ಇನ್ಮುಂದೆ ರ‍್ಯಾಪಿಡೋ ಸೇರಿದಂತೆ ಸಂಚಾರಿ ಆ್ಯಪ್​​ಗಳಲ್ಲಿ ಮೆಟ್ರೋ ಟಿಕೆಟ್​ ಲಭ್ಯ: ಇಲ್ಲಿದೆ ಮಾಹಿತಿ

ಬೆಂಗಳೂರು ಮೆಟ್ರೋ ರೈಲು ನಿಗಮವು ಓಪನ್ ನೆಟ್ವರ್ಕ್ ಡಿಜಿಟಲ್ ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕ QR ಕೋಡ್ ಟಿಕೆಟ್ ವ್ಯವಸ್ಥೆಯನ್ನು ಪ್ರಾರಂಭಿಸಿದೆ. ಇದರಿಂದ ಪ್ರಯಾಣಿಕರು ರ‍್ಯಾಪಿಡೋ, ನಮ್ಮ ಯಾತ್ರಿ, ರೆಡ್ ಬಸ್ ಮುಂತಾದ ಆ್ಯಪ್‌ಗಳ ಮೂಲಕ ನೇರವಾಗಿ ಟಿಕೆಟ್‌ಗಳನ್ನು ಪಡೆಯಬಹುದಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಈ ಸೇವೆಯನ್ನು ಉದ್ಘಾಟಿಸಿದ್ದಾರೆ.

ಇನ್ಮುಂದೆ ರ‍್ಯಾಪಿಡೋ ಸೇರಿದಂತೆ ಸಂಚಾರಿ ಆ್ಯಪ್​​ಗಳಲ್ಲಿ ಮೆಟ್ರೋ ಟಿಕೆಟ್​ ಲಭ್ಯ: ಇಲ್ಲಿದೆ ಮಾಹಿತಿ
ಕ್ಯೂಆರ್ ಟಿಕೆಟ್ ಸೇವೆಗೆ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ

Updated on: Jul 11, 2025 | 8:59 AM

ಬೆಂಗಳೂರು, ಜುಲೈ 11: ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿ ಡಿಜಿಟಲ್ ವಾಣಿಜ್ಯದ ಓಪನ್ ನೆಟ್ವರ್ಕ್ (ONDC) ಪ್ಲಾಟ್ ಫಾರ್ಮ್​​ ಆಧಾರಿತ ಮೆಟ್ರೋ ಕ್ಯೂಆರ್ ಟಿಕೆಟ್ ಸೇವೆಯನ್ನು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಗುರುವಾರ ಉದ್ಘಾಟಣೆ ಮಾಡಿದ್ದಾರೆ. ಇನ್ನು ಮುಂದೆ ರ‍್ಯಾಪಿಡೋ, ನಮ್ಮ ಯಾತ್ರಿ, ರೆಡ್‌ ಬಸ್ ಸೇರಿದಂತೆ ಪ್ರಮುಖ ಸಂಚಾರ ಆ್ಯಪ್‌ಗಳಲ್ಲಿ ನೇರವಾಗಿ ಮೆಟ್ರೋ ಕ್ಯೂಆರ್ ಟಿಕೆಟ್‌ಗಳನ್ನು ಪಡೆಯಬಹುದಾಗಿದೆ.

