ಬೆಂಗಳೂರಿನ ಮಾರ್ಕೆಟ್ಗಳಲ್ಲಿ ದಸರಾ ಹಬ್ಬದ ಖರೀದಿ ಜೋರು..! ಹೂವು-ಹಣ್ಣಿನ ಬೆಲೆ ಎಷ್ಟಿದೆ ಗೊತ್ತಾ?
ಬೆಂಗಳೂರಿನ ಕೆಆರ್ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಜೋರಾಗಿದೆ. ಕಾಲಿಡುವುದಕ್ಕೂ ಜಾಗವಿಲ್ಲದಷ್ಟು ಜನ ಸೇರಿದ್ದಾರೆ. ಹೂ, ಹಣ್ಣು, ತರಕಾರಿ ಖರೀದಿ ಮಾಡುವುದರಲ್ಲಿ ಜನ ಫುಲ್ ಬ್ಯುಸಿಯಾಗಿದ್ದಾರೆ. ಹೀಗಾಗಿ ಕೆ.ಆರ್. ಮಾರುಕಟ್ಟೆ ಸುತ್ತ - ಮುತ್ತ ಫುಲ್ ಟ್ರಾಫಿಕ್ ಜಾಮ್ ಆಗಿದೆ.
ಬೆಂಗಳೂರು, ಅ.22: ನಾಡಿನೆಲ್ಲೆಡೆ ಆಯುಧ ಪೂಜೆ (Ayudha Puja) ಹಬ್ಬದ ಸಂಭ್ರಮ ಮನೆ ಮಾಡಿದೆ. ನಾಳೆ (ಅ.22) ಆಯುಧ ಪೂಜೆ ಹಿನ್ನೆಲೆ ಹೂ, ಹಣ್ಣು, ತರಕಾರಿ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ರಾಜ್ಯದ ಬಹುತೇಕ ಮಾರುಕಟ್ಟೆಗಳು ಜನರಿಂದ ತುಂಬಿ ಹೋಗಿವೆ. ಹಬ್ಬ ಹಿನ್ನೆಲೆ ಹೂ, ಹಣ್ಣಿನ ದರ ಕೊಂಚ ಏರಿಕೆಯಾಗಿದೆ. ಆಯಧ ಪೂಜೆಯ ಸಾಮಗ್ರಿಗಳಿಗೆ ಡಿಮ್ಯಾಂಡ್ ಹೆಚ್ಚಿದೆ. ಬೂದು ಕುಂಬಳಕಾಯಿ, ಹೂವು, ಹಣ್ಣು, ಬಾಳೆಕಂದು, ಮಾವಿನ ಸೊಪ್ಪು ಸೇರಿದಂತೆ ಆಯುಧ ಪೂಜೆಗೆ ಅಗತ್ಯವಾಗಿರುವ ವಸ್ತುಗಳ ಖರೀದಿಯಲ್ಲಿ ಜನ ತೊಡಗಿದ್ದಾರೆ.
ಮೈಸೂರಿನ ದೇವರಾಜ ಮಾರುಕಟ್ಟೆ, ಎಂ.ಜಿ ರಸ್ತೆಯ ಮಾರುಕಟ್ಟೆ ಸೇರಿದಂತೆ ವಿವಿಧೆಡೆಗಳಲ್ಲಿರುವ ಮಾರುಕಟ್ಟೆಯಲ್ಲಿ ಜನವೂ ಜನ ಸೇರಿದ್ದಾರೆ. ರಸ್ತೆ ಬದಿಯಲ್ಲೂ ಆಯುಧ ಪೂಜೆ ಸಾಮಗ್ರಿಗಳ ಖರೀದಿಯ ಭರಾಟೆ ಜೋರಾಗಿದೆ.
