25 ಕೋಟಿ ವೆಚ್ಚದಲ್ಲಿ 3 ತಿಂಗಳ ಹಿಂದೆ ಉದ್ಘಾಟನೆಯಾಗಿದ್ದ ಕುಂದಲಹಳ್ಳಿ ಅಂಡರ್ ಪಾಸ್ ಕುಸಿತ; 40% ಕಮಿಷನ್ ದಂಧೆಯ ಎಫೆಕ್ಟ್ ಎಂದ ಜನ
ಹೂಡಿ ಮುಖ್ಯ ರಸ್ತೆ ಹಾಗೂ ಐಟಿಪಿಎಲ್ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಕುಂದನಹಳ್ಳಿ ಅಂಡರ್‌ಪಾಸ್ ಮೇಲ್ಭಾಗದ ರಸ್ತೆ ಕುಸಿದಿದೆ. 40% ಕಮಿಷನ್ ದಂಧೆಯ ಎಫೆಕ್ಟ್ ಇದು ಎಂದು ಸಾರ್ವಜನಿಕರು ಟ್ವಿಟರ್ನಲ್ಲಿ ಗರಂ ಆಗಿದ್ದಾರೆ.
ಬೆಂಗಳೂರು: 3 ತಿಂಗಳ ಹಿಂದೆ ಉದ್ಘಾಟನೆಯಾಗಿದ್ದ ಅಂಡರ್ ಪಾಸ್ ಕುಸಿದು ಬಿದ್ದಿದೆ. ಬೆಂಗಳೂರಿನ ಕುಂದಲಹಳ್ಳಿ ಬಳಿ 25 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಅಂಡರ್ ಪಾಸ್ ಕುಸಿದಿದ್ದು ಈ ಬಗ್ಗೆ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ. 40% ಕಮಿಷನ್ ದಂಧೆಯ ಎಫೆಕ್ಟ್ ಇದು ಎಂದು ಸಾರ್ವಜನಿಕರು, ಕಾಂಗ್ರೆಸ್ ನಾಯಕರು ಟ್ವಿಟರ್ನಲ್ಲಿ ಗರಂ ಆಗಿದ್ದಾರೆ.
ಹೂಡಿ ಮುಖ್ಯ ರಸ್ತೆ ಹಾಗೂ ಐಟಿಪಿಎಲ್ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಕುಂದನಹಳ್ಳಿ ಅಂಡರ್‌ಪಾಸ್ ಮೇಲ್ಭಾಗದ ರಸ್ತೆ ಕುಸಿದಿದ್ದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಪೈಪ್‌ಲೈನ್ ಸೋರಿಕೆ ಹಿನ್ನಲೆ ರಸ್ತೆ ಕುಸಿದಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ದಿನದಿಂದ ದಿನಕ್ಕೆ ಅಂಡರ್ ಪಾಸ್ ಮೇಲ್ಭಾಗದ ರಸ್ತೆ ಕುಸಿಯುತ್ತಿದೆ. ಸುಮಾರು 25 ಕೋಟಿ ವೆಚ್ಚದಲ್ಲಿ 2019ರಲ್ಲಿ ಈ ಕಾಮಗಾರಿ ಶುರುವಾಗಿತ್ತು. ಮೂರು ತಿಂಗಳ ಹಿಂದಷ್ಟೇ ಈ ರಸ್ತೆ ಉದ್ಘಾಟನೆ ಮಾಡಲಾಗಿತ್ತು. ಆದ್ರೆ ಈಗ ಅದು ಕುಸಿದು ಬಿದ್ದಿದೆ. ಇದನ್ನೂ ಓದಿ: ಡಿಎನ್ಎ ಮಾದರಿ ಹೊಂದಾಣಿಕೆ ಆಗದಿದ್ದರೆ ಆರೋಪಿ ಅತ್ಯಾಚಾರ ಎಸಗಿಲ್ಲ ಎಂದು ಹೇಳಲಾಗುವುದಿಲ್ಲ:ಕರ್ನಾಟಕ ಹೈಕೋರ್ಟ್
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಪೈಪ್‌ಲೈನ್ ದುರಸ್ತಿ ಕಾರ್ಯ ಮಾಡಿದೆ. ಅಧಿಕಾರಿಗಳು ಕುಸಿದ ರಸ್ತೆಗೆ ಜಲ್ಲಿ ಕಲ್ಲು ಹಾಕಿದ್ದಾರೆ. ಇನ್ನು ಪೈಪ್‌ಲೈನ್ ಸೋರಿಕೆ ಹಿನ್ನಲೆ ಕೆಲವೆಡೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಕುಸಿದ ರಸ್ತೆಯ ಸರಿಪಡಿಸಲು ಇನ್ನೂ ಕೆಲವು ದಿನಗಳು ಬೇಕಾಗಲಿವೆ. ಅಂಡರ್‌ಪಾಸ್ ವಾರ್ಷಿಕ ನಿರ್ವಹಣೆ ಮತ್ತು ನ್ಯೂನತೆ ಹೊಣೆಗಾರಿಕೆಯ ಷರತ್ತಿನಡಿಯಲ್ಲಿ ಒಳಗೊಂಡಿರುವುದರಿಂದ ಗುತ್ತಿಗೆದಾರರು ಕುಸಿದ ರಸ್ತೆಯನ್ನು ಸರಿಪಡಿಸಲು ಯಾವುದೇ ಶುಲ್ಕ ವಿಧಿಸುವಂತಿಲ್ಲ. ಅವರಿ ಅದನ್ನು ಉಚಿತವಾಗಿ ಮಾಡಬೇಕಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
40% Commission Govt is scared to hold #BPMP Polls exactly for reasons like this…
Their #TripleEngineBJP misgovernance and corruption has provoked widespread anger and disillusionment even among their staunch supporters . Kundalahalli underpass caves in Bengaluru pic.twitter.com/FFrsM3h8iP
— ???? ????????? (வாழப்பாடி இராம சுகந்தன்) (@vazhapadi) October 10, 2022
ಈ ಬಗ್ಗೆ ಕಾಂಗ್ರೆಸ್ ನಾಯಕ ನಾಗರಾಜ್ ಯಾದವ್ ಮಾತನಾಡಿದ್ದು, ಇದು ಶೇ. 40 ಭ್ರಷ್ಟಾಚಾರದ ಮತ್ತೊಂದು ನಿದರ್ಶನವಾಗಿದೆ. ಇಂತಹ ಆರೋಪಗಳನ್ನು ಆಧಾರರಹಿತ ರಾಜಕೀಯ ಸೇಡು ಎಂದು ಸರ್ಕಾರ ತಳ್ಳಿಹಾಕಿದೆ ಎಂದರು. ಹಾಗೂ ಗುತ್ತಿಗೆದಾರರು ಮತ್ತು ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಯಾದವಾಡ ಆಗ್ರಹಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವತಃ ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದು, ಅವರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:00 pm, Mon, 10 October 22