ ಪಟ್ಟಿಯಿಂದ 50ಕ್ಕೂ ಹೆಚ್ಚು ಮತದಾರರ ಹೆಸರು ‌ಡಿಲೀಟ್ ಆಗಿದೆ ಎಂದು ಆರೋಪಿಸಲಾಗಿದೆ. ನಂದಿನಿ ಲೇಔಟ್ ಪಬ್ಲಿಕ್ ಸ್ಕೂಲ್ ‌ವ್ಯಾಪ್ತಿಯ‌ ಬೂತ್ ನಂಬರ್ 49, 50, 51, 52ರಲ್ಲಿನ ಮತದಾರರ ಹೆಸರು ನಾಪತ್ತೆಯಾಗಿದೆ. ಹಕ್ಕು ಚಲಾಯಿಸಲು ಬಂದ ಮತದಾರರು, ಉದ್ದೇಶಪೂರ್ವಕವಾಗಿಯೇ ಹೆಸರು ಡಿಲೀಟ್ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಕೀಯ ‌ಪ್ರೇರಿತವಾಗಿ ಡಿಲೀಟ್ ಮಾಡಿದ್ದಾರೆ. ಕಳೆದ 30 ವರ್ಷದಿಂದ ಮತದಾನ ಮಾಡ್ತಾ ಇದ್ದೀವಿ. ಈಗ ನಮ್ಮ ಹಕ್ಕು ಕಿತ್ತುಕೊಂಡಿದ್ದಾರೆ ಎಂದು ಅಸಮಾಧಾನ […]

ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಯಿಂದ 50ಕ್ಕೂ ಹೆಚ್ಚು ಹೆಸರು ಡಿಲೀಟ್?
Follow us on

ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಮತದಾರರ ಪಟ್ಟಿಯಿಂದ 50ಕ್ಕೂ ಹೆಚ್ಚು ಮತದಾರರ ಹೆಸರು ‌ಡಿಲೀಟ್ ಆಗಿದೆ ಎಂದು ಆರೋಪಿಸಲಾಗಿದೆ. ನಂದಿನಿ ಲೇಔಟ್ ಪಬ್ಲಿಕ್ ಸ್ಕೂಲ್ ‌ವ್ಯಾಪ್ತಿಯ‌ ಬೂತ್ ನಂಬರ್ 49, 50, 51, 52ರಲ್ಲಿನ ಮತದಾರರ ಹೆಸರು ನಾಪತ್ತೆಯಾಗಿದೆ.

ಹಕ್ಕು ಚಲಾಯಿಸಲು ಬಂದ ಮತದಾರರು, ಉದ್ದೇಶಪೂರ್ವಕವಾಗಿಯೇ ಹೆಸರು ಡಿಲೀಟ್ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಕೀಯ ‌ಪ್ರೇರಿತವಾಗಿ ಡಿಲೀಟ್ ಮಾಡಿದ್ದಾರೆ. ಕಳೆದ 30 ವರ್ಷದಿಂದ ಮತದಾನ ಮಾಡ್ತಾ ಇದ್ದೀವಿ. ಈಗ ನಮ್ಮ ಹಕ್ಕು ಕಿತ್ತುಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Published On - 2:26 pm, Thu, 5 December 19