AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖರ್ಗೆ ಟ್ರಸ್ಟ್‌ಗೆ ಭೂಮಿ ಹಂಚಿಕೆ ಪ್ರಕರಣ: ಆ.18ರ ಆದೇಶ ಹಿಂಪಡೆದ ಹೈಕೋರ್ಟ್

ಮಲ್ಲಿಕಾರ್ಜನ ಖರ್ಗೆ ಟ್ರಸ್ಟ್‌ಗೆ ಬಿಡಿಎ, ಕೆಐಎಡಿಬಿಯಿಂದ ಭೂಮಿ ಹಂಚಿಕೆ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಹುಲ್ ಖರ್ಗೆ ಅರ್ಜಿಯ ಮೇರೆಗೆ ಆಗಸ್ಟ್ 18ರ ಆದೇಶವನ್ನು ಹಿಂಪಡೆದು, ಮರುವಿಚಾರಣೆಗೆ ನಿರ್ಧರಿಸಿದೆ. ಆ ಮೂಲಕ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ವಿರುದ್ಧದ ಖಾಸಗಿ ದೂರನ್ನು ಅ.30ರಂದು ಪುನಃ ಆಲಿಸಲು ನ್ಯಾಯಾಲಯ ಮುಂದಾಗಿದೆ.

ಖರ್ಗೆ ಟ್ರಸ್ಟ್‌ಗೆ ಭೂಮಿ ಹಂಚಿಕೆ ಪ್ರಕರಣ: ಆ.18ರ ಆದೇಶ ಹಿಂಪಡೆದ ಹೈಕೋರ್ಟ್
ಕರ್ನಾಟಕ ಹೈಕೋರ್ಟ್ , ಮಲ್ಲಿಕಾರ್ಜುನ ಖರ್ಗೆ
ರಮೇಶ್​ ಎಮ್​.
| Edited By: |

Updated on:Oct 16, 2026 | 5:16 PM

Share

ಮುಖ್ಯಾಂಶಗಳು

  • ಬಿಡಿಎ, ಕೆಐಎಡಿಬಿಯಿಂದ ಖರ್ಗೆ ಟ್ರಸ್ಟ್​ಗೆ ಭೂಮಿ ಹಂಚಿಕೆ ಪ್ರಕರಣ
  • ಆ.18ರಂದು ನೀಡಿದ್ದ ಆದೇಶ ಹಿಂಪಡೆದು ಪುನಃ ವಿಚಾರಣೆಗೆ ನಿರ್ಧಾರ
  • ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠದಿಂದ ಆದೇಶ

ಬೆಂಗಳೂರು, ಅಕ್ಟೋಬರ್​​ 16: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ (ಕೆಐಎಡಿಬಿ) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಸಿದ್ಧಾರ್ಥ ವಿಹಾರ ಟ್ರಸ್ಟ್​ಗೆ ಭೂಮಿ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆ.18ರಂದು ನೀಡಿದ್ದ ಆದೇಶವನ್ನು ಹೈಕೋರ್ಟ್ ಹಿಂಪಡೆದಿದೆ. ಆದೇಶ ಹಿಂಪಡೆಯುವಂತೆ ಕೋರಿ ರಾಹುಲ್ ಖರ್ಗೆ ಅರ್ಜಿ ಸಲ್ಲಿಸಿದ್ದ ಹಿನ್ನೆಲೆ ಪುನಃ ವಿಚಾರಣೆಗೆ ಹೈಕೋರ್ಟ್ ಮುಂದಾಗಿದೆ. ಅ.30ರಂದು ಮರುವಿಚಾರಣೆಗೆ ನಿರ್ಧರಿಸಲಾಗಿದ್ದು, ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ.

ಅ.30ರಂದು ಮರುವಿಚಾರಣೆಗೆ ನಿರ್ಧರ

ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್​ 18ರಂದು ಬಿಎನ್​​ಎಸ್​ಎಸ್​ ಸೆಕ್ಷನ್​ 223 ಅಡಿಯ ಕೋರ್ಟ್ ವಿಚಾರಣೆಯನ್ನು ಹೈಕೋರ್ಟ್ ರದ್ದುಪಡಿಸಿತ್ತು. ಪ್ರಮಾಣಪತ್ರದ ದೋಷ ಸರಿಪಡಿಸಲು ದೂರುದಾರರಿಗೆ ಅವಕಾಶ ನೀಡಲಾಗಿತ್ತು. ಆ ಬಳಿಕ ಪೊಲೀಸರ ತನಿಖೆ ಕುರಿತಂತೆ ತೀರ್ಮಾನಿಸಲು ಸೂಚಿಸಿತ್ತು. 82ನೇ ಸಿಸಿಹೆಚ್ ಕೋರ್ಟ್​​ಗೆ ನೀಡಿದ್ದ ನಿರ್ದೇಶನ ಹಿಂಪಡೆದ ಹೈಕೋರ್ಟ್, ಪ್ರತಿವಾದ ಆಲಿಸಲು ಅ.30ರಂದು ಮರುವಿಚಾರಣೆಗೆ ನಿರ್ಧರಿಸಿದೆ.

