Namma Metro: ಬನ್ನೇರು​‌ಘಟ್ಟ ಪಿಂಕ್ ಲೈನ್ ಸಂಚಾರ ಆಗಸ್ಟ್ 15ಕ್ಕೂ ಅನುಮಾನ!

ಬೆಂಗಳೂರಿನ ನಮ್ಮ ಮೆಟ್ರೋ ಪಿಂಕ್ ಲೈನ್‌ನ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಮಾರ್ಗವನ್ನು ಆಗಸ್ಟ್ 15ರ ವೇಳೆಗೆ ಆರಂಭಿಸಲು BMRCL ಯೋಜಿಸಿತ್ತು. ಆದರೆ ಸಿಗ್ನಲಿಂಗ್ ಪರೀಕ್ಷೆ, ರೈಲು ಸೆಟ್‌ಗಳ ಕೊರತೆ ಹಾಗೂ ಕಾರ್ಮಿಕರ ಅಭಾವದಿಂದ ಕಾಮಗಾರಿ ವಿಳಂಬವಾಗಿದೆ. ಹೀಗಾಗಿ ಬನ್ನೇರುಘಟ್ಟ ರಸ್ತೆಯ ಈ ಮೆಟ್ರೋ ಸಂಚಾರ 2026ರ ಕೊನೆಯ ಹಂತಕ್ಕೆ ಮುಂದೂಡಲ್ಪಡುವ ಸಾಧ್ಯತೆಯಿದ್ದು, ನಿತ್ಯ ಪ್ರಯಾಣಿಕರಿಗೆ ಕಾಯುವಿಕೆ ತಪ್ಪಿದ್ದಲ್ಲ.

Namma Metro: ಬನ್ನೇರು​‌ಘಟ್ಟ ಪಿಂಕ್ ಲೈನ್ ಸಂಚಾರ ಆಗಸ್ಟ್ 15ಕ್ಕೂ ಅನುಮಾನ!
ಬನ್ನೇರು​‌ಘಟ್ಟ ಪಿಂಕ್ ಲೈನ್ ಸಂಚಾರ ಆಸ್ಟ್ 15ಕ್ಕೂ ಅನುಮಾನ!
Image Credit source: gettyimages.com

Updated on: Jul 21, 2026 | 9:06 AM

ಮುಖ್ಯಾಂಶಗಳು

  • ಆಗಸ್ಟ್ 15ಕ್ಕೆ ಆರಂಭವಾಗಬೇಕಿದ್ದ ಪಿಂಕ್ ಲೈನ್ ಮೆಟ್ರೋ ಸಂಚಾರ ಮತ್ತೆ ವಿಳಂಬ.
  • ರೈಲು ಸೆಟ್ ಕೊರತೆ ಮತ್ತು ಕಾರ್ಮಿಕರ ಅಭಾವದಿಂದ ಕಾಮಗಾರಿ ತಡವಾಗಿದೆ.
  • ಬನ್ನೇರುಘಟ್ಟ ಮೆಟ್ರೋ ಮಾರ್ಗವು 2026ರ ಅಂತ್ಯಕ್ಕೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಬೆಂಗಳೂರು, ಜುಲೈ 21: ಬೆಂಗಳೂರಿನ ಸಾರಿಗೆ ವ್ಯವಸ್ಥೆಗೆ ಬಿಡುಗಡೆ ನೀಡಬೇಕಿದ್ದ ‘ನಮ್ಮ ಮೆಟ್ರೋ’ ಯೋಜನೆಯ ಕಾಮಗಾರಿಗಳು ನಿಗದಿತ ಸಮಯಕ್ಕೆ ಪೂರ್ಣಗೊಳ್ಳದೆ ಪದೆ ಪದೆ ವಿಳಂಬವಾಗುತ್ತಿರುವುದು ರಾಜಧಾನಿಯ ಜನರಿಗೆ ಮತ್ತಷ್ಟು ನಿರಾಸೆ ಮೂಡಿಸಿದೆ. ಪ್ರಮುಖವಾಗಿ ಬನ್ನೇರುಘಟ್ಟ ರಸ್ತೆಯನ್ನು ಸಂಪರ್ಕಿಸುವ ಮೆಟ್ರೋ ‘ಪಿಂಕ್ ಲೈನ್’ (Pink Line Metro) ಯೋಜನೆಯ ಮೊದಲ ಹಂತದ ಸಂಚಾರವನ್ನು ಆಗಸ್ಟ್ 15ರ ವೇಳೆಗೆ ಆರಂಭಿಸಲು ಬಿಎಂಆರ್‌ಸಿಎಲ್ (BMRCL) ಯೋಜನೆ ರೂಪಿಸಿತ್ತು. ಆದರೆ, ಪ್ರಸ್ತುತ ಕಾಮಗಾರಿಯ ವೇಗವನ್ನು ನೋಡಿದರೆ ಈ ಗಡುವನ್ನು ಸಹ ಮೆಟ್ರೋ ತಲುಪುವುದು ಅನುಮಾನ ಎನ್ನಲಾಗಿದೆ.

