ಮತ್ತೆ ಸಿಡಿದೆದ್ದ ಸಾರಿಗೆ ನೌಕರರು: ಬೆಳಗಾವಿ ಅಧಿವೇಶನದಲ್ಲಿ ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ
ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿ ಅಧಿವೇಶನದೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ ಅಂದರೆ ಜನವರಿ ಅಥವಾ ಫೆಬ್ರವರಿಯಲ್ಲಿ ಸಾರಿಗೆ ಮುಷ್ಕರ ಮಾಡ್ತಿವಿ ಎಂದಿದ್ದಾರೆ.
ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಕೆಎಸ್ಆರ್ಟಿಸಿ ಸಾರಿಗೆ ನೌಕರರು(KSRTC Employees) ಮತ್ತೊಮ್ಮೆ ಮುಷ್ಕರ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ. ಮತ್ತೆ ಬೀದಿಗಿಳಿದು ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ತಮ್ಮ ಬೇಡಿಕೆ ಈಡೇರಿಸಲು ವಿಫಲವಾದ ಸರ್ಕಾರದ(Karnataka Government) ವಿರುದ್ಧ ಸಾರಿಗೆ ನೌಕರರು ಆಕ್ರೋಶ ಹೊರ ಹಾಕಿದ್ದಾರೆ. ಈ ಹಿಂದೆ ಕೂಡ ಬೇಡಿಕೆ ಈಡೇರಿಕೆಗಾಗಿ ನೌಕರರು ಪ್ರತಿಭಟನೆ ನಡೆಸಿದ್ದರು. ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ರಾಜ್ಯವ್ಯಾಪಿ ಮುಷ್ಕರ ಮಾಡಿದ್ದರು. ಆದ್ರೆ ಇದರಿಂದ ಫಲ ಸಿಗದ ಹಿನ್ನೆಲೆ ಅಧಿವೇಶನದ ಹೊಸ್ತಿಲಲ್ಲಿ, ಮತ್ತೆ ಹೋರಾಟಕ್ಕೆ ಸಾರಿಗೆ ನೌಕರರು ಸಜ್ಜಾಗಿದ್ದಾರೆ.
ವಿವಿಧ ಬೇಡಿಕೆಗಳೊಂದಿಗೆ ಮತ್ತೊಮ್ಮೆ ಧರಣಿಗೆ ಮುಂದಾಗಿದ್ದಾರೆ. ಬೆಳಗಾವಿಯ ಚಳಿಗಾಲದ ಅಧಿವೇಶನದ ವೇಳೆ ನಾಲ್ಕು ನಿಗಮದ ಸಾವಿರಾರು ನೌಕರರು ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ಸಾರಿಗೆ ನೌಕರರ ಸಮನ್ವಯ ಸಮಿತಿ ಸದಸ್ಯರು ಪ್ರತಿಭಟನೆ ಸಂಬಂಧ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿ ಅಧಿವೇಶನದೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ ಅಂದರೆ ಜನವರಿ ಅಥವಾ ಫೆಬ್ರವರಿಯಲ್ಲಿ ಸಾರಿಗೆ ಮುಷ್ಕರ ಮಾಡ್ತಿವಿ ಎಂದಿದ್ದಾರೆ.
ಇದನ್ನೂ ಓದಿ: ಬಾಡಿಗೆ ಕಟ್ಟುವಂತೆ ನೋಟಿಸ್: ಡಿಪೋ ಅಧಿಕಾರಿ ಮೇಲೆ ಹಲ್ಲೆ ನಡೆಸಲು ಮಚ್ಚು ಹಿಡಿದು ಬಂದ ಮಹಿಳೆ
ಈಡೇರದ ನೌಕರರ ಬೇಡಿಕೆಗಳೇನು?
1. ಆರನೇ ವೇತನ ಆಯೋಗದ ಮಾದರಿಯಲ್ಲಿ ಶಿಫಾರಸು ಮಾಡಿ ಜಾರಿಗೊಳಿಸದೇ ಇರುವುದು 2. ವೈದ್ಯಕೀಯ ಸೌಲಭ್ಯಗಳನ್ನು ನೀಡದಿರುವುದು 3. ವಜಾಗೊಂಡ ನೌಕರರ ಮರು ನೇಮಕ ಮಾಡಿಲ್ಲ 4. ನಿವೃತ್ತಿ ಆಗಿ 30 ತಿಂಗಳು ಕಳೆದರೂ ಗ್ರಾಚ್ಯೂಟಿ ಹಣ ನೀಡಿಲ್ಲ 5. ಕೊರೊನಾದಿಂದ ಮೃತಪಟ್ಟ ನೌಕರರ ಕುಟುಂಬಸ್ಥರಿಗೆ ಪರಿಹಾರ ನೀಡದೆೇ ಇರುವುದು 6. ಖಾಲಿ ಹುದ್ದೆಗಳ ನೇಮಕಾತಿ ಭರ್ತಿ ಮಾಡಿಲ್ಲ 7. ಕೆಎಸ್ಆರ್ಟಿಸಿ ಖಾಸಗೀಕರಣಕ್ಕೆ ಸರ್ಕಾರದ ಪ್ಲಾನ್ 8. ಸಾರಿಗೆ ನೌಕರರ ಹಾಗು ಕುಟುಂಬ ಸದಸ್ಯರ ಮೇಲೆ ಹಾಕಿರುವ ಪೊಲೀಸ್ ಕೇಸ್ ಹಿಂಪಡೆಯದೇ ಇರೋದು
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:07 pm, Mon, 12 December 22