AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಂಸ ಬೇಕೆಂದು ಅಂಗಡಿ ಮಾಲೀಕನ ಮೇಲೆ ಹಲ್ಲೆ: ಪೊಲೀಸ್ ಠಾಣೆ ಮೆಟ್ಟಿಲೇರಿದ ತೊಡೆ ಮಾಂಸ ಕಿರಿಕ್

ನಗರದ ತಾವರೆಕೆರೆ ಮುಖ್ಯರಸ್ತೆಯ ಸದ್ದುಗುಂಟೆಪಾಳ್ಯ ಬಳಿಯ ಮಟನ್ ಅಂಗಡಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಕಿರಿಕ್ ಆಗಿದ್ದು ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ನಗೇಶ್ ಎಂಬ ವ್ಯಕ್ತಿ ಹಾಗೂ ಅಂಗಡಿ ಮಾಲೀಕ ಸೈಯದ್ ಸಲ್ಮಾನ್ ನಡುವೆ ತೊಡೆ ಮಾಂಸ ವಿಚಾರಕ್ಕೆ ಜಗಳವಾಗಿದ್ದು ಹಲ್ಲೆ ನಡೆದಿದೆ. ಸದ್ದುಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಂಸ ಬೇಕೆಂದು ಅಂಗಡಿ ಮಾಲೀಕನ ಮೇಲೆ ಹಲ್ಲೆ: ಪೊಲೀಸ್ ಠಾಣೆ ಮೆಟ್ಟಿಲೇರಿದ ತೊಡೆ ಮಾಂಸ ಕಿರಿಕ್
ಸಾಂದರ್ಭಿಕ ಚಿತ್ರ
Follow us
Jagadisha B
| Updated By: ಆಯೇಷಾ ಬಾನು

Updated on: Sep 13, 2023 | 7:53 AM

ಬೆಂಗಳೂರು, ಸೆ.13: ಜೆಸ್ಟ್ ಶ್ರಾವಣ ಮಾಸ ಮುಗಿದಿದೆ(Shravana Month). ಮಾಂಸ ತಿನ್ನದೇ ವೆಜಿಟೇರಿಯನ್ ಆಗಿದ್ದ ಮಂದಿ ಮಾಂಸದ ಅಂಗಡಿಗಳಿಗೆ ವಿಸಿಟ್ ಮಾಡಿ ಮಾಂಸ ಖರೀದಿಸಿ ಭರ್ಜರಿ ಬಾಡೂಟ ಮಾಡ್ತಿದ್ದಾರೆ. ಇನ್ನು ಕೆಲ ಮಂದಿ ಗಣೇಶ ಹಬ್ಬ ಮುಗಿಲಿ ಅಂತ ಕಾಯ್ತಿದ್ದಾರೆ(Chicken Kirik). ಆದ್ರೆ ಇಲ್ಲೊಬ್ಬ ವ್ಯಕ್ತಿ ತೊಡೆ ಮಾಂಸ ಬೇಕೆಂದು ಮಾಂಸದ ಅಂಗಡಿ ಮಾಲೀಕನ ಮೇಲೆಯೇ ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ನಗರದ ತಾವರೆಕೆರೆ ಮುಖ್ಯರಸ್ತೆಯ ಸದ್ದುಗುಂಟೆಪಾಳ್ಯ ಬಳಿಯ ಮಟನ್ ಅಂಗಡಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಕಿರಿಕ್ ಆಗಿದ್ದು ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ನಗೇಶ್ ಎಂಬ ವ್ಯಕ್ತಿ ಹಾಗೂ ಅಂಗಡಿ ಮಾಲೀಕ ಸೈಯದ್ ಸಲ್ಮಾನ್ ನಡುವೆ ಜಗಳವಾಗಿದ್ದು ಹಲ್ಲೆ ನಡೆದಿದೆ. 200 ರೂಪಾಯಿ ತಂದು ತೊಡೆ ಮಾಂಸ ಬೇಕು ಎಂದು ನಗೇಶ್ ಎಂಬ ವ್ಯಕ್ತಿ ಡಿಮ್ಯಾಂಡ್ ಮಾಡಿದ್ದಾನೆ. ಆಗ ಅಂಗಡಿ ಮಾಲೀಕ ಸೈಯದ್ ಸಲ್ಮಾನ್, 200 ರೂಪಾಯಿಗೆ ತೊಡೆ ಮಾಂಸ ಬರುವುದಿಲ್ಲ ಎಂದಿದ್ದಾರೆ. ಇಷ್ಟಕ್ಕೆ ಕೋಪಗೊಂಡ ನಾಗೇಶ್ ಅಂಗಡಿ ಯಾಕಿಟ್ಟಿದಿಯಾ? ಎಂದು ಕಿರಿಕ್ ಶುರು ಮಾಡಿದ್ದಾನೆ. ಈ ವೇಳೆ ನಗೇಶ್ ಹಾಘೂ ಸೈಯದ್ ನಡುವೆ ಜಗಳ ಶುರುವಾಗಿ ಕೈ ಕೈ ಮಿಲಾಯಿಸುವ ಹಂತ ತಲುಪಿದೆ. ಮಾತಿಗೆ ಮಾತು ಬೆಳೆದು ಅವಾಚ್ಯ ಶಬ್ಧಗಳಿಂದ ನಿಂದನೆಯಾಗಿದೆ.

