ದಾಖಲೆ ಬರೆದ ಬೆಂಗಳೂರಿನ ಕೋರಮಂಗಲ ಆರ್ಟಿಓ ‌ಕಚೇರಿ: ರಾಜ್ಯದಲ್ಲಿ ನಂ 1, ದೇಶದಲ್ಲಿ 3ನೇ ಸ್ಥಾನ

ಬೆಂಗಳೂರಿನ ಕೋರಮಂಗಲ RTO ಕಚೇರಿ 2025-26ರ ಆರ್ಥಿಕ ವರ್ಷದಲ್ಲಿ 1273 ಕೋಟಿ ರೂ ರಾಜಸ್ವ ಸಂಗ್ರಹಿಸಿ ಹೊಸ ದಾಖಲೆ ಬರೆದಿದೆ. ಇದು ದೇಶದಲ್ಲೇ ಅತಿ ಹೆಚ್ಚು ಆದಾಯ ಗಳಿಸಿದ 3ನೇ ಹಾಗೂ ಕರ್ನಾಟಕದಲ್ಲಿ 1ನೇ ಅತಿ ದೊಡ್ಡ RTO ಕಚೇರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಗರಣಗಳ ಆರೋಪಗಳ ನಡುವೆಯೂ ಈ ಸಾಧನೆ ಮಾಡಿದೆ.

ದಾಖಲೆ ಬರೆದ ಬೆಂಗಳೂರಿನ ಕೋರಮಂಗಲ ಆರ್ಟಿಓ ‌ಕಚೇರಿ: ರಾಜ್ಯದಲ್ಲಿ ನಂ 1, ದೇಶದಲ್ಲಿ 3ನೇ ಸ್ಥಾನ
ಕೋರಮಂಗಲ ಆರ್ಟಿಓ
Image Credit source: sharpdrives.in
Edited By:

Updated on: Apr 03, 2026 | 9:42 PM

ಬೆಂಗಳೂರು, ಏಪ್ರಿಲ್​ 03: ಸದಾ ಒಂದಿಲ್ಲೊಂದು ನೆಗೆಟಿವ್ ಸುದ್ದಿಯಲ್ಲಿರುವ ಬೆಂಗಳೂರಿನ ಸೆಂಟ್ರಲ್ ಆರ್​ಟಿಓ (Koramangala RTO) ಕಚೇರಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಆದರೆ ಈ ಬಾರಿ ಯಾವುದೇ ನೆಗೆಟಿವ್ ವಿಚಾರವಾಗಿ ಅಲ್ಲದೇ ಹೊಸ ದಾಖಲೆಯೊಂದನ್ನು ಬರೆದಿದೆ. ದೇಶದಲ್ಲೇ ಅತೀ ಹೆಚ್ಚು ಆದಾಯ ಗಳಿಸಿದ 3ನೇ ಅತಿದೊಡ್ಡ ಆರ್​ಟಿಓ ಕಚೇರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಒಂದಿಲ್ಲೊಂದು ಅಕ್ರಮ, ಹಗರಣ ಆರೋಪದಲ್ಲಿ ಸುದ್ದಿಯಾಗುವ ಬೆಂಗಳೂರಿನ ಸೆಂಟ್ರಲ್ ಕೋರಮಂಗಲ ಆರ್​ಟಿಓ ಇದೀಗ ದೇಶದಲ್ಲೇ ಹೊಸ ದಾಖಲೆಯೊಂದನ್ನು ಬರೆದಿದ್ದು, ಈ ಬಾರಿ KA-01 ಕೋರಮಂಗಲ ಆರ್​ಟಿಓ ಆದಾಯ ಗಳಿಸುವುದರಲ್ಲಿ ನಂ-1 ಬಂದಿದೆ. ದೇಶದಲ್ಲೇ ಅತಿಹೆಚ್ಚು ರಾಜಸ್ವ ಸಂಗ್ರಹ ಮಾಡಿದ 3ನೇ ಅತಿದೊಡ್ಡ ಆರ್​ಟಿಓ ಕಚೇರಿ ಎಂಬ ದಾಖಲೆ ಬರೆದಿದೆ.

