ಡಿಕೆ ಶಿವಕುಮಾರ್ ಹಾಗೂ ಪ್ರಧಾನಿ ಮೋದಿ
Image Credit source: Tv9 kannada
ಬೆಂಗಳೂರು, ನ.5: ಕರ್ನಾಟಕ ರಾಜ್ಯೋತ್ಸವದ ಶುಭಾಶಯ ಕೋರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬರೆದಿದ್ದ ಪತ್ರಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸುದೀರ್ಘ ಪ್ರತ್ಯುತ್ತರ ನೀಡಿದ್ದು, ಕೇಂದ್ರ ಸರ್ಕಾರದ ಬೆಂಬಲ ಹಾಗೂ ತುರ್ತು ಮಧ್ಯಪ್ರವೇಶ ಕೋರಿ ಮಹತ್ವದ ಪತ್ರ ಬರೆದಿದ್ದಾರೆ. ಈ ಕುರಿತು ತಮ್ಮ ಅಧಿಕೃತ ‘X’ (ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಎಂ, ರಾಜ್ಯದ ಹಿತಾಸಕ್ತಿ ಕಾಯಲು ಮತ್ತು ಸರ್ವತೋಮುಖ ಅಭಿವೃದ್ಧಿಗೆ ಕೇಂದ್ರದ ಸಹಕಾರ ಅಗತ್ಯ ಎಂದು ಪ್ರತಿಪಾದಿಸಿದ್ದಾರೆ.
ಬೆಳೆ ಹಾನಿ, ಕುಡಿಯುವ ನೀರಿನ ಅಭಾವ, ನೀರಾವರಿ ಯೋಜನೆಗಳ ವಿಳಂಬ ಹಾಗೂ ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಚರ್ಚಿಸಲು ರಾಜ್ಯದ ಸರ್ವಪಕ್ಷ ನಿಯೋಗಕ್ಕೆ (All-Party Delegation) ಪ್ರಧಾನಿಯವರ ಭೇಟಿಗೆ ಸಮಯ ನೀಡುವಂತೆ ಸಿಎಂ ವಿನಂತಿಸಿದ್ದಾರೆ. ಇದೀಗ ಈ ಪತ್ರ ಸಾಮಾಜಿಕ ಜಾಲತಾಣ ಹಾಗೂ ರಾಜಕೀಯದಲ್ಲಿ ಭಾರೀ ಚರ್ಚೆಗೆ ಪಾತ್ರವಾಗಿದೆ. ಇನ್ನು ಮುಖ್ಯಮಂತ್ರಿ ತಮ್ಮ ಪೋಸ್ಟ್ನಲ್ಲಿ ಹಂಚಿಕೊಂಡಿರುವ ಪತ್ರದಲ್ಲಿ ಏನಿದೆ ಎಂಬುದು ಇಲ್ಲಿದೆ ನೋಡಿ.
Loading...
{{{html}}}
ಇಲ್ಲಿದೆ ನೋಡಿ ಎಕ್ಸ್ ಪೋಸ್ಟ್:
ನೀರಾವರಿ ಯೋಜನೆಗಳು ಹಾಗೂ ಬರ ಪರಿಹಾರದ ಬೇಡಿಕೆ:
- ಮೇಕೆದಾಟು, ಕಳಸಾ-ಬಂಡೂರಿ, ಮೇಲ್ದಂಡೆ ಭದ್ರಾ , ಮೇಲ್ದಂಡೆ ಕೃಷ್ಣಾ ಮತ್ತು ಎತ್ತಿನಹೊಳೆ ಯೋಜನೆಗಳಿಗೆ ಬಾಕಿ ಇರುವ ಕೇಂದ್ರದ ಅನುಮೋದನೆಗಳನ್ನು ತಕ್ಷಣವೇ ನೀಡುವಂತೆ ಒತ್ತಾಯಿಸಿದ್ದಾರೆ.
- 2026ರ ಮುಂಗಾರಿನಲ್ಲಿ ಶೇ. 35 ರಷ್ಟು ಮಳೆ ಕೊರತೆಯಾಗಿದ್ದು, ರಾಜ್ಯದ 240 ತಾಲೂಕುಗಳ ಪೈಕಿ 226 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ.
- ಸಂಕಷ್ಟದಲ್ಲಿರುವ ರೈತರಿಗೆ ರಾಜ್ಯ ಸರ್ಕಾರವೇ ತನ್ನ ಸ್ವಂತ ನಿಧಿಯಿಂದ ಮೊದಲ ಕಂತಿನಲ್ಲಿ ₹2,500 ನೀಡಿದ್ದು, ಕೇಂದ್ರ ಸರ್ಕಾರವು ಮೆಮೊರಾಂಡಂ ಆಧಾರದಲ್ಲಿ ಮಧ್ಯಂತರ ಬರ ಪರಿಹಾರ ನಿಧಿಯನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಕೋರಿದ್ದಾರೆ.
- ಕೆಆರ್‌ಎಸ್ ಜಲಾಶಯದಲ್ಲಿ ಕೇವಲ 22 ಟಿಎಂಸಿ (ಶೇ. 49) ನೀರಿದ್ದು, ರಾಜ್ಯದ 861 ಹಳ್ಳಿಗಳಿಗೆ ಟ್ಯಾಂಕರ್ ಹಾಗೂ ಬೋರ್‌ವೆಲ್ ಮೂಲಕ ನೀರು ಪೂರೈಸಲಾಗುತ್ತಿದೆ.
- ಮುಂದಿನ ದಿನಗಳಲ್ಲಿ 2,300ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಅಭಾವ ತಲೆದೋರುವ ಆತಂಕವಿದೆ.
