
ಬೆಂಗಳೂರು, ಸೆಪ್ಟೆಂಬರ್ 03: ಸೆಪ್ಟೆಂಬರ್ 21ರಿಂದ 3 ದಿನ ವಿಶೇಷ ಅಧಿವೇಶನಕ್ಕೆ ತೀರ್ಮಾನಿಸಲಾಗಿದೆ ಎಂದು ಡಿಸಿಎಂ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ, ಅನೇಕ ಜ್ವಲಂತ ಸಮಸ್ಯೆಗಳಿವೆ. ಹೀಗಿದ್ದರೂ ಸದನದಲ್ಲಿ ಚರ್ಚೆ ಮಾಡೋದಕ್ಕೆ ಅವಕಾಶಗಳು ಸಿಕ್ತಾ ಇಲ್ಲ. ಅದರಲ್ಲೂ ಈ ವರ್ಷ ಭೀಕರವಾದಂತಹ ಬರಗಾಲ ಇದೆ. 150 ವರ್ಷಗಳಲ್ಲಿ ಇಂತಹ ಬರಗಾಲ ಬಂದಿರಲಿಲ್ಲ, ಸೂಪರ್ ಎಲ್ ನಿನೋ ಬಂದಿದೆ. ಇದರ ಇಂಪ್ಯಾಕ್ಟ್ ರೈತನ ಜೀವನಕ್ಕೆ ಆಗೋದರ ಜೊತೆಗೆ ಇಡೀ ರಾಜ್ಯದ ಸಮುದಾಯಕ್ಕೆ ಅದರ ಎಕಾನಮಿ ಇರಬಹುದು, ಜನಗಳ ಆಹಾರ ಇರಬಹುದು, ಇವೆಲ್ಲದಕ್ಕೂ ಎಫೆಕ್ಟ್ ಆಗಿದೆ. ಇದರ ಬಗ್ಗೆ ಸುದೀರ್ಘ ಚರ್ಚೆ ಆಗಬೇಕೆಂದು ವಿಶೇಷ ಅಧಿವೇಶನ ಕರೆಯುತ್ತಿದ್ದೇವೆ ಎಂದವರು ತಿಳಿಸಿದ್ದಾರೆ.
ಇದರ ಜೊತೆಗೆ ಕಸ್ತೂರಿ ರಂಗನ್ ವರದಿ ಈಗ ಮತ್ತೆ ಚರ್ಚೆಗೆ ಬಂದಿದೆ. ಈಗಾಗಲೇ ನಾಲ್ಕೈದು ಬಾರಿ ಇದನ್ನ ರಿಜೆಕ್ಟ್ ಮಾಡಿದ್ದೇವೆ. ಆದರೂ ಕೂಡ ಇನ್ನು ಅದರ ಬಗ್ಗೆ ಚರ್ಚೆಗಳು ಬರ್ತಾ ಇದ್ದಾವೆ. ಹೀಗಾಗಿ ಈ ಬಗ್ಗೆಯೂ ಅಧಿವೇಶನದಲ್ಲಿ ಚರ್ಚೆ ಆಗಬೇಕಿದೆ ಎಂದವರು ತಿಳಿಸಿದ್ದಾರೆ. ಜೊತೆಗೆ ರಾಜ್ಯದಲ್ಲಿ ಹೊಸ ಜಾಗತಿಕ ಹೂಡಿಕೆ ಮತ್ತು ವಿದೇಶಾಂಗ ವ್ಯವಹಾರಗಳ ಇಲಾಖೆ ಸ್ಥಾಪನೆಗೆ ತೀರ್ಮಾನಿಸಲಾಗಿದೆ. ವಿದೇಶಾಂಗ ವ್ಯವಹಾರಗಳ ಹೆಸರು ಮುಂದೆ ಬದಲಾಗಬಹುದು. ಈ ಯೋಜನೆ ಮೂಲಕ NRI ಕಾರ್ಡ್ ವಿತರಣೆ ಮಾಡುವ ಜೊತೆಗೆ ಉದ್ಯೋಗ ಅವಕಾಶ ನೀಡಲು ಈ ಯೋಜನೆ ನೆರವು ನೀಡಲಿದೆ ಎಂದವರು ಹೇಳಿದ್ದಾರೆ.