ಇದನ್ನೂ ಓದಿ; ಮೈಸೂರು ರೈಲ್ವೆ ದಾಖಲೆ: ಸರಕು ಸಾಗಣೆ-ಪಾರ್ಸೆಲ್, ಟಿಕೆಟ್ ಪರಿಶೀಲನೆಯಲ್ಲಿ ಕೋಟ್ಯಂತರ ರೂ ಆದಾಯ

ಇತ್ತ ರಾಜ್ಯದಲ್ಲಿ ಅತಿಹೆಚ್ಚು ಆದಾಯ ಗಳಿಸಿದ ಮೊದಲ KA-01 ಆರ್​ಟಿಓ ಎನ್ನುವ ದಾಖಲೆಯನ್ನು ನಿರ್ಮಿಸಿದೆ. 2025-26 ಆರ್ಥಿಕ ವರ್ಷದಲ್ಲಿ ಕೋರಮಂಗಲ ಆರ್​​ಟಿಓ ಕಚೇರಿ ಬರೋಬ್ಬರಿ 1273 ಕೋಟಿ ರೂ ರಾಜಸ್ವ ಸಂಗ್ರಹ ಮಾಡಿದೆ.

ಯಾವ ಆರ್​​ಟಿಓ ಕಚೇರಿಗೆ ಯಾವ ಸ್ಥಾನ

ಇನ್ನು ದೇಶದಲ್ಲಿ ಮೊದಲ ಸ್ಥಾನವನ್ನು ಮಹಾರಾಷ್ಟ್ರದ ಪುಣೆ ಆರ್​​ಟಿಓ ಪಡೆದುಕೊಂಡು 1900 ಕೋಟಿ ರೂ ಆದಾಯ ಗಳಿಸಿದ್ದಾರೆ. 1500 ಕೋಟಿ ರೂ ರಾಜಸ್ವ ಸಂಗ್ರಹ ಮಾಡುವ ಮೂಲಕ ಮಹಾರಾಷ್ಟ್ರದ ಪಿಂಪ್ರಿ ಆರ್​ಟಿಓ ಕಚೇರಿ ಎರಡನೇ ಸ್ಥಾನ ಪಡೆದುಕೊಂಡಿದೆ. 1273 ಕೋಟಿ ರೂ ಆದಾಯ ಗಳಿಸುವ ಮೂಲಕ ಕೋರಮಂಗಲ ಆರ್​​ಟಿಓ ರಾಜ್ಯದಲ್ಲೇ ಅತಿ ಹೆಚ್ಚು ರಾಜಸ್ವ ಸಂಗ್ರಹ ಮಾಡಿದ ಆರ್​ಟಿಓ ಕಚೇರಿಯಾಗಿ ಹೊರಹೊಮ್ಮಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಹೊಸ ಫ್ಲೈಓವರ್ ನಿರ್ಮಾಣಕ್ಕೆ ಮುಂದಾದ ಜಿಬಿಎ: ಎಲ್ಲಿಂದ ಎಲ್ಲಿಗೆ ಸಂಪರ್ಕ?

ದೇಶದಲ್ಲಿ 1100 ಆರ್​​ಟಿಓ ಕಚೇರಿಗಳ ಪೈಕಿ ಕೋರಮಂಗಲ ಆರ್​ಟಿಓ ಕಚೇರಿ 3ನೇ ಸ್ಥಾನ ಪಡೆದುಕೊಂಡಿದೆ. ಫ್ಯಾನ್ಸಿ ನಂಬರ್, ಪರ್ಮಿಟ್, ಎಫ್‌ಸಿ ನವೀಕರಣ, ವಾಹನ ತಪಾಸಣೆ ಸೇರಿದಂತೆ ಹಲವು ರೀತಿಯ ಆರ್​ಟಿಓ ಸೇವೆಗಳಿಂದ ಅತಿಹೆಚ್ಚು ರಾಜಸ್ವ ಗಳಿಸಿದೆ.

ಒಟ್ಟಿನಲ್ಲಿ ಈ ಬಾರಿಯ ಆರ್ಥಿಕ ವರ್ಷದಲ್ಲಿ 1273 ಆದಾಯ ಗಳಿಸುವ ಮೂಲಕ ದೇಶದಲ್ಲೇ ಮೂರನೇ ಸ್ಥಾನ ಪಡೆದಿದ್ದು, ಬರುವ ಆರ್ಥಿಕ ವರ್ಷದಲ್ಲಿ ಎರಡನೇ ಸ್ಥಾನ ಪಡೆಯುವ ಗುರಿ ಹಾಕಿಕೊಂಡಿರುವುದು ವಿಶೇಷ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us