AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ9 ರಿಯಾಲಿಟಿ ಚೆಕ್ ನಲ್ಲಿ ಬಯಲಾಯ್ತು ಸರ್ಕಾರದ ವೈಫಲ್ಯ: ಓಲಾ, ಊಬರ್​ಗೆ ನೋಟಿಸ್ ನೀಡಿದ ನಂತರವೂ ದರ ದುಪ್ಪಟ್ಟು ವಸೂಲಿ!

ಓಲಾ, ಊಬರ್ ಕಂಪನಿಗಳು ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡುತ್ತಿದೆ. ಈ ಬಗ್ಗೆ ಈಗಾಗಲೇ ಟಿವಿ9 ವರದಿ ಮಾಡಿದ್ದು ಇಂದು ಓಲಾ ಊಬರ್ ಕಂಪನಿಗಳು ಆಟೋಗಳನ್ನು ನಿಲ್ಲಿಸಿದ್ದವಾ ಅಥವಾ ಇಲ್ವ ಎಂಬ ಬಗ್ಗೆ ಟಿವಿ9 ರಿಯಾಲಿಟಿ ಚೆಕ್ ಮಾಡಿದೆ.

ಟಿವಿ9 ರಿಯಾಲಿಟಿ ಚೆಕ್ ನಲ್ಲಿ ಬಯಲಾಯ್ತು ಸರ್ಕಾರದ ವೈಫಲ್ಯ: ಓಲಾ, ಊಬರ್​ಗೆ ನೋಟಿಸ್ ನೀಡಿದ ನಂತರವೂ ದರ ದುಪ್ಪಟ್ಟು ವಸೂಲಿ!
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on:Oct 10, 2022 | 11:46 AM

ಬೆಂಗಳೂರು: ಓಲಾ(Ola), ಉಬರ್(Uber) ಕಂಪನಿಗಳು ಪ್ರಯಾಣಿಕರ ಬಳಿ ದುಪ್ಪಟ್ಟು ಹಣ ವಸೂಲಿ ಮಾಡುತ್ತಿವೆ. ಈ ಕಂಪನಿಗಳಿಗೆ ಕ್ಯಾಬ್ ನಡೆಸಲು ಮಾತ್ರ ಅವಕಾಶ ನೀಡಲಾಗಿದೆ ಆದರೆ ಇವರು ಅನಧಿಕೃತವಾಗಿ ಆಟೋಗಳನ್ನು ರನ್ ಮಾಡ್ತಿದ್ದಾರೆ. ಹೀಗಾಗಿ ಈ ಕೂಡಲೇ ತಮ್ಮ ಆ್ಯಪ್ ನಲ್ಲಿ ಆಟೋಗಳನ್ನು ನಿಲ್ಲಿಸಬೇಕು ಎಂದು ಸಾರಿಗೆ ಇಲಾಖೆ(Karnataka Transportation Department) ಖಡಕ್ ಆಗಿ ನೋಟಿಸ್ ನೀಡಿದೆ. ಆದ್ರೆ ನೋಟಿಸ್ ನೀಡಿ ನಾಲ್ಕು ದಿನ ಕಳೆದರೂ ಯಾವುದೇ ಕ್ರಮ ಜರುಗಿಲ್ಲ. ಈ ಬಗ್ಗೆ ಈಗಾಗಲೇ ಟಿವಿ9 ವರದಿ ಮಾಡಿದ್ದು ಇಂದು ಓಲಾ ಊಬರ್ ಕಂಪನಿಗಳು ಆಟೋಗಳನ್ನು ನಿಲ್ಲಿಸಿದ್ದವಾ ಅಥವಾ ಇಲ್ವ ಎಂಬ ಬಗ್ಗೆ ಟಿವಿ9 ರಿಯಾಲಿಟಿ ಚೆಕ್(TV9 Reality Check) ಮಾಡಿದೆ.

