AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಮೆಟ್ರೋದಲ್ಲಿ ಹುಚ್ಚಾಟಕ್ಕೆ ಬೀಳಲಿದೆ ಬ್ರೇಕ್: ದಂಡದ ಮೊತ್ತ 25,000 ರೂ.ವರೆಗೆ ಏರಿಕೆ

ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಹೊಸ ನಿಯಮಾವಳಿ ಮತ್ತು ಪರಿಷ್ಕೃತ ದಂಡವನ್ನು ಜಾರಿಗೊಳಿಸಿದೆ. ಮೆಟ್ರೋ ನಿಲ್ದಾಣ ಹಾಗೂ ರೈಲಿನಲ್ಲಿ ಹುಚ್ಚಾಟ, ರೀಲ್ಸ್ ಮಾಡುವುದು, ಜೋರು ಸಂಗೀತ, ಹಳಿಗಳ ಮೇಲೆ ಅನಧಿಕೃತ ಪ್ರವೇಶ, ಟಿಕೆಟ್ ದುರ್ಬಳಕೆ, ಅಸಭ್ಯ ವರ್ತನೆ ಹಾಗೂ ನಿಷಿದ್ಧ ವಸ್ತುಗಳ ಸಾಗಾಟಕ್ಕೆ ಭಾರಿ ದಂಡ ವಿಧಿಸಲಾಗುವುದು. ಸಾರ್ವಜನಿಕರ ಸುರಕ್ಷತೆ ಕಾಪಾಡುವುದು ಇದರ ಉದ್ದೇಶ. ಪ್ರತಿ ಮೂರು ವರ್ಷಗಳಿಗೊಮ್ಮೆ ದಂಡದ ಮೊತ್ತವು ಶೇ.10ರಷ್ಟು ಹೆಚ್ಚಲಿದೆ.

ನಮ್ಮ ಮೆಟ್ರೋದಲ್ಲಿ ಹುಚ್ಚಾಟಕ್ಕೆ ಬೀಳಲಿದೆ ಬ್ರೇಕ್: ದಂಡದ ಮೊತ್ತ 25,000 ರೂ.ವರೆಗೆ ಏರಿಕೆ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
| Edited By: |

Updated on:Jul 18, 2026 | 7:46 AM

Share

ಮುಖ್ಯಾಂಶಗಳು

  • ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರೇ ಎಚ್ಚರ
  • ನಮ್ಮ ಮೆಟ್ರೋದಲ್ಲಿ ಹುಚ್ಚಾಟಕ್ಕೆ ಬೀಳಲಿದೆ ಬ್ರೇಕ್
  • ದಂಡದ ಮೊತ್ತ 25,000 ರೂ.ವರೆಗೆ ಏರಿಕೆ

ಬೆಂಗಳೂರು, ಜು.17: ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರೇ ಎಚ್ಚರ, ಇನ್ಮುಂದೆ ಮೆಟ್ರೋ ನಿಲ್ದಾಣ ಮತ್ತು ರೈಲಿನಲ್ಲಿ ನಿಯಮ ಮೀರಿ ಹುಚ್ಚಾಟ ಆಡಿದರೆ ನಿಮ್ಮ ಜೇಬಿಗೆ ಕತ್ತರಿ ಬೀಳಲಿದೆ. ಮೆಟ್ರೋ ನಿಯಮಗಳನ್ನು ಉಲ್ಲಂಘಿಸುವವರಿಗೆ ಬಿಸಿ ಮುಟ್ಟಿಸಲು ಬಿಎಂಆರ್‌ಸಿಎಲ್ (BMRCL) ದಂಡದ ಪ್ರಮಾಣವನ್ನು ಏರಿಕೆ ಮಾಡಿದೆ. ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ನಮ್ಮ ಮೆಟ್ರೋದಲ್ಲಿ ಜಾರಿಗೆ ತರಲಾಗಿರುವ ಈ ಕಠಿಣ ನಿಯಮಗಳು ಮತ್ತು ಪರಿಷ್ಕೃತ ದಂಡವನ್ನು ವಿಧಿಸಲಾಗಿದೆ.

