AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಮೆಟ್ರೋ ಗ್ರೀನ್ ಲೈನ್ ಪ್ರಯಾಣಿಕರಿಗೆ ಗುಡ್ ನ್ಯೂಸ್: ಆಗಸ್ಟ್‌ನಿಂದ ಸಂಚಾರ ಆರಂಭಿಸಲಿವೆ 3 ಹೊಸ ರೈಲುಗಳು

ಬೆಂಗಳೂರಿನ ‘ನಮ್ಮ ಮೆಟ್ರೋ’ ಗ್ರೀನ್ ಲೈನ್ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಭರ್ಜರಿ ಗುಡ್ ನ್ಯೂಸ್ ನೀಡಿದೆ. ನಿರಂತರ ರಶ್ ಹಾಗೂ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಆಗಸ್ಟ್ ತಿಂಗಳಿನಿಂದ ಗ್ರೀನ್ ಲೈನ್ ಮಾರ್ಗದಲ್ಲಿ 3 ಹೊಸ ಮೆಟ್ರೋ ರೈಲುಗಳು ಸಂಚಾರ ಆರಂಭಿಸಲಿವೆ. ಇದರೊಂದಿಗೆ, ಸಂಚಾರ ಮತ್ತಷ್ಟು ಸುಗಮವಾಗಲಿದೆ.

ನಮ್ಮ ಮೆಟ್ರೋ ಗ್ರೀನ್ ಲೈನ್ ಪ್ರಯಾಣಿಕರಿಗೆ ಗುಡ್ ನ್ಯೂಸ್: ಆಗಸ್ಟ್‌ನಿಂದ ಸಂಚಾರ ಆರಂಭಿಸಲಿವೆ 3 ಹೊಸ ರೈಲುಗಳು
ನಮ್ಮ ಮೆಟ್ರೋImage Credit source: @OfficialBMRCL
ಕಿರಣ್​ ಸೂರ್ಯ
| Edited By: |

Updated on: Jul 08, 2026 | 7:04 AM

Share

ಮುಖ್ಯಾಂಶಗಳು

  • ಗ್ರೀನ್ ಲೈನ್‌ನಲ್ಲಿ 3 ಹೊಸ ರೈಲುಗಳ ಸಂಚಾರ
  • ಆಗಸ್ಟ್‌ನಿಂದ ಮೆಟ್ರೋ ಪ್ರಯಾಣಿಕರ ದಟ್ಟಣೆಗೆ ಮುಕ್ತಿ
  • ಕಡಿಮೆಯಾಗಲಿದೆ ಮೆಟ್ರೋ ರೈಲುಗಳ ಕಾಯುವಿಕೆ ಸಮಯ

ಬೆಂಗಳೂರು, ಜುಲೈ 8: ಸಿಲಿಕಾನ್ ಸಿಟಿ ಬೆಂಗಳೂರಿಗರ ನೆಚ್ಚಿನ ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ಭರ್ಜರಿ ಸಿಹಿ ಸುದ್ದಿ ನೀಡಿದೆ. ಪರ್ಪಲ್ ಲೈನ್ ಹಾಗೂ ಗ್ರೀನ್ ಲೈನ್ ಎರಡೂ ಸೇರಿ ಮೆಟ್ರೋದಲ್ಲಿ ಪ್ರತಿದಿನ ಹತ್ತು ಲಕ್ಷಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದಾರೆ. ಇದರಿಂದಾಗಿ ಇತ್ತೀಚೆಗೆ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ವಿಪರೀತವಾಗಿದ್ದು, ಜನರಿಗೆ ನಿಲ್ಲಲು ಜಾಗ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶೇಷವಾಗಿ ಪೀಕ್ ಅವರ್‌ಗಳಲ್ಲಂತೂ (Peak Hours) ಮೆಟ್ರೋ ಒಳಗೆ ಹೋಗುವುದೇ ದೊಡ್ಡ ಸಾಹಸವಾಗಿದೆ. ಈ ಸಮಸ್ಯೆಗೆ ಮುಕ್ತಿ ಹಾಡಲು ಬಿಎಂಆರ್‌ಸಿಎಲ್ ಮುಂದಾಗಿದ್ದು, ಬರುವ ಆಗಸ್ಟ್ ತಿಂಗಳಿನಿಂದ ಗ್ರೀನ್ ಲೈನ್ ಮಾರ್ಗದಲ್ಲಿ 3 ಹೊಸ ರೈಲುಗಳನ್ನು ಟ್ರ್ಯಾಕ್‌ಗೆ ಇಳಿಸಲು ನಿರ್ಧರಿಸಿದೆ.

