
ಬೆಂಗಳೂರು, ಜೂನ್ 30: ಕರ್ನಾಟಕ ಸೇರಿದಂತೆ ದೇಶದ ಪ್ರಮುಖ ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಇಂದಿನಿಂದ ಅಧಿಕೃತವಾಗಿ ಆರಂಭವಾಗಿದೆ. ಜುಲೈ 29 ರವರೆಗೆ ನಡೆಯಲಿರುವ ಈ ಒಂದು ತಿಂಗಳ ಅಭಿಯಾನದಲ್ಲಿ ಬೂತ್ ಮಟ್ಟದ ಅಧಿಕಾರಿಗಳು (BLO) ಪ್ರತಿ ಮನೆ ಮನೆಗೆ ಭೇಟಿ ನೀಡಿ ಮತದಾರರ ವಿವರ ಪರಿಶೀಲಿಸಲಿದ್ದಾರೆ. ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಗೊಂದಲಗಳಿದ್ದರೆ, ಅವೆಲ್ಲಕ್ಕೂ ಉತ್ತರ ಇಲ್ಲಿದೆ.
ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಅಧಿಕಾರಿಗಳು ನಿಮ್ಮ ಮನೆಗೆ ಭೇಟಿ ನೀಡಿದಾಗ ನಿಮ್ಮ ಮನೆಗೆ ಬೀಗ ಹಾಕಿದ್ದರೆ, ಬಿಎಲ್‌ಓಗಳು ಗಣತಿ ನಮೂನೆಯನ್ನು (Enumeration Form) ಅಲ್ಲೇ ಬಿಟ್ಟು ಹೋಗುತ್ತಾರೆ. ನಂತರ ಆ ಫಾರ್ಮ್ ಸಂಗ್ರಹಿಸಲು ಕನಿಷ್ಠ 3 ಬಾರಿ ನಿಮ್ಮ ಮನೆಗೆ ಭೇಟಿ ನೀಡುತ್ತಾರೆ.
ಹೌದು. ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ ಸಹ ಬಿಎಲ್‌ಓ ಮನೆಗೆ ಬಂದಾಗ ಫಾರ್ಮ್ ಭರ್ತಿ ಮಾಡಿ ನೀಡಿ, ಅದಕ್ಕೆ ಪ್ರತಿಯಾಗಿ ರಸೀದಿಯನ್ನು ಪಡೆದುಕೊಳ್ಳಬೇಕು.
ಇಲ್ಲ. ಚುನಾವಣಾ ಆಯೋಗದ ಸ್ಪಷ್ಟನೆ ಪ್ರಕಾರ ಗಣತಿ ನಮೂನೆ ಜೊತೆಗೆ ಆಧಾರ್ ಕಾರ್ಡ್, ಪಾಸ್‌ಪೋರ್ಟ್‌ನಂತಹ ಯಾವುದೇ ಪ್ರತ್ಯೇಕ ದಾಖಲೆಗಳನ್ನು ಸಬ್ಮಿಟ್ ಮಾಡುವ ಅಗತ್ಯವಿಲ್ಲ.
ಹೌದು. ಬಿಎಲ್‌ಓಗಳಿಗಾಗಿ ಕಾಯಲು ಇಷ್ಟವಿಲ್ಲದಿದ್ದರೆ, ಚುನಾವಣಾ ಆಯೋಗದ ಅಧಿಕೃತ ವೋಟರ್ ಪೋರ್ಟಲ್ (Voter Portal) ಮೂಲಕ ಆನ್‌ಲೈನ್‌ನಲ್ಲೇ ಗಣತಿ ನಮೂನೆಯನ್ನು ಭರ್ತಿ ಮಾಡಬಹುದು.
ಇದನ್ನೂ ಓದಿ SIR ಬಗ್ಗೆ ಯಾರೂ ಗಾಬರಿಯಾಗುವುದು ಬೇಡ: ಜನರಿಗೆ ಧೈರ್ಯ ಹೇಳಿದ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್
ನಿಮ್ಮ ವೋಟರ್ ಐಡಿ (EPIC) ಸಂಖ್ಯೆ, ಹೆಸರು, ಅಥವಾ ಮತದಾನ ಕೇಂದ್ರದ (Polling Station) ಹೆಸರನ್ನು ಬಳಸಿ ಆನ್‌ಲೈನ್‌ನಲ್ಲಿ ನಿಮ್ಮ ಹಳೆಯ ವಿವರಗಳನ್ನು ಸುಲಭವಾಗಿ ಹುಡುಕಬಹುದು.
ಆಗಸ್ಟ್ 5 ರಂದು ಮತದಾರರ ಪಟ್ಟಿಯ ಕರಡು ಪ್ರತಿ (Draft Electoral Roll) ಪ್ರಕಟವಾಗಲಿದೆ. ಅದರಲ್ಲಿ ಏನಾದರೂ ತಪ್ಪುಗಳಿದ್ದರೆ ಆಗಸ್ಟ್ 5 ರಿಂದ ಸೆಪ್ಟೆಂಬರ್ 4 ರ ನಡುವೆ ಆಕ್ಷೇಪಣೆ ಸಲ್ಲಿಸಿ ಸರಿಪಡಿಸಿಕೊಳ್ಳಬಹುದು. ಅಂತಿಮ ಮತದಾರರ ಪಟ್ಟಿಯು ಅಕ್ಟೋಬರ್ 7 ರಂದು ಬಿಡುಗಡೆಯಾಗಲಿದೆ. ಸಹಾಯಕ್ಕಾಗಿ ಸಾರ್ವಜನಿಕರು 1950 ಹೆಲ್ಪ್‌ಲೈನ್ ಸಂಖ್ಯೆಗೆ ಕರೆ ಮಾಡಬಹುದು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.