ಮೆಟ್ರೋ ರೈಲು ಹಾಗೂ ನಿಲ್ದಾಣಗಳಲ್ಲಿ ಸಾರ್ವಜನಿಕರ ಸುರಕ್ಷತೆ ಕಾಯ್ದುಕೊಳ್ಳಲು ಮತ್ತು ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಈ ಹೊಸ ರೂಲ್ಸ್ ಜಾರಿಗೆ ತರಲಾಗಿದೆ. ಮೆಟ್ರೋ ಸುರಕ್ಷತೆಗೆ ಧಕ್ಕೆ ತರುವಂತಹ ಗಂಭೀರ ತಪ್ಪುಗಳಿಗೆ ಇನ್ಮುಂದೆ ಅತ್ಯಂತ ದುಬಾರಿ ದಂಡ ತೆರಬೇಕಾಗುತ್ತದೆ.

ಮೆಟ್ರೋ ಹಳಿಗಳ ಮೇಲೆ ಅನಧಿಕೃತವಾಗಿ ಓಡಾಡುವುದು ಅಥವಾ ಟ್ರ್ಯಾಕ್ ಮೇಲೆ ಜಿಗಿಯುವುದು ಮಾಡಿದರೆ ಈ ಹಿಂದೆ ಕಡಿಮೆ ಇದ್ದ ದಂಡದ ಮೊತ್ತವನ್ನು ಇನ್ಮುಂದೆ 5,000 ರೂ.ನಿಂದ 25,000 ರೂ.ವರೆಗೆ ಏರಿಕೆ ಮಾಡಲಾಗಿದೆ. ಮೆಟ್ರೋ ಪ್ರಯಾಣದ ಟಿಕೆಟ್ ಅಥವಾ ಪಾಸ್ ಅನ್ನು ಕಾನೂನುಬಾಹಿರವಾಗಿ ದುರ್ಬಳಕೆ ಮಾಡಿಕೊಂಡರೂ ಸಹ ಇದೇ ರೀತಿಯ ದುಬಾರಿ ದಂಡವನ್ನು ಪಾವತಿಸಬೇಕಾಗುತ್ತದೆ. ಮೆಟ್ರೋ ರೈಲು ಹಾಗೂ ನಿಲ್ದಾಣದ ಒಳಗೆ ಅನುಮತಿ ಪಡೆಯದೆ ಯಾವುದೇ ರೀತಿಯ ವ್ಯಾಪಾರ ನಡೆಸಿದರೆ ಇನ್ಮುಂದೆ ನೇರವಾಗಿ 5,000 ರೂ. ದಂಡ ವಿಧಿಸಲಾಗುತ್ತದೆ.

ರೀಲ್ಸ್ ಹುಚ್ಚು, ಲೌಡ್ ಮ್ಯೂಸಿಕ್ ಹಾಗೂ ಗಲಾಟೆಗೆ ಬೀಳಲಿದೆ ದಂಡ:

ರೈಲಿನಲ್ಲಿ ಇನ್ಫ್ಲುಯೆನ್ಸರ್ಸ್ ಮಾಡುವ ರೀಲ್ಸ್ ಹಾವಳಿ ಹಾಗೂ ಪ್ರಯಾಣಿಕರ ನೆಮ್ಮದಿ ಕೆಡಿಸುವ ವರ್ತನೆಗಳಿಗೆ ಕಡಿವಾಣ ಹಾಕಲಾಗುವುದು. ಮೆಟ್ರೋ ರೈಲಿನ ಒಳಗೆ ರೀಲ್ಸ್ ಮಾಡುವುದು, ಆಹಾರ ಸೇವನೆ (ತಿಂಡಿ-ತಿನಿಸು), ನೆಲದ ಮೇಲೆ ಕುಳಿತುಕೊಳ್ಳುವುದು ಹಾಗೂ ಹೆಡ್‌ಫೋನ್ ಬಳಸದೆ ಜೋರಾಗಿ ಮ್ಯೂಸಿಕ್ ಹಾಕಿ ಇತರ ಪ್ರಯಾಣಿಕರಿಗೆ ತೊಂದರೆ ನೀಡಿದರೆ ಈ ಹಿಂದೆ ಕೇವಲ 500 ರೂ. ದಂಡವಿತ್ತು. ಆದರೆ ಇನ್ಮುಂದೆ 2,500 ರೂ.ನಿಂದ ಗರಿಷ್ಠ 10,000 ರೂ.ವರೆಗೆ ದಂಡ ತೆರಬೇಕಾಗುತ್ತದೆ.

