ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ: ಕರ್ನಾಟಕದಲ್ಲಿ 2.8 ಲಕ್ಷ ಎಸ್‌ಐಆರ್ ವಿಚಾರಣೆಗಳು ಬಾಕಿ !

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಅಂತಿಮ ಘಟ್ಟ ತಲುಪಿದ್ದು, ರಾಜ್ಯಾದ್ಯಂತ 2.8 ಲಕ್ಷಕ್ಕೂ ಅಧಿಕ ಎಸ್​ಐಆರ್ ವಿಚಾರಣೆಗಳು ಬಾಕಿ ಇವೆ. ಇದರಲ್ಲಿ ಮೂರನೇ ಎರಡರಷ್ಟು ಪ್ರಕರಣಗಳು ಬೆಂಗಳೂರು ವಲಯದಲ್ಲೇ ಇವೆ. ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ.

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ: ಕರ್ನಾಟಕದಲ್ಲಿ 2.8 ಲಕ್ಷ ಎಸ್‌ಐಆರ್ ವಿಚಾರಣೆಗಳು ಬಾಕಿ !
ಸಾಂದರ್ಭಿಕ ಚಿತ್ರ
Image Credit source: PTI

Updated on: Oct 10, 2026 | 8:14 AM

ಮುಖ್ಯಾಂಶಗಳು

  • ಕರ್ನಾಟಕದಲ್ಲಿ ಮತದಾರರ ಪಟ್ಟಿಯ 2.8 ಲಕ್ಷ ಎಸ್​ಐಆರ್ ವಿಚಾರಣೆಗಳು ಬಾಕಿ.
  • ಬೆಂಗಳೂರು ನಗರ ಮತ್ತು ಬಿಬಿಎಂಪಿ ವಲಯಗಳಲ್ಲೇ ಹೆಚ್ಚಿನ ಬಾಕಿ ಪ್ರಕರಣಗಳು.
  • ಮತದಾರರ ಪಟ್ಟಿಯ ಅಂತಿಮ ಪರಿಷ್ಕೃತ ಪಟ್ಟಿ ಅಕ್ಟೋಬರ್ 27ರಂದು ಪ್ರಕಟಗೊಳ್ಳಲಿದೆ.

ಬೆಂಗಳೂರು, ಅಕ್ಟೋಬರ್ 10: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್​ಐಆರ್) ಪ್ರಕ್ರಿಯೆಯು ಅಂತಿಮ ಘಟ್ಟ ತಲುಪಿದ್ದು, ರಾಜ್ಯಾದ್ಯಂತ ಒಟ್ಟು 2.8 ಲಕ್ಷಕ್ಕೂ ಅಧಿಕ ವಿಚಾರಣೆಗಳು ಇನ್ನೂ ಬಾಕಿ ಉಳಿದಿವೆ. ವಿಶೇಷವೆಂದರೆ, ಇದರಲ್ಲಿ ಸುಮಾರು ಮೂರನೇ ಎರಡರಷ್ಟು (ಸುಮಾರು 1.8 ಲಕ್ಷ) ಪ್ರಕರಣಗಳು ಕೇವಲ ಬೆಂಗಳೂರು ನಗರ ಹಾಗೂ ಬಿಬಿಎಂಪಿ ವ್ಯಾಪ್ತಿಯ ಜಿಲ್ಲೆಗಳಿಗೆ ಸಂಬಂಧಿಸಿದ್ದಾಗಿವೆ. ಮುಖ್ಯ ಚುನಾವಣಾ ಅಧಿಕಾರಿಯವರ ವರದಿಯ ಪ್ರಕಾರ, ರಾಜ್ಯದಲ್ಲಿ ಒಟ್ಟು 43.8 ಲಕ್ಷ ನೋಟೀಸ್‌ಗಳನ್ನು ಸಿದ್ಧಪಡಿಸಲಾಗಿದ್ದು, ಈ ಪೈಕಿ ಶೇ 99.8ರಷ್ಟು ನೋಟೀಸ್‌ಗಳು ವಿತರಣೆಯಾಗಿವೆ. ಮತ್ತು ಈಗಾಗಲೇ ಶೇ. 93.5ರಷ್ಟು ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದೆ.

ಬೆಂಗಳೂರಿಗೇ ಅಗ್ರಸ್ಥಾನ

ಬೆಂಗಳೂರು ದಕ್ಷಿಣ ಬಿಬಿಎಂಪಿ ವಲಯವು ಅತಿ ಹೆಚ್ಚು ಅಂದರೆ 65,335 ಬಾಕಿ ವಿಚಾರಣೆಗಳನ್ನು ಹೊಂದಿದ್ದು ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು ನಗರ ಜಿಲ್ಲೆಯು 54,943 ಬಾಕಿ ಪ್ರಕರಣಗಳೊಂದಿಗೆ ನಂತರದ ಸ್ಥಾನದಲ್ಲಿದೆ. ಉಳಿದಂತೆ ಗುಲ್ಬರ್ಗ, ಬೀದರ್ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲೂ ಪರಿಶೀಲನೆ ಕಾರ್ಯಗಳು ಮುಕ್ತಾಯದ ಹಂತದಲ್ಲಿವೆ. ಮತದಾರರ ಪಟ್ಟಿಗೆ ಸಂಬಂಧಿಸಿದ ಹಕ್ಕು ಹಾಗೂ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲು ಅಕ್ಟೋಬರ್ 22 ಕೊನೆಯ ದಿನವಾಗಿದ್ದು, ಅಂತಿಮ ಮತದಾರರ ಪಟ್ಟಿಯು ಅಕ್ಟೋಬರ್ 27ರಂದು ಅಧಿಕೃತವಾಗಿ ಪ್ರಕಟಗೊಳ್ಳಲಿದೆ.

ಫಾರ್ಮ್ 8 ಮತ್ತು ಫಾರ್ಮ್ 6 ಅರ್ಜಿಗಳೇ ಹೆಚ್ಚು

ಜೂನ್ 16ರಿಂದ ಚುನಾವಣಾ ಆಯೋಗಕ್ಕೆ ಒಟ್ಟು 23 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ಇದರಲ್ಲಿ ಫಾರ್ಮ್ 8 ಮತ್ತು ಫಾರ್ಮ್ 6 ಅರ್ಜಿಗಳೇ ಹೆಚ್ಚಿವೆ. ಇದರ ಮಧ್ಯೆ, ಸಾಮೂಹಿಕವಾಗಿ ಫಾರ್ಮ್​ 7 ಅರ್ಜಿಗಳನ್ನು ಸಲ್ಲಿಕೆ ಮಾಡಿ ಮತದಾರರ ಹೆಸರುಗಳನ್ನು ಅಳಿಸಲು ಯತ್ನಿಸಿರುವ ಆರೋಪಗಳ ಕುರಿತು ತನಿಖೆ ಚುರುಕುಗೊಂಡಿದೆ. ಈ ಕುರಿತು ದಾಖಲಾಗಿರುವ ಎಫ್‌ಐಆರ್‌ಗಳಿಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದ್ದು, ಮೊದಲ ಬಾರಿ ಮತದಾರರಾಗುವ ಅರ್ಹ ಯುವ ಜನರನ್ನು ನೋಂದಾಯಿಸಲು ಚುನಾವಣಾ ಆಯೋಗವು ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Loading...
Unable to load recommendations.
Follow Us