ಮೆರವಣಿಗೆಗಳಲ್ಲಿ ಆನೆಗಳನ್ನು ಬಳಸುವುದು ಸರಿಯೇ? ಹೈಕೋರ್ಟ್ ಆದೇಶದಲ್ಲಿ ಏನಿದೆ?
ಕರ್ನಾಟಕದಲ್ಲಿ ಖಾಸಗಿ ಕಾರ್ಯಕ್ರಮಗಳು ಮತ್ತು ಮೆರವಣಿಗೆಗಳಲ್ಲಿ ಆನೆಗಳ ಬಳಕೆಯು ವಿವಾದಕ್ಕೆ ಕಾರಣವಾಗಿದೆ. ಹೈಕೋರ್ಟ್ ಆನೆಗಳ ಬಳಕೆಯನ್ನು ನಿಷೇಧಿಸಿದ್ದರೂ, ಸರ್ಕಾರವು ಹೊಸ ಮಾರ್ಗಸೂಚಿಗಳ ಮೂಲಕ ಅನುಮತಿ ನೀಡಿದೆ. ಪ್ರಾಣಿ ಹಕ್ಕುಗಳ ಸಂಘಗಳು ಇದನ್ನು ಪ್ರಬಲವಾಗಿ ವಿರೋಧಿಸುತ್ತಿವೆ, ಇದು ಪ್ರಾಣಿ ಹಿಂಸೆ ಮತ್ತು ಸಾರ್ವಜನಿಕ ಸುರಕ್ಷತೆಗೆ ಅಪಾಯಕಾರಿ ಎಂದು ವಾದಿಸುತ್ತಿವೆ. ಈ ಕುರಿತು ಕಾನೂನು ಹೋರಾಟ ನಡೆಸಲು ಸಿದ್ಧತೆ ನಡೆಯುತ್ತಿದೆ.

ಬೆಂಗಳೂರು, ಜ.23: ರಾಜ್ಯದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಅಥವಾ ಮೆರವಣಿಗೆಗಳಲ್ಲಿ ಆನೆಗಳನ್ನು (Karnataka Elephant Use Row) ಬಳಸುವುದು ಎಷ್ಟು ಸರಿ ಎಂಬ ಪ್ರಶ್ನೆಯೊಂದು ಇದೀಗ ಎದ್ದಿದೆ. ಖಾಸಗಿ ಕಾರ್ಯಕ್ರಮಗಳ ಮೆರವಣಿಗೆಗೆ ಆನೆಗಳನ್ನು ಬಳಸಲು ಸರ್ಕಾರ ಅನುಮತಿ ನೀಡುವುದು ಸರಿಯೇ ಎಂದು ಬೆಂಗಳೂರು ನಗರ ಜಿಲ್ಲಾ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಸಂಘದ ಸದಸ್ಯ ಅರುಣ್ ಪ್ರಸಾದ್ ಕೇಳಿದ್ದಾರೆ. ಈ ಬಗ್ಗೆ ತುಮಕೂರು ಜಿಲ್ಲೆಯ ತಿಪಟೂರಿನ ನೊಣವಿನಕೆರೆಯಲ್ಲಿರುವ ಮಠದ ಟ್ರಸ್ಟ್‌ಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ವನ್ಯಜೀವಿಗಳ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ದೇವಾಲಯದ ಉದ್ಘಾಟನೆಗೆ ಮಠಕ್ಕೆ ಸೇರಿದ ಹೆಣ್ಣು ಆನೆಯನ್ನು ಬಳಸಲು ಅನುಮತಿ ನೀಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಕೇಳಿದ್ದಾರೆ. ಸೆಪ್ಟೆಂಬರ್ 11, 2017 ರ ಸರ್ಕಾರಿ ಆದೇಶದ (FEE 248 FWL 2015) ನಿಯಮಗಳ ಅಡಿಯಲ್ಲಿ ಆನೆಯನ್ನು ಬಳಸಲು ಅನುಮತಿ ನೀಡುವ ಪತ್ರದಲ್ಲಿ ಏನಿದೆ? ಎಂಬುದರ ಬಗ್ಗೆ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಇದರಲ್ಲಿ ‘ಕರ್ನಾಟಕ ರಾಜ್ಯದಲ್ಲಿ ಖಾಸಗಿ ಒಡೆತನದ ಆನೆಗಳ ನಿರ್ವಹಣೆ ಮಾರ್ಗಸೂಚಿಯ ಬಗ್ಗೆ ತಿಳಿಸಲಾಗಿದೆ. ಕರ್ನಾಟಕ ಹೈಕೋರ್ಟ್‌ನ ಆದೇಶದ ನಂತರ ಈ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ನವೆಂಬರ್ 23, 2015 ರಂದು, ನ್ಯಾಯಾಲಯದ ವಿಭಾಗೀಯ ಪೀಠವು ಯಾವುದೇ ಖಾಸಗಿ ಕಾರ್ಯಕ್ರಮಗಳಲ್ಲಿ ಆನೆಗಳ ಬಳಸಬಾರದು ಎಂದು ಆದೇಶವನ್ನು ನೀಡಿತ್ತು. ಯಾವುದೇ ರೀತಿಯ ಭಿಕ್ಷಾಟನೆ, ಪ್ರದರ್ಶನ ಅಥವಾ ಮೆರವಣಿಗೆಯಲ್ಲಿ ಆನೆಗಳ ಬಳಕೆಯನ್ನು ನಿಷೇಧಿಸಲು ಮಾರ್ಗಸೂಚಿಗಳನ್ನು ರೂಪಿಸಲು ಅಧಿಕಾರಿಗಳಿಗೆ ಸೂಚಿಸಿದೆ. ಹಾಗೂ ಈ ಬಗ್ಗೆ ಸರ್ಕಾರದ ಉನ್ನತ ಅಧಿಕಾರಿಗಳು ಹಾಗೂ ಸಚಿವರ ಜತೆಗೆ ಸಮಾಲೋಚಿಸಿ ಎಂದು ಕೋರ್ಟ್ ಹೇಳಿದೆ.