ಮೆಟ್ರೋ ನಿಲ್ದಾಣಗಳ ಗೋಡೆಗಳ ಮೇಲೆ ಬರೆಯುವುದು, ಚಿತ್ರ ಬಿಡಿಸುವುದು ಹಾಗೂ ಪೋಸ್ಟರ್ ಅಂಟಿಸಿ ಸೌಂದರ್ಯ ಹಾಳು ಮಾಡಿದ್ರೆ ಈ ಹಿಂದೆ ಇದ್ದ 1,000 ರೂ. ದಂಡವನ್ನು ಈಗ ಬರೋಬ್ಬರಿ 10,000 ರೂ.ಗೆ ಹೆಚ್ಚಿಸಲಾಗಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರ ಸುರಕ್ಷತೆಗೆ ಬಿಎಂಆರ್‌ಸಿಎಲ್ ಮಹತ್ವದ ಹೆಜ್ಜೆ: ಇನ್ನು ಮುಂದೆ 191 ಸ್ಟೇಷನ್‌ಗಳಲ್ಲೂ ಬರಲಿದೆ ‘ಪಿಎಸ್ಡಿ’ ಡೋರ್!

ಮದ್ಯಪಾನ ಹಾಗೂ ಸ್ಫೋಟಕಗಳ ಸಾಗಾಟಕ್ಕೆ ಕಠಿಣ ಶಿಕ್ಷೆ:

ಮದ್ಯಪಾನ ಹಾಗೂ ಅಸಭ್ಯ ವರ್ತನೆ ಸೆಕ್ಷನ್ 59(1) ಪ್ರಕಾರ, ಮೆಟ್ರೋ ನಿಲ್ದಾಣ ಹಾಗೂ ರೈಲಿನಲ್ಲಿ ಮದ್ಯಪಾನ ಮಾಡಿ ಪ್ರಯಾಣ ಮಾಡುವುದು, ಇತರೆ ಪ್ರಯಾಣಿಕರೊಂದಿಗೆ ಜಗಳವಾಡುವುದು ಮತ್ತು ಉಗುಳುವುದು ಮಾಡಿದರೆ ಈ ಹಿಂದೆ ಇದ್ದ 500 ರೂ. ದಂಡವನ್ನು ಈಗ 2,500 ರೂ.ಗೆ ಏರಿಸಲಾಗಿದೆ. ಮೆಟ್ರೋ ರೈಲಿನಲ್ಲಿ ಪಟಾಕಿ, ಸ್ಫೋಟಕ ವಸ್ತುಗಳು ಹಾಗೂ ಅಪಾಯಕಾರಿ ಕೆಮಿಕಲ್‌ಗಳನ್ನು ತಗೆದುಕೊಂಡು ಪ್ರಯಾಣ ಬೆಳೆಸಿದರೆ ವಿಧಿಸುತ್ತಿದ್ದ 500 ರೂ. ದಂಡವನ್ನು ಇನ್ಮುಂದೆ 2,500 ರೂ.ಗೆ ಹೆಚ್ಚಿಸಲಾಗಿದೆ.

ಪ್ರತಿ 3 ವರ್ಷಕ್ಕೆ ದಂಡದ ಮೊತ್ತ 10% ಏರಿಕೆ:

ಬರಿ ದಂಡದ ಮೊತ್ತ ಹೆಚ್ಚಳ ಮಾತ್ರವಲ್ಲದೆ, ಈ ನಿಯಮದಲ್ಲಿ ಮತ್ತೊಂದು ಮಹತ್ವದ ಬದಲಾವಣೆ ಮಾಡಲಾಗಿದೆ. ಹೊಸ ನಿಯಮಾವಳಿಗಳ ಪ್ರಕಾರ ಮೆಟ್ರೋದಲ್ಲಿ ನಿಗದಿಪಡಿಸಲಾದ ಈ ಎಲ್ಲಾ ದಂಡದ ಮೊತ್ತವನ್ನು ಪ್ರತಿ 3 ವರ್ಷಕ್ಕೊಮ್ಮೆ ಶೇಕಡಾ 10 ರಷ್ಟು ಸ್ವಯಂಚಾಲಿತವಾಗಿ ಏರಿಕೆ ಮಾಡಲು ನಿರ್ಧರಿಸಲಾಗಿದೆ.

ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:36 pm, Fri, 17 July 26

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ಸಾಗರ ಮುಂಬಾಳು ಬಳಿ ನಡು ರಸ್ತೆಯಲ್ಲೇ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್
ಸಾಗರ ಮುಂಬಾಳು ಬಳಿ ನಡು ರಸ್ತೆಯಲ್ಲೇ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್
ಮಂಜುಗೆ ಸುತ್ತಿಕೊಂಡು ಬಂದ ಕರ್ಮ; ಚಿತ್ರಹಿಂಸೆ ಅನುಭವಿಸಿದ ಮಾಡರ್ನ್ ಮಹಾಕವಿ
ಮಂಜುಗೆ ಸುತ್ತಿಕೊಂಡು ಬಂದ ಕರ್ಮ; ಚಿತ್ರಹಿಂಸೆ ಅನುಭವಿಸಿದ ಮಾಡರ್ನ್ ಮಹಾಕವಿ
ರಾಜ್ಯದ ವಿವಿಗಳಲ್ಲಿನ ಸಾವಿರಾರು ಪ್ರೊಫೆಸರ್ ಹುದ್ದೆಗಳ ಭರ್ತಿಗೆ ಸಿದ್ಧತೆ!
ರಾಜ್ಯದ ವಿವಿಗಳಲ್ಲಿನ ಸಾವಿರಾರು ಪ್ರೊಫೆಸರ್ ಹುದ್ದೆಗಳ ಭರ್ತಿಗೆ ಸಿದ್ಧತೆ!
ದೆಹಲಿಯಲ್ಲಿ ಇಂಡಿ ಮೈತ್ರಿಕೂಟದ ಪ್ರತಿಭಟನೆ
ದೆಹಲಿಯಲ್ಲಿ ಇಂಡಿ ಮೈತ್ರಿಕೂಟದ ಪ್ರತಿಭಟನೆ
ಬಸ್ ಚಾಲನೆ ಮಾಡುತ್ತಲೇ ಮೊಬೈಲ್‌ನಲ್ಲಿ ಹರಟೆ
ಬಸ್ ಚಾಲನೆ ಮಾಡುತ್ತಲೇ ಮೊಬೈಲ್‌ನಲ್ಲಿ ಹರಟೆ
ಅತ್ತಿಬೆಲೆ ಪೆಟ್ರೋಲ್ ಬಂಕ್​ಗೆ ನುಗ್ಗಿದ ಜಾಗ್ವಾರ್ ಕಾರು: ಭಾರಿ ಅಗ್ನಿ ಅವಘಡ
ಅತ್ತಿಬೆಲೆ ಪೆಟ್ರೋಲ್ ಬಂಕ್​ಗೆ ನುಗ್ಗಿದ ಜಾಗ್ವಾರ್ ಕಾರು: ಭಾರಿ ಅಗ್ನಿ ಅವಘಡ
ಯಾರಿಗೆ ವೆಂಕಟೇಶ್ವರ ಸ್ವಾಮಿ ಕೃಪೆ?, ಯಾರಿಗೆ ಧನಲಾಭ?
ಯಾರಿಗೆ ವೆಂಕಟೇಶ್ವರ ಸ್ವಾಮಿ ಕೃಪೆ?, ಯಾರಿಗೆ ಧನಲಾಭ?
ಹುಟ್ಟಿ 28 ದಿನಕ್ಕೆ ಷೇರು ಮಾರುಕಟ್ಟೆ ಪ್ರವೇಶ: ಇನ್ವೆಸ್ಟರ್ ಆದ ಮಗು!
ಹುಟ್ಟಿ 28 ದಿನಕ್ಕೆ ಷೇರು ಮಾರುಕಟ್ಟೆ ಪ್ರವೇಶ: ಇನ್ವೆಸ್ಟರ್ ಆದ ಮಗು!
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!