ಟಿವಿ9 ರಿಯಾಲಿಟಿ ಚೆಕ್ ನಲ್ಲಿ ಬಯಲಾಯ್ತು ಕಳ್ಳಾಟ

ಓಲಾ, ಊಬರ್ ಕಂಪನಿಗಳು ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡುತ್ತಿದೆ. ರಾಜ್ಯ ಸಾರಿಗೆ ಇಲಾಖೆಯ ರೂಲ್ಸ್ ಪ್ರಕಾರ ಎರಡು ಕಿಮೀ ಅಂದರೆ ಮಿನಿಮಮ್ ಚಾರ್ಜ್ 30 ರುಪಾಯಿ ಮಾತ್ರ ಪಡೆದುಕೊಳ್ಳಬೇಕು ಎಂದು ನಿಗಧಿ ಮಾಡಲಾಗಿದೆ. ಆದರೆ ಈ ಎರಡು ಆ್ಯಪ್ ಬೇಸ್ಡ್ ಕಂಪನಿಗಳು ಪ್ರಯಾಣಿಕರಿಂದ ದುಪ್ಪಟ್ಟು ಹಣ ಪಡೆದುಕೊಳ್ಳುತ್ತಿವೆ. ಈ ಬಗ್ಗೆ ಟಿವಿ9 ಈ ಹಿಂದೆ ಸುದ್ದಿ ಮಾಡಿತ್ತು. ಅಲ್ಲದೆ ಈ ಬಗ್ಗೆ ಪ್ರಯಾಣಿಕರಿಂದ ಸಾರಿಗೆ ಆಯುಕ್ತರಿಗೆ ದೂರು ಬಂದಿತ್ತು. ಈ ಹಿನ್ನೆಲೆ ರಾಜ್ಯ ಸಾರಿಗೆ ಇಲಾಖೆ ಈ ಎರಡೂ ಕಂಪನಿಗಳಿಗೆ ನೋಟಿಸ್ ಜಾರಿ ಮಾಡಿತ್ತು.

ಕ್ಯಾಬ್ ನಡೆಸಲು ಮಾತ್ರ ಅನುಮತಿ ನೀಡಲಾಗಿದ್ದು ತಮ್ಮ ಆ್ಯಪ್ ನಲ್ಲಿ ಅನಧಿಕೃತವಾಗಿ ಆಟೋ, ಬೈಕ್ ಟ್ಯಾಕ್ಸಿಗಳನ್ನು ರನ್ ಮಾಡಲಾಗುತ್ತಿದೆ. ಹೀಗಾಗಿ ಈ ಕೂಡಲೇ ಅವುಗಳ ಸೇವೆಯನ್ನು ನಿಲ್ಲಿಸಿ. ಮತ್ತು ದುಪ್ಪಟ್ಟು ದರ ವಸೂಲಿ ಬಗ್ಗೆ ಮೂರು ದಿನದೊಳಗೆ ಪ್ರತಿಕ್ರಿಯೆ ನೀಡಬೇಕು ಎಂದು ಅ.6ರಂದು ನೋಟಿಸ್ ನೀಡಿದ್ದರು. ಆದರೆ ಈ ನೋಟಿಸ್ ನೀಡಿ ನಾಲ್ಕು ದಿನ ಕಳೆದರೂ ಇಂದು ವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದಕ್ಕೆ ಕ್ಯಾಬ್ ಚಾಲಕರ ಸಂಘದ ಮುಖಂಡರು ಸಾರಿಗೆ ಇಲಾಖೆಗೆ ಧೈರ್ಯ ಇಲ್ಲ. ಕೇವಲ ನೋಟಿಸ್ ಕೊಟ್ಟು ಸುಮ್ಮನಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: Karwa Chauth 2022: ನವವಿವಾಹಿತ ಮಹಿಳೆಯರು ಈ ವರ್ಷ ಉಪವಾಸ ವ್ರತ ಆಚರಿಸಬಾರದು ಏಕೆ ಗೊತ್ತೇ?

ಸದ್ಯ ಈ ಅಕ್ರಮ ಬಯಲು ಮಾಡಲು ಟಿವಿ9 ರಿಯಾಲಿಟಿ ಚೆಕ್​ ನಡೆಸಿದ್ದು ನಾಲ್ಕು ಸ್ಥಳಗಳಿಂದ ಓಲಾ, ಊಬರ್ ಕ್ಯಾಬ್ ಬುಕ್​ ಮಾಡಿ ದರ ಬದಲಾವಣೆ ಬಗ್ಗೆ ಪರಿಶೀಲನೆ ನಡೆಸಿದೆ. ಮೊದಲಿಗೆ ಲಾಲ್ ಬಾಗ್ ಮೆಟ್ರೋ ಸ್ಟೇಷನ್ ನಿಂದ ಬನಶಂಕರಿ ಮೆಟ್ರೋ ಸ್ಟೇಷನ್ ವರೆಗೆ ಓಲಾ ಆ್ಯಪ್ ನಲ್ಲಿ ಕ್ಯಾಬ್ ಬುಕ್ ಮಾಡಲಾಗಿದ್ದು ನಾಲ್ಕು ಕಿಮೀ ದೂರಕ್ಕೆ ಮಿನಿಮಮ್ 75 ರುಪಾಯಿ ಇರೋದು ಓಲಾದಲ್ಲಿ 87 ರುಪಾಯಿ ದರ ವಸೂಲಿ ಮಾಡಲಾಗಿದೆ. ಇದೇ ರೀತಿ ನಾಲ್ಕು ಸ್ಥಳಗಳಿಂದ ಬುಕ್ ಮಾಡಿ ಚೆಕ್ ಮಾಡಿದಾಗ ಓಲಾ, ಊಬರ್ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವುದು ಬಯಲಾಗಿದೆ. ಎರಡು ಕಿಮೀ ದೂರಕ್ಕೆ ಸರ್ಕಾರ ಮೂವತ್ತು ರೂಪಾಯಿ ನಿಗದಿ ಮಾಡಿದೆ ಆದರೆ ಊಬರ್ ಕಂಪನಿ ಆ್ಯಪ್ ನಲ್ಲಿ 76 ರೂಪಾಯಿ ದರ ವಸೂಲಿ ಮಾಡಲಾಗುತ್ತಿದೆ.

