AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಟ್ರೋ ದರ ಏರಿಕೆ ಪರಿಣಾಮ, ಪ್ರಯಾಣಿಕರ ಸೆಳೆದ ಬಿಎಂಟಿಸಿ: ಹೆಚ್ಚುವರಿ 25 ಲಕ್ಷ ರೂ. ಆದಾಯ!

ಬಿಎಂಆರ್​ಸಿಎಲ್ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಮಾಡಿದ್ದೇ ಮಾಡಿದ್ದು, ಅದರ ಪ್ರಯೋಜನ ಮೆಟ್ರೋಗೆ ಆಗಿದ್ದಕ್ಕಿಂತ ಹೆಚ್ಚು ಬಿಎಂಟಿಸಿಗೆ ಆಗಿದೆ! ಮೆಟ್ರೋ ಟಿಕೆಟ್ ದರ ಏರಿಕೆ ಬೆನ್ನಲ್ಲೇ ಪ್ರಯಾಣಿಕರು ಬಿಎಂಟಿಸಿ ಬಸ್​ಗಳತ್ತ ಮುಖ ಮಾಡಿದ್ದು, ಸಂಸ್ಥೆಯ ಬೊಕ್ಕಸಕ್ಕೆ ಆದಾಯ ಹೆಚ್ಚಳವಾಗಿದೆ. ಈ ಮೂಲಕ ಮೆಟ್ರೋ ದರ ಏರಿಕೆ ಬಿಎಂಟಿಸಿ ಆದಾಯ ಹೆಚ್ಚಳಕ್ಕೆ ದಾರಿ ಮಾಡಿಕೊಟ್ಟಿದೆ.

ಮೆಟ್ರೋ ದರ ಏರಿಕೆ ಪರಿಣಾಮ, ಪ್ರಯಾಣಿಕರ ಸೆಳೆದ ಬಿಎಂಟಿಸಿ: ಹೆಚ್ಚುವರಿ 25 ಲಕ್ಷ ರೂ. ಆದಾಯ!
ಬಿಎಂಟಿಸಿ ಬಸ್
Kiran Surya
| Updated By: Ganapathi Sharma|

Updated on:Jul 03, 2025 | 7:55 AM

Share

ಬೆಂಗಳೂರು, ಜುಲೈ 3: ನಮ್ಮ ಮೆಟ್ರೋ, ಬಿಎಂಟಿಸಿ ಎರಡೂ ಕೂಡ ಬೆಂಗಳೂರಿನ ಸಂಚಾರ ನಾಡಿ. ನಿತ್ಯ ನಗರದ ಲಕ್ಷಾಂತರ ಜನ ಬಳಕೆ ಮಾಡುವ ಸಾರಿಗೆ ಸಂಪರ್ಕ. ಹೆಚ್ಚು ಕಡಿಮೆ ಈ ಎರಡು ಸಾರಿಗೆಗಳ‌‌ ನಿತ್ಯ ಬಳಕೆದಾರರ ಸಂಖ್ಯೆ 50 ಲಕ್ಷಕ್ಕೂ ಹೆಚ್ಚು. ಇತ್ತೀಚೆಗೆ ಉಭಯ ಸಾರಿಗೆಗಳ ನಡುವೆ ನಗರದ ಹಲವು ಕಡೆ ಸಾಮಾನ್ಯವಾಗಿ ಪೈಪೋಟಿ ಇದೆ. ನಾಲ್ಕೈದು ತಿಂಗಳ ಹಿಂದೆ ನಮ್ಮ ಮೆಟ್ರೋ (Namma Metro) ಪ್ರಯಾಣ ದರ ಏರಿಕೆ ಮಾಡಿದ್ದು, ಮೆಟ್ರೋಗೆ ಕೊಂಚ ಹಿನ್ನಡೆ ಉಂಟು ಮಾಡಿದೆ. ಆದರೆ ಇದರ ಪ್ರಯೋಜನ ಬಿಎಂಟಿಸಿಗೆ (BMTC) ಆಗಿದೆ.

ಮೆಟ್ರೋ ಪ್ರಯಾಣ ದರ ಏರಿಕೆಯ ನಂತರ ಬಿಎಂಟಿಸಿ ಬಸ್​​​ಗಳ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ನಿತ್ಯ 2 ಲಕ್ಷ ಪ್ರಯಾಣಿಕರು ಹೆಚ್ಚುವರಿಯಾಗಿ ಪ್ರಯಾಣಿಸುತ್ತಿದ್ದು, ಹೆಚ್ಚುವರಿ 25 ಲಕ್ಷ ರೂ. ಆದಾಯ ಹರಿದುಬರುತ್ತಿದೆ.

