ಓಲಾ, ಊಬರ್ ಆಟೋ ಚಾಲಕರೇ ಹುಷಾರ್! ಮಧ್ಯಾಹ್ನದ ನಂತರ ಫೀಲ್ಡಿಗೆ ಇಳಿಯಲಿದ್ದಾರೆ ಆರ್ಟಿಒ ಅಧಿಕಾರಿಗಳು
ಇವತ್ತು ಮಧ್ಯಾಹ್ನದ ವರೆಗೆ ಓಲಾ, ಊಬರ್ ಕಂಪನಿಗೆ ಸಾರಿಗೆ ಇಲಾಖೆ ಗಡುವು ನೀಡಿದ್ದು ಸಾರಿಗೆ ಇಲಾಖೆಯ ಅಧಿಕಾರಿಗಳು ಓಲಾ, ಊಬರ್, ಆಟೋ ಸೀಜ್ ಮಾಡಲು ಮುಂದಾಗಿದ್ದಾರೆ.
ಬೆಂಗಳೂರು: ಓಲಾ(Ola), ಊಬರ್(Uber) ಆಟೋ ಚಾಲಕರೇ ಹುಷಾರ್. ಏಕೆಂದರೆ ಮಧ್ಯಾಹ್ನದ ನಂತರ ಓಲಾ ಊಬರ್ ಆ್ಯಪ್ ಆನ್ ಮಾಡಿದ್ರೆ ನಿಮ್ಮ ಆಟೋಗಳನ್ನು ಸೀಜ್ ಮಾಡಲಾಗುತ್ತೆ. ಆರ್ಟಿಒ ಅಧಿಕಾರಿಗಳು(RTO Officers) ಮಧ್ಯಾಹ್ನದ ನಂತರ ಫೀಲ್ಡಿಗೆ ಇಳಿಯಲಿದ್ದು ಅನಧಿಕೃತ ರ್ಯಾಪಿಡೋ ಬೈಕ್ ಟ್ಯಾಕ್ಸಿ ಮಾದರಿಯಲ್ಲಿ ಓಲಾ, ಊಬರ್, ಆಟೋ ಚಾಲಕರಿಗೆ ಎರಡರಿಂದ ಐದು ಸಾವಿರ ದಂಡ ಹಾಕಲು ಮುಂದಾಗಿದ್ದಾರೆ. ಮಧ್ಯಾಹ್ನದ ನಂತರ ಆರ್ಟಿಒ ಅಧಿಕಾರಿಗಳ ಕೈಗೆ ಸಿಕ್ಕರೆ ಕೇಸ್ ಅಂಡ್ ಫೈನ್ ಬೀಳೋದು ಪಕ್ಕ.
ಇವತ್ತು ಮಧ್ಯಾಹ್ನದ ವರೆಗೆ ಓಲಾ, ಊಬರ್ ಕಂಪನಿಗೆ ಸಾರಿಗೆ ಇಲಾಖೆ ಗಡುವು ನೀಡಿದ್ದು ಸಾರಿಗೆ ಇಲಾಖೆಯ ಅಧಿಕಾರಿಗಳು ಓಲಾ, ಊಬರ್, ಆಟೋ ಸೀಜ್ ಮಾಡಲು ಮುಂದಾಗಿದ್ದಾರೆ. ಮಧ್ಯಾಹ್ನದೊಳಗೆ ಎರಡು ಕಂಪನಿಗಳು ತಮ್ಮ ಪ್ರತಿಕ್ರಿಯೆ ನೀಡಿಲ್ಲವೆಂದರೆ. ರಾಜಧಾನಿಯ ರೋಡ್ ರೋಡ್ ನಲ್ಲಿ ಆಟೋಗಳನ್ನು ಸೀಜ್ ಮಾಡಲಿದ್ದಾರೆ. ಇಂದು ಮತ್ತು ನಾಳೆ ಖಡಕ್ ಆಗಿ ಆಟೋಗಳನ್ನು ಸೀಜ್ ಮಾಡಲು ಅಧಿಕಾರಿಗಳು ತಯಾರಿ ನಡೆಸಿದ್ದಾರೆ. ರಾಜ್ಯ ಸಾರಿಗೆ ಇಲಾಖೆ ನಾಳೆ ಎರಡು ಕಂಪನಿಗಳ ಮೇಲೂ ಕೇಸ್ ದಾಖಲಿಸಲಿದೆ ಎಂದು ಟಿವಿ9ಗೆ ಆರ್ಟಿಒ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಜೊಮ್ಯಾಟೊ ಹಾಗೂ ಸ್ವಿಗ್ಗಿ ಬಳಸುವವರೇ ಈ ಸುದ್ದಿಯನೊಮ್ಮೆ ನೋಡಿ! ನಿಮ್ಮ ಪ್ರತಿ ಆರ್ಡರ್ಗೂ ಪೋಲಾಗುತ್ತಿದೆ ಹಣ
ಓಲಾ-ಉಬರ್ ಆಟೋ ಸೇವೆಯೇ ಅಕ್ರಮ: ನೋಟಿಸ್ ಕೊಟ್ಟು ಮೂರು ದಿನವಾದ್ರು ಪ್ರತಿಕ್ರಿಯೆ ನೀಡದ ಕಂಪನಿಗಳು
ಬೆಂಗಳೂರು: ಬೆಂಗಳೂರಿನಲ್ಲಿ ಆಟೋ ಸೇವೆಗೆ ಮೀಡಿಯೇಟರ್ ಆಗಿರುವ ಓಲಾ-ಉಬರ್ ಸಂಸ್ಥೆಗಳು ಪ್ಲಾಟ್ಫಾರ್ಮ್ ಹೆಸ್ರಲ್ಲಿ ಗ್ರಾಹಕರ ಬಳಿ ಸುಲಿಗೆ ಮಾಡ್ತಿವೆ. ಸ್ವತಃ ಸಾರಿಗೆ ಇಲಾಖೆಯೇ ಆನ್ಲೈನ್ ಆಟೋ ಸೇವೆ ಅಕ್ರಮ ಅಂತ ಹೇಳಿದೆ. ತಮ್ಮ ಸೇವೆ ನಿಲ್ಲಿಸುವಂತೆ ತಾಕೀತು ಮಾಡಿ ನೋಟಿಸ್ ನೀಡಿದೆ. ಆದ್ರೆ ಓಲಾ, ಉಬರ್ ಸಂಸ್ಥೆಗಳು ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ಡೋಂಟ್ ಕೇರ್ ಅಂತಿವೆ.