ಇನ್ನು ಜಗಳದ ವೇಳೆ ನಗೇಶ್ ಅಲ್ಲೇ ಎಲ್ಲೊ ಕಟ್ ಆಗಿ ಬಿದ್ದಿದ್ದ ಟೈಲ್ಸ್ ನಿಂದ ಅಂಗಡಿ ಮಾಲೀಕ ಸೈಯದ್ ಸಲ್ಮಾನ್ ಮೇಲೆ ಹಲ್ಲೆ ಮಾಡಿದ್ದಾನಂತೆ. ಅವಾಚ್ಯ ಶಬ್ಧಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನಂತೆ. ಸದ್ಯ ಈ ಘಟನೆ ಸಂಬಂಧ ಸದ್ದುಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನರೇಶ್ ಎಂಬಾತ ಕಿರಿಕ್ ಹಾಗೂ ಹಲ್ಲೆ ನಡೆಸಿದ್ದಾಗಿ ಆರೋಪಿಸಿ ಸೈಯದ್ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಮಂಡ್ಯ: ಅಂಗಡಿಯಲ್ಲಿ ಕೂತು ಟೀ ಕುಡಿಯುತ್ತಿದ್ದ ಯುವಕನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

ಮದ್ಯಸೇವನೆ ಪ್ರಶ್ನಿಸಿದ್ದಕ್ಕೆ‌ ಹಲ್ಲೆ

ಇನ್ನು ಮತ್ತೊಂದೆಡೆ ಸಾರ್ವಜನಿಕ ಸ್ಥಳದಲ್ಲಿ‌ ಮದ್ಯಸೇವನೆ ಮಾಡುತ್ತಿದ್ದನ್ನ ಪ್ರಶ್ನಿಸಿದ್ದಕ್ಕೆ‌ ಹಲ್ಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದ ಮಲ್ಲಿಪಟ್ಟಣ ರಸ್ತೆಯ ಎಂಎಸ್ಐಎಲ್ ಮದ್ಯದಂಗಡಿ ಬಳಿ ಘಟನೆ ನಡೆದಿದೆ. ಮದ್ಯದಂಗಡಿ ಪಕ್ಕದ ಬಿಲ್ಡಿಂಗ್‌ನ ಮುಂಭಾಗ ಕಾರಿನಲ್ಲಿ ಕೂತು ನಾಲ್ಕೈದು ಮಂದಿ ಮದ್ಯಸೇವನೆ ಮಾಡ್ತಿದ್ದರು. ಈ ವೇಳೆ ಬಿಲ್ಡಿಂಗ್ ಮಾಲೀಕ ಮನೆಯಿಂದ ಸಾರ್ವಜನಿಕ ಸ್ಥಳದಲ್ಲಿ, ಕಾರಿನಲ್ಲಿ‌ ಕೂತು ಕುಡಿಯೋದನ್ನ ಪ್ರಶ್ನೆ ಮಾಡಿದ್ದಾರೆ. ಪ್ರಶ್ನೆ ಮಾಡಿದ್ದಕ್ಕೆ ಕೋಪಗೊಂಡ ಪಾನಮತ್ತರಾಗಿದ್ದ ನಾಲ್ಕೈದು ಮಂದಿ ಹಲ್ಲೆ ಮುಂದಾಗಿದ್ದು ಘಟನೆಯಲ್ಲಿ ಬಿಲ್ಡಿಂಗ್ ಮಾಲೀಕ ವಸಂತ್ ಕುಮಾರ್​ಗೆ ಗಾಯಗಳಾಗಿವೆ. ಗಲಾಟೆ ಮಾಡಿ ವಸಂತ್ ಕುಮಾರ್‌ ಮೇಲೆ‌ ಹಲ್ಲೆ‌ ಮಾಡೋ‌ ವಿಡಿಯೋ ಸಿಸಿ ಕ್ಯಾಮರಾದಲ್ಲಿ‌ ಸೆರೆಯಾಗಿದೆ. ಹಲ್ಲೆ‌ಮಾಡಿದವರನ್ನ ಬಂಧಿಸಿ ಮದ್ಯದಂಗಡಿಯನ್ನ ತೆರವು ಮಾಡಬೇಕೆಂಬ ಒತ್ತಾಯ ಕೇಳಿ ಬಂದಿದೆ. ಅರಕಲಗೂಡು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