ಬಿಎಂಟಿಸಿ ಪ್ರತಿನಿತ್ಯದ ಪ್ರಯಾಣಿಕರ ಸಂಖ್ಯೆ 2 ಲಕ್ಷ ಹೆಚ್ಚಳ

ಫೆಬ್ರವರಿಯಲ್ಲಿ ಮೆಟ್ರೋ ದರ ಪರಿಷ್ಕರಣೆ ಮಾಡಲಾಯಿತು. ಮೆಟ್ರೋ ದರ ಹೆಚ್ಚಳ ಬಿಎಂಆರ್​ಸಿಎಲ್​​​ಗೆ ಆದಾಯ ಹೆಚ್ಚಿಸಿದರೂ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಗೆ ಕಾರಣವಾಯಿತು‌. ಆದರೆ, ಮೆಟ್ರೋ ಪ್ರಯಾಣ ಬಿಟ್ಟ ಜನ ಆಯ್ಕೆ ಮಾಡಿಕೊಂಡಿದ್ದು ಬಿಎಂಟಿಸಿಯನ್ನು. ಇದಕ್ಕೆ ಕಾರಣ ಮೆಟ್ರೋಗಿಂತ ಕಡಿಮೆ ದರದ ಪ್ರಯಾಣ. ಜೊತೆಗೆ ಸಂಪರ್ಕದ ವಿಚಾರದಲ್ಲಿ ಕೂಡ ಬಿಎಂಟಿಸಿ ಮುಂದೆ ಇದ್ದ ಕಾರಣ ಅನೇಕರು ಮತ್ತೆ ಬಿಎಂಟಿಸಿಯತ್ತ ಮುಖ‌ ಮಾಡಿದರು. ಪರಿಣಾಮವಾಗಿ, ಬಿಎಂಟಿಸಿ ಬಸ್​ಗಳಲ್ಲಿ ಪ್ರತಿ ನಿತ್ಯ ಸಂಚಾರ ಮಾಡುತ್ತಿದ್ದ ಪ್ರಯಾಣಿಕರ ಸಂಖ್ಯೆಯಲ್ಲಿ ಕಳೆದ ಮೂರ್ನಾಲ್ಕು ತಿಂಗಳಿನಿಂದ 2 ಲಕ್ಷದಷ್ಟು ಹೆಚ್ಚಳ ಕಂಡುಬಂದಿದೆ.

ಇದನ್ನೂ ಓದಿ
Image
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಖಾಲಿ ಇದೆ ಎಂದಿದ್ಯಾರು: ವಿಜಯೇಂದ್ರ ಪ್ರಶ್ನೆ
Image
ಮುಂದುವರಿದ ಮಳೆಯ ಅಬ್ಬರ: ಇಂದು ಈ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ
Image
357 ಬ್ಯಾಂಕ್ ಖಾತೆ ಸೈಬರ್ ವಂಚಕರಿಗೆ ಮಾರಾಟ ಮಾಡಿದ್ದ ಗ್ಯಾಂಗ್ ಪತ್ತೆ
Image
ಗ್ರಾಮೀಣ ಪ್ರದೇಶಗಳ ಸರ್ಕಾರೀ ಶಾಲೆಗಳಿಗೆ ಬೇಕಿದೆ ಕಾಯಕಲ್ಪ

ಬಿಎಂಟಿಸಿ ಆದಾಯ ವಿವರ

ಈ ಹಿಂದೆ ನಿತ್ಯ ಬಿಎಂಟಿಸಿಯಲ್ಲಿ ಸರಾಸರಿ 40 ಲಕ್ಷ ಪ್ರಯಾಣಿಕರ ಓಡಾಟ ಇತ್ತು. ನಿತ್ಯದ ಆದಾಯ 6.90 ಕೋಟಿ‌ ರೂ. ಇತ್ತು. ಆದರೆ ಮೆಟ್ರೋ ದರ ಏರಿಕೆ ಬಳಿಕ ನಿತ್ಯ ಸರಾಸರಿ 42 ಲಕ್ಷ ಪ್ರಯಾಣಿಕರು, ಹಾಗೂ ಆದಾಯ 7.25 ಕೋಟಿ ರೂ.ಗೆ ಏರಿಕೆ ಆಗಿದೆ.

ಈ ಹಿಂದೆ ನಿತ್ಯ ನಗರದಲ್ಲಿ 6900 ಬಸ್​​ಗಳಿಂದ 54 ಸಾವಿರ ಟ್ರಿಪ್ ಮಾಡಲಾಗುತ್ತಿತ್ತು. ಇದೀಗ ಡಿಪೋದಲ್ಲಿದ್ದ ಬಸ್​ಗಳನ್ನ ಕೂಡ ರಸ್ತೆಗಿಳಿಸುವ ಮೂಲಕ 54 ಸಾವಿರ ಇದ್ದ ಟ್ರಿಪ್​ಗಳನ್ನು 8 ಸಾವಿರದಷ್ಟು ಹೆಚ್ಚಳ ಮಾಡಿ 62 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಪ್ರಯಾಣಿಕರ ಸಂಖ್ಯೆ ಏರಿಕೆಯಾದ ಕಾರಣ ಸದ್ಯ ಬಿಎಂಟಿಸಿ‌ ಈ‌ ನಿರ್ಧಾರಕ್ಕೆ ಬಂದಿದ್ದು, ಇದು ಲಾಭ ಹೆಚ್ಚಳಕ್ಕೂ ಕಾರಣವಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಟನಲ್ ರಸ್ತೆ, ವಾಹನ ಸವಾರರಿಗೆ ದುಬಾರಿ ಟೋಲ್ ಬರೆ!

ಒಟ್ಟಿನಲ್ಲಿ ಮೆಟ್ರೋ ದರ ಏರಿಕೆಯ ಲಾಭ ಪಡೆದು ಬಿಎಂಟಿಸಿ ತನ್ನ ಆದಾಯವನ್ನು ಹೆಚ್ಚಳ ಮಾಡಿಕೊಂಡಿದೆ. ಮೆಟ್ರೋದ ಉಳಿದ ಮಾರ್ಗಗಳು‌‌ ಕಾರ್ಯಾಚರಣೆ ಆರಂಭಿಸಿದ ನಂತರವೂ ಪರಿಸ್ಥಿತಿ ಹೀಗೆಯೇ ಮುಂದುವರೆಯುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:53 am, Thu, 3 July 25