ಹುತಾತ್ಮ ಮೇಜರ್ ಅಕ್ಷಯ್ ಗಿರೀಶ್ ನಾಮಫಲಕ ಪುಡಿ ಪುಡಿ ಮಾಡಿದ ಕಿಡಿಗೇಡಿಗಳು
ಹುತಾತ್ಮ ಮೇಜರ್ ಅಕ್ಷಯ್ ಗಿರೀಶ್ ಅವರ ನಾಮಫಲಕವನ್ನು ಕಿಡಿಗೇಡಿಗಳು ಬೀಳಿಸಿದ್ದಾರೆ. ಈ ಬಗ್ಗೆ ಹುತಾತ್ಮ ಮೇಜರ್ ಅಕ್ಷಯ್ ಗಿರೀಶ್ ಅವರ ತಾಯಿ ಮೇಘನಾ ಗಿರೀಶ್ ಅವರು ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, ಜನವರಿ 15: ಹುತಾತ್ಮ ಮೇಜರ್ ಅಕ್ಷಯ್ ಗಿರೀಶ್ ಅವರ ನಾಮಫಲಕವನ್ನು (Nameplate) ಕಿಡಿಗೇಡಿಗಳು ಬೀಳಿಸಿದ್ದಾರೆ. ಈ ಬಗ್ಗೆ ಹುತಾತ್ಮ ಮೇಜರ್ ಅಕ್ಷಯ್ ಗಿರೀಶ್ ಅವರ ತಾಯಿ ಮೇಘನಾ ಗಿರೀಶ್ ಅವರು ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. ನೆನಪಿಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸುನದಹಳ್ಳಿ ರಸ್ತೆಗೆ 2020ರಲ್ಲಿ ಹುತಾತ್ಮ ಮೇಜರ್ ಅಕ್ಷಯ್ ಗಿರೀಶ್ ಅವರ ಹೆಸರಿಡಲಾಗಿತ್ತು. ಮತ್ತು ಅಂದು ಮೇಜರ್ ಅಕ್ಷಯ್ ಗಿರೀಶ್ ಅವರ ಹೆಸರಿನ ನಾಮಫಲಕವನ್ನು ಕಾಂಗ್ರೆಸ್ ಶಾಸಕ ಕೃಷ್ಣಭೈರೇಗೌಡ (Krishna Byregowda) ಅವರು ಉದ್ಘಾಟಿಸಿದ್ದರು. ಈ ಮೂಲಕ ಹುತಾತ್ಮ ಮೇಜರ್ ಅಕ್ಷಯ್ ಗಿರೀಶ್ ರಸ್ತೆ ಎಂದು ನಾಮಕರಣ ಮಾಡಲಾಗಿತ್ತು.
ಆದರೆ ಆ ನಾಮಫಲಕ ಈಗ ಪುಡಿ ಪುಡಿಯಾಗಿದೆ. ಇದು ಅಪಘಾತವೋ ಅಥವಾ ಕಿಡಿಗೇಡಿಗಳ ಕೃತ್ಯದ ಬಗ್ಗೆ ತನಿಖೆ ನಡೆಸಬೇಕಿದೆ. ಸೋಮವಾರ ಆರ್ಮಿ ಡೇ ಮತ್ತು ಸಂಕ್ರಾಂತಿ ಹಬ್ಬ ಇದೆ. ಆದರೆ ನಮಗೆ ನೋವಿನ ಸಂಗತಿ ಎಂದು ಹುತಾತ್ಮ ಯೋಧನ ತಾಯಿ ಎಕ್ಸ್ನಲ್ಲಿ ಪೋಸ್ಟ್ ಹಾಕಿದ್ದರೆ.
Respected @krishnabgowda Sir, the Sadahalli village road plaque you named in our brave son’s memory lies destroyed this morning
Our hearts are also broken to see this
We don’t know if this is by accident or on on purpose… but we seek your urgent intervention to restore… https://t.co/nugKsRb4wV pic.twitter.com/liLwZ8loTv
— Meghna Girish 🇮🇳 (@megirish2001) January 14, 2024
ಇದನ್ನೂ ಓದಿ: ಪಂಚಭೂತಗಳಲ್ಲಿ ಲೀನರಾದ ಕ್ಯಾಪ್ಟನ್ ಎಂವಿ ಪ್ರಾಂಜಲ್
ಉಗ್ರಗಾಮಿಗಳ ಜೊತೆ ಹೋರಾಡಿ ವೀರಮರಣವನ್ನಪ್ಪಿದ ಯೋಧ
2016 ರ ನವೆಂಬರ್ 29 ರಂದು ಜಮ್ಮು-ಕಾಶ್ಮೀರದ ನಗ್ರೋಟಾ ಉಗ್ರದಾಳಿಯಲ್ಲಿ ಹುತಾತ್ಮರಾದ ಏಳು ಯೋಧರ ಪೈಕಿ ಬೆಂಗಳೂರಿನ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಸಹ ಒಬ್ಬರು. 31 ವರ್ಷದ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಬೆಂಗಳೂರಿನ ಯಲಹಂಕದ ಗೇಟ್ ಗಾರ್ಡನ್ ನಿವಾಸಿಯಾಗಿದ್ದು, ಅಂದು ನಡೆದ ಉಗ್ರರ ಕಾಳಗದಲ್ಲಿ ದೇಶಕ್ಕಾಗಿ ತಮ್ಮ ಪ್ರಾಣ ಅರ್ಪಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