ಇದನ್ನೂ ಓದಿ: ಮಂಗಳೂರು-ಕಾಸರಗೋಡು ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಿದ ಕರ್ನಾಟಕ-ಕೇರಳ ಸರ್ಕಾರ!
ಆದರೆ ಇದೀಗ ಈ ಸೂಚನೆಯನ್ನು ಸರ್ಕಾರ ಉಲ್ಲಂಘನೆ ಮಾಡಿದೆ ಎಂದು ಬೆಂಗಳೂರು ನಗರ ಜಿಲ್ಲಾ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಸಂಘದ ಸದಸ್ಯ ಅರುಣ್ ಪ್ರಸಾದ್ ಅವರು ಹೇಳಿದ್ದಾರೆ. ಖಾಸಗಿ ಆನೆಗಳನ್ನು ಮೆರವಣಿಗೆ ಮತ್ತು ಪ್ರದರ್ಶನಕ್ಕೆ ಅವಕಾಶ ನೀಡುವ ಮಾರ್ಗಸೂಚಿಗಳ ನ್ಯಾಯಾಲಯದ ಆದೇಶದ ಸಂಪೂರ್ಣ ಉಲ್ಲಂಘನೆಯಾಗಿದೆ. ಅಧಿಕಾರಿಗಳಿಗೆ ನಿಷೇಧ ಮತ್ತು ನಿಯಂತ್ರಣದ ನಡುವಿನ ವ್ಯತ್ಯಾಸ ತಿಳಿದಿದೆ. ಹಾಗಾಗಿ ಈ ಪದ್ಧತಿಯನ್ನು ಬದಲಾಯಿಸಿಕೊಳ್ಳದಿದ್ದರೆ, ಕೋರ್ಟ್ನ ಆದೇಶವನ್ನು ಪಾಲಿಸದಿದ್ದರೆ ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದು ಅರುಣ್ ಪ್ರಸಾದ್ ಹೇಳಿದ್ದಾರೆ. ಈ ಬಗ್ಗೆ ಪಿಸಿಸಿಎಫ್ ಪತ್ರ ಬರೆದಿದ್ದರು, ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ್ದಾರೆ.
ಪ್ರತಿ ವರ್ಷ ಮೆರವಣಿಗೆಗಳಲ್ಲಿ ಆನೆಗಳನ್ನು ಬಳಸಲು ಅವಕಾಶ ನೀಡಲಾಗುತ್ತಿದೆ. ಜನಸಂದಣಿ ಮತ್ತು ಮೆರವಣಿಗೆಗಳ ನಡುವೆ ಆನೆಗಳನ್ನು ತಂದರೆ ಅವುಗಳ ತೊಂದರೆ ಆಗುತ್ತದೆ. ಅದು ರೊಚ್ಚಿಗೇಲು ಸಾಧ್ಯತೆ ಕೂಡ ಇದೆ. ಇದರಿಂದ ಜನರ ಮೇಲೆ ದಾಳಿಯನ್ನು ಕೂಡ ಮಾಡಬಹುದು ಎಂದು ಕರುಣೆ ಅನ್‌ಲಿಮಿಟೆಡ್ ಪ್ಲಸ್ ಆಕ್ಷನ್ (ಸಿಯುಪಿಎ) ನ ಸುಪರ್ಣ ಗಂಗೂಲಿ ಹೇಳಿದ್ದಾರೆ. ಇದರ ಜತೆಗೆ ಅವುಗಳಿಗೆ ಮೆರೆವಣಿಗಳಲ್ಲಿ ಹೋಗಿ ಸುಸ್ತಾಗುತ್ತದೆ. ಈ ವಿಚಾರಗಳನ್ನು ಸರ್ಕಾರ ಅರಿತಕೊಳ್ಳಬೇಕು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:04 am, Fri, 23 January 26