ಚೀನಾದಿಂದ ಬಂದಿವೆ ಹೊಸ ರೈಲುಗಳು

ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಬಿಎಂಆರ್‌ಸಿಎಲ್ ಚೀನಾ ಮೂಲದ ಸಿಆರ್‌ಆರ್‌ಸಿ (CRRC) ಕಂಪನಿಗೆ ಒಟ್ಟು 21 ಹೊಸ ಮೆಟ್ರೋ ರೈಲುಗಳಿಗಾಗಿ ಆರ್ಡರ್ ನೀಡಿತ್ತು. ಇದರಲ್ಲಿ ಮೊದಲ ಹಂತವಾಗಿ 3 ರೈಲುಗಳು ಈಗಾಗಲೇ ಬೆಂಗಳೂರಿಗೆ ಬಂದು ತಲುಪಿವೆ. ಈ ಹೊಸ ರೈಲುಗಳು ಬರುವ ತಿಂಗಳಿನಿಂದ (ಆಗಸ್ಟ್) ಸಿಲ್ಕ್ ಇನ್‌ಸ್ಟಿಟ್ಯೂಟ್‌ನಿಂದ ಮಾದಾವರ ಮಾರ್ಗದ ಗ್ರೀನ್ ಲೈನ್‌ನಲ್ಲಿ ಕಾರ್ಯಾಚರಣೆ ಆರಂಭಿಸಲಿವೆ ಎಂದು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶ್ವಂತ್ ಚೌವ್ಹಾಣ್ ಮಾಹಿತಿ ನೀಡಿದ್ದಾರೆ.

ಕಾಯುವ ಸಮಯ 5 ನಿಮಿಷದಿಂದ 3.30 ನಿಮಿಷಕ್ಕೆ ಇಳಿಕೆ

ಪ್ರಸ್ತುತ ಮಾದಾವರದಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್‌ವರೆಗೆ ಸಂಚಾರ ಕಲ್ಪಿಸುವ ಗ್ರೀನ್ ಲೈನ್‌ನಲ್ಲಿ ಒಟ್ಟು 24 ರೈಲುಗಳು ಸಂಚರಿಸುತ್ತಿವೆ. ಈ 3 ಹೊಸ ರೈಲುಗಳ ಸೇರ್ಪಡೆಯಿಂದ ಒಟ್ಟು ರೈಲುಗಳ ಸಂಖ್ಯೆ 27ಕ್ಕೆ ಏರಿಕೆಯಾಗಲಿದೆ. ಸದ್ಯ ಈ ಮಾರ್ಗದಲ್ಲಿ ಪೀಕ್ ಅವರ್‌ನಲ್ಲಿ ಪ್ರತಿ 5 ನಿಮಿಷಕ್ಕೆ ಹಾಗೂ ನಾನ್ ಪೀಕ್ ಅವರ್‌ನಲ್ಲಿ ಪ್ರತಿ 8 ನಿಮಿಷಕ್ಕೊಂದರಂತೆ ರೈಲುಗಳು ಸಂಚರಿಸುತ್ತಿವೆ. ಆದರೆ, ಹೊಸ ರೈಲುಗಳು ಹಳಿ ಇಳಿದ ನಂತರ ಪೀಕ್ ಅವರ್‌ನಲ್ಲಿ ಕೇವಲ 3.30 ನಿಮಿಷಕ್ಕೆ ಹಾಗೂ ನಾನ್ ಪೀಕ್ ಅವರ್‌ನಲ್ಲಿ 6 ರಿಂದ 7 ನಿಮಿಷಕ್ಕೊಂದರಂತೆ ಮೆಟ್ರೋ ರೈಲುಗಳು ಲಭ್ಯವಿರಲಿವೆ.

ಇದನ್ನೂ ಓದಿ: ನಮ್ಮ ಮೆಟ್ರೋ ಸರಣಿ ವೈಫಲ್ಯ: ತೇಜಸ್ವಿ ಸೂರ್ಯ ದೂರಿನ ಬೆನ್ನಲ್ಲೇ ಕೇಂದ್ರದಿಂದ ತನಿಖೆಗೆ ಆದೇಶ!

ಮೆಟ್ರೋ ರೈಲುಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಕಾಯುವ ಸಮಯ ಗಣನೀಯವಾಗಿ ಕಡಿಮೆಯಾಗಲಿದ್ದು, ಸಾರ್ವಜನಿಕರು ಭಾರಿ ಸಂತಸ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಮೆಟ್ರೋ ಪ್ರಯಾಣಿಕರ ಹಲವು ವರ್ಷಗಳ ದಟ್ಟಣೆಯ ಸಮಸ್ಯೆಗೆ ಬರುವ ಆಗಸ್ಟ್‌ನಲ್ಲಿ ಬ್ರೇಕ್ ಬೀಳಲಿದ್ದು, ಸುಗಮ ಪ್ರಯಾಣ ಸುಲಭವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕಿರಣ್​ ಸೂರ್ಯ
ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
ಬಿಗ್​​ಬಾಸ್ ಸ್ಪರ್ಧಿಗಳ ತಲೆ ಮೇಲೆ ಸಗಣಿ ನೀರು, ಕಸ: ವಿಡಿಯೋ ನೋಡಿ
ಬಿಗ್​​ಬಾಸ್ ಸ್ಪರ್ಧಿಗಳ ತಲೆ ಮೇಲೆ ಸಗಣಿ ನೀರು, ಕಸ: ವಿಡಿಯೋ ನೋಡಿ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಬೆಂಗಳೂರಿನ ಅಂಚೆಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷ
ಬೆಂಗಳೂರಿನ ಅಂಚೆಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