ಕಬ್ಬು ಬೆಳೆಗಾರರ ಬೇಡಿಕೆ ಹಾಗೂ ಎಥನಾಲ್ ನೀತಿ ಪುನರ್ವಿಮರ್ಶೆ
ಬೆಳಗಾವಿಯ ಸುವರ್ಣಸೌಧದಲ್ಲಿ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ನಡೆಸಿದ ಸಭೆಯ ಆಧಾರದ ಮೇಲೆ ಪ್ರಧಾನಿಗಳಿಗೆ ಪ್ರಮುಖ ಬೇಡಿಕೆಗಳನ್ನು ಸಲ್ಲಿಸಲಾಗಿದೆ.
- ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಕೆಜಿಗೆ ₹31 ರಿಂದ ಪರಿಷ್ಕರಿಸಬೇಕು.
- ಎಥನಾಲ್ ದರಗಳನ್ನು ಪರಿಷ್ಕರಿಸಿ, ಕಬ್ಬು ಆಧಾರಿತ ಎಥನಾಲ್ ಉತ್ಪಾದನೆಗೆ ಸೂಕ್ತ ಪ್ರೋತ್ಸಾಹ ನೀಡಬೇಕು.
- ರಾಷ್ಟ್ರೀಯ ರೈತ ಆಯೋಗದ ಶಿಫಾರಸಿನಂತೆ C2 + 50% ಸೂತ್ರದಡಿ ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸಬೇಕು.
ಬೆಂಗಳೂರಿಗೆ ಎಐ ಯುನಿವರ್ಸಿಟಿ ಹಾಗೂ ರಾಯಚೂರಿಗೆ ಏಮ್ಸ್
- ಬೆಂಗಳೂರಿನಲ್ಲಿ ದೇಶದ (ಹಾಗೂ ವಿಶ್ವದ) ಮೊದಲ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವಿಶ್ವವಿದ್ಯಾಲಯ ಸ್ಥಾಪಿಸಲು ಕೇಂದ್ರ ಸರ್ಕಾರ ಸಹ-ಧನಸಹಾಯ ಹಾಗೂ ಪಾಲುದಾರಿಕೆ ನೀಡಬೇಕು.
- ಕಲ್ಯಾಣ ಕರ್ನಾಟಕ ಭಾಗದ ಆರೋಗ್ಯ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ ರಾಯಚೂರಿನಲ್ಲಿ ಏಮ್ಸ್ ಆಸ್ಪತ್ರೆ ಸ್ಥಾಪನೆಯ ಬೇಡಿಕೆಯನ್ನು ಸಿಎಂ ಪುನರುಚ್ಛರಿಸಿದ್ದಾರೆ.
- ರಾಜಧಾನಿ ಬೆಂಗಳೂರಿನ ಸಾರಿಗೆ ಹಾಗೂ ಮೂಲಸೌಕರ್ಯ ವಿಸ್ತರಣೆಗೆ ವಿಶೇಷ ಆರ್ಥಿಕ ಪ್ಯಾಕೇಜ್ ನೀಡುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಲೋಕೋಪಯೋಗಿ ಇಲಾಖೆಯಿಂದ 20,000 ಕೋಟಿ ರೂ. ವೆಚ್ಚದ ಕಾಮಗಾರಿಗೆ ಸಂಪುಟ ಅಸ್ತು: ಸನ್ನತಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕಕ್ಕೂ ಅನುಮೋದನೆ
ಡಿ.ವಿ.ಜಿ ಅವರ ‘ಮಂಕುತಿಮ್ಮನ ಕಗ್ಗ’ ಉಲ್ಲೇಖಿಸಿದ ಸಿಎಂ
ತಮ್ಮ ಪತ್ರವನ್ನು ಮುಕ್ತಾಯಗೊಳಿಸುತ್ತಾ ಸಿಎಂ ಡಿ.ಕೆ. ಶಿವಕುಮಾರ್ ಅವರು ಮಹಾಕವಿ ಡಿ.ವಿ. ಗುಂಡಪ್ಪ (DVG) ಅವರ ಪ್ರಸಿದ್ಧ ಕಗ್ಗವನ್ನು ಉಲ್ಲೇಖಿಸಿದ್ದಾರೆ. “ಹುಲ್ಲು ತಾಗುತೆ ಬೆಳೆದು, ಕಲ್ಲು ಮೇಲುರುಳುತೆಲಿ, ಎಲ್ಲರೊಳು ಒಂದಾಗು ಮಂಕುತಿಮ್ಮ.” “ಕರ್ನಾಟಕ ಮತ್ತು ಇಲ್ಲಿನ ಜನತೆ ಯಾವುದೇ ಕಠಿಣ ಸವಾಲುಗಳಿಗೂ ಒಗ್ಗಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಪ್ರತಿಯೊಂದು ಅಡೆತಡೆಯನ್ನೂ ಸುಧಾರಣೆಯ ಹಾದಿಯನ್ನಾಗಿ ಮಾಡಿಕೊಂಡು ಮುನ್ನಡೆಯುತ್ತಿದ್ದೇವೆ. ಸೌಹಾರ್ದಯುತ ಫೆಡರಲಿಸಂ (Cooperative Federalism) ಎಂದರೆ ಎಲ್ಲಾ ರಾಜ್ಯಗಳಿಗೂ ಸಮಾನ ಅಭಿವೃದ್ಧಿ ಹಾಗೂ ನ್ಯಾಯಯುತ ಬೆಂಬಲ ಸಿಗುವುದಾಗಿದೆ. ಕೇಂದ್ರ ಸರ್ಕಾರವು ನಮ್ಮ ಅರ್ಹ ಹಕ್ಕುಗಳನ್ನು ಈಡೇರಿಸಲಿದೆ ಎಂಬ ಭರವಸೆ ಇದೆ,” ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