ಬಿಎಂಟಿಸಿ ಡಿಪೋಗಳಲ್ಲಿ ಡೀಸೆಲ್ಗೆ ಹಾಹಾಕಾರ! ಬೆಂಗಳೂರಿನಲ್ಲಿ ಇಂದು ಬಸ್ ಸಂಚಾರ ವ್ಯತ್ಯಯ ಸಾಧ್ಯತೆ
ಡಿಪೋಗಳಲ್ಲಿ ಡೀಸೆಲ್ ಖಾಲಿಯಾಗಿರುವ ಹಿನ್ನೆಲೆ ನಿಗಮ ಚಿಲ್ಲರೆ ವ್ಯಾಪಾರಿಗಳಿಂದ ಡೀಸೆಲ್ ಖರೀದಿಸುತ್ತಿತ್ತು. ಆದರೆ ಮೂರು ದಿನದಿಂದ ಚಿಲ್ಲರೆ ವ್ಯಾಪಾರಿಗಳಿಂದೂ ಸಪ್ಲೈ ಆಗುತ್ತಿಲ್ಲ.
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಹುತೇಕ ಜನರು ಓಡಾಡಲು ಬಿಎಂಟಿಸಿ (BMTC) ಬಸ್ಗಳನ್ನೇ ಅವಲಂಬಿಸಿದ್ದಾರೆ. ವಿದ್ಯಾರ್ಥಿಗಳಿಂದ ಹಿಡಿದು ನೌಕರರ ತನಕ ಬಿಎಂಟಿಸಿ ಬಸ್ಗಳಲ್ಲಿ ಓಡಾಡುತ್ತಾರೆ. ಆದರೆ ಸದ್ಯ ಬಿಎಂಟಿಸಿ ಡಿಪೋಗಳಲ್ಲಿ ಡೀಸೆಲ್ಗೆ (Diesel) ಹಾಹಾಕಾರ ಶುರುವಾಗಿದ್ದು, ಇಂದು (ಜೂನ್ 27) ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಕಳೆದ ಎರಡು ದಿನಗಳಿಂದ ಡಿಪೋ ನಂ 22 ಸೇರಿ ಕೆಲ ಡಿಪೋಗಳಲ್ಲಿ ಡೀಸೆಲ್ ಕೊರತೆ ಎದುರಾಗಿತ್ತು. ಇಂದು ಬಹುತೇಕ ಡಿಪೋಗಳಲ್ಲಿ ಡೀಸೆಲ್ ಖಾಲಿ ಆಗುವ ಸಾಧ್ಯತೆ ಹೆಚ್ಚಿದೆ.
ಡಿಪೋಗಳಲ್ಲಿ ಡೀಸೆಲ್ ಖಾಲಿಯಾಗಿರುವ ಹಿನ್ನೆಲೆ ನಿಗಮ ಚಿಲ್ಲರೆ ವ್ಯಾಪಾರಿಗಳಿಂದ ಡೀಸೆಲ್ ಖರೀದಿಸುತ್ತಿತ್ತು. ಆದರೆ ಮೂರು ದಿನದಿಂದ ಚಿಲ್ಲರೆ ವ್ಯಾಪಾರಿಗಳಿಂದೂ ಸಪ್ಲೈ ಆಗುತ್ತಿಲ್ಲ. ಹೀಗಾಗಿ ಡಿಪೋಗಳಲ್ಲಿ ಭಾರಿ ಡೀಸೆಲ್ ಕೊರತೆ ಉಂಟಾಗಿದ್ದು, ಇಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರಯಾಣಿಕರಿಗೆ ಓಡಾಡಲು ತೊಂದರೆ ಉಂಟಾಗಬಹುದು.
ಇದನ್ನೂ ಓದಿ: ಇಂದಿನಿಂದ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ಆರಂಭ! ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ
ಸಗಟು ಖರೀದಿ ದರ ಹೆಚ್ಚಳದಿಂದ ನಿಗಮ ಚಿಲ್ಲರೆ ವ್ಯಾಪಾರದಲ್ಲಿ ತೈಲ ಖರೀದಿ ಮಾಡುತ್ತಿದೆ. ನಿತ್ಯ ಚಿಲ್ಲರೆ ವ್ಯಾಪಾರಿಗಳು ಟ್ಯಾಂಕರ್ಗಳ ಮೂಲಕ ಬಿಎಂಟಿಸಿ ಡಿಪೋಗಳಿಗೆ ಇಂಧನ ಪೂರೈಕೆ ಮಾಡುತ್ತಿದ್ದರು. ಆದರೆ ಇಂದು ಕಂಪನಿಗಳು ಬಂಕ್ಗಳಿಗೆ ಇಂಧನ ಪೂರೈಕೆ ಮಾಡಲಿಲ್ಲ. ಡಿಪೋಗಳಲ್ಲಿ ಡಿಸೇಲ್ ಖಾಲಿಯಾಗಿ ಬಿಎಂಟಿಸಿ ಬಸ್ಗಳು ಖಾಸಗಿ ಬಂಕ್ಗಳ ಮುಂದೆ ನಿಂತಿವೆ.
ಇಂದು ಡೀಸೆಲ್ ಪೂರೈಕೆ ಆಗದಿದ್ದರೆ ನಾಳೆ ಬಹುತೇಕ ಬಸ್ಗಳು ರೋಡಿಗೆ ಇಳಿಯುವುದು ಅನುಮಾನ ಇದೆ.
ಇದನ್ನೂ ಓದಿ: ಜುಲೈ 1ರಿಂದ ಕಬ್ಬನ್ ಪಾರ್ಕ್ನಲ್ಲಿ ಸಾಕುಪ್ರಾಣಿಗಳಿಗೆ ಪ್ರವೇಶ ನಿಷೇಧ ಪ್ರಸ್ತಾವ: ನಾಯಿ ಸಾಕಿದವರಿಂದ ಆಕ್ರೋಶ
Published On - 9:21 am, Mon, 27 June 22