ಸಂಚಾರ ಆ್ಯಪ್‌ಗಳಲ್ಲಿ ಮೆಟ್ರೋ ಕ್ಯೂಆರ್ ಟಿಕೆಟ್‌ ಲಭ್ಯ

ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ನಿನ್ನೆ ಬಿಎಂಆ‌ರ್​ಸಿ​ಎಲ್ ಸಂಸ್ಥೆಯ ಡಿಜಿಟಲ್ ವಾಣಿಜ್ಯದ ಓಪನ್ ನೆಟ್ವರ್ಕ್  ಪ್ಲಾಟ್ ಫಾರ್ಮ್ ಆಧಾರಿತ ಮೆಟ್ರೋ ಕ್ಯೂಆರ್ ಟಿಕೆಟ್ ಸೇವೆಯನ್ನು ಉದ್ಘಾಟಿಸಿದರು. ಈ ನೂತನ ತಂತ್ರಜ್ಞಾನದ ಮೂಲಕ ರ‍್ಯಾಪಿಡೋ, ನಮ್ಮ ಯಾತ್ರಿ, ಟಮ್ಮಾಕ್, ರೆಡ್‌ ಬಸ್ ಸೇರಿದಂತೆ ಪ್ರಮುಖ ಸಂಚಾರ ಆ್ಯಪ್‌ಗಳಲ್ಲಿ ನೇರವಾಗಿ ಮೆಟ್ರೋ ಕ್ಯೂಆರ್ ಟಿಕೆಟ್‌ಗಳನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ
ಯಶವಂತಪುರದಿಂದ ಹೊರಡುವ ಈ ವಂದೇ ಭಾರತ್ ರೈಲಿಗೆ ಹೆಚ್ಚುವರಿ ಬೋಗಿಗಳು
ಹಳದಿ ಲೈನ್ ಮೆಟ್ರೋ ಮತ್ತಷ್ಟು ವಿಳಂಬ: BMRCL​ಗೆ ತೇಜಸ್ವಿಸೂರ್ಯ ಪ್ರಶ್ನೆ
ಮೆಟ್ರೋ ದರ ಏರಿಕೆ ಪರಿಣಾಮ, ಬಿಎಂಟಿಸಿಗೆ ಹೆಚ್ಚುವರಿ 25 ಲಕ್ಷ ರೂ. ಆದಾಯ!
ಮೆಟ್ರೋ ಯೆಲ್ಲೋ ಲೈನ್ ವಿಳಂಬದಿಂದ ಬಿಎಂಟಿಸಿಗೆ ಲಾಭ!

ಬಿಎಂಆರ್​​ಸಿಎಲ್​ ಟ್ವೀಟ್​

ಆ ಮೂಲಕ ಪ್ರಯಾಣಿಕರಿಗೆ ಅನುಕೂಲಕರ ಜೊತೆಗೆ ಹಲವು ನಿಲ್ದಾಣಗಳಲ್ಲಿ ಪ್ರಯಾಣ ಯೋಜನೆ ರೂಪಿಸುವ ಸೌಲಭ್ಯ ಲಭ್ಯವಾಗಂತ್ತಾಗಿದೆ. ಬಿಎಂಆ‌ಸಿಎಲ್ ವತಿಯಿಂದ ಸಿಸ್ಟಾ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಶಂಕರ್ ಎ.ಎಸ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಪ್ರಯಾಣಿಕರಿಗೆ ಗುಡ್ ನ್ಯೂಸ್: ಯಶವಂತಪುರದಿಂದ ಹೊರಡುವ ಈ ವಂದೇ ಭಾರತ್ ರೈಲಿಗೆ ಹೆಚ್ಚುವರಿ ಬೋಗಿಗಳು

ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಇದೊಂದು ಉತ್ತಮ ಮುನ್ನಡೆ ಎಂದು ಹೇಳಿದ್ದಾರೆ. ಸಚಿವರ ಈ ಶ್ಲಾಘನೆಯಿಂದ ಅನುಕೂಲತೆ ಮತ್ತು ನಾವೀನ್ಯತೆಯ ಸಂಯೋಜನೆಯ ಮೂಲಕ ಸಂಚಾರ ಭವಿಷ್ಯ ರೂಪಿಸುವ ಬಿಎಂಆರ್‌ಎಲ್ ಪಾತ್ರ ಮತ್ತಷ್ಟು ಬಲಪಡಿಸಿದಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:58 am, Fri, 11 July 25