ಪೇಂಟ್ ಮಾಡುವಾಗ ವೆಂಕಟರಾಜ್ ರವರಿಗೆ 11 ಕೆ.ವಿ. ಸಾಮರ್ಥ್ಯದ ವಿದ್ಯುತ್ ತಂತಿ ಸ್ಪರ್ಶಿಸಿದೆ. ಇದರಿಂದ ಅವರ ಸ್ಥಿತಿ ಗಂಭೀರವಾಗಿದ್ದು ವೆಂಕಟರಾಜ್ ದೇಹ ಕೊಂಚ ಸುಟ್ಟು ಹೋಗಿದೆ. ಸದ್ಯ ಬೆಸ್ಕಾಂ ಇಲಾಖೆಯ ವಿರುದ್ದ ಗ್ರಾಮಸ್ಥರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಇನ್ನು ಮತ್ತೊಂದು ಕಡೆ ಬ್ರೇಕ್ ಫೇಲ್ ಆಗಿ LPG ಟ್ಯಾಂಕರ್ ರಸ್ತೆಯಲ್ಲಿ ಉರುಳಿಬಿದ್ದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾದವಾರದ ನೈಸ್ ರಸ್ತೆಯ ಟೋಲ್ ಬಳಿ ನಡೆದಿದೆ. ಘಟನಾ ಸ್ಥಳಕ್ಕೆ ಪೀಣ್ಯ ಅಗ್ನಿಶಾಮಕ ದಳ ಸಿಬ್ಬಂದಿ, ಮಾದನಾಯಕನಹಳ್ಳಿ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಅಗ್ನಿಶಾಮಕ ದಳ ಹಾಗೂ ಸಂಚಾರಿ ಪೊಲೀಸ್, ನೈಸ್ ಸಿಬ್ಬಂದಿಯಿಂದ ಕ್ರೈನ್ ಬಳಸಿ ಲಾರಿ ಮೇಲೆತ್ತುವ ಕಾರ್ಯ ಯಶಸ್ವಿಯಾಗಿದ್ದು ಅಡಚಣೆಯಾಗಿದ್ದ ಟ್ರಾಫಿಕ್ ಕ್ಲಿಯರ್ ಆಗಿದೆ. ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಹಾಗೂ ಟೋಯಿಂಗ್ ವಾಹನ ಬಳಸಿ ಲಾರಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ತಮಿಳುನಾಡಿನಿಂದ ನೆಲಮಂಗಲಕ್ಕೆ ತೆರಳುವ ವೇಳೆ ಈ ಅವಘಡ ಸಂಭವಿಸಿತ್ತು ಎಂದು ತಿಳಿದು ಬಂದಿದ್ದು ಚಾಲಕ ಕುಮಾರ್ ಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗ್ಯಾಸ್ ಟ್ಯಾಂಕರ್ ಪಲ್ಟಿ
ಮಂಗಳೂರಿನಿಂದ ಬೆಂಗಳೂರಿಗೆ ತೆರಳ್ತಿದ್ದ ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮಾರನಹಳ್ಳಿ ಬಳಿ ನಡೆದಿದೆ. ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಹೆದ್ದಾರಿಯಲ್ಲಿ ಸಂಚಾರ ವ್ಯತ್ಯಯವಾಗಿದ್ದು ಟ್ಯಾಂಕರ್ನಲ್ಲಿ ಸಿಲುಕಿದ್ದ ಚಾಲಕನನ್ನು ಅಗ್ನಿಶಾಮಕ ದಳ ರಕ್ಷಿಸಿದೆ. ಉರುಳಿಬಿದ್ದ ಟ್ಯಾಂಕರ್ನಿಂದ ಅನಿಲ ಸೋರಿಕೆಯಾಗುವ ಭೀತಿ ಉಂಟಾಗಿದ್ದು ಮುನ್ನೆಚ್ಚರಿಕೆಯಾಗಿ ವಾಹನಗಳ ಸಂಚಾರಕ್ಕೆ ಮಾರ್ಗಬದಲಾವಣೆ ಮಾಡಲಾಗಿದೆ. ಮತ್ತೊಂದು ಟ್ಯಾಂಕರ್ಗೆ ಗ್ಯಾಸ್ ರೀಫಿಲ್ ಮಾಡಲು ಪ್ರಯತ್ನ ಮಾಡಲಾಗುತ್ತಿದ್ದು ಸಕಲೇಶಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಬಾರಾಬಂಕಿಯಲ್ಲಿ ಬಸ್-ಟ್ರಕ್ ನಡುವೆ ಭೀಕರ ಅಪಘಾತ; 9ಮಂದಿ ಸ್ಥಳದಲ್ಲೇ ಸಾವು
Crime News: ಟೀಚರ್, ಕಾಲೇಜು ಯುವತಿಯರ ಅಶ್ಲೀಲ ಫೋಟೋ ಪೋಸ್ಟ್ ಮಾಡಿದ ಐಐಟಿ ವಿದ್ಯಾರ್ಥಿ ಬಂಧನ