BMTC ವೋಲ್ವೋ ಬಸ್​ಗಳಲ್ಲಿ ಸೊಳ್ಳೆ ಕಾಟ, ವಾಹನವನ್ನು ಪರಿಶೀಲನೆಗೆ ಸೂಚನೆ

ಬಿಎಂಟಿಸಿಯ ವೋಲ್ವೋ ಬಸ್​ನಲ್ಲಿ ಸೊಳ್ಳೆಗಳ ಕಾಟ ಇರುವ ಬಗ್ಗೆ ವರದಿಯಾಗಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಬಿಎಂಟಿಸಿ ಘಟಕ-25, ಬಸ್ ಚಾಲನೆಗೂ ಮುನ್ನ ಪರಿಶೀಲಿಸುವಂತೆ ಆದೇಶಿಸಿದೆ.

BMTC ವೋಲ್ವೋ ಬಸ್​ಗಳಲ್ಲಿ ಸೊಳ್ಳೆ ಕಾಟ, ವಾಹನವನ್ನು ಪರಿಶೀಲನೆಗೆ ಸೂಚನೆ
ಸೊಳ್ಳೆ ಕಾಟ ದೂರು ಹಿನ್ನೆಲೆ BMTC ವೋಲ್ವೋ ಬಸ್​ ಪರಿಶೀಲನೆ ನಡೆಸಿದ ನಂತರ ಕಾರ್ಯಾಚರಣೆ ನಡೆಸಲು ಆದೇಶ
Follow us
Kiran HV
| Updated By: Rakesh Nayak Manchi

Updated on: Jul 21, 2023 | 8:30 PM

ಬೆಂಗಳೂರು, ಜುಲೈ 21: ಬಿಎಂಟಿಸಿಯ (BMTC) ವೋಲ್ವೋ ಬಸ್​ನಲ್ಲಿ ಸೊಳ್ಳೆಗಳ (Mosquitos) ಕಾಟ ಇರುವ ಬಗ್ಗೆ ವರದಿಯಾಗಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಬಿಎಂಟಿಸಿ ಘಟಕ-25ರ ಹಿರಿಯ ಘಟಕ ವ್ಯವಸ್ಥಾಪಕರು ಬಸ್ ಚಾಲನೆಗೂ ಮುನ್ನ ಪರಿಶೀಲಿಸುವಂತೆ ಆದೇಶಿಸಿದ್ದಾರೆ. ಬಸ್​ನಲ್ಲಿ ಸೊಳ್ಳೆ‌ಗಳ ಕಾಟದ ಬಗ್ಗೆ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಡ್ರೈವರ್ ಕಂಡಕ್ಟರ್​ಗಳಿಗೆ‌ ಸೂಚನೆ ನೀಡಿದ್ದಾರೆ.

ಕಾರ್ಯಾಚರಣೆ ಮಾಡಿಕೊಂಡು ಒಂದು ಘಟಕದಲ್ಲಿ ನಿಲ್ಲಿಸಿದಾಗ ವಾಹನದ ಒಳಗೆ ಸೊಳ್ಳೆಗಳು ಸೇರಿಕೊಳ್ಳುತ್ತಿವೆ. ಮತ್ತೆ ಆ ಬಸ್​ಗಳನ್ನು ಕಾರ್ಯಾಚರಣೆಗೆ ತೆಗೆದುಕೊಂಡು ಹೋದಾಗ ಪ್ರಯಾಣಿಸುವ ಪ್ರಯಾನಿಕರಿಗೆ ಸೊಳ್ಳೆಗಳು ಕಚ್ಚಲಾರಂಭಿಸುತ್ತವೆ. ಈ ಬಗ್ಗೆ ಪ್ರಯಾಣಿಕರಿಂದ ದೂರುಗಳು ಬರುತ್ತಿವೆ ಎಂದು ಹಿರಿಯ ಘಟಕ ವ್ಯವಸ್ಥಾಪಕರು ಹೇಳಿದ್ದಾರೆ.

ಇದನ್ನೂ ಓದಿ: ಇನ್ಮುಂದೆ ಈ ಎರಡು ಹೊಸ ಮಾರ್ಗಗಳಲ್ಲೂ ಸಂಚರಿಸಲಿವೆ BMTC ಬಸ್​​: ಇಲ್ಲಿದೆ ಮಾಹಿತಿ

ಬಸ್​ಗಳನ್ನು ಕಾರ್ಯಾಚರಣೆಗೆ ತೆಗೆದುಕೊಂಡು ಹೋಗುವ ಮೊದಲು ಚಾಲನ ಸಿಬ್ಬಂದಿ ಬಸ್​ ಒಳಭಾಗದಲ್ಲಿ ಪರಿಶೀಲನೆ ನಡೆಸಬೇಕು, ಇಂಜಿನ್ ಸ್ಪಾರ್ಟ್ ಮಾಡಿ, ಎರಡು ಬಾಗಿಲುಗಳನ್ನು ಓಪನ್ ಮಾಡಿ ಬ್ಲೋವರ್ ಆನ್ ಮಾಡಬೇಕು. ಸೊಳ್ಳೆಗಳಿರುವುದು ಕಂಡು ಬಂದಲ್ಲಿ ಬಟ್ಟೆಯಿಂದ ಓಡಿಸಬೇಕು. ಸೊಳ್ಳೆಗಳು ಇಲ್ಲದೇ ಇರುವ ಬಗ್ಗೆ ಖಾತರಿಪಡಿಸಿಕೊಂಡ ನಂತರ ಬಸ್​ಗಳನ್ನು ರಸ್ತೆಗೆ ಇಳಿಸಲು ತೆಗೆದುಕೊಂಡು ಹೋಗಬೇಕು ಎಂದು ಆದೇಶಿಸಿದ್ದಾರೆ.

ಬಿಎಂಟಿಸಿ ಹವಾನಿಯಂತ್ರಿತ ಬಸ್​​ನಲ್ಲಿ ಸೊಳ್ಳೆ ಕಾಟವಿದೆ ಎಂದು ಸೋಷಿಯಲ್​ ಕಾಪ್ ಎಂಬ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿತ್ತು. ಪ್ರಯಾಣಿಕರೊಬ್ಬರ ಬೆರಳ ಮೇಲೆ ಕೂತ ಸೊಳ್ಳೆ ಮತ್ತು ಪ್ರಯಾಣದ ಟಿಕೆಟ್​ ಫೋಟೋ ಟ್ವೀಟರ್​ನಲ್ಲಿ ಹಂಚಿಕೊಳ್ಳಲಾಗಿತ್ತು. “ಬಿಎಂಟಿಸಿ ಎಸಿ ಬಸ್​​ನಲ್ಲಿ ಸೊಳ್ಳೆಗಳ ಕಾಟ. ಕಾಂಗ್ರೆಸ್​ ಸರ್ಕಾರ ಬಿಎಂಟಿಸಿ ಎಸಿ ಬಸ್​ಗಳಲ್ಲಿ ಸೊಳ್ಳೆಗಳಿಗೆ ಉಚಿತ ಪ್ರಯಾಣ ಎಂದು ಘೋಷಿಸಿದೆಯಾ?” ಎಂದು ಪ್ರಶ್ನಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