ಓಲಾ, ಉಬರ್, ರಾಪಿಡೋ ವಿರುದ್ಧ ಸಾಲು ಸಾಲು ದೂರುಗಳು ಕೇಳಿ ಬರ್ತಿವೆ. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ. ಇಷ್ಟು ವರ್ಷ ಸುಮ್ಮನೆ ಕುಳಿತಿದ್ದ ಅಧಿಕಾರಿಗಳು ಈಗ, ನಾವು ಕ್ಯಾಬ್ ಸೇವೆಗೆ ಮಾತ್ರ ಅನುಮತಿ ಕೊಟ್ಟಿರೋದು. ಆಟೋ ಸೇವೆ ನಿಲ್ಲಿಸಿ ಅಂತ ಓಲಾ, ಉಬರ್, ರ್ಯಾಪಿಡೋಗೆ ನೋಟಿಸ್ ನೀಡಿ 3 ದಿನ ಗಡುವು ನೀಡಿತ್ತು. ಆದ್ರೆ ಕೊಟ್ಟ ಕಾಲಾವಕಾಶ ಮುಗಿದ್ರೂ ಅಧಿಕಾರಿಗಳು ಯಾವುದೇ ನಿರ್ದಾಕ್ಷೀಣ್ಯ ಕ್ರಮ ಕೈಗೊಂಡಿಲ್ಲ.
ಓಲಾ, ಉಬರ್ ಕಂಪನಿಗಳು ಕ್ಯಾಬ್ ಅಗ್ರಿಗೇಟರ್ ಪರವಾನಗಿ ಮಾತ್ರ ಹೊಂದಿವೆ. ಆದ್ರೆ ನಿಯಮ ಗಾಳಿಗೆ ತೂರಿ ಟ್ಯಾಕ್ಸಿ ಜೊತೆ ಆಟೋ ಸೇವೆ ನೀಡ್ತಿದೆ. ಸರ್ಕಾರ ಆಟೋ ಪ್ರಯಾಣಕ್ಕೆ ದರ ನಿಗದಿ ಮಾಡಿದೆ. ಆಟೋರಿಕ್ಷಾಗಳಿಗೆ ಮೊದಲ 2 ಕಿ.ಮೀ.ಗಳಿಗೆ 30 ರೂಪಾಯಿ, 2 ಕಿಲೋ ಮೀಟರ್ ಬಳಿಕ ಪ್ರತಿ ಕಿಲೋ ಮೀಟರ್ಗೆ 15 ರೂಪಾಯಿ ನಿಗದಿ ಮಾಡಿದೆ. ರಾತ್ರಿ 10 ಗಂಟೆ ಬಳಿಕ ಬೆಳಗ್ಗೆ 5 ಗಂಟೆವರೆಗೂ ಬಾಡಿಗೆ ಶೇ.50ರಷ್ಟು ಹೆಚ್ಚಿಸಬಹುದು ಎಂದು ಹೇಳಿದೆ. ಆದ್ರೆ ಈ ನಿಯಮ ಅಗ್ರಿಗೇಟರ್ ಟ್ಯಾಕ್ಸಿ ಕಂಪನಿಗಳಿಗೆ ಅನ್ವಯಿಸಲ್ಲ. ಯಾಕಂದ್ರೆ ಓಲಾ, ಉಬರ್ ಬಳಿ ಇರೋದು ಟ್ಯಾಕ್ಸಿ ಸೇವೆಯ ಲೈಸನ್ಸ್. ಹೀಗಾಗಿ ಗ್ರಾಹಕರ ಬಳಿ ಓಲಾ, ಉಬರ್, ರಾಪಿಡೋ ಸುಲಿಗೆ ಮಾಡ್ತಿವೆ. 2 ಕಿ.ಮೀಟರ್ಗೆ 100 ರೂಪಾಯಿ ಪಡೆದು, ಆಟೋ ಚಾಲಕರಿಗೆ 60 ರೂಪಾಯಿ ನೀಡಿ 40 ರೂಪಾಯಿ ಜೇಬಿಗೆ ಇಳಿಸ್ತಿವೆ. ಇದನ್ನೂ ಓದಿ:ಓಲಾ, ಊಬರ್ ಕಂಪನಿಗಳಿಗೆ ಸಡ್ಡು ಹೊಡೆಯಲು ಮುಂದಾದ ಆಟೋ ಚಾಲಕರು: ‘ನಮ್ಮ ಯಾತ್ರಿ’ ನೂತನ ಆ್ಯಪ್ ರಚಿಸಿದ ಆಟೋ ಯೂನಿಯನ್
Published On - 10:55 am, Mon, 10 October 22