ಇನ್ನು ಬೆಂಗಳೂರಿನ ಕೆಆರ್ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಜೋರಾಗಿದೆ. ಕಾಲಿಡುವುದಕ್ಕೂ ಜಾಗವಿಲ್ಲದಷ್ಟು ಜನ ಸೇರಿದ್ದಾರೆ. ಹೂ, ಹಣ್ಣು, ತರಕಾರಿ ಖರೀದಿ ಮಾಡುವುದರಲ್ಲಿ ಜನ ಫುಲ್ ಬ್ಯುಸಿಯಾಗಿದ್ದಾರೆ. ಹೀಗಾಗಿ ಕೆ.ಆರ್. ಮಾರುಕಟ್ಟೆ ಸುತ್ತ – ಮುತ್ತ ಫುಲ್ ಟ್ರಾಫಿಕ್ ಜಾಮ್ ಆಗಿದೆ. ಹಬ್ಬದ ಸಲುವಾಗಿ ಹೂವಿನ ಬೆಲೆ ಏರಿಕೆಯಾಗಿದ್ದು ತರಕಾರಿಯ ಬೆಲೆ ಕೂಡ ಕೊಂಚ ಏರಿಕೆಯಾಗಿದೆ. ಹಣ್ಣುಗಳ ಬೆಲೆ 100ರ ಗಡಿ ದಾಟಿದೆ.
ನಿನ್ನೆಗೆ ಹೋಲಿಸಿದರೆ ಇಂದು ಬೆಲೆ ಡಬಲ್ ಆಗಿದೆ. ತರಕಾರಿಯಲ್ಲಿ 20ರೂ. ರಿಂದ 30ರೂ ಏರಿಕೆಯಾಗಿದೆ. ಹೂವಿನ ಬೆಲೆಯಲ್ಲಿ 50 ರಿಂದ 60ರುಪಾಯಿ ಏರಿಕೆಯಾಗಿದೆ. ಬೆಲೆ ಏರಿಕೆಯ ಮಧ್ಯೆಯೂ ಜನ ಖರೀದಿಯಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ: ಬಾಲ್ಯದಲ್ಲಿದ್ದಾಗ ಮೈಸೂರು ದಸರಾ ಹೇಗಿತ್ತು ಎಂದು ನೆನಪಿಸಿಕೊಂಡ ನಟಿ ಮಾನ್ವಿತಾ ಕಾಮತ್
ಇಂದಿನ ತರಕಾರಿ ದರ
- ಕ್ಯಾರೆಟ್- 60 kg
- ಬೀನ್ಸ್ – 80 kg
- ಬಿಟ್ರೋಟ್ – 40 kg
- ಬದನೆಕಾಯಿ – 50 kg
- ಬೆಂಡೆಕಾಯಿ – 40 kg
- ದಪ್ಪ ಮೆಣಸಿನಕಾಯಿ – 40 kg
- ಗ್ರೀನ್ ಮೆಣಸಿನಕಾಯಿ – 50 kg
- ಮೂಲಂಗಿ – 40 kg
- ಟೊಮಾಟೋ – 25 kg
- ಬಟಾಣಿ – 400 kg
- ಅರವರೆಕಾಯಿ – 80 kg
- ನವೀಲು ಕೋಸು – 80 kg
- ಈರುಳ್ಳಿ – 50 kg
- ಆಲೂಗೆಡ್ಡೆ – 30 kg
- ಹೀರೇಕಾಯಿ – 120 kg
- ತೊಗರಿಕಾಯಿ – 400 kg
- ಬೆಳ್ಳುಳ್ಳಿ – 240 kg
- ಹಾಗಲಕಾಯಿ – 120 kg
ಇಂದಿನ ಹೂಗಳ ದರ
- ಕನಕಾಂಬರ- 2400 kg
- ಮಲ್ಲಿಗೆ – 1200 – 1600 kg
- ಸೇವಂತಿಗೆ – 300 kg
- ಚಂಡೂ ಹೂ ಕೆಜೆ – 100 kgರೂ
- ಕಣಗಿಲೆ – 600 ರೂ kg
- ದುಂಡು ಮಲ್ಲಿಗೆ – 1209 kg
- ಕಾಕಡಾ- 500 ರೂ ಕೆಜೆ
- ಆಮ್ರ ಮಲ್ಲಿಗೆ – 800 ರೂ ಕೆಜೆ
- ಬಿಳಿ ಸೇವಂತಿಗೆ – 300 kg
- ಹಳದಿ ಸೇವಂತಿಗೆ – 350 ರೂ ಕೆಜೆ
- ಕೆಂಪು ಸೇವಂತಿಗೆ – 350 kg
- ಪರ್ಪಲ್ ಸೇವಂತಿಗೆ – 350kg
- ಗುಲಾಬಿ ಹೂ – 400 kg
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:20 am, Sun, 22 October 23