ಬೆಂಗಳೂರಿನಲ್ಲಿ ಮಕ್ಕಳಿಗಾಗಿ ಸ್ಪೆಷಲ್ ಕ್ಯಾಬ್​: ಶೀಘ್ರದಲ್ಲೇ ಮೆಟ್ರೋ‌ ರೈಡ್ ಕಿಡ್ಸ್ ಕ್ಯಾಬ್ ಆರಂಭ

ಬೆಂಗಳೂರಿನಲ್ಲಿ ಮಕ್ಕಳಿಗಾಗಿ ಮೆಟ್ರೋ ರೈಡ್ ಕಿಡ್ಸ್ ಕ್ಯಾಬ್ ಸೇವೆ ಆರಂಭವಾಗಲಿದೆ. ಸಿಸಿಟಿವಿ ಮತ್ತು ಜಿಪಿಎಸ್ ವ್ಯವಸ್ಥೆ ಹೊಂದಿರುವ ಈ ಕ್ಯಾಬ್ 5 ರಿಂದ 16 ವರ್ಷದ ಮಕ್ಕಳಿಗೆ ಅನುಕೂಲಕರವಾಗಿದೆ ಎಂದು ಹೇಳಲಾಗಿದೆ. ಆದರೆ, ಹೆಣ್ಣು ಮಕ್ಕಳ ಸುರಕ್ಷತೆ ಕುರಿತು ಆತಂಕ ವ್ಯಕ್ತವಾಗಿದ್ದು, ಸರ್ಕಾರ ಇದನ್ನು ಪರಿಗಣಿಸಬೇಕಾಗಿದೆ. ಕ್ಯಾಬ್‌ನಲ್ಲಿ ಸುರಕ್ಷತಾ ಕ್ರಮಗಳು ಸಾಕಷ್ಟಿವೆಯೇ ಎಂಬುದು ಪ್ರಶ್ನಾರ್ಹವಾಗಿದೆ.

ಬೆಂಗಳೂರಿನಲ್ಲಿ ಮಕ್ಕಳಿಗಾಗಿ ಸ್ಪೆಷಲ್ ಕ್ಯಾಬ್​: ಶೀಘ್ರದಲ್ಲೇ ಮೆಟ್ರೋ‌ ರೈಡ್ ಕಿಡ್ಸ್ ಕ್ಯಾಬ್ ಆರಂಭ
ಸಾಂದರ್ಭಿಕ ಚಿತ್ರ
Follow us
Vinayak Hanamant Gurav
| Updated By: ವಿವೇಕ ಬಿರಾದಾರ

Updated on:Dec 21, 2024 | 10:17 AM

ಬೆಂಗಳೂರು, ಡಿಸೆಂಬರ್​ 21: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಮಕ್ಕಳಿಗಾಗಿ ಅಂತ ಸ್ಟಾರ್ಟ್ ಅಪ್ ಕಂಪನಿಯೊಂದು ಮೆಟ್ರೋ‌ ರೈಡ್ ಕಿಡ್ಸ್ ಕ್ಯಾಬ್ (Metro Raid Kids Cab) ಆರಂಭಿಸಲು ಸಿದ್ಧವಾಗಿದೆ. ಈಗಾಗಲೇ ಹೈದರಾಬಾದ್​ನಲ್ಲಿ ಚಾಲ್ತಿಯಲ್ಲಿರುವ ಕಿಡ್ಸ್ ಕ್ಯಾಬ್ ಬೆಂಗಳೂರಿಗೆ ಪರಿಚಯಿಸಲು ಮುಂದಾಗಿದೆ. ಆದರೆ ಪೋಷಕರಿಂದ ಈ ಕಿಡ್ಸ್ ಕ್ಯಾಬ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮಕ್ಕಳ ಪ್ರಯಾಣಕ್ಕಂತಲೇ ಮೆಟ್ರೋ ರೈಡ್ ಕಿಡ್ಸ್ ಕ್ಯಾಬ್ ರಸ್ತೆಗೆ ಇಳಿಯಲು ಸಿದ್ದವಾಗಿದ್ದು, ಇದು ಮಕ್ಕಳಿಗೆ ಮಾತ್ರ ಕಾರ್ಯ ನಿರ್ವಹಿಸುತ್ತದೆ. ಸದ್ಯ ಹೈದರಾಬಾದ್​ನಲ್ಲಿ ಕಿಡ್ಸ್ ಕ್ಯಾಬ್ ಚಾಲ್ತಿಯಲ್ಲಿದೆ. ಈಗ ಬೆಂಗಳೂರಿಗೂ ಆಗಮಿಸಲಿದ್ದು, ಇನ್ನೆರಡು ತಿಂಗಳಲ್ಲಿ ರಸ್ತೆಗಿಳಿಯಲಿದೆ. ಮಕ್ಕಳನ್ನು ಪಿಕ್ ಅಪ್ ಮತ್ತು ಡ್ರಾಪ್ ಮಾಡುವ ಕಿಡ್ಸ್ ಕ್ಯಾಬ್​ಗಳಲ್ಲಿ ಸಿಸಿಟಿವಿ ಮತ್ತು ಜಪಿಎಸ್​ ಇರುತ್ತದೆ. ಆ್ಯಪ್ ಮೂಲಕ ಕ್ಯಾಬ್ ಲೈವ್ ಲೊಕೇಶನ್ ​ಪರಿಶೀಲಿಸಬಹುದು. 5 ರಿಂದ 16 ವರ್ಷದ ಮಕ್ಕಳಿಗಾಗಿ ಈ ಕ್ಯಾಬ್ ಮೀಸಲಾಗಿದ್ದು, ಶಾಲೆ ಮತ್ತು ಕಾಲೇಜು ಇನ್ನಿತರ ಚಟುವಟಿಕೆಗಳಿಗೆ ತೆರಳುವ ಮಕ್ಕಳಿಗೆ ಅನುಕೂಲವಾಗಲಿದೆ.