ಆಗಸ್ಟ್ 15ರ ಡೆಡ್‌ಲೈನ್ ಮಿಸ್

ಪಿಂಕ್ ಲೈನ್ ಯೋಜನೆಯ ಅಡಿಯಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿಲೋಮೀಟರ್‌ ಮೇಲ್ಸೇತುವೆ (Elevated Section) ಮಾರ್ಗವನ್ನು ಸ್ವಾತಂತ್ರ್ಯ ದಿನಾಚರಣೆಯ ಕೊಡುಗೆಯಾಗಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲು ನಿರ್ಧರಿಸಲಾಗಿತ್ತು. ಪ್ರಸ್ತುತ ಸಿವಿಲ್ ಕಾಮಗಾರಿಗಳು ಅಂತಿಮ ಹಂತದಲ್ಲಿದ್ದರೂ, ರೈಲು ಸೆಟ್‌ಗಳ (Trainsets) ಪೂರೈಕೆ ಹಾಗೂ ಸಿಗ್ನಲಿಂಗ್ ಮತ್ತು ಸುರಕ್ಷತಾ ಪರೀಕ್ಷೆಗಳು ಇನ್ನೂ ಬಾಕಿ ಇವೆ.

ಕಾಮಗಾರಿ ಸ್ಥಳಗಳಲ್ಲಿ ಅಗತ್ಯಕ್ಕಿಂತ ಶೇ 50ರಷ್ಟು ಕಡಿಮೆ ಕಾರ್ಮಿಕರಿರುವುದು ಮತ್ತು ಮೈಕ್ರೋ-ಲೆವೆಲ್ ಸಿವಿಲ್ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತಿರುವುದು ಈ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ. ಇದರಿಂದಾಗಿ ಬನ್ನೇರು​‌ಘಟ್ಟ ರಸ್ತೆಯ ನಿತ್ಯದ ಭಾರಿ ಸಂಚಾರ ದಟ್ಟಣೆಯಿಂದ ಮುಕ್ತಿ ಸಿಗಬಹುದು ಎಂದು ಕಾಯುತ್ತಿದ್ದ ಲಕ್ಷಾಂತರ ಉದ್ಯೋಗಿಗಳಿಗೆ ಮತ್ತು ಪ್ರಯಾಣಿಕರಿಗೆ ಮತ್ತೊಮ್ಮೆ ಕಾಯುವಿಕೆ ತಪ್ಪಿದ್ದಲ್ಲ.

ಇದನ್ನೂ ಓದಿ ನಮ್ಮ ಮೆಟ್ರೋದಲ್ಲಿ ಹುಚ್ಚಾಟಕ್ಕೆ ಬೀಳಲಿದೆ ಬ್ರೇಕ್: ದಂಡದ ಮೊತ್ತ 25,000 ರೂ.ವರೆಗೆ ಏರಿಕೆ

ಅಂಡರ್ ಗ್ರೌಂಡ್ ಮಾರ್ಗದ ಸ್ಥಿತಿ ಏನು?

ಬನ್ನೇರು​‌ಘಟ್ಟ ಮಾರ್ಗ ಮಾತ್ರವಲ್ಲದೆ, ಪಿಂಕ್ ಲೈನ್‌ನ ಡೈರಿ ಸರ್ಕಲ್‌ನಿಂದ ನಾಗವಾರವರೆಗಿನ 13.75 ಕಿ.ಮೀ. ಭೂಗತ (Underground Section) ಮಾರ್ಗದ ಕಾಮಗಾರಿಯೂ ನಿಗದಿತ ಸಮಯಕ್ಕಿಂತ ಹಿಂದೆ ಬಿದ್ದಿದೆ. ಪಿಂಕ್ ಲೈನ್ (ಮೇಲ್ಸೇತುವೆ ಮಾರ್ಗ) ಆಗಸ್ಟ್ 15ರ ಬದಲಾಗಿ 2026ರ ಕೊನೆಯ ಹಂತಕ್ಕೆ ಮುಂದೂಡಿಕೆ ಸಾಧ್ಯತೆ ಇದೆ. ಪಿಂಕ್ ಲೈನ್ ಅಂಡರ್ ಗ್ರೌಂಡ್ ಮಾರ್ಗ ಮಾರ್ಚ್ 2027ರ ವೇಳೆಗೆ ಪೂರ್ಣಗೊಳ್ಳುವ ಅಂದಾಜು. ಬ್ಲೂ ಲೈನ್ (ಸಿಲ್ಕ್ ಬೋರ್ಡ್ – ಕೆಐಎಎಲ್ ವಿಮಾನ ನಿಲ್ದಾಣ) ಪ್ರಮುಖ ಇಂಟರ್‌ಚೇಂಜ್ ಸ್ಟೇಷನ್‌ಗಳ ಕಾಮಗಾರಿ ಬಾಕಿ ಇರುವುದರಿಂದ 2027ರ ಮಧ್ಯಭಾಗಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:58 am, Tue, 21 July 26

Follow Us