ಬೆಂಗಳೂರು: ನಾಯಂಡಹಳ್ಳಿ ಫ್ಲೈಓವರ್​ ಮೇಲಿಂದ ಜಿಗಿದು ಕವಿಪ್ರನಿನಿ ಗುತ್ತಿಗೆ ನೌಕರ ಸಾವು

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ ಗುತ್ತಿಗೆ ನೌಕರನಾಗಿ ಕೆಲಸ‌ ಮಾಡುತ್ತಿದ್ದ, ಜ್ಞಾನಭಾರತಿ ನಿವಾಸಿಯಾಗಿದ್ದ 30 ವರ್ಷದ ನವೀನ್​ ನಾಯಂಡಹಳ್ಳಿ ಫ್ಲೈಓವರ್ ಮೇಲಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಂಗಳೂರು: ನಾಯಂಡಹಳ್ಳಿ ಫ್ಲೈಓವರ್​ ಮೇಲಿಂದ ಜಿಗಿದು ಕವಿಪ್ರನಿನಿ ಗುತ್ತಿಗೆ ನೌಕರ ಸಾವು
ಮೃತ ನವೀನ್​
Follow us
| Updated By: ವಿವೇಕ ಬಿರಾದಾರ

Updated on:Apr 12, 2024 | 10:54 AM

ಬೆಂಗಳೂರು, ಏಪ್ರಿಲ್​ 12: ನಗರದ ನಾಯಂಡಹಳ್ಳಿ ಫ್ಲೈಓವರ್ (Nayandahalli Flyover) ಮೇಲಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನವೀನ್ (30) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಮೃತ ನವೀನ್ ಜ್ಞಾನಭಾರತಿ ನಿವಾಸಿಯಾಗಿದ್ದು, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL)ದಲ್ಲಿ ಗುತ್ತಿಗೆ ನೌಕರನಾಗಿ ಕೆಲಸ‌ ಮಾಡುತ್ತಿದ್ದನು. ನವೀನ್​ ಇಂದು (ಏ.12) ಬೆಳಿಗ್ಗೆ 8:20ರ ಸುಮಾರಿಗೆ ಫ್ಲೈಓವರ್​ ಮೇಲೆ ಬೈಕ್​ ಪಾರ್ಕ್​ ಮಾಡಿ, ಏಕಾಏಕಿ ಕೆಳಗೆ ಜಿಗಿದಿದ್ದಾನೆ. ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬ್ಯಾಟರಾಯನಪುರ ಸಂಚಾರ ಪೊಲೀಸರು (Police) ಕೂಡಲೆ ನವೀನ್​ ಬಳಿ ಧಾವಿಸಿದ್ದಾರೆ. ಇನ್ನು ಸ್ಥಳಕ್ಕೆ ಬ್ಯಾಟರಾಯನಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನವೀನ್​ನಾಲ್ಕು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದನು.

ಲಾರಿ ಹರಿದು ರಸ್ತೆ ದಾಟುತ್ತಿದ್ದ ವ್ಯಕ್ತಿ ದುರ್ಮರಣ

ನೆಲಮಂಗಲ: ಲಾರಿ ಹರಿದು ರಸ್ತೆ ದಾಟುತ್ತಿದ್ದ ವ್ಯಕ್ತಿ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ. ದಾವಣಗೆರೆ ಮೂಲದ ರುದ್ರಮುನಿ (55) ಮೃತ ದುರ್ದೈವಿ. ನೆಲಮಂಗಲ ಸಂಚಾರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರುದ್ರಮುನಿ ಅವರು ಸಂಬಂಧಿಗಳನ್ನ ಭೇಟಿಯಾಗಿ ಊರಿಗೆ ಹೊರಟಿದ್ದ ವೇಳೆ ಅವಘಡ ಸಂಭವಿಸಿದೆ. ಅಪಘಾತದ ಬಳಿಕ ಚಾಲಕ ಸ್ಥಳದಲ್ಲೇ ಲಾರಿ ನಿಲ್ಲಿಸಿ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ನೆರೆ ಮನೆಯಲ್ಲೇ ಕಳ್ಳತನ, ಕದ್ದ ಹಣ ಮಲೈ ಮಹದೇಶ್ವರನ ಹುಂಡಿಗೆ !

ಹೆದ್ದಾರಿ ಬದಿಯ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ, ಚಾಲಕ ಪಾರು

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಬೈಪಾಸ್​ನಲ್ಲಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿದೆ.  ಅದೃಷ್ಟವಶಾತ್​ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕಾರು ಡಿಕ್ಕಿಯಾಗುತ್ತಿದ್ದಂತೆ ವೈಯರ್​ ತುಂಡಾಗಿ ಕೆಳಗೆ ಬಿದ್ದಿದೆ. ಆದರೆ ಕಾರಿಗೆ ವೈಯರ್​ ತಾಗಿಲ್ಲ. ಇದರಿಂದ ಚಾಲಕ ಪಾರಾಗಿದ್ದಾನೆ. ವಿಚಾರ ತಿಳಿದು ಸ್ಥಳಕ್ಕೆ ಬೆಸ್ಕಾಂ ಸಿಬ್ಬಂದಿ ಆಗಮಿಸಿ, ವೈಯರ್​ ಜೋಡಿಸಿ, ಹೋಗಿದ್ದಾರೆ. ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:41 am, Fri, 12 April 24