AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆ.21ರಂದು ಕೆ.ಆರ್.ಪುರಂ-ಗರುಡಾಚಾರ್ ಪಾಳ್ಯ ನಡುವೆ ದಿನಪೂರ್ತಿ ನಮ್ಮ ಮೆಟ್ರೋ ಸೇವೆ ಬಂದ್

ಕೆಆರ್​ ಪುರ ಮತ್ತು ಗರುಡಾಚಾರ್‌ಪಾಳ್ಯದವರೆಗೆ ಇಡೀ ದಿನ ಮೆಟ್ರೋ ರೈಲು ಸಂಚಾರ ಸೇವೆ ಇರುವುದಿಲ್ಲ. ಬೈಯ್ಯಪ್ಪನಹಳ್ಳಿಯಿಂದ ಇಂದಿರಾನಗರ ಮೆಟ್ರೋ ನಿಲ್ದಾಣದವರೆಗೆ ಮಧ್ಯಾಹ್ನ 1.30ರಿಂದ 4.30ರವರೆಗೆ ರೈಲು ಸಂಚರಿಸುವುದಿಲ್ಲ ಎಂದು ಬಿಎಂಆರ್​ಸಿಎಲ್​​ ತಿಳಿಸಿದೆ.

ಸೆ.21ರಂದು ಕೆ.ಆರ್.ಪುರಂ-ಗರುಡಾಚಾರ್ ಪಾಳ್ಯ ನಡುವೆ ದಿನಪೂರ್ತಿ ನಮ್ಮ ಮೆಟ್ರೋ ಸೇವೆ ಬಂದ್
ನಮ್ಮ ಮೆಟ್ರೋ
ಕಿರಣ್​ ಸೂರ್ಯ
| Edited By: ವಿವೇಕ ಬಿರಾದಾರ|

Updated on: Sep 20, 2023 | 7:13 AM

Share

ಬೆಂಗಳೂರು ಸೆ.20: ಗುರುವಾರ (ಸೆ.21) ರಂದು ಕೇಂದ್ರ ಮೆಟ್ರೋ (Metro) ರೈಲ್ವೆ ಸುರಕ್ಷತಾ ಆಯುಕ್ತರು ನಮ್ಮ ಮೆಟ್ರೋದ ಕೆ.ಆರ್​.ಪುರ-ಬೈಯಪ್ಪನಹಳ್ಳಿ (KR Puram-Baiyappanahalli) ಮಾರ್ಗವನ್ನು ಪರಿಶೀಲನೆ ಮಾಡುವ ಹಿನ್ನೆಲೆಯಲ್ಲಿ ಇಡೀ ದಿನ ನೇರಳೆ ಮಾರ್ಗದ (Purple Line) ಮೆಟ್ರೋ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಸೆ. 21 ರಂದು ಬೈಯ್ಯಪ್ಪನಹಳ್ಳಿಯಿಂದ ಕೆ.ಆರ್.ಪುರಂ ಮೆಟ್ರೋ ಮಾರ್ಗ ಹಾಗೂ ಚಲ್ಲಘಟ್ಟದಿಂದ ಕೆಂಗೇರಿವರೆಗೆ ಸುರಕ್ಷತಾ ಪರಿಶೀಲನೆ ನಡೆಯಲಿದೆ. ಹೀಗಾಗಿ ಕೃಷ್ಣರಾಜಪುರ ಮತ್ತು ಗರುಡಾಚಾರ್ ಪಾಳ್ಯದವರೆಗಿನ ಮೆಟ್ರೋ ರೈಲ್ವೆ ಸಂಚಾರವನ್ನು ಬಿಎಂಆರ್​​ಸಿಎಲ್ (BMRCL) ರದ್ದುಪಡಿಸಿದೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಬೆಂಗಳೂರು ಮೆಟ್ರೋ ರೈಲು ನಿಗಮ, ಕೃಷ್ಣರಾಜಪುರ ಮತ್ತು ಗರುಡಾಚಾರ್‌ಪಾಳ್ಯದವರೆಗೆ ಇಡೀ ದಿನ ಮೆಟ್ರೋ ರೈಲು ಸಂಚಾರ ಸೇವೆ ಇರುವುದಿಲ್ಲ. ಬೈಯ್ಯಪ್ಪನಹಳ್ಳಿಯಿಂದ ಇಂದಿರಾನಗರ ಮೆಟ್ರೋ ನಿಲ್ದಾಣದ ವರೆಗೆ ಮಧ್ಯಾಹ್ನ 1.30ರಿಂದ 4.30ರವರೆಗೆ ರೈಲು ಸಂಚರಿಸುವುದಿಲ್ಲ ಎಂದು ತಿಳಿಸಿದೆ.

