ಇನ್ಮುಂದೆ ವಾರ್ಷಿಕವಾಗಿ ಹೆಲಿಕಾಪ್ಟರ್, ವಿಮಾನ ಸೇವೆ ಗುತ್ತಿಗೆ ಪಡೆಯಲು ನಿರ್ಧರಿಸಿದ ರಾಜ್ಯ ಸರ್ಕಾರ
ಸರ್ಕಾರಿ ಕೆಲಸಗಳಿಗಾಗಿ ಹೆಲಿಕಾಪ್ಟರ್ ಹಾಗೂ ವಿಮಾನ ಸೇವೆ ಬಳಕೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಇಷ್ಟು ದಿನ ಸರ್ಕಾರಿ ಕೆಲಸಕ್ಕಾಗಿ ಹೆಲಿಕಾಪ್ಟರ್ ಅಥವಾ ವಿಮಾನಗಳನ್ನು ಗಂಟೆಗಳ ಆಧಾರದ ಮೇಲೆ ಗುತ್ತಿಗೆ ಪಡೆದುಕೊಳ್ಳಲಾಗುತ್ತಿತ್ತು. ಆದ್ರೆ, ಇದೀಗ ಗಂಟೆಗಳ ಅವಧಿ ಬದಲಾಗಿ ವಾರ್ಷಿಕವಾಗಿ ಗುತ್ತಿಗೆ ಪಡೆಯಲು ತೀರ್ಮಾನವಾಗಿದೆ.

ಬೆಂಗಳೂರು, (ಸೆಪ್ಟೆಂಬರ್ 01): ಸರ್ಕಾರಿ ಕೆಲಸಗಳಿಗೆ (Government Work) ಇನ್ಮುಂದೆ ವಾರ್ಷಿಕ ಗುತ್ತಿಗೆ ಆಧಾರದಲ್ಲಿ ಹೆಲಿಕಾಪ್ಟರ್, ವಿಮಾನ ಸೇವೆ (Helicopter/Flight Service) ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸರ್ಕಾರಿ ಕೆಲಸಗಳಿಗೆ ಹೆಲಿಕಾಪ್ಟರ್, ವಿಮಾನ ಗುತ್ತಿಗೆ ಪಡೆಯುವ ವಿಚಾರವಾಗಿ ಇಂದು ವಿಧಾನಸಭೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇಷ್ಟು ದಿನ ಗಂಟೆಗಳ ಅವಧಿಯಲ್ಲಿ ಹೆಲಿಕಾಪ್ಟರ್/ವಿಶೇಷ ವಿಮಾನ ಗುತ್ತಿಗೆ ಪಡೆಯಲಾಗುತ್ತಿತ್ತು. ಆದ್ರೆ, ಇನ್ಮುಂದೆ ಗಂಟೆಗಳ ಅವಧಿ ಬದಲಾಗಿ ವಾರ್ಷಿಕ ಗುತ್ತಿಗೆ ಆಧಾರದಲ್ಲಿ ಹೆಲಿಕಾಪ್ಟರ್ ಹಾಗೂ ವಿಮಾನ ಸೇವೆ ಪಡೆಯಲು ನಿರ್ಧಾರ ಮಾಡಲಾಗಿದೆ.
ಸರ್ಕಾರಿ ಕೆಲಸಗಳ ಸಂಬಂಧ ಓಡಾಡಲು ಇಷ್ಟು ದಿನ ಗಂಟೆಗಳ ಅವಧಿಯಲ್ಲಿ ಹೆಲಿಕಾಪ್ಟರ್ ಹಾಗೂ ವಿಶೇಷ ವಿಮಾನಗಳನ್ನು ಗುತ್ತಿಗೆ ಪಡೆಯಲಾಗುತ್ತಿತ್ತು. ಆದ್ರೆ, ಗಂಟೆ ಆಧಾರದಲ್ಲಿ ಸರಕಾರದ ಬೊಕ್ಕಸದಿಂದ 28 ಕೋಟಿ ಖರ್ಚಾಗುತ್ತಿತ್ತು. ಮತ್ತೆ ಸಮಯಕ್ಕೆ ಸರಿಯಾಗಿ ಹೆಲಿಕಾಪ್ಟರ್ ಸೇವೆ ಲಭ್ಯವಿರುತ್ತಿರಲಿಲ್ಲ. ಇದರಿಂದ ಗಂಟೆಗಳ ಅವಧಿ ಗುತ್ತಿಗೆಯನ್ನು ಕೈ ಬಿಟ್ಟು ವಾರ್ಷಿಕವಾಗಿ ಗುತ್ತಿಗೆ ಪಡೆಯಲು ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನವಾಗಿದೆ. ವಾರ್ಷಿಕ ಗುತ್ತಿಗೆಯಿಂದ ಸಮಯಕ್ಕೆ ಸರಿಯಾಗಿ ಹೆಲಿಕಾಪ್ಟರ್ ಹಾಗೂ ವಿಮಾನ ಸೇವೆ ಸಿಗಲಿದೆ ಎನ್ನುವುದಕ್ಕಾಗಿಈ ನಿರ್ಧಾರ ಕೈಗೊಳ್ಳಲಾಗಿದ್ದು, ಇದಕ್ಕಾಗಿ ಸೂಕ್ತ ತರಬೇತಿ ಹೊಂದಿರುವ ಸಂಸ್ಥೆಗಳಿಗೆ ಟೆಂಡರ್ ನಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ಚಿಕ್ಕಜಾಲದಲ್ಲಿ ಮೆಟ್ರೋ ಸ್ಟೇಷನ್ ಬಯಸಿದವರಿಗೆ ಶಾಕ್ ಕೊಟ್ಟ ಹೈಕೋರ್ಟ್, ಸ್ಥಳೀಯರ ಆಸೆ ನಿರಾಸೆ
ಇನ್ನು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಸಭೆ ನಡೆದ ಈ ಸಭೆಯಲ್ಲಿ ಸಚಿವರಾದ ಕೆ.ಜೆ.ಜಾರ್ಜ್, ಭೈರತಿ ಸುರೇಶ್ ಸೇರಿದಂತೆ ಇತರೆ ಅಧಿಕಾರಿಗಳು ಭಾಗಿಯಾಗಿದ್ದರು.
ಇನ್ನು ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಹೆಲಿಕಾಪ್ಟರ್ ಮತ್ತು ಏರ್ ಕ್ರಾಫ್ಟ್ ಬಾಡಿಗೆ ಪಡೆಯೋ ಕುರಿತು ಬಹಳ ದಿನದಿಂದ ಪೆಂಡಿಂಗ್ ಇತ್ತು. ಸಿಎಂ ನಮಗೆ ಜವಾಬ್ದಾರಿ ನೀಡಿದ್ದರು. ಹೆಚ್ ಎ ಎಲ್ ಬಳಿಯೂ ಮಾತನಾಡಲು ಹೇಳಿದ್ದರು. ಯಾವ ರಾಜಕಾರಣಿ ಕೂಡ ಇಲ್ಲ. ಇಡೀ ದೇಶದಲ್ಲಿ ನೋಡಿಕೊಂಡು ಟೆಂಡರ್ ಕರೆಯುತ್ತೇವೆ ಎಂದು ಸ್ಪಷ್ಟಪಡಿಸಿದರು.
ದೊಡ್ಡ ದೊಡ್ಡ ಐಎಎಸ್ ಅಧಿಕಾರಿಗಳು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು ಸರ್ಕಾರಿ ಕೆಲಸಗಳ ನಿಮಿತ್ತ ಈ ಹೆಲಿಪಾಕ್ಟರ್ ಹಾಗೂ ವಿಮಾನ ಸೇವೆ ಪಡೆಯುತ್ತಾರೆ. ಇಷ್ಟು ದಿನ ಗಂಟೆಗೆ ಇಂತಿಷ್ಟು ಹಣ ಅಂತ ನೀಡಿ ವಿಮಾನ ಅಥವಾ ಹೆಲಿಕಾಪ್ಟರ್ ಬಳಕೆ ಮಾಡುತ್ತಿದ್ದರು. ಹೀಗಾಗಿ ಅದರ ಸಮಯದಲ್ಲೇ ಕೆಲಸ ಮುಗಿಸಿಕೊಳ್ಳಬೇಕಿತ್ತು.
ಇದರಿಂದ ಟೈಮ್ ಆಗುತ್ತೆ ಎಂದು ಸಿಎಂ, ಡಿಸಿಎಂ ಸೇರಿಂತೆ ಇತರರು ಸಭೆ ಸಮಾರಂಭವನ್ನು ತರಾತುರಿಯಲ್ಲಿ ಮುಸಿಕೊಂಡು ತೆರಳುತ್ತಿದ್ದರು. ಇನ್ನು ಕೆಲವೊಂದು ಸಲ ಕಾರ್ಯಮದ ಅರ್ಧದಲ್ಲೇ ಮೊಟುಕುಗೊಳಿಸಿ ಹೋಗಿರುವ ಉದಾಹರಣೆಗಳು ಸಹ ಇವೆ. ಈ ಎಲ್ಲಾ ಕಾರಣಗಳಿಂದ ರಾಜ್ಯ ಸರ್ಕಾರ ಈ ತೀರ್ಮಾನ ತೆಗೆದುಕೊಂಡಿದೆ.
Published On - 3:34 pm, Mon, 1 September 25