ಇದನ್ನೂ ಓದಿ: ಹೈದರಾಬಾದ್​, ಚೆನ್ನೈ ಬೇಕಾಗಿಲ್ಲ ಬೆಂಗಳೂರಿನಲ್ಲೇ ಸಿಗಲಿದೆ ಅಮೆರಿಕ ವೀಸಾ

ಇನ್ನೂ ಈಗಾಗಲೇ ಸರ್ಕಾರ ಕೂಡ ಶಾಲಾ ಬಸ್​ಗಳಿಗೆ ಜಿಪಿಎಸ್, ಸಿಸಿಟಿವಿ ಅಳವಡಿಕೆ ಜೊತೆಗೆ ಚಾಲಕ ಕುಡಿಯಬಾರದು ಎನ್ನುವ ಆದೇಶ ಇದೆ. ಆದರೂ ಕೂಡ ಚಾಲಕರು ಕುಡಿದು ಚಾಲನೆ ಮಾಡುವ ಘಟನೆಗಳು ಕಂಡು ಬರುತ್ತಿವೆ. ಹೀಗಿಗಾಗಿ ಖಾಸಗಿ ಕಂಪನಿಯೊಂದು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಹೊಸದಾಗಿ ಮೆಟ್ರೊ ಕಿಡ್ಸ್ ಕ್ಯಾಬ್​​ ಬೆಂಗಳೂರಿಗೆ ಪರಿಚಯಿಸುತ್ತಿದೆ.

ಆದರೆ, ಈ ಕ್ಯಾಬ್​ ಗಂಡು ಮಕ್ಕಳಿಗೆ ಒಕೆ ಆದರೆ ಹೆಣ್ಣು ಮಕ್ಕಳ ಹಿತದೃಷ್ಟಿಯಿಂದ ಇದು ಬೇಡ ಎಂದು ಮಕ್ಕಳ ಪೋಷಕರು ಹೇಳುತ್ತಿದ್ದಾರೆ.

ಒಟ್ಟಿನಲ್ಲಿ ಮಕ್ಕಳ ಸರಕ್ಷತೆ ವಿಚಾರವಾಗಿ ಮೆಟ್ರೊ ಕಿಡ್ಸ್ ಕ್ಯಾಬ್ ಬೆಂಗಳೂರಿಗೆ ದಾಪುಗಾಲು ಇಡಲು ಮುಂದಾಗಿದೆ. ಆದರೆ 10 ರಿಂದ 16 ವರ್ಷದ ಹೆಣ್ಣು ಮಕ್ಕಳಿಗೆ ಮನ ವಿಚಲಿತ ಆಗುವ ಸಂಭವ ಹೆಚ್ಚಾಗಿದ್ದು, ಈ ಅಂಶಗಳನ್ನ ಪರಿಗಣನೆಗೆ ತಗೆದುಕೊಂಡು ಸರ್ಕಾರ ಕ್ಯಾಬ್​​ಗೆ ಪರ್ಮಿಷನ್ ಕೊಡಬೇಕು ಅನ್ನೋದು ಜನರ ಆಶಯ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:41 am, Sat, 21 December 24

ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​