ಸಾರಿಗೆ ಇಲಾಖೆ ನೋಟಿಸ್ ನೀಡಿದ್ದರು ಈ ಕಂಪನಿಗಳು ಮಾತ್ರ ತಮ್ಮ ಅಕ್ರಮವನ್ನು ನಿಲ್ಲಿಸಿಲ್ಲ. ಅಲ್ಲದೆ ರಾಜ್ಯ ಸಾರಿಗೆ ಇಲಾಖೆ ಕೂಡು ಕ್ರಮ ಕೈಗೊಳ್ಳದೇ ಸುಮ್ಮನಿರೋದು ಹಲವು ಅನುಮಾನಗಳಿಗೆ ದಾರಿ ಮಾಡಿದೆ. ಅಕ್ರಮ ಸಂಚಾರದಿಂದ ಬರುವ ಆದಾಯದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳಿಗೂ ಪಾಲಿದೆ ಹೀಗಾಗಿ ಅವರು ಸುಮ್ಮನಿದ್ದಾರೆ ಎಂದು ಕೆಲ ಸಂಘಟನೆಗಳು ಆಕ್ರೋಶ ಹೊರ ಹಾಕಿವೆ. ಇನ್ನು ಓಲಾ, ಊಬರ್​ನಲ್ಲಿ ಆಟೋಗಳಿಗೆ ಅವಕಾಶವಿಲ್ಲದಿದ್ದರೂ ಆಟೋಗಳು ರಾಜಾರೋಷವಾಗಿ ಸಂಚರಿಸುತ್ತಿವೆ. ಇದನ್ನೂ ಓದಿ: ಓಲಾ, ಊಬರ್ ಆಟೋ ಚಾಲಕರೇ ಹುಷಾರ್! ಮಧ್ಯಾಹ್ನದ ನಂತರ ಫೀಲ್ಡಿಗೆ ಇಳಿಯಲಿದ್ದಾರೆ ಆರ್​ಟಿಒ ಅಧಿಕಾರಿಗಳು

ಸಾರಿಗೆ ಸಚಿವರು ಮತ್ತು ಸಿಎಂ ಮನೆ ಮುತ್ತಿಗೆ ಹಾಕುತ್ತೇವೆ

ಇನ್ನು ಮತ್ತೊಂದೆಡೆ ಕ್ರಮ ಕೈಗೊಳ್ಳುತ್ತೀವಿ ಎಂಬ ಹೆಸರಲ್ಲಿ ಆರ್​ಟಿಒ ಅಧಿಕಾರಿಗಳು ಓಲಾ ಊಬರ್ ಆಟೋಗಳನ್ನು ಸೀಜ್ ಮಾಡಿದ್ರೆ ಅಥವಾ ಆಟೋ ಚಾಲಕರಿಗೆ ದಂಡ ಹಾಕಿದ್ರೆ ಸಾರಿಗೆ ಸಚಿವರು ಮತ್ತು ಸಿಎಂ ಮನೆ ಮುತ್ತಿಗೆ ಹಾಕುತ್ತೇವೆ ಎಂದು ಆದರ್ಶ ಆಟೋ ಅಸೋಸಿಯೇಷನ್ ಅಧ್ಯಕ್ಷ ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.

ಇನ್ನೂ ಈ ಎರಡು ಕಂಪನಿಗಳ ಅಕ್ರಮ ಆಟೋ ಸೇವೆ ಮತ್ತು ದುಪ್ಪಟ್ಟು ದರ ವಸೂಲಿ ಬಗ್ಗೆ ಪ್ರತಿಕ್ರಿಯೆ ಕೇಳಲು ಎರಡು ಕಂಪನಿಗೂ ಟಿವಿ9 ಕಾಲ್ ಮಾಡಿತ್ತು. ಆದ್ರೆ ಈ ಎರಡು ಕಂಪನಿಯ ಪೋನ್ ನಂಬರ್ ಗಳು ಅಸ್ತಿತ್ವದಲ್ಲಿ ಇಲ್ಲ ಎಂದು ಹೇಳ್ತಿದೆ.

ವರದಿ: ಕಿರಣ್ ಸೂರ್ಯ, ಟಿವಿ9 ಬೆಂಗಳೂರು

Published On - 11:43 am, Mon, 10 October 22

ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