LIVE TV

ಪ್ರಕರಣದ ಹಿನ್ನೆಲೆ 

2014ರಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಕುಟುಂಬದ ಸಿದ್ಧಾರ್ಥ ಟ್ರಸ್ಟ್ ಶೈಕ್ಷಣಿಕ ನೆಪ ನೀಡಿ ಬಿಡಿಎಯಿಂದ ಬಿಟಿಎಂ 4ನೇ ಸ್ಟೇಜ್​ನ ಎರಡನೇ ಬ್ಲಾಕ್​ನಲ್ಲಿ 2 ಎಕರೆಯಷ್ಟು ಸಿಎ ನಿವೇಶನವನ್ನು ಪರಭಾರೆ ಮಾಡಿಸಿಕೊಂಡಿದ್ದ ಆರೋಪ ಕೇಳಿಬಂದಿತ್ತು. ಅದಾದ 10 ವರ್ಷಗಳ ಬಳಿಕ ಅದೇ ಶೈಕ್ಷಣಿಕ ನೆಪದಲ್ಲಿ ಬಾಗಲೂರು ಬಳಿ 5 ಏಕರೆಯಷ್ಟು KIADB ಭೂಮಿಯನ್ನು ಮತ್ತೆ ಅದೇ ಟ್ರಸ್ಟ್ ಹೆಸರಿಗೆ ಬರೆಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ನಿವೇಶಗಳ ಮೌಲ್ಯ ಬರೋಬ್ಬರಿ 240 ಕೋಟಿಗೂ ಅಧಿಕ ಎನ್ನಲಾಗಿತ್ತು.

ಇದನ್ನೂ ಓದಿ: ಖರ್ಗೆ ಟ್ರಸ್ಟ್‌ಗೆ ಭೂಮಿ ಹಂಚಿಕೆ ಕೇಸ್​: ವಿಚಾರಣೆ ರದ್ದುಪಡಿಸಿ ತನಿಖೆ ಪರಿಶೀಲನೆಗೆ ಹೈಕೋರ್ಟ್ ಆದೇಶ

ಈ ವಿಚಾರವಾಗಿ ಮಲ್ಲಿಕಾರ್ಜುನ ಖರ್ಗೆ, ರಾಧಾಕೃಷ್ಣ, ರಾಧಾಬಾಯಿ ಖರ್ಗೆ, ರಾಹುಲ್ ಖರ್ಗೆ, ಪ್ರಿಯಾಂಕ್ ಖರ್ಗೆ, ಎಂ.ಬಿ.ಪಾಟೀಲ್ ವಿರುದ್ಧ ದೂರು ದಾಖಲಾಗಿತ್ತು. ಆರೋಪ ಬಂದ ನಂತರ ಜಮೀನು ಹಿಂತಿರುಗಿಸಿದ್ದಾರೆ. ಇನ್ನು ಈ ಕುರಿತಾಗಿ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದರೂ ಕ್ರಮವಾಗಿಲ್ಲ.  ಹೀಗಾಗಿ ಲಂಚಮುಕ್ತ ಕರ್ನಾಟಕ ವೇದಿಕೆ ಅಧ್ಯಕ್ಷ ವಿಜಯರಾಘವ ಮರಾಠೆ ಎಂಬುವವರು ಖಾಸಗಿ ದೂರು ದಾಖಲಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 5:10 pm, Fri, 16 October 26

Follow Us
ರಮೇಶ್​ ಎಮ್​.
ರಮೇಶ್​ ಎಮ್​.

ರಮೇಶ್​ ಎಂ ವಿಶೇಷ ವರದಿಗಾರರಾಗಿದ್ದಾರೆ, ಮೂಲತಃ ಕಾನೂನು ಪದವೀಧರನಾಗಿದ್ದು ಕಳೆದ 18 ವರ್ಷಗಳಿಂದ ಟಿವಿ9 ಸುದ್ದಿ ವಾಹಿನಿಯಲ್ಲಿ ಕಾನೂನು ಸಂಬಂಧಿತ ವರದಿ ನೀಡುತ್ತಿದ್ದಾರೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯಗಳ ಪ್ರಮುಖ ಪ್ರಕರಣಗಳ ವರದಿಗಾರಿಕೆ ಮಾಡುತ್ತಿದ್ದು, ಬೆಂಗಳೂರಿನ ನಿವಾಸಿಯಾಗಿದ್ದಾರೆ.

Read More