ಬೆಂಗಳೂರಿಗೂ ಲಗ್ಗೆ ಇಟ್ಟ ಚಿರತೆ: ಬೀದಿ ನಾಯಿ ಮೇಲೆ ಅಟ್ಯಾಕ್, ಬೆಚ್ಚಿಬಿದ್ದ ಸ್ಥಳೀಯರು

ಕಾಡಂಚಿನಲ್ಲಿರುವ ಹಳ್ಳಿಗಳಲ್ಲಿ ಚಿರತೆ ಕಾಟ ಇರುವುದು ಸಾಮಾನ್ಯ ಆದ್ರೆ, ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿಗೂ ಚಿರತೆ ಲಗ್ಗೆ ಇಟ್ಟಿದ್ದು, ಬೀದಿ ನಾಯಿ ಮೇಲೆ ದಾಳಿ ಮಾಡಿದೆ. ಹನ್ನೊಂದು ದಿನದಲ್ಲಿ 4 ‌ಬಾರಿ ಚಿರತೆ ಪ್ರತ್ಯಕ್ಷವಾಗಿದೆ. ಇದರಿಂದ ಬೆಂಗಳೂರಿಗರಿಗೂ ಚಿರತೆ ಭಯ ಶುರುವಾಗಿದೆ. ಹಾಗಾದ್ರೆ, ಬೆಂಗಳೂರಿನ ಯಾವ ಏರಿಯಾದಲ್ಲಿ ಚಿರತೆ ಕಾಣಿಸಿಕೊಂಡಿದೆ ಎನ್ನುವ ಡಿಟೇಲ್ಸ್ ಇಲ್ಲಿದೆ.

ಬೆಂಗಳೂರಿಗೂ ಲಗ್ಗೆ ಇಟ್ಟ ಚಿರತೆ: ಬೀದಿ ನಾಯಿ ಮೇಲೆ ಅಟ್ಯಾಕ್, ಬೆಚ್ಚಿಬಿದ್ದ ಸ್ಥಳೀಯರು
Leopard
Edited By:

Updated on: Jul 20, 2026 | 10:42 PM

ಬೆಂಗಳೂರು, (ಜುಲೈ 20): ಯಶವಂತಪುರ (Yashwanthpur) ವಿಧಾನಸಭಾ ಕ್ಷೇತ್ರದ ಬ್ಯಾಡರಹಳ್ಳಿಯ ಒಂಟಿ ಚಿರತೆ (Leopard) ಪದೇ ಪದೇ ಕಾಣಿಸಿಕೊಳ್ಳುತ್ತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸೆರೆ ಹಿಡಿಯಲು ಮುಂದಾಗ್ತಿಲ್ಲ ಅನ್ಸುತ್ತೆ. ಕಳೆದ ವಾರ ಮೂರು ಬಾರಿ ಚಿರತೆ ಕಾಣಿಸಿಕೊಂಡಿತ್ತು, ನಂತರ ಗಿಡಮರಗಳನ್ನೆಲ್ಲ ತೆರವು ಮಾಡಿದ್ರು, ನಿವಾಸಿಗಳು ಇನ್ಮುಂದೆ ಚಿರತೆ ಬರೋದಿಲ್ಲ ಎಂದು ನಿಟ್ಟುಸಿರು ಬಿಟ್ಟಿದ್ರು. ಆದರೆ ಇದೀಗ ಮತ್ತೆ ಪಕ್ಕದ ರೋಡ್ ನಲ್ಲಿ ಚಿರತೆ ಕಾಣಿಸಿಕೊಂಡಿದ್ದು, ನಿವಾಸಿಗಳಲ್ಲಿ ಮತ್ತೆ ಆತಂಕ ಹೆಚ್ಚಾಗಿದೆ.