ಉಳಿದಂತೆ ವೈಟ್‌ಫೀಲ್ಡ್ (ಕಾಡುಗೋಡಿ) ಮತ್ತು ಗರುಡಾಚಾರಪಾಳ್ಯ ನಡುವೆ ರೈಲು ಸೇವೆ ಎಂದಿನಂತೆ ಇರಲಿದೆ. ಇಂದಿರಾನಗರ ಮತ್ತು ಕೆಂಗೇರಿ ನಡುವೆ ಮಧ್ಯಾಹ್ನ 1:30 ರಿಂದ 4.30ರವರೆಗೆ ರೈಲ್ವೆ ಸೇವೆ ಲಭ್ಯವಿದೆ. ಮಧ್ಯಾಹ್ನ 1:30 ರವರೆಗೆ ಮತ್ತು ಸಂಜೆ 4.30ರ ಬಳಿಕ ಬೈಯ್ಯಪ್ಪನಹಳ್ಳಿ ಮತ್ತು ಕೆಂಗೇರಿ ಮೆಟ್ರೋ ನಿಲ್ದಾಣದ ನಡುವೆ ರಾತ್ರಿ 11 ಗಂಟೆವರೆಗೆ ಮೆಟ್ರೋ ಸೇವೆ ಎಂದಿನಂತೆ ನಡೆಯಲಿದೆ. ಮೆಟ್ರೋ ಪ್ರಯಾಣಿಕರು ರೈಲ್ವೆ ಸಂಚಾರದ ವ್ಯತ್ಯಯ ಗಮನಿಸಿ ಸಹಕರಿಸುವಂತೆ ಬಿಎಂಆರ್‌ಸಿಎಲ್‌ ಮನವಿ ಮಾಡಿದೆ.

ಇದನ್ನೂ ಓದಿ: ನಮ್ಮ ಮೆಟ್ರೋದ ಬೈಯ್ಯಪ್ಪನಹಳ್ಳಿ-ಕೆಆರ್​ಪುರ ಮಾರ್ಗ ತಪಾಸಣೆ

ಬೈಯಪ್ಪನಹಳ್ಳಿ – ಕೆಆರ್​ ಪುರ 2 ಕಿ.ಮೀ. ಮಾರ್ಗವಾಗಿದ್ದು, ಇದಕ್ಕೆ ಮೆಟ್ರೋ ಸುರಕ್ಷತಾ ಆಯುಕ್ತರು ತಪಾಸಣೆ ನಡೆಸಿ ಗ್ರೀನ್ ಸಿಗ್ನಲ್ ನೀಡಿದರೇ, ಕೆಂಗೇರಿಯಿಂದ ತಡೆರಹಿತವಾಗಿ ವೈಟ್‌ಫೀಲ್ಡ್​​ವರೆಗೆ ಸಂಚಾರ ಮಾಡಬಹುದಾಗಿದೆ. ಈ ನಡುವೆ, ಕೆಂಗೇರಿ-ಚಲ್ಲಘಟ್ಟ ವಿಸ್ತರಿತ ಮಾರ್ಗದ ಸುರಕ್ಷತಾ ತಪಾಸಣಾ ದಿನಾಂಕ ಇನ್ನೂ ನಿಗದಿ ಆಗಿಲ್ಲ.

ಕೆಂಗೇರಿಯಿಂದ-ವೈಟ್​​ಫೀಲ್ಡ್​​​​ವರೆಗಿನ ಮೆಟ್ರೋ ಮಾರ್ಗದಿಂದ ಐಟಿ ಹಬ್ ಆಗಿರುವ ವೈಟ್‌ ಫೀಲ್ಡ್​​ನ ಸಾವಿರಾರು ಟೆಕ್ನಿಗಳಿಗೆ ಅನುಕೂಲವಾಗಲಿದೆ. ಈವರೆಗೆ ಕೆ.ಆರ್.ಪುರ – ಬೈಯಪ್ಪನಹಳ್ಳಿ ಮಾರ್ಗ ನಿರ್ಮಾಣ ಅಪೂರ್ಣವಾಗಿದ್ದ ಕಾರಣ ಕೆಂಗೇರಿಯಿಂದ ವೈಟ್‌ ಫೀಲ್ಡ್​ಗೆ ಹೋಗುವವರು, ಬೈಯಪ್ಪನಹಳ್ಳಿಯಲ್ಲಿ ಇಳಿದು 2 ಕಿ.ಮೀ. ಬಸ್​​ನಲ್ಲಿ ಸಾಗಿ ಮತ್ತೆ ಕೆ.ಆರ್.ಪುರದಲ್ಲಿ ಮೆಟ್ರೋ ಹತ್ತಿ ಮುಂದೆ ಸಾಗಬೇಕಿತ್ತು. ಇದು ಸಾಕಷ್ಟು ಕಿರಿಕಿರಿ ಉಂಟು ಮಾಡುತ್ತಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?