ಅಲ್ಲದೆ, ಈ ಇಲಾಖೆಯ ಜೊತೆಗೆ ಸ್ಟೇಟ್ ಫೆಸಿಲಿಟೇಷನ್ ಕೌನ್ಸಿಲ್ ಕೂಡ ಮಾಡಲು ತೀರ್ಮಾನ ಮಾಡಿದ್ದೇವೆ. ಈ ಕೌನ್ಸಿಲ್ಗೆ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿರುತ್ತಾರೆ. ಉಪ ಮುಖ್ಯಮಂತ್ರಿಗಳು ಉಪಾಧ್ಯಕ್ಷರಾದರೆ, ಇಂಡಸ್ಟ್ರಿ , ಕೃಷಿ, ತೋಟಗಾರಿಕೆ, ಐಟಿ ಬಿಟಿ , ಅರ್ಬನ್ ಡೆವಲಪ್ಮೆಂಟ್, ಬೆಂಗಳೂರು ಡೆವಲಪ್ಮೆಂಟ್, ಹೈಯರ್ ಎಜುಕೇಶನ್, ಪವರ್, ಹೆಲ್ತ್, ಸ್ಪೋರ್ಟ್ಸ್ ಮತ್ತು ಮೆಡಿಕಲ್ ಎಜುಕೇಶನ್ ಮಂತ್ರಿಗಳೆಲ್ಲ ಸದಸ್ಯರುಗಳಾಗಿರುತ್ತಾರೆ. ಇದು ಸ್ಟೇಟ್ ಫೆಸಿಲಿಟೇಷನ್ ಕೌನ್ಸಿಲ್ ಆಗಿರಲಿದೆ ಎಂದು ಪರಮೇಶ್ವರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ವಿರೋಧ ತೀವ್ರಗೊಳ್ಳುತ್ತಿದ್ದತೆಯೇ ನಿಲುವು ಬದಲಿಸಿದ ಸರ್ಕಾರ, ಉದ್ಯಾನವನಗಳ(ಸಂರಕ್ಷಣೆ) ತಿದ್ದುಪಡಿ ವಿಧೇಯಕ ವಾಪಸ್
ಬಿಎಂಇ ಡ್ರೈವ್ ಪ್ರೋಗ್ರಾಮ್ ಅಡಿ ಕೇಂದ್ರ ಸರ್ಕಾರ ಒಟ್ಟು 4500 ಎಲೆಕ್ಟ್ರಿಕ್ ಬಸ್ಗಳನ್ನು ಮಂಜೂರು ಮಾಡಿದೆ. 6 ಕಂಪನಿಗಳಿಗೆ ಕೇಂದ್ರ ಸರ್ಕಾರದಿಂದ ಟೆಂಡರ್ ನೀಡಲಾಗಿದ್ದು, ವಿವಿಧ ಮಾದರಿಯ ಬಸ್ಗಳು ರಾಜ್ಯಕ್ಕೆ ಬರಲಿವೆ. ಅಲ್ಲದೆ ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಸ್ಥಾಪನೆಗೆ ಸಂಪುಟ ಅನುಮೋದನೆ ನೀಡಿದೆ ಎಂದು ಡಿಸಿಎಂ ತಿಳಿಸಿದ್ದಾರೆ. ಇವುಗಳ ಜೊತೆಗೆ ಬಹು ಚರ್ಚೆ ಮತ್ತು ವಿರೋಧಕ್ಕೆ ಕಾರಣವಾಗಿದ್ದ ಉದ್ಯಾನವನಗಳ(ಸಂರಕ್ಷಣೆ) ತಿದ್ದುಪಡಿ ವಿಧೇಯಕ ವಾಪಸ್ ಪಡೆಯಲು ಕೂಡ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:46 pm, Thu, 3 September 26