ಜುಲೈ 9ರಿಂದ ಈತನಕ 4 ಸಲ ಚಿರತೆ ಪ್ರತ್ಯಕ್ಷ

ಹೌದು.. ಜುಲೈ 9ರಿಂದ ಈತನಕ 4 ಸಲ ಭಾರತ್​​ನಗರದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಅರಣ್ಯ ಇಲಾಖೆ ಇಟ್ಟಿರುವ ಬೋನ್​​ಗೆ ಬಿದ್ದಿಲ್ಲ. ನಿನ್ನೆ ಬೆಳಗ್ಗೆ ಮತ್ತೆ 13ನೇ ಮಖ್ಯರಸ್ತೆಯಲ್ಲಿ ಶ್ವಾನದ ಮೇಲೆ ಚಿರತೆ ದಾಳಿ ಮಾಡಲು ಯತ್ನಿಸಿ ಪರಾರಿ ಆಗಿದೆ. ಅಟ್ಯಾಕ್ ಮಾಡಿರುವುದು ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ಚಿರತೆಯನ್ನ ಸೆರೆ ಹಿಡಿಯದ ಅರಣ್ಯಾಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಇನ್ನೂ ಮೂರು ಬಾರಿ ಚಿರತೆ ಕಾಣಿಸಿಕೊಂಡಿದ್ದ ಖಾಲಿ ಸೈಟ್ ಬಳಿ ಅರಣ್ಯ ಇಲಾಖೆ ಒಂದು ಬೋನ್ ಇಟ್ಟು,ಅದರಲ್ಲಿ ಬಾಯ್ಲರ್ ಕೋಳಿಯನ್ನು ಇಡಲಾಗಿದೆ. ಆದರೆ ಆ ಕಿಲಾಡಿ ಚಿರತೆ ಕೋಳಿ ವಾಸನೆಗೆ ಬೋನ್ ಬಳಿ ಬರುತ್ತಿದೆ. ಆದರೆ, ಚಿರತೆ ಬೋನ್ ಒಳಗೆ ಮಾತ್ರ ಹೋಗ್ತಿಲ್ಲ. ಇತ್ತ ಭಾರತ ನಗರದ 13ನೇ ಮುಖ್ಯ ರಸ್ತೆಯಲ್ಲಿ ನಿನ್ನೆ ಬೆಳಿಗ್ಗೆ ಚಿರತೆ ಕಾಣಿಸಿಕೊಂಡಿದ್ದ ಖಾಲಿ ಸೈಟ್ ಬಳಿ,ಇಂದು ಭಾರತ ನಗರದ ನೂರಾರು ನಿವಾಸಿಗಳು ಜಮಾಯಿಸಿದ್ದರು, ನಂತರ ಸ್ಥಳಕ್ಕೆ ಬಂದ ಜೆಸಿಬಿ ಎಲ್ಲಾ ಗಿಡಗಂಟಿಗಳನ್ನು ಕ್ಲೀನ್ ಮಾಡಿದರು.

ಇನ್ನು ಈ ವೇಳೆ ಮಾತನಾಡಿದ ಸ್ಥಳೀಯ ನಿವಾಸಿಗಳು, ಈ ಚಿರತೆಯಿಂದ ನಮಗೆ ತುಂಬಾ ಭಯ ಆಗ್ತಿದೆ. ಮನೆಯಿಂದ ಹೊರಗೆ ಬರಲು ಆಗ್ತಿಲ್ಲ, ಇಲ್ಲಿನ ನಿವಾಸಿಗಳು ವಾಕಿಂಗ್ ಮಾಡುವುದನ್ನೇ ಬಿಟ್ಟಿದ್ದೇವೆ. ಮಕ್ಕಳನ್ನು ಹೊರಗೆ ಆಟವಾಡಲು ಕಳಿಸಲು ಆಗ್ತಿಲ್ಲ, ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ನಾಲ್ಕೈದು ಬೋನ್ ಇಟ್ಟು ಅದನ್ನು ಸೆರೆ ಹಿಡಿಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಟ್ನಲ್ಲಿ ಭಾರತ್ ನಗರದಲ್ಲಿ ಕಳೆದ ಎರಡು ವಾರದಲ್ಲಿ ನಾಲ್ಕು ಬಾರಿ ಚಿರತೆ ಕಾಣಿಸಿಕೊಂಡಿದೆ, ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ಒಂದು ಬೋನ್ ಇಟ್ಟು ಕೈ ತೊಳೆದುಕೊಂಡಿದ್ದಾರೆ. ಯಾರನ್ನಾದರೂ ಚಿರತೆ ಬಲಿ ಪಡೆಯುವ ಮುನ್ನ ಸೆರೆ ಹಿಡಿದು ಕಾಡಿಗೆ ಬಿಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Loading...
Unable to load recommendations.
Follow Us