ಬೆಂಗಳೂರಿನ ಪೋಸ್ಟ್ ಆಫಿಸ್ಗಳಿಗೆ ಬರುತ್ತಿದೆ ಮಾದಕ ವಸ್ತುವಿರುವ ಪಾರ್ಸೆಲ್; ಸಿಸಿಬಿ ತನಿಖೆಯಲ್ಲಿ ಸ್ಪೋಟಕ ವಿಚಾರ ಬಯಲು
ವಿದೇಶಗಳಿಂದ ನಗರದ ಪೋಸ್ಟ್ ಆಫೀಸ್ಗೆ ಮಾದಕ ವಸ್ತುಗಳು ಬರ್ತಿವೆ ಎಂಬ ಸ್ಪೋಟಕ ವಿಚಾರ ಸಿಸಿಬಿ ಪರಿಶೀಲನೆ ವೇಳೆ ಪತ್ತೆಯಾಗಿದೆ. ಚಾಮರಾಜಪೇಟೆ ಫಾರಿನ್ ಪೋಸ್ಟ್ ಆಫೀಸ್ನಲ್ಲಿ ಬರೋಬ್ಬರಿ 626 ಮಾದಕ ವಸ್ತು ಪಾರ್ಸಲ್ಗಳು ಪತ್ತೆಯಾಗಿವೆ. ಸುಮಾರು 626 ಕೊರಿಯರ್ಗಳಲ್ಲಿ ಮಾದಕ ವಸ್ತುಗಳು ಕಂಡು ಬಂದಿವೆ.
ಬೆಂಗಳೂರು, ಅ.06: ಬೆಂಗಳೂರಿನ ವಿದೇಶಿ ಪೋಸ್ಟ್ ಆಫೀಸ್ಗಳಿಗೆ ವಿದೇಶಗಳಿಂದ ಮಾದಕ ವಸ್ತುಗಳು ಬರ್ತಿದೆ ಎಂಬ ಆತಂಕಕಾರಿ ವಿಷಯವೊಂದು ಪತ್ತೆಯಾಗಿದೆ (Bengaluru Indian Post Office). ಎಂಡಿಎಂಎ, ಕೊಕೇನ್ ಹಾಗೂ ಬ್ರೌನ್ ಶುಗರ್ ಬೆಂಗಳೂರಿಗೆ ಬರುತ್ತಿದೆ. ವಿದೇಶಗಳಿಂದ ನಗರದ ವಿದೇಶಿ ಪೋಸ್ಟ್ ಆಫೀಸ್ಗೆ ಮಾದಕ ವಸ್ತುಗಳು ಬರ್ತಿವೆ ಎಂಬ ಸ್ಪೋಟಕ ವಿಚಾರ ಸಿಸಿಬಿ ಪರಿಶೀಲನೆ ವೇಳೆ ಪತ್ತೆಯಾಗಿದೆ. ಚಾಮರಾಜಪೇಟೆ ಫಾರಿನ್ ಪೋಸ್ಟ್ ಆಫೀಸ್ನಲ್ಲಿ ಬರೋಬ್ಬರಿ 626 ಮಾದಕ ವಸ್ತು ಪಾರ್ಸಲ್ಗಳು ಪತ್ತೆಯಾಗಿವೆ.
ಅಪರಿಚಿತ ವ್ಯಕ್ತಿಗಳ ವಿಳಾಸಕ್ಕೆ ವಿದೇಶಗಳಿಂದ ಮಾದಕ ವಸ್ತುಗಳು ಬರುತ್ತಿದೆ. ಕಳೆದ ಅಕ್ಟೋಬರ್ 1 ರಂದು ಸಿಸಿಬಿ ಅಧಿಕಾರಿಗಳಿಗೆ ಈ ಬಗ್ಗೆ ಫಾರಿನ್ ಪೋಸ್ಟ್ ಆಫೀಸ್ ನಿಂದ ಮಾಹಿತಿ ಬಂದಿತ್ತು. ಈ ಮಾಹಿತಿ ಮೇರೆಗೆ ಶ್ವಾನ ದಳದ ಸಮೇತ ಸಿಸಿಬಿ ನಾರ್ಕೋಟಿಕ್ ವಿಂಗ್ ದಾಳಿ ನಡೆಸಿದ್ದು ಈ ವೇಳೆ ಪಾರ್ಸೆಲ್ ಗಳನ್ನ ಕಂಡು ಶ್ವಾನದಳ ಅನುಮಾನಾಸ್ಪದವಾಗಿ ವರ್ತಿಸಿದೆ. ಕೂಡಲೇ ಆ ಪಾರ್ಸೆಲ್ ವಶಕ್ಕೆ ಪಡೆದು ಟೆಸ್ಟ್ಗೆ ಕಳುಹಿಸಿದಾಗ ಅದರಲ್ಲಿ ಮಾದಕವಸ್ತುಗಳು ಪತ್ತೆಯಾಗಿವೆ.
ಇದನ್ನೂ ಓದಿ: 5 ಕೋಟಿ ರೂ. ಮೌಲ್ಯದ ಹಳೇ ನೋಟಿಗೆ ಬೆಂಕಿ ಹಚ್ಚಿ ಸುಡಲು ಮುಂದಾದ ಪೊಲೀಸರು! ಕಾರಣವೇನು?
ಎಂಡಿಎಂ, ಕೊಕೇನ್ ಹಾಗೂ ಬ್ರೌನ್ ಶುಗರ್ ಇರುವುದು ಪತ್ತೆಯಾಗಿದೆ. ಆರೋಪಿಗಳು ಕೊರಿಯರ್ ಮೂಲಕ ವಿದೇಶಗಳಿಂದ ಮಾದಕವಸ್ತು ಕಳುಹಿಸುತ್ತಿದ್ದಾರೆ. 2018ರಿಂದಲೂ ಇದೇ ರೀತಿಯಾಗಿ ಕೃತ್ಯ ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಸುಮಾರು 626 ಕೊರಿಯರ್ಗಳಲ್ಲಿ ಮಾದಕ ವಸ್ತುಗಳು ಕಂಡು ಬಂದಿವೆ. ಅಷ್ಟು ಪಾರ್ಸೆಲ್ಗಳು ಯಾರಿಗೆ ಬಂದಿದೆ ಎಂಬುವುದು ಪತ್ತೆಯಾಗಿಲ್ಲ. ಅಪರಿಚಿತ ವ್ಯಕ್ತಿಗಳ ಹೆಸರಲ್ಲಿ ಆರೋಪಿಗಳು ಪಾರ್ಸೆಲ್ ಕಳುಹಿಸಿದ್ದಾರೆ. ಸದ್ಯ ಸಿಸಿಬಿ ಅಧಿಕಾರಿಗಳು ಎಲ್ಲವನ್ನೂ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಈ ಪೈಕಿ ಎಷ್ಟೋ ಪಾರ್ಸೆಲ್ಗಳು 2018ರಿಂದಲೂ ಬರುತ್ತಿರುವುದು ಪತ್ತೆಯಾಗಿದೆ.
ಪೆಡ್ಲರ್ಗಳು ಕೆಲವೊಂದು ಪಾರ್ಸೆಲ್ಗಳನ್ನ ತೆಗೆದುಕೊಂಡು ಹೋಗದೆ ಹಾಗೇ ಬಿಟ್ಟಿದ್ದಾರೆ. ಹೀಗಾಗಿ 2018 ರಿಂದಲೂ ಮಾದಕವಸ್ತು ಪಾರ್ಸೆಲ್ ಗಳು ಹಾಗೆಯೇ ಉಳಿದುಕೊಂಡಿವೆ. ಕೊನೆಯದಾಗಿ ಕಳೆದ ಸೆಪ್ಟೆಂಬರ್ 9 ರಂದು ಮಾದಕವಸ್ತುವಿನ ಪಾರ್ಸೆಲ್ ಬಂದಿದೆ. ಸದ್ಯ ಕಮಿಷನರ್ ಅನುಮತಿ ಪಡೆದು ಪ್ರಕರಣ ದಾಖಲಿಸಿಕೊಂಡಿರುವ ಸಿಸಿಬಿ ತನಿಖೆ ಮುಂದುವರೆಸಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:24 pm, Sun, 